For Quick Alerts
ALLOW NOTIFICATIONS  
For Daily Alerts

ಸ್ತನ ಕ್ಯಾನರ್‌ ಅಪಾಯ ತಡೆಗಟ್ಟುವ 6 ಆಹಾರಗಳಿವು

|

ಕ್ಯಾನ್ಸರ್ ಎಂದರೆ ಯಾವುದಾದರೊಂದು ಅಂಗಾಂಶದ ಜೀವಕೋಶಗಳು ವಂಶವಾಹಿನಿಯ ಸಂಕೇತಗಳನ್ನು ಧಿಕ್ಕರಿಸಿ ಅನಗತ್ಯವಾಗಿ ಬೆಳೆಯುವುದಾಗಿದೆ. ಈ ಜೀವಕೋಶಗಳು ಯಾವ ಅಂಗದಲ್ಲಿ ಅನಗತ್ಯ ಬೆಳವಣಿಗೆ ಪಡೆಯುತ್ತವೆಯೋ ಆ ಅಂಗದ ಕ್ಯಾನ್ಸರ್ ಎಂದು ಗುರುತಿಸಲ್ಪಡುತ್ತದೆ. ಉದಾಹರಣೆಗೆ ಕರುಳಿನ ಕ್ಯಾನ್ಸರ್, ಜಠರದ ಕ್ಯಾನ್ಸರ್, ರಕ್ತದ ಕ್ಯಾನ್ಸರ್ ಇತ್ಯಾದಿ. ಇದೇ ಪ್ರಕಾರ ಸ್ತನದ ಅಂಗಾಶದಲ್ಲಿ ಅನಗತ್ಯ ಬೆಳವಣಿಗೆ ಎದುರಾದರೆ ಇದನ್ನು ಸ್ತನ ಕ್ಯಾನ್ಸರ್ (breast cancer) ಎಂದು ಕರೆಯಲಾಗುತ್ತದೆ. ಹೆಸರನ್ನು ನಂಬಿ ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವ ಕ್ಯಾನ್ಸರ್ ಎಂದರೆ ತಪ್ಪಾಗುತ್ತದೆ. ಏಕೆಂದರೆ ಪುರುಷರಿಗೂ ಎದೆಯ ಭಾಗದ ಅಂಗಾಂಶದಲ್ಲಿ ಅನಗತ್ಯ ಬೆಳವಣಿಗೆ ಕಂಡುಬರುತ್ತದೆ ಹಾಗೂ ಇದಕ್ಕೂ ಸ್ತನ ಕ್ಯಾನ್ಸರ್ ಎಂದೇ ಕರೆಯಲಾಗುತ್ತದೆ.

ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಆವರಿಸಬಹುದಾದರೂ ನಡುವಯಸ್ಸು ದಾಟಿದ ಬಳಿಕವೇ ಪ್ರಕಟಗೊಳ್ಳುವುದು ಸಾಮಾನ್ಯ. ಅಂದರೆ, ಯಾವುದೋ ವಯಸ್ಸಿನಲ್ಲಿ ಇದರ ಬೆಳವಣಿಗೆ ಪ್ರಾರಂಭವಾಗಿದ್ದು ಇದರ ಇರುವಿಕೆ ಪತ್ತೆಯಾಗದೇ ಹೋಗುತ್ತದೆ. ಇದರ ಬೆಳವಣಿಗೆ ದೊಡ್ಡದಾದ ಬಳಿಕವೇ ಪತ್ತೆಯಾಗುವುದು ಹೆಚ್ಚು. ಆ ಹೊತ್ತಿಗೆ ಚಿಕಿತ್ಸೆ ಪ್ರಾರಂಭಿಸಲು ತೀರಾ ತಡವಾಗಿರುತ್ತದೆ. ಹೀಗಾಗದೇ ಇರಲು ದಿನ ನಿತ್ಯದ ಆಹಾರಗಳಲ್ಲಿ ಕೆಲವು ಪೋಷಕಾಂಶಗಳಿರುವುದನ್ನು ಖಚಿತಪಡಿಸಿದರೆ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಅಪಾರವಾಗಿ ತಗ್ಗುತ್ತದೆ. ಆಂಟಿ ಆಕ್ಸಿಡೆಂಟುಗಳು ಹೆಚ್ಚು ಪ್ರಬಲವಾಗಿರುವ, ನಾರಿನಂಶ ಹೆಚ್ಚಿರುವ ಆಹಾರಗಳು ಈಸ್ಟ್ರೋಜೆನ್ ರಸದೂತವನ್ನು ನಿಯಂತ್ರಿಸುವ ಮತ್ತು ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ನಿಗ್ರಹಿಸುವ ಗುಣವುಳ್ಳ ಆಹಾರಗಳನ್ನು ಸೇವಿಸುತ್ತಾ ಬಂದರೆ ಕ್ಯಾನ್ಸರ್ ಎದುರಾಗುವ ಸಾಧ್ಯತೆಯನ್ನು ಆದಷ್ಟೂ ಕಡಿಮೆಗೊಳಿಸಬಹುದು .

