Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನುವಂಶೀಯ ಬೊಜ್ಜಿನ ಸಮಸ್ಯೆ ಕಾಡುತ್ತಿದೆಯೇ? ಇಂತಹ ವ್ಯಾಯಮಗಳನ್ನು ಅನುಸರಿಸಿ
ದೈಹಿಕವಾಗಿ ಯಾವುದೇ ಚಟುವಟಿಕೆಗಳು ಇಲ್ಲದೆ ಇದ್ದರೆ ಮತ್ತು ಅನಾರೋಗ್ಯಕರ ಆಹಾರ ಕ್ರಮವನ್ನು ಅಳವಡಿಸಿಕೊಂಡಿದ್ದರೆ ಆಗ ಖಂಡಿತವಾಗಿಯೂ ದೇಹದಲ್ಲಿ ಬೊಜ್ಜು ಬೆಳೆಯುವುದು ಸಹಜ. ಫಾಸ್ಟ್ ಫುಡ್, ವ್ಯಾಯಾಮವಿಲ್ಲದೆ ಇರುವುದು ಬೊಜ್ಜು ಬರಲು ಪ್ರಮುಖ ಕಾರಣವಾಗಿದೆ. ಆದರೆ ಬೊಜ್ಜು ನಿವಾರಣೆ ಮಾಡಲು ವ್ಯಾಯಾಮವು ತುಂಬಾ ಉಪಯುಕ್ತ ಎಂದು ಇತ್ತೀಚೆಗೆ ವರದಿಯೊಂದು ಹೇಳಿದೆ. ಕೆಲವರ ದೇಹದಲ್ಲಿ ಅನುವಂಶೀಯವಾಗಿ ಬೊಜ್ಜು ಆವರಿಸಿಕೊಂಡಿದ್ದರೆ ಅದನ್ನು ಇಳಿಸಲು ಏನೇ ಸರ್ಕಸ್ ಮಾಡಿದರೂ ಆಗಲ್ಲ. ಇಂದಿನ ದಿನಗಳಲ್ಲಿ ಬೊಜ್ಜು ಎನ್ನುವುದು ಒಂದು ಜಾಗತಿಕ ಸಮಸ್ಯೆಯಾಗಿ ಕಾಡುತ್ತಲಿದೆ. ಬೊಜ್ಜು ಇಳಿಸಲು ಹೆಚ್ಚಾಗಿ ವೈದ್ಯರು ಸಲಹೆ ಮಾಡುವುದು ವ್ಯಾಯಾಮ. ವ್ಯಾಯಾಮದಿಂದ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಕೆಲವು ವ್ಯಾಯಾಮಗಳು ಬೊಜ್ಜು ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು.
ಅಧ್ಯಯನವು ತೈವಾನ್ ನಲ್ಲಿ 30ರಿಂದ 70ರ ಹರೆಯದ ಸುಮಾರು 18,242 ಮಂದಿ ಚೀನಾದವನ್ನು ಸಮೀಕ್ಷೆಗೆ ಒಳಪಡಿಸಿದೆ. ಇವರ ಬಿಎಂಐ, ದೇಹದ ಕೊಬ್ಬಿನ ಶೇಕಡಾಂಶ, ಸೊಂಟದ ಸುತ್ತಳತೆ ಇತ್ಯಾದಿಗಳನ್ನು ಇಲ್ಲಿ ಪ್ರಮುಖವಾಗಿ ಗಮಹರಿಸಲಾಗಿದೆ. ಇದರಿಂದ ಅಧ್ಯಯನಗಾರರಿಗೆ ಇದಕ್ಕೊಂದು ಪರಿಹಾರ ಕಂಡುಹುಡುಕಲು ನೆರವಾಗಿದೆ. ಈ ಅಧ್ಯಯನವನ್ನು ಪಿಎಲ್ಒಎಸ್ ಜೆನೆಟಿಕ್ ಜರ್ನಲ್ ನಡೆಸಿದೆ. ಇದರ ಸಹ ಲೇಖಕ ವಾನ್ ಯು ಲಿನ್ ಅವರು ಹೇಳುವ ಪ್ರಕಾರ ಅನುವಂಶೀಯತೆಯು ಕೂಡ ಬೊಜ್ಜಿಗೆ ಕಾರಣವಾಗಿದೆ.

ಅನುವಂಶೀಯವಾಗಿ ಕಾಡುವಂತಹ ಬೊಜ್ಜಿಗೆ ಮುಖ್ಯವಾಗಿ ಈ ಕೆಳಗಿನ ಕೆಲವೊಂದು ವ್ಯಾಯಾಮಗಳನ್ನು ಅಳವಡಿಸಿಕೊಂಡು ಹೋದರೆ ಅದರಿಂದ ಪರಿಹಾರ ಕಂಡುಕೊಳ್ಳಬಹುದು.
ಓಡುವುದು
ಅನುವಂಶೀಯತೆಯಿಂದಾಗಿ ಕಾಡುವಂತಹ ಬೊಜ್ಜನ್ನು ನಿವಾರಣೆ ಮಾಡಲು ಓಡುವುದು ತುಂಬಾ ಪರಿಣಾಮಕಾರಿ ಎಂದು ಅಧ್ಯಯನವು ಕಂಡುಕೊಂಡಿದೆ. ಇದನ್ನು ಆರಂಭಿಸಲು ನಿಮ್ಮ ದೇಹವು ಓಡುವುದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ನೀಡಿ. ನಿಧಾನ ಮತ್ತು ಸ್ಥಿರತೆಯು ಯಾವುದೇ ಸ್ಪರ್ಧೆಯನ್ನು ಗೆಲ್ಲಿಸುವುದು. ಸಣ್ಣ ಗುರಿ ಇಟ್ಟುಕೊಳ್ಳಿ ಮತ್ತು ಓಡುವ ಗುರಿಯನ್ನು ನಿಧಾನವಾಗಿಯೇ ಹೆಚ್ಚಿಸಿಕೊಳ್ಳಿ. ಓಡುವುದು ಸಂಪೂರ್ಣ ದೇಹದ ವ್ಯಾಯಾಮವಾಗಿದೆ ಮತ್ತು ಇದು ದೇಹದಲ್ಲಿನ ಬೊಜ್ಜು ನಿವಾರಣೆ ಮಾಡುವುದು.
ಪರ್ವತಾರೋಹಣ
1957ರಲ್ಲಿ ನಡೆಸಿರುವಂತಹ ಅಧ್ಯಯನದ ಪ್ರಕಾರ ಪರ್ವತವನ್ನು ಹತ್ತಿ ಇಳಿಯುವಂತಹ ಪ್ರಾಣಿಗಳು ಬೇಗನೆ ತೂಕ ಕಳೆದುಕೊಳ್ಳುತ್ತವೆ. 1200 ಅಥವಾ ಅದಕ್ಕೆ ಹೆಚ್ಚು ಅಡಿ ಎತ್ತರಕ್ಕೆ ಏರುವಂತಹ ಪರ್ವತಾರೋಹಿಗಳು ಕೂಡ ತೂಕ ಕಳೆದುಕೊಳ್ಳುವರು ಎಂದು ಕಂಡುಕೊಳ್ಳಲಾಗಿದೆ. ಇಂತಹ ಸಾಹಸಿ ಚಟುವಟಿಕೆಗಳಿಗೆ ಒಳ್ಳೆಯ ದೈಹಿಕ ಕ್ಷಮತೆಯು ಬೇಕಾಗುತ್ತದೆ. ಇಂತಹ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಂತಹ ಜನರು ತಾವು ತಿನ್ನುವ ಆಹಾರ ಮತ್ತು ಪ್ರತಿನಿತ್ಯವು ಸ್ವಲ್ಪ ಮಟ್ಟಿನ ವ್ಯಾಯಾಮ ಮಾಡಿ ದೇಹದ ಶಕ್ತಿ ಹೆಚ್ಚಿಸಿಕೊಳ್ಳುವರು.
ನಡೆಯುವುದು
ನಮಗೆಲ್ಲರಿಗೂ ತಿಳಿದಿರುವಂತಹ ನಡೆಯುವುದು ತೂಕ ಇಳಿಸಲು ತುಂಬಾ ಪರಿಣಾಮಕಾರಿ ವಿಧಾನವಾಗಿದೆ. ಇದು ಕಾಲುಗಳಿಗೆ ಮತ್ತು ದೇಹದ ಕೆಳಗಿನ ಭಾಗಕ್ಕೆ ಒಳ್ಳೆಯ ವಿನ್ಯಾಸ ನೀಡುವುದು. ಅದೇ ರೀತಿಯಾಗಿ ವೇಗವಾಗಿ ತೂಕ ಕಳೆದುಕೊಳ್ಳಲು ನೆರವಾಗುವುದು. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯವು 30 ನಿಮಿಷಗಳ ಕಾಲ ನಡೆದಾಡಬೇಕು.
ನೃತ್ಯ
ನೃತ್ಯವು ದೇಹದ ಸಂಪೂರ್ಣ ತೂಕ ಕಡಿಮೆ ಮಾಡಲು ಪ್ರಮುಖ ಪಾತ್ರ ವಹಿಸುವುದು ಮತ್ತು ಇದು ತುಂಬಾ ಮನರಂಜನೆ ಹಾಗೂ ಮಾನಸಿಕ ಶಾಂತಿ ನೀಡುವುದು. ನೃತ್ಯವು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು 30 ನಿಮಿಷ ನೃತ್ಯ ಮಾಡಿದರೆ ಸುಮಾರು 130ರಿಂದ 250 ಕ್ಯಾಲರಿ ದಹಿಸಬಹುದು. ಇದಕ್ಕಾಗಿ ನೀವು ಯಾವುದೇ ರೀತಿಯ ತರಬೇತಿ ಪಡೆಯಬೇಕು ಎನ್ನುವ ಅಗತ್ಯವೂ ಇಲ್ಲ.
ಯೋಗ
ಅನಾದಿ ಕಾಲದಿಂದಲೂ ಯೋಗವು ಭಾರತೀಯರ ಪ್ರಮುಖ ವ್ಯಾಯಾಮವಾಗಿದೆ. ಅಧ್ಯಯನಗಳು ಹೇಳುವ ಪ್ರಕಾರ ಯೋಗ ಮತ್ತು ತೂಕ ಕಳೆದುಕೊಳ್ಳಲು ಬಯಸುವ ಅನುವಂಶೀಯ ಬೊಜ್ಜು ಹೊಂದಿರುವರಿಗೆ ನೇರ ಸಂಬಂಧವಿದೆ.
ಈ ವ್ಯಾಯಾಮಗಳನ್ನು ಕಡೆಗಣಿಸಿ
ಅಧ್ಯಯನಗಳ ಪ್ರಕಾರ ಅನುವಂಶೀಯ ಬೊಜ್ಜು ಇಳಿಸಲು ಬಯಸುವಂತಹ ಜನರು ಕೆಲವೊಂದು ವ್ಯಾಯಾಮಗಳನ್ನು ಕಡೆಗಣಿಸಬೇಕು. ಇದರಲ್ಲಿ ಮುಖ್ಯವಾಗಿ ಈಜು, ಸೈಕ್ಲಿಂಗ್, ತೈ ಚಿ ಮತ್ತು ಸ್ಟ್ರೆಚಿಂಗ್ ಗೆ ತುಂಬಾ ಕಡಿಮೆ ಶಕ್ತಿ ಬೇಕಾಗುತ್ತದೆ. ಇದರಿಂದ ತೂಕವು ಇಳಿಯುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

