For Quick Alerts
ALLOW NOTIFICATIONS  
For Daily Alerts

ರೀಶಿ ಅಣಬೆ ಆರೋಗ್ಯ ಪ್ರಯೋಜನಗಳು, ಅಪಾಯದ ಸಾಧ್ಯತೆ ಮತ್ತು ಪಾಕವಿಧಾನಗಳು

|

ಸಾವಿರಾರು ವರ್ಷಗಳಿಂದ ರೀಶಿ ಅಣಬೆಯನ್ನು ಹಲವಾರು ಔಷಧೀಯ ಅಣಬೆಗಳಲ್ಲೊಂದಾಗಿ ಬಳಸುತ್ತಾ ಬರಲಾಗಿದ್ದು ಏಷ್ಯಾ ಖಂಡದ ದೇಶಗಳಲ್ಲಿಯೂ ಇದರ ಆರೋಗ್ಯವರ್ಧಕ ಗುಣಗಳಿಂದಾಗಿ ನೈಸರ್ಗಿಕ ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ. ಇತ್ತೀಚೆಗೆ ಈ ಅಣಬೆಗಳನ್ನು