For Quick Alerts
ALLOW NOTIFICATIONS  
For Daily Alerts

ಆರೋಗ್ಯ ಸಮಸ್ಯೆ ಬಗ್ಗೆ ಹೇಳುವಾಗ ಭಾವುಕರಾದ ಸಮಂತಾ, ಮಯೋಸೈಟಿಸ್‌ ಅಷ್ಟೊಂದು ಗಂಭೀರವಾದ ಕಾಯಿಲೆಯೇ?

|

ಪ್ರಸಿದ್ಧ ನಟಿ ಸಮಂತಾ ತಾವು ಅಟೋ ಇಮ್ಯೂನೆ ಆರೋಗ್ಯ ಸಮಸ್ಯೆಯಾದ ಮಯೋಸೈಟಿಸ್‌ನಿಂದ ಬಳಲುತ್ತಿರುವ ಬಗ್ಗೆ ಹೇಳಿದ್ದು, ನನ್ನ ಜೀವನದ ಕೆಟ್ಟ ದಿನಗಳಿವು, ಇದರ ವಿರುದ್ಧ ಹೋರಾಡಿ ಮತ್ತೆ ಮೊದಲಿನಂತಾಗುತ್ತೇನೆ ಎಂದು ಹೇಳಿದ್ದಾರೆ.

myositis

ಅವರು ಇತ್ತೀಚಿನ ಒಂದು ಸಂದರ್ಶನದಲ್ಲಿ ಆರೋಗ್ಯ ಸ್ಥಿತಿಯ ಬಗ್ಗೆ ಕೇಳುದಾಗ ಭಾವುಕರಾಗುತ್ತಾರೆ. ಅವರು ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ನೆನೆದು ಭಾವುಕರಾಗಲು ಆ ಕಾಯಿಲೆ ಅಷ್ಟೊಂದು ಗಂಭೀರ ಸ್ವರೂಪದ್ದೇ? ಇದರ ಲಕ್ಷಣಗಳೇನು? ಇದಕ್ಕೆ ಚಿಕಿತ್ಸೆ ಇದೆಯೇ? ನೋಡೋಣ ಬನ್ನಿ:

 ಮಯೋಸೈಟಿಸ್ ಎಂದರೇನು?

ಮಯೋಸೈಟಿಸ್ ಎಂದರೇನು?

ಸ್ನಾಯುಗಳು ಬಲಹೀನವಾಗಿ, ತುಂಬಾ ನೋವುಂಟು ಮಾಡುವ ಅಪರೂಪದ ಕಾಯಿಲೆ ಮಯೋಸೈಟಿಸ್ ಎಂದು ಕರೆಯಲಾಗುವುದು. ಸರಳವಾಗಿ ಹೇಳಬೇಕೆಂದರೆ ನರಗಳಲ್ಲಿ ಉರಿಯೂತ ಉಂಟಾಗುವುದು, ಇದರಿಂದ ದೇಹದಲ್ಲಿ ಊತ ಕೂಡ ಕಂಡು ಬರುವುದು.

ಮಯೋಸೈಟಿಸ್ ಯಾವುದೇ ವಯಸ್ಸಿನವರಿಗೆ ಬರಬಹುದು, ಮಕ್ಕಳಿಗೂ ಬರಬಹುದು. ಮಯೋಸೈಟಿಸ್‌ ದೇಹದ ವಿವಿಧ ಭಾಗಳು ಅಂದರೆ ತ್ವಚೆ, ಶ್ವಾಸೋಶ, ಹೃದಯದ ಮೇಲೂ ಪರಿಣಾಮ ಬೀರಬಹುದು.

ಕೆಲವೊಮ್ಮೆ ಮಯೋಸೈಟಿಸ್‌ನಿಂದಾಗಿ ಉಸಿರಾಡಲು, ಆಹಾರವನ್ನು ನುಂಗಲು ಕೂಡ ಕಷ್ಟವಾಗುವುದು.

