For Quick Alerts
ALLOW NOTIFICATIONS  
For Daily Alerts

ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?

|

ರಾತ್ರಿಯ ನಿದ್ದೆ ಭಂಗಗೊಳ್ಳುವುದು ಯಾರಿಗೂ ಇಷ್ಟವಿಲ್ಲ. ಒಂದು ವೇಳೆ ನಿಮಗೆ ಅಸ್ತಮಾ ತೊಂದರೆ ಇದ್ದರೆ ರಾತ್ರಿ ಅನೈಚ್ಛಿಕವಾಗಿ ಎದುರಾಗುವ ಕೆಮ್ಮು ಮತ್ತು ಗಂಟಲ ಕೆರೆತದಿಂದ ನಿದ್ದೆ ಭಂಗಗೊಳ್ಳುವುದು ಅನಿವಾರ್ಯವಾಗುತ್ತದೆ. ದಿನದ ಹೊತ್ತಿನಲ್ಲಿ ನಿಮಗೆ ಅಷ್ಟೊಂದು ತೊಂದರೆ ಕೊಡದ ಅಸ್ತಮಾ ಈ ಸಮಯದಲ್ಲೇಕೆ ಇಷ್ಟು ತೊಂದರೆ ಕೊಡುತ್ತದೆ ಎಂದು ನಿಮಗೆ ಅಚ್ಚರಿಯಾಗುವುದಿಲ್ಲವೇ?

ಅಸ್ತಮಾ ರೋಗವನ್ನು ನಿರ್ವಹಿಸುವುದು ಎಷ್ಟು ಕಷ್ಟಕರ ಎಂದು ನಿಮಗೆ ಹೇಳಬೇಕಾಗಿಲ್ಲ. ಆದರೆ ಕೆಲವು ವ್ಯಕ್ತಿಗಳಿಗೆ ರಾತ್ರಿ ಹೊತ್ತಿನಲ್ಲಿ ಇದು ಅಪಾರವಾಗಿ ಉಲ್ಬಣಿಸುತ್ತದೆ ಹಾಗೂ ನಿದ್ದೆ ಬಾರದಂತೆ ತಡೆಯುತ್ತದೆ. ರಾತ್ರಿಯ ಕೆಮ್ಮು, ಉಬ್ಬಸ, ಉಸಿರುಗಟ್ಟುವಿಕೆ ಮೊದಲಾದವೆಲ್ಲಾ ಹಗಲಿನಲ್ಲಿರುವುದಕ್ಕಿಂತಲೂ ಹೆಚ್ಚೇ ಪ್ರಬಲವಾಗಿರುತ್ತದೆ. ಈ ತೊಂದರೆಗೆ ನಿಶಾಚರಿ (ನಾಕ್ಟರ್ನಲ್) ಅಸ್ತಮಾ ಎಂದು ಕರೆಯುತ್ತಾರೆ. ಈ ತೊಂದರೆ ಇರುವವರಿಗೆ ದಿನದ ಹೊತ್ತಿನಲ್ಲಿಯೂ ಉರಿ ಮತ್ತು ಸುಸ್ತು ಅಪಾರವಾಗಿರುತ್ತದೆ.

ಈ ತೊಂದರೆ ಇರುವ ಕೆಲವರು ರಾತ್ರಿ ಎಷ್ಟೇ ಕಷ್ಟವಾದರೂ ಬೆಳಗ್ಗಿನ ಹೊತ್ತಿನಲ್ಲಿ ಇದು ತಾನಾಗಿಯೇ ಕಡಿಮೆಯಾಗುವ ಕಾರಣದಿಂದ ಈ ತೊಂದರೆಯನ್ನು ಅಲಕ್ಷಿಸುತ್ತಾರೆ. ಆದರೆ ಈ ಅಲಕ್ಷ್ಯ ಮುಂದುವರೆದರೆ ಹೆಚ್ಚು ಉಲ್ಬಣಗೊಳ್ಳಬಹುದು ಹಾಗೂ ತಕ್ಷಣದ ಚಿಕಿತ್ಸೆ ಅಗತ್ಯವಾಗಿಸುತ್ತದೆ. ಬನ್ನಿ, ಈ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ:

