Just In
Don't Miss
- News
ಮಹಿಳಾ ಸ್ವಸಹಾಯ ಗುಂಪುಗಳಿಗಾಗಿಯೇ ಪ್ರತ್ಯೇಕ ಇಲಾಖೆ
- Movies
ಉಪೇಂದ್ರ 'ಕಬ್ಜ' ಚಿತ್ರೀಕರಣ: ಸುದೀಪ್ ಎಂಟ್ರಿಗೆ ಸಮಯ ನಿಗದಿ
- Automobiles
ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು
- Sports
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ vs ಕೇರಳ, ಕ್ವಾರ್ಟರ್ ಫೈನಲ್
- Finance
ಕರ್ನಾಟಕ ಬಜೆಟ್ 2021: ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ತಗ್ಗಬಹುದು!
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೂರು ದಿನದ ಈ ಡಯೆಟ್ ಪ್ಲಾನ್ ನಿಂದ ನಿಮ್ಮ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು!
ಜನರು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ತೂಕ ಇಳಿಸಿಕೊಳ್ಳಲು ಅನೇಕ ಡಯೆಟ್ ಪ್ಲಾನ್ ಗಳನ್ನು ಅನುಸರಿಸುತ್ತಾರೆ. ಆದರೆ ಒಬ್ಬ ವ್ಯಕ್ತಿಗೆ ಕೆಲಸ ಮಾಡುವ ಈ ಯೋಜನೆಗಳು ಮತ್ತೊಬ್ಬರಿಗೂ ಫಲಿಸಬೇಕು ಅಥವಾ ಯಶಸ್ಸು ಸಿಗಬೇಕು ಎಂದೇನಿಲ್ಲ. ಅದು ಸಾಧ್ಯವೂ ಇಲ್ಲ. ಆದ್ದರಿಂದ, ನೀವು ಯಾವುದೇ ರೀತಿಯ ಆಹಾರವನ್ನು ತೆಗೆದುಕೊಳ್ಳುವ ಮೊದಲು ಉತ್ತಮ ಆಹಾರತಜ್ಞರನ್ನು ಭೇಟಿ ಮಾಡುವುದು ಮುಖ್ಯ .
ಪ್ರತಿಯೊಬ್ಬರೂ ಮಾತನಾಡುತ್ತಿರುವ ಅಂತಹ ಒಂದು ಜನಪ್ರಿಯ ಆಹಾರ ಯೋಜನೆ ಅಥವಾ ಡಯೆಟ್ ಪ್ಲಾನ್ ಅಂದರೆ ಮಿಲಿಟರಿ ಆಹಾರ, ಇದು ಕೇವಲ ಮೂರು ದಿನಗಳಲ್ಲಿ ತೂಕ ಇಳಿಸುವ ಭರವಸೆ ನೀಡುತ್ತದೆ. ಹಾಗಾದ್ರೆ ಬನ್ನಿ ಏನಿದು ಮಿಲಿಟರಿ ಆಹಾರ? ಇದನ್ನು ಹೇಗೆ ಅನುಸರಿಸಬೇಕು ಎಂಬೆಲ್ಲಾ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಮಿಲಿಟರಿ ಆಹಾರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
ಈ ಡಯೆಟ್ ಪ್ಲಾನ್ ಪ್ರಕಾರ, ಒಂದೇ ವಾರದಲ್ಲಿ ಒಬ್ಬರು 4.5 ಕೆಜಿ ವರೆಗೆ ಕಳೆದುಕೊಳ್ಳಬಹುದು. ಇತರ ಅನೇಕ ಆಹಾರಕ್ರಮಗಳಿಗಿಂತ ಭಿನ್ನವಾಗಿದ್ದು, ದುಬಾರಿ ಆಹಾರಗಳ ಅಗತ್ಯವಿಲ್ಲದ ಕಾರಣ ಇದು ಆರ್ಥಿಕ ಸ್ನೇಹಿ ಕೂಡ ಆಗಿದೆ. ಹೆಸರೇ ಸೂಚಿಸುವಂತೆ, ಸೈನಿಕರು ಸರಿಯಾದ ತೂಕ ಮತ್ತು ದೇಹದ ಆಕಾರವನ್ನು ಸಾಧ್ಯವಾದಷ್ಟು ಬೇಗ ತಲುಪಲು ಆಹಾರ ತಜ್ಞರು ಈ ಡಯೆಟ್ ಪ್ಲಾನ್ ನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನು ಆರ್ಮಿ ಡಯಟ್, ನೇವಿ ಡಯಟ್ ಮತ್ತು ಐಸ್ ಕ್ರೀಮ್ ಡಯಟ್ ಎಂದೂ ಕರೆಯುತ್ತಾರೆ.

