For Quick Alerts
ALLOW NOTIFICATIONS  
For Daily Alerts

ಧೂಮಪಾನದ ಕೆಮ್ಮು: ಕಾರಣಗಳು, ಲಕ್ಷಣಗಳು ಹಾಗೂ ಚಿಕಿತ್ಸೆಗಳು

|

ಧೂಮಪಾನ ಹಾನಿಕಾರಕ ಎಂದು ಸಿಗರೇಟ್ ಹಾಗೂ ಬೀಡಿ ಪ್ಯಾಕೆಟ್ ಗಳ ಮೇಲೆ ಬರೆದಿದ್ದರೂ ಅದನ್ನು ಸೇದುವವರು ತಮ್ಮ ಆರೋಗ್ಯವನ್ನು ದುಬಾರಿ ಹಣ ಕೊಟ್ಟು ಹಾಳು ಮಾಡುತ್ತಿರುತ್ತಾರೆ. ಧೂಮಪಾನ ಯಾವತ್ತಿಗೂ ಆರೋಗ್ಯಕ್ಕೆ ತುಂಬಾ ಹಾನಿ ಉಂಟು ಮಾಡುವುದು. ಯಾಕೆಂದರೆ ಇದರಿಂದ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಮುಖ್ಯವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರಬಹುದು ಮತ್ತು ಇದು ಶ್ವಾಸಕೋಶದ ಕ್ಯಾನ್ಸರ್ ಗೂ ಕಾರಣವಾಗಬಹುದು. ಕೆಮ್ಮು, ಅಸ್ತಮಾ, ದೀರ್ಘಕಾಲದ ಎದೆಕೆಮ್ಮು ಇತ್ಯಾದಿಗಳು ಧೂಮಪಾನ ಮಾಡುವವರಲ್ಲಿ ಕಂಡುಬರುವ ಆರಂಭಿಕ ಲಕ್ಷಣಗಳಾಗಿವೆ. ಈ ಲೇಖನದಲ್ಲಿ ನಾವು ನಿಮಗೆ ಧೂಮಪಾನಿಗಳಲ್ಲಿ ಕಂಡುಬರುವಂತಹ ಕೆಮ್ಮಿನ ಬಗ್ಗೆ ತಿಳಿಸಿಕೊಡಲಿದ್ದೇವೆ.ಸಿಗರೇಟ್ ಸೇದುವುದರಿಂದ ಶ್ವಾಸಕೋಶಕ್ಕೆ ತಲುಪಿರುವಂತಹ ರಾಸಾಯನಿಕಗಳನ್ನು ಹೊರಹಾಕಲು ಪ್ರಯತ್ನಿಸುವುದೇ ಧೂಮಪಾನಿಗಳಲ್ಲಿ ಕಂಡುಬರುವಂತಹ ಕೆಮ್ಮು.

ಧೂಮಪಾನಿಗಳಲ್ಲಿ ಕಂಡುಬರುವಂತಹ ಕೆಮ್ಮು ಸಾಮಾನ್ಯ ಕೆಮ್ಮಿಗಿಂತ ಭಿನ್ನವಾಗಿರುವುದು. ಸಾಮಾನ್ಯ ಕೆಮ್ಮು ಕೆಲವು ದಿನಗಳಲ್ಲಿ ಹಾಗೆ ಮಾಯವಾಗುವುದು. ಆದರೆ ಧೂಮಪಾನಿಗಳಲ್ಲಿ ಕಂಡುಬರುವಂತಹ ಕೆಮ್ಮು ಧೂಮಪಾನ ತ್ಯಜಿಸುವ ತನಕ ದೂರವಾಗದು. ಮೂರು ವಾರಕ್ಕಿಂತ ಹೆಚ್ಚಿನ ಕಾಲ ಕೆಮ್ಮು ಇದ್ದರೆ ಇದನ್ನು ಧೂಮಪಾನದಿಂದ ಬಂದ ಕೆಮ್ಮು ಎಂದು ಹೇಳಲಾಗುತ್ತದೆ.ಧೂಮಪಾನಿಗಳ ಕೆಮ್ಮಿನ ಬಗ್ಗೆ ಕೆಲವೊಂದು ಸತ್ಯ ಸಂಗತಿಗಳು ಸಿಗರೇಟ್ ಸೇವನೆಯಿಂದಾಗಿಯೇ ಧೂಮಪಾನದ ಕೆಮ್ಮು ಬರುವುದು. ನಿಕೋಟಿನ್ ಅಥವಾ ತಂಬಾಕನ್ನು ಬೇರೆ ವಿಧದಿಂದ ನೀವು ಎಳೆದುಕೊಂಡರೂ ಅದರಿಂದ ಧೂಮಪಾನದ ಕೆಮ್ಮು ಬರುವುದು. ಪ್ರತಿಯೊಬ್ಬ ಧೂಮಪಾನಿಗೂ ಧೂಮಪಾನದ ಕೆಮ್ಮು ಬರಬೇಕು ಎಂದೇನಿಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ಧೂಮಪಾನದ ಕೆಮ್ಮಿನಿಂದಾಗಿ ಎದೆಕೆಮ್ಮು, ಅಸ್ತಮಾ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರಬಹುದು. ಈ ಕೆಮ್ಮಿನಿಂದ ಪಾರಾಗಲು ಉತ್ತಮ ವಿಧಾನವೆಂದರೆ ನೀವು ನಿಕೋಟಿನ್ ಬಿಟ್ಟುಬಿಡುವುದು.

Smoker’s Cough

ಧೂಮಪಾನದ ಕೆಮ್ಮಿನ ಲಕ್ಷಣಗಳು

ಆರಂಭದಲ್ಲಿ ಧೂಮಪಾನದ ಕೆಮ್ಮು ಸಾಮಾನ್ಯ ಕೆಮ್ಮಿನಂತೆ ಕಂಡುಬರುವುದು. ಇದು ಒಣ ಕೆಮ್ಮು ಆಗಿರುವುದು. ಆದರೆ ಇದು ಬೆಳೆಯುತ್ತಿದ್ದಂತೆ ಕೆಮ್ಮಿನೊಂದಿಗೆ ಕಫ ಕೂಡ ಬರುವುದು.

*ಬಣ್ಣವಿಲ್ಲದೆ ಇರುವುದು

*ಬಿಳಿ

*ಹಳದಿ-ಹಸಿರು

*ರಕ್ತಮಿಶ್ರಿತ

ಧೂಮಪಾನದ ಕೆಮ್ಮಿನ ಆರಂಭಿಕ ಲಕ್ಷಣಗಳು

*ಎದೆ ನೋವು

*ಉಬ್ಬಸ

*ಗಂಟಲು ನೋವು

*ಉಸಿರಾಟದ ತೊಂದರೆ

*ಉಸಿರು ಕಟ್ಟುವುದು

*ಧೂಮಪಾನದ ಕೆಮ್ಮಿನ ಆರಂಭಿಕ ಲಕ್ಷಣಗಳನ್ನು ಕಡೆಗಣಿಸಿದರೆ ಅದರಿಂದ ದೊಡ್ಡ ಸಮಸ್ಯೆ ಕಾಡಬಹುದು. ನೀವು

*ಧೂಮಪಾನಿಯಾಗಿದ್ದರೆ ಆಗ ಕೆಮ್ಮಿನಿಂದ ದೂರವಾಗಲು ಸಾಧ್ಯವಿಲ್ಲ. ಆದರೆ ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಂಡು ಈ ಕೆಮ್ಮು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗದಂತೆ ನೋಡಿಕೊಳ್ಳಬಹುದು. ಧೂಮಪಾನದ ಕೆಮ್ಮು ಬೆಳಗ್ಗೆ ಹೆಚ್ಚಾಗಿರುವುದು ಮತ್ತು ದಿನ ಸಾಗಿದಂತೆ ಇದು ಕಡಿಮೆ ಆಗುವುದು.