ಇದು ಏಕಾಗಿ ಸಂಭವಿಸುತ್ತದೆ ಎನ್ನಲು ಇದಕ್ಕೆ ಒಂದಕ್ಕಿಂತಲೂ ಹೆಚ್ಚಾದ ಕಾರಣಗಳಿವೆ. ಪ್ರಮುಖವಾದವು ಎಂದರೆ:

1. ಆಂತರಿಕ ಪ್ರಚೋದನೆಗಳು

1. ಆಂತರಿಕ ಪ್ರಚೋದನೆಗಳು

ಕೆಲವು ವ್ಯಕ್ತಿಗಳಿಗೆ ಉಸಿರು ಕಟ್ಟಿದಂತಾಗಿ ಉಸಿರು ಎಳೆದುಕೊಳ್ಳುತ್ತಿರುವಂತೆಯೇ ನಿದ್ದೆಯಿಂದ ಎಚ್ಚರಾಗುತ್ತದೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಇದು ಆಂತರಿಕ ಪ್ರಚೋದನೆಗಳು ಕಾರಣದಿಂದ ಎದುರಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ.

2. ನಿದ್ರಿಸುವ ಭಂಗಿ

2. ನಿದ್ರಿಸುವ ಭಂಗಿ

ನಿದ್ದೆಯ ಸಮಯದಲ್ಲಿ ನಮ್ಮ ವಾಯುನಾಳಗಳು ಇತರ ಹೊತ್ತಿಗಿಂತಲೂ ಕೊಂಚ ಕಿರಿದಾಗಿರುತ್ತವೆ. ಇದರಿಂದಾಗಿ ಶ್ವಾಸಕೋಶದಿಂದ ಆಮ್ಲಜನಕ ಪಡೆದು ಹೋಗಬೇಕಾಗಿದ್ದಷ್ಟು ಪ್ರಮಾಣದ ರಕ್ತ ಹೋಗದೇ ಅಲ್ಲೇ ಸಂಗ್ರಹಗೊಳ್ಳುತ್ತವೆ. ಕುಹರದಿಂದ ಸ್ರವಿಸುವ ದ್ರವ ಹೆಚ್ಚುತ್ತದೆ. ಇವೆಲ್ಲವೂ ರಾತ್ರಿಯ ಅಸ್ತಮಾವನ್ನು ಪ್ರಚೋದಿಸಬಹುದು.

3. ಹವಾ ನಿಯಂತ್ರಕ (ಎಸಿ)

3. ಹವಾ ನಿಯಂತ್ರಕ (ಎಸಿ)

ತಣ್ಣನೆಯ ಹವೆಯಲ್ಲಿ ಆರ್ದ್ರತೆ ಇರುವುದಿಲ್ಲ ಹಾಗೂ ಈ ಒಣಹವೆ ಎಂದಿಗೂ ಅಸ್ತಮಾವನ್ನು ಪ್ರಚೋದಿಸಬಹುದು. ಈ ವಾಯುವನ್ನು ಸೇವಿಸುವ ರೋಗಿಗಳು ರಾತ್ರಿಯ ಸಮಯದಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ನಿದ್ದೆಯಿಂದ ಏಳಬೇಕಾಗಿ ಬರಬಹುದು. ಅದರಲ್ಲೂ ಈ ತೊಂದರೆ ಚಳಿಗಾಲದಲ್ಲಿ ಹೆಚ್ಚಬಹುದು.

4. ಧೂಳಿನ ಕಣಗಳು

4. ಧೂಳಿನ ಕಣಗಳು

ಒಂದು ವೇಳೆ ನಿಮ್ಮ ಹಾಸಿಗೆ, ಹೊದಿಕೆ, ದಿಂಬು ಮೊದಲಾದವುಗಳ ಮೇಲೆ ಧೂಳು ಕುಳಿತಿದ್ದರೆ ಇವು ಧೂಳಿನ ಕ್ರಿಮಿಗಳನ್ನು ಆಕರ್ಷಿಸುತ್ತವೆ. ಹಾಗಾಗಿ, ಇವುಗಳನ್ನು ಕೊಡಕದೇ ಇದರ ಮೇಲೆ ಮಲಗುವುದರಿಂದ ರಾತ್ರಿಯ ಹೊತ್ತಿನಲ್ಲೇ ತೊಂದರೆ ಎದುರಾಗುತ್ತದೆ. ಸಾಕುಪ್ರಾಣಿಗಳ ಕೂದಲು ಸಹಾ ಅಸ್ತಮಾ ಪ್ರಚೋದನೆಗೆ ಇನ್ನೊಂದು ಕಾರಣವಾಗಿದೆ.