ಮಿಲಿಟರಿ ಡಯೆಟ್ ಒಳಗೊಂಡಿರುವ ಅಂಶಗಳು ಇಲ್ಲಿದೆ:
ತೂಕ ಇಳಿಸಿಕೊಳ್ಳಲು ಬಯಸುವ ವ್ಯಕ್ತಿ 3 ದಿನಗಳ ಆಹಾರ ಯೋಜನೆಯನ್ನು ಅನುಸರಿಸಬೇಕು. ನಂತರ 4 ದಿನಗಳ ರಜೆ. ಮೂರು ದಿನಗಳ ಕಾಲ, ವ್ಯಕ್ತಿ ಕಡಿಮೆ ಕ್ಯಾಲೋರಿ ಇರುವ ಆರೋಗ್ಯಕರ ಆಹಾರ ಸೇವಿಸಬೇಕು. ನಿಮ್ಮ ತೂಕವನ್ನು ತಲುಪುವವರೆಗೆ ಈ ಸಾಪ್ತಾಹಿಕ ಚಕ್ರವನ್ನು ಹಲವಾರು ವಾರಗಳವರೆಗೆ ಪುನರಾವರ್ತಿಸಬೇಕು.
ಈ ಆಹಾರ ಸಂಯೋಜನೆಗಳು ಕೊಬ್ಬನ್ನು ಬರ್ನ್ ಮಾಡಲು ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುವ ಚಯಾಪಚಯವನ್ನು ಕಿಕ್‌ಸ್ಟಾರ್ಟ್ ಮಾಡಲು ಸಹಾಯ ಮಾಡುತ್ತದೆ. ನಾಲ್ಕು ರಜಾ ದಿನಗಳಲ್ಲಿ, ಪ್ರೋಟೀನ್ ಮತ್ತು ತರಕಾರಿಗಳನ್ನು ಒಳಗೊಂಡಿರುವ ದಿನಕ್ಕೆ 1300-1500 ಕ್ಯಾಲೊರಿಗಳ ಸಾಮಾನ್ಯ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ.

ನೀವು ಏನು ಕುಡಿಯಬಹುದು?
ನೀರನ್ನು ಸಾಧ್ಯವಾದಷ್ಟು ಸೇವಿಸಬಹುದಾದರೂ, ಕೃತಕ ಜ್ಯೂಸ್ ಗಳನ್ನು ತಪ್ಪಿಸಬೇಕು. ಸ್ಟೀವಿಯಾದೊಂದಿಗೆ ಗಿಡಮೂಲಿಕೆ ಚಹಾಗಳನ್ನು ಸಹ ಕುಡಿಯಬಹುದು.

ಮಾದರಿ ಊಟದ ಯೋಜನೆಯು ಈ ಕೆಳಗಿನವುಗಳನ್ನು ಹೊಂದಿರಬೇಕು:
ದಿನ 1
ಬೆಳಗಿನ ಉಪಾಹಾರ - ½ ದ್ರಾಕ್ಷಿಹಣ್ಣು, 1 ಸ್ಲೈಸ್ ಟೋಸ್ಟ್, 2 ಚಮಚ ಪೀನಟ್ ಬಟರ್ಬೆಣ್ಣೆ, ಮತ್ತು ಒಂದು ಕಪ್ ಟೀ / ಕಾಫಿ
ಮಧ್ಯಾಹ್ನದ ಊಟ - ½ ಕಪ್ ಟ್ಯೂನ ಮೀನು, 1 ಸ್ಲೈಸ್ ಟೋಸ್ಟ್, ಮತ್ತು ಒಂದು ಕಪ್ ಟೀ ಅಥವಾ ಕಾಫಿ
ರಾತ್ರಿ ಊಟ - ಯಾವುದೇ ರೀತಿಯ ಮಾಂಸದ 2 ಹೋಳುಗಳು, 1 ಕಪ್ ಹಸಿರು ಬೀನ್ಸ್, ½ ಬಾಳೆಹಣ್ಣು, 1 ಸಣ್ಣ ಸೇಬು ಮತ್ತು 1 ಕಪ್ ವೆನಿಲ್ಲಾ ಐಸ್ ಕ್ರೀಮ್