ಸ್ತನ ಕ್ಯಾನ್ಸರ್ ಕಡಿಮೆ ಮಾಡುವ ಆಹಾರಗಳು

ಅಕ್ರೋಟುಗಳು:

ಅಕ್ರೋಟುಗಳು:

ಇವುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದರೊಂದಿಗೆ ಆಂಟಿ ಆಕ್ಸಿಡೆಂಟುಗಳು, ಫೈಟೋಸ್ಟೆರಾಲುಗಳು ಈಸ್ಟ್ರೋಜೆನ್ ಮಟ್ಟಗಳನ್ನು ನಿಯಂತ್ರಿಸುವ ಗುಣ ಹೊಂದಿವೆ ಹಾಗೂ ಸ್ತನ ಕ್ಯಾನ್ಸರ್‌‍ಗೆ ಕಾರಣವಾಗುವ ಕ್ಯಾನ್ಸರ್ ಕಾರಕ ಜೀವಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುತ್ತದೆ. ಅಲ್ಲದೇ ದೇಹದ ಉರಿಯೂತದ ವಿರುದ್ದ ಹೋರಾಡುವ ಗುಣವಿರುವ ಅಕ್ರೋಟುಗಳು ಹೃದಯದ ಕಾಯಿಲೆ ಮತ್ತು ಇತರ ಮಾರಕ ಸ್ಥಿತಿಗಳಿಂದ ರಕ್ಷಿಸಲು ನೆರವಾಗುತ್ತದೆ.

ಬ್ಲೂಬೆರಿ ಹಣ್ಣುಗಳು:

ಬ್ಲೂಬೆರಿ ಹಣ್ಣುಗಳು:

ಸಂಶೋಧನೆಯ ಪ್ರಕಾರ, ಬ್ಲೂಬೆರಿ ಹಣ್ಣುಗಳ ಸೇವನೆಯಿಂದ ಸ್ತನ ಕ್ಯಾನ್ಸರ್‌ಗೆ ತುತ್ತಾದ ಜೀವಕೋಶಗಳು ಸ್ವತಃ ನಷ್ಟಗೊಳ್ಳುವಂತೆ ಮಾಡಿಕ್ಯಾನ್ಸರ್ ಗಡ್ಡೆಯ ಬೆಳವಣಿಗೆಯನ್ನು ನಿಗ್ರಹಿಸಬಹುದು. ಈ ಕ್ರಿಯೆಗೆ ಅಪೋಟ್ಫೋಸಿಸ್ (apoptosis) ಎಂದು ಕರೆಯಲಾಗುತ್ತದೆ. ಬ್ಲೂಬೆರಿಗಳು ತಾಜಾ ರೂಪದಲ್ಲಿ ಸಿಗುವ ಸಾಧ್ಯತೆ ಕಡಿಮೆಯೇ ಇರುವ ಕಾರಣ ಶೈತ್ಯೀಕರಿಸಿದ ಹಣ್ಣುಗಳನ್ನೂ ಸೇವಿಸಬಹುದು. ಇವುಗಳು ತಾಜಾ ಹಣ್ಣುಗಳಷ್ಟೇ ಪ್ರಮಾಣದ ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುತ್ತದೆ. ಈ ಹಣ್ಣುಗಳನ್ನು ನಿಯಮಿತವಾಗಿ ಸ್ಮೂಥಿಗಳು , ಓಟ್ಸ್ ರವೆ ಅಥವಾ ಮೊಸರಿನೊಂದಿಗೂ ಸೇವಿಸಬಹುದು.