5. ಹಾವಸೆಗಳು

5. ಹಾವಸೆಗಳು

ತಣ್ಣನೆಯ ಸ್ಥಳಗಳಲ್ಲಿ ತೇವ ಇದ್ದರೆ ಇಲ್ಲಿ ತಕ್ಷಣವೇ ಹಾವಸೆಗಳು ಬೆಳೆಯುತ್ತವೆ. ಕೊಂಚ ಹೆಚ್ಚಾದರೆ ಇದು ಗಾಢ ಮಚ್ಚೆಯಂತಾಗುತ್ತದೆ. ಇದರಲ್ಲಿರುವ ಕ್ರಿಮಿಗಳು (ಮೌಲ್ಡ್ ಗಳು) ನಿಮ್ಮ ಸುಖನಿದ್ದೆಯನ್ನು ಭಂಗಗೊಳಿಸಬಹುದು.

ಅವಶ್ಯಕ ಸೂಚನೆಗಳು

ಅವಶ್ಯಕ ಸೂಚನೆಗಳು

ಒಂದು ವೇಳೆ ನೀವು ಅಸ್ತಮಾ ರೋಗಿಯಾಗಿದ್ದರೆ ಹೆಚ್ಚು ಎಚ್ಚರಿಕೆ ವಹಿಸಬೇಕು. ನಿಮ್ಮ ಸುತ್ತಮುತ್ತಲ ಪರಿಸರವನ್ನು ಆದಷ್ಟೂ ಒಣದಾಗಿಸಿ ಮತ್ತು ಸ್ವಚ್ಛವಾಗಿಸಿರಬೇಕು. ತಣ್ಣಗಿರುವ ಕೋಣೆಗಳಲ್ಲಿ ಮಲಗುವುದನ್ನು ಆದಷ್ಟೂ ತಪ್ಪಿಸಿ. ಇದರ ಜೊತೆಗೇ, ವೈದ್ಯರು ನಿಮಗೆ ನೀಡಿರುವ ಇನ್ ಹೇಲರ್ ಉಪಕರಣವನ್ನು ಜೊತೆಯಲ್ಲಿಯೇ, ತಕ್ಷಣ ಕೈಗೆ ಸಿಗುವಂತೆ ಇರಿಸಿ ಹಾಗೂ ಈ ಉಪಕರಣದಲ್ಲಿ ಇನ್ನೂ ಸಾಕಷ್ಟು ಪ್ರಮಾಣದ ಔಷಧಿ ಇದೆ ಎಂದು ಖಾತ್ರಿಪಡಿಸಿಕೊಳ್ಳಿ. ಕೊನೆಗೊಳ್ಳುವ ಹಂತದಲಿದ್ದರೆ ಖಾಲಿಯಾಗುವ ಮುನ್ನವೇ ತಂದಿರಿಸಿ. ಒಂದು ಕ್ಷಣ ಮರೆತರೂ ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು.

ಈ ಮುನ್ನೆಚ್ಚರಿಕೆಗಳ ಹೊರತಾಗಿಯೂ ನಿಮ್ಮ ಸ್ಥಿತಿ ಉಲ್ಬಣಗೊಳ್ಳುತ್ತಿದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ವೈದ್ಯರು ನಿಮಗೆ ಬದಲಿ ಔಷಧಿಗಳನ್ನು ನೀಡಬಹುದು. ಅಸ್ತಮಾದ ಯಾವುದೇ ಲಕ್ಷಣಗಳನ್ನು ಅಲಕ್ಷಿಸಿದರೆ ಇದು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು.

English summary

The reason why your asthma gets worse at night

There is nothing more annoying than having your sleep disrupted at night. But if you are suffering from asthma then waking at night coughing and wheezing might be an everyday affair. Here we are going to educate you about why asthma gets worse at night only. what are the reasons. Take a look.
Story first published: Friday, December 13, 2019, 18:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X