ಮಯೋಸೈಟಿಸ್‌ನಲ್ಲಿ ಪಾಲಿ ಮಯೋಸೈಟಿಸ್‌, ಡರ್ಮೆಟೋಮೈಯೋಸೈಟಿಸ್ ಎಂಬ ಎರಡು ಬಗೆಗಳು.

ಪಾಲಿಮಯೋಸೈಟಿಸ್‌ ಎಂದರೆ ನರಗಳಲ್ಲಿ ಉರಿಯೂತ ಕಂಡು ಬರುವುದು, ಇದು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಡರ್ಮೆಟೊಮಯೋಸೈಟಿಸ್‌ನಲ್ಲಿ ತ್ವಚೆಗಳು ಗುಳ್ಳೆಗಳು ಏಳುವುದು. ಅಟೋಇಮ್ಯೂನೆ ಕಂಡೀಷನ್ ಎಂದರೆ ರೋಗ ನಿರೋಧಕ ಶಕ್ತಿ ಸೋಂಕಿನ ವಿರುದ್ಧ ಹೋರಾಡುತ್ತದೆ, ಆದರೆ ಈ ಕಂಡೀಷನ್ ಇರುವವರಲ್ಲಿ ಆರೋಗ್ಯಕರ ಕಣಗಳ ಮೇಲೆಯೇ ರೋಗ ನಿರೋಧಕ ಶಕ್ತಿ ದಾಳಿ ಮಾಡುತ್ತದೆ.

ಲಕ್ಷಣಗಳು

ಲಕ್ಷಣಗಳು

ಇದು ವ್ಯಕ್ತಿಯಿಂದ-ವ್ಯಕ್ತಿಗೆ ಭಿನ್ನವಾಗಿರುತ್ತೆ

* ಸ್ನಾಯುಗಳು ಬಲಹೀನವಾಗುವುದು, ಮೆಟ್ಟಿಲು ಹತ್ತುವಾಗ, ಕೂದಲು ಬಾಚುವಾಗ, ಕಾರಿಂದ ಇಳಿಯುವಾಗ ಹೀಗೆ ಚಿಕ್ಕ ಪುಟ್ಟ ಕಾರ್ಯ ಮಾಡುವಾಗಲೂ ಸುಸ್ತು, ನೋವು

* ಸ್ನಾಯುಗಳಲ್ಲಿ ತುಂಬಾ ನೋವು

* ಕೆಲವೊಮ್ಮೆ ಸ್ನಾಯುಗಳಲ್ಲಿ ಊತ

* ಹುಷಾರಿಲ್ಲದಿರುವುದು

* ತೂಕ ಇಳಿಕೆ

* ರಾತ್ರಿಯಲ್ಲಿ ಬೆವರುವುದು

ಕುತ್ತಿಗೆ, ಹಿಂಬಾಗ, ತೊಡೆ ಭಾಗಗಳಲ್ಲಿ ಹೆಚ್ಚಾಗಿ ನೋವು ಕಂಡು ಬರುವುದು.

ತ್ವಚೆಯಲ್ಲಿ ಈ ಲಕ್ಷಣಗಳು ಕಂಡು ಬರುವುದು

ತ್ವಚೆಯಲ್ಲಿ ಈ ಲಕ್ಷಣಗಳು ಕಂಡು ಬರುವುದು

* ಮೈಯಲ್ಲಿ ಕೆಂಪು ಗುಳ್ಳೆಗಳು (ಕಣ್ಣು, ಕುತ್ತಿಗೆ, ಮುಖದಲ್ಲಿ), ಕೈ ಬೆರಳುಗಳಲ್ಲಿ

* ಊತ

ಕಣ್ಣುಗಳಲ್ಲಿ ಊತ

 ಈ ವೈದ್ಯಕೀಯ ಕಾರಣಗಳಿಂದಲೂ ಮಯೋಸೈಟಿಸ್‌ ಬರಬಹುದು

ಈ ವೈದ್ಯಕೀಯ ಕಾರಣಗಳಿಂದಲೂ ಮಯೋಸೈಟಿಸ್‌ ಬರಬಹುದು

* ಕೊಲೆಸ್ಟ್ರಾಲ್ ಕಡಿಮೆಯಾಗಲು ಔಷಧ ತೆಗೆದುಕೊಳ್ಳುತ್ತಿದ್ದರೆ

* ತುಂಬಾ ಸಮಯದಿಂದ ಮದ್ಯಪಾನ ಮಾಡುತ್ತಿದ್ದರೆ

* ಹೈಪರ್‌ ಥೈರಾಯ್ಡ್ ಸಮಸ್ಯೆಯಿದ್ದರೆ

* ವಿಟಮಿನ್ ಡಿ ಕೊರತೆ

* ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ ಅಸಮತೋಲನ

* ಸೋಂಕು

 ಇದರಿಂದ ತೊಂದರೆಗಳೇನು?

ಇದರಿಂದ ತೊಂದರೆಗಳೇನು?

* ಕೆಲವೊಮ್ಮೆ ಚಿಕಿತ್ಸೆ ಮಾಡಿದರೂ ಕಡಿಮೆಯಾಗುವುದಿಲ್ಲ. ಕೆಲವರಿಗೆ ಮಯೋಸೈಟಿಸ್‌ನಿಂದಾಗಿ ಉಸಿರಾಡಲು, ನುಂಗಲು ಕಷ್ಟವಾಗುವುದು, ಹೃದಯ ಬಲಹೀನವಾಗುವುದು.

* ಈ ಸಮಸ್ಯೆ ಬಂದರೆ ನಡೆದಾಡಲು ಕೂಡ ಕಷ್ಟವಾಗುವುದು.

ಚಿಕಿತ್ಸೆ

* ಮಯೋಟೈಟಿಸ್‌ಗೆ ಮೊದಲು ಸ್ಟಿರಾಯ್ಡ್ ಚಿಕಿತ್ಸೆ ನೀಡಲಾಗುವುದು. ಸ್ಟಿರಾಯ್ಡ್ ಅನ್ನು ಟ್ಯಾಬ್ಲೆಟ್ ಅಥವಾ ಇಂಜೆಕ್ಷನ್ ಮೂಲಕ ನೀಡಲಾಗುವುದು. ಇದರಿಂದ ಉರಿಯೂತ, ಬೇನೆ ಕಡಿಮೆಯಾಗುವುದು.

* ಸ್ಟಿರಾಯ್ಡ್ ಅನ್ನು ತುಂಬಾ ಸಮಯದಿಂದ ತೆಗೆದುಕೊಂಡರೆ ಸಂಧಿವಾತ ಕಾಡಬಹುದು.

* ಔಷಧಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮ ಬೀರುತ್ತಿದೆಯೇ ಎಂದು ತಿಳಿಯಲು ನಿಯಮಿತ ರಕ್ತ ಪರೀಕ್ಷೆ ಮಾಡಿಸಬೇಕು.

ವ್ಯಾಯಾಮ ಮಾಡಿ:

ಏರೋಬಿಕ್ಸ್‌ನಂಥ ವ್ಯಾಯಾಮ ಸಂಧಿವಾತ ನೋವು ಅದರಲ್ಲೂ ಮಂಡಿ ನೋವು ಕಡಿಮೆ ಮಾಡುತ್ತದೆ. ಮಯೋಸೈಟಿಸ್‌ನಿಂದ ಗುಣಮುಖರಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಮಯೋಸೈಟಿಸ್‌ ತುಂಬಾ ಗಂಭೀರವಾಗಿದ್ದರೆ ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ಕಡಿಮೆ.

English summary

Samantha suffering from Myositis? Know What is Myositis, symptoms, causes and Treatment in Kannada

What is myositis? Actress Samantha suffering from Myositis? What is The Treatment for this health condition read on...
X
Desktop Bottom Promotion