ಸಿಹಿಗೆಣಸುಗಳು:

ಸಿಹಿಗೆಣಸುಗಳು:

ಸಿಹಿಗೆಣಸಿನ ಸೇವನೆಯಿಂದ ಕ್ಯಾನ್ಸರ್‌ಕಾರಕ ಜೀವಕೋಶಗಳ ಬೆಳವಣಿಗೆಯನ್ನು ನಿಗ್ರಹಿಸಬಹುದು ಹಾಗೂ ಮತ್ತೆ ಬೆಳೆಯದಂತೆ ತಡೆದು ಹಾನಿಗೊಳಗಾಗಿದ್ದ ಜೀವಕೋಶಗಳನ್ನು ಸರಿಪಡಿಸಲೂಬಹುದು. ಈ ಬಗ್ಗೆ ನಡೆಸಿದ ಅಧ್ಯಯನಗಳಿಂದ ನಿಯಮಿತವಾಗಿ ಸಿಹಿಗೆಣಸನ್ನು ಸೇವಿಸುವ ಮಹಿಳೆಯರು ಇತರರಿಗಿಂತಲೂ ಸ್ತನ ಕ್ಯಾನ್ಸರ್ ಹೊಂದುವ ಸಾಧ್ಯತೆಯನ್ನು 17%ದಷ್ಟು ಕಡಿಮೆ ಹೊಂದಿರುತ್ತಾರೆ.

ಅಗಸೆ ಬೀಜಗಳು:

ಅಗಸೆ ಬೀಜಗಳು:

ಇವುಗಳಲ್ಲಿ ಹಲವಾರು ಬಗೆಯ ಆರೋಗ್ಯಕರ ಪ್ರಯೋಜನಗಳಿವೆ. ಪ್ರಮುಖವಾದವು ಎಂದರೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು ಹಾಗೂ ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆಗೊಳಿಸುವುದು. ಈ ಬೀಜಗಳಲ್ಲಿ ಲಿಗ್ನನ್ಸ್ ಎಂಬ ಬಗೆಯ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದೆ. ಇವು ಕ್ಯಾನ್ಸರ್ ಗಡ್ಡೆ ಈಗಾಗಲೇ ಎದುರಾಗಿರುವ ರೋಗಿಗಳಲ್ಲಿ ಗಡ್ಡೆಯ ಬೆಳವಣಿಗೆಯನ್ನು ನಿಗ್ರಹಿಸುವ ಗುಣ ಹೊಂದಿವೆ. ಅಗಸೆ ಬೀಜಗಳನ್ನು ನಿಯಮಿತವಾಗಿ ಸ್ಮೂಥಿಗಳು, ಮೊಸರು ಅಥವಾ ಮುಂಜಾನೆಯ ಉಪಾಹಾರದ ಓಟ್ಸ್ ರವೆಯ ಖಾದ್ಯಗಳೊಂದಿಗೆ ಸೇವಿಸಬಹುದು.

ಬೆಳ್ಳುಳ್ಳಿ:

ಬೆಳ್ಳುಳ್ಳಿ:

ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶಕ್ಕೆ ಕ್ಯಾನ್ಸರ್‌ಕಾರಕ ಜೀವಕೋಶಗಳ ವಿಭಜನೆಯನ್ನು ತಡೆದು ಕ್ಯಾನ್ಸರ್ ಮುಂದುವರೆಯುವುದನ್ನು ನಿಗ್ರಹಿಸುವ ಗುಣವಿದೆ. ಇದರ ಹೊರತಾಗಿ ಬೆಳ್ಳುಳ್ಳಿಯ ಸೇವನೆಯಿಂದ ಶ್ವಾಸಕೋಶ, ಜಠರ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗಳನ್ನೂ ನಿಗ್ರಹಿಸುವ ಗುಣ ಹೊಂದಿದೆ. ಬೆಳ್ಳುಳ್ಳಿಯಲ್ಲಿ ಸಮೃದ್ಧವಾಗಿರುವ ಫ್ಲೇವನಾಯ್ಡುಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಆದರೆ ಬೆಳ್ಳುಳ್ಳಿಯನ್ನು ಹಸಿಯಾಗಿ ತಿಂದಷ್ಟೂ ಇದರ ಕ್ಯಾನ್ಸರ್ ನಿವಾರಕ ಗುಣಗಳನ್ನು ಗರಿಷ್ಟ ಪ್ರಮಾಣದಲ್ಲಿ ಪಡೆಯಬಹುದು.

ಗ್ರೀನ್ ಟೀ:

ಗ್ರೀನ್ ಟೀ:

ಇದರಲ್ಲಿರುವ ಪ್ರಬಲ ಆ್ಯಂಟಿ ಆಕ್ಸಿಡೆಂಟುಗಳಿಗೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಗುಣವಿದೆ. ಇದರಲ್ಲೊಂದು ಸ್ತನ ಕ್ಯಾನ್ಸರ್ ವಿರೋಧಿ ಗುಣವಾಗಿದೆ.

ಇದರ ಹೊರತಾಗಿ ಸ್ತನ ಕ್ಯಾನ್ಸರ್ ಎದುರಾಗಿರುವ ಮಹಿಳೆಯರು ತಮ್ಮ ಆಹಾರದಲ್ಲಿ ಆದಷ್ಟೂ ಕೊಬ್ಬುಯುಕ್ತ ಆಹಾರಗಳನ್ನು ಮಿತಗೊಳಿಸಿ ಇದರ ಬದಲಿಗೆ ಇಡಿಯ ಧಾನ್ಯಗಳನ್ನು ಸೇವಿಸಬೇಕು. ಈ ಮೂಲಕ ಈ ಕ್ಯಾನ್ಸರ್ ಉಲ್ಬಣಗೊಳ್ಳುವ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ತನ್ಮೂಲಕ ಈ ಕ್ಯಾನ್ಸರ್ ನಿಂದ ಬದುಕುಳಿಯುವ ಸಾಧ್ಯತೆಯೂ ಹೆಚ್ಚುತ್ತದೆ. ಕ್ಯಾನ್ಸರ್ ಗೆ ಒಂದೇ ಆಹಾರ ಔಷಧಿಯಂತೆ ಕಾರ್ಯ ನಿರ್ವಹಿಸದು. ಹಾಗಾಗಿ ಕ್ಯಾನ್ಸರ್ ರೋಗಿಗಳು ಈ ಗುಣವಿರುವ ಎಲ್ಲಾ ಆಹಾರಗಳನ್ನು ತಮ್ಮ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕ್ಯಾನ್ಸರ್ ವಿರುದ್ದ ತಮ್ಮ ಹೋರಾಟವನ್ನು ಇನ್ನಷ್ಟು ಬಲಗೊಳಿಸಬಹುದು.

English summary

Foods That Reduce Your Risk of Breast Cancer

These superfoods that can lower the risk of breast cancer, read on...
X
Desktop Bottom Promotion