2 ನೇ ದಿನ
ಬೆಳಗಿನ ಉಪಾಹಾರ - 1 ಮೊಟ್ಟೆ, 1 ಸ್ಲೈಸ್ ಟೋಸ್ಟ್, ½ ಬಾಳೆಹಣ್ಣು
ಮಧ್ಯಾಹ್ನದ ಊಟ - 1 ಕಪ್ ಕಾಟೇಜ್ ಚೀಸ್ / 1 ಸ್ಲೈಸ್ ಚೆಡ್ಡಾರ್ ಚೀಸ್, 1 ಬೇಯಿಸಿದ ಮೊಟ್ಟೆ, 5 ಸಾಲ್ಟ್ ಯುಕ್ತ ಬಿಸ್ಕೆಟ್ಟು
ರಾತ್ರಿ ಊಟ - 2 ಹಾಟ್ ಡಾಗ್ಸ್, 1 ಕಪ್ ಬ್ರೊಕುಲಿ, ½ ಕಪ್ ಕ್ಯಾರೆಟ್, ½ ಬಾಳೆಹಣ್ಣು ಮತ್ತು ½ ಕಪ್ ವೆನಿಲ್ಲಾ ಐಸ್ ಕ್ರೀಮ್

3 ನೇ ದಿನ
ಬೆಳಗಿನ ಉಪಾಹಾರ - 5 ಸೋಡಾ ಬಿಸ್ಕೆಟ್ಟು, 1 ಸ್ಲೈಸ್ ಚೆಡಾರ್ ಚೀಸ್, 1 ಸಣ್ಣ ಆಪಲ್
ಮಧ್ಯಾಹ್ನದ ಊಟ - 1 ಬೇಯಿಸಿದ ಮೊಟ್ಟೆ, 1 ಸ್ಲೈಸ್ ಟೋಸ್ಟ್
ರಾತ್ರಿ - 1 ಕಪ್ ಟ್ಯೂನ, ½ ಬಾಳೆಹಣ್ಣು, 1 ಕಪ್ ವೆನಿಲ್ಲಾ ಐಸ್ ಕ್ರೀಮ್
ವಿಶೇಷ ಸೂಚನೆ ನಡುವೆ ಯಾವುದೇ ತಿಂಡಿಗಳನ್ನು ಸೇವಿಸಬೇಡಿ. ಸಸ್ಯಾಹಾರಿಗಳು ಬೀಜಗಳು, ಸೋಯಾಗಳನ್ನು ಬಳಸಬಹುದು. ಚೆಡಾರ್ ಚೀಸ್ ಬದಲಿಗೆ ಇತರ ಚೀಸ್, ಸೋಯಾ ಐಸ್ ಕ್ರೀಮ್ ಗಳನ್ನು ತಿನ್ನಬಹುದು.
ಗಮನಿಸಬೇಕಾದ ಅಂಶಗಳು:
ಕ್ಯಾಲೊರಿ ಕೊರತೆಯನ್ನು ಸೃಷ್ಟಿಸುವ ತತ್ತ್ವದ ಮೇಲೆ ಇದು ಕಾರ್ಯನಿರ್ವಹಿಸುತ್ತದೆ. ಇದು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ಆಹಾರ ನಿರ್ಬಂಧಗಳಿಲ್ಲರುವುದರಿಂದ ಅಲ್ಪಾವಧಿಗೆ ಅನುಸರಿಸಲು ಸುಲಭವಾಗುತ್ತದೆ. ಆದಾಗ್ಯೂ, ಇದು ಕ್ಯಾಲೋರಿಯ ಕೊರತೆಯನ್ನು ಆಧರಿಸಿರುವುದರಿಂದ , ಹಲವಾರು ವಾರಗಳವರೆಗೆ ಇದನ್ನು ಅನುಸರಿಸಿದರೆ ಪೌಷ್ಠಿಕಾಂಶದ ಕೊರತೆಯನ್ನು ಉಂಟುಮಾಡಬಹುದು. ಇದು ಆಯಾಸಕ್ಕೂ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಆಹಾರತಜ್ಞರನ್ನು ಸಂಪರ್ಕಿಸಿ.