ಇತರ ಕೆಮ್ಮು ಮತ್ತು ಧೂಮಪಾನದ ಕೆಮ್ಮು

ಇತರ ಕೆಮ್ಮಿನಿಂದ ಕೆಲವೊಂದು ಅಂಶಗಳು ಧೂಮಪಾನದ ಕೆಮ್ಮನ್ನು ಬೇರ್ಪಡಿಸುತ್ತದೆ. ಉಬ್ಬಸ, ಕಫ ಸಂಗ್ರಹ, ಉಸಿರಾಟದ ವೇಳೆ ಸದ್ದು ಧೂಮಪಾನದ ಕೆಮ್ಮಿನ ಲಕ್ಷಣಗಳು.ಸಾಮಾನ್ಯ ಕೆಮ್ಮು ಹಲವಾರು ಕಾರಣಗಳಿಂದ ಬರಬಹುದು. ಇದು ಒಂದು ಅಥವಾ ಎರಡು ದಿನಗಳಲ್ಲಿ ಹಾಗೆ

ಮಾಯವಾಗುವುದು. ಇದರಿಂದ ಯಾವುದೇ ಗಂಭೀರ ಸಮಸ್ಯೆಯು ಕಾಡದು. ಧೂಮಪಾನದ ಕೆಮ್ಮು ವಿಶೇಷವಾಗಿ ಧೂಮಪಾನ, ನಿಕೋಟಿನ್ ಮತ್ತು ತಂಬಾಕು ಸೇವನೆಯಿಂದಾಗಿ ಬರುವುದು. ಅದಾಗ್ಯೂ, ಧೂಮಪಾನಿಗಳು ಯಾವಾಗಲೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತಾ ಇರಬೇಕು.

ಧೂಮಪಾನದ ಕೆಮ್ಮು: ಚಿಕಿತ್ಸೆ ಮತ್ತು ಕೆಲವು ಮನೆಮದ್ದುಗಳು

ಧೂಮಪಾನದ ಕೆಮ್ಮಿನಿಂದ ಶಾಶ್ವತ ಪರಿಹಾರ ಪಡೆಯಬೇಕಿದ್ದರೆ ಆಗ ಧೂಮಪಾನ ಬಿಡುವುದು ಮಾತ್ರ ಇದಕ್ಕೆ ಪರಿಹಾರವಾಗಿದೆ. ಕೆಲವು ಚಿಕಿತ್ಸೆಯಿಂದ ಇದರ ಲಕ್ಷಣಗಳು ಕಡಿಮೆ ಆಗುವುದನ್ನು ನೋಡಬಹುದು.

Smoker’s Cough

ಕೆಮ್ಮು ಕಡಿಮೆ ಮಾಡಲು ಇಲ್ಲಿ ಕೆಲವು ಚಿಕಿತ್ಸೆಗಳಿವೆ.

*ಯಾವಾಗಲೂ ಹೆಚ್ಚು ನೀರು ಸೇವಿಸಿ.

*ತಕ್ಷಣ ಪರಿಹಾರಕ್ಕೆ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಿ

*ಜೇನುತುಪ್ಪ ಹಾಕಿ ಬಿಸಿ ನೀರು ಕುಡಿಯಿರಿ.

*ಗುಳಿಗೆ ನುಗ್ಗಿ

*ಪ್ರತಿನಿತ್ಯ ಉಸಿರಾಟದ ವ್ಯಾಯಾಮ ಮಾಡಿ

*ಕೆಮ್ಮಿನಿಂದ ಪರಿಹಾರ ಸಿಗದೆ ಇದ್ದರೆ ಹಬೆ ಬಳಸಿ.

*ಆರ್ದ್ರಕವನ್ನು ಬಳಸಿ.

*ಆರೋಗ್ಯಕರ ಮತ್ತು ಚಟುವಟಿಕೆಯ ಜೀವನಶೈಲಿ ಅನುಸರಿಸಿ.

English summary

Smoker’s Cough: Causes, Symptoms and Treatment

Smoker’s cough is caused as your body is expelling the chemicals that entered your lungs due to smoking cigarettes. Smoker’s cough is different from normal coughing. While normal coughing would subside in a few days' time, smoker’s cough doesn’t settle down until and unless you quit smoking! If a cough lasts for more than three weeks, it is probably smoker’s cough (only in the case of smokers).
Story first published: Thursday, August 8, 2019, 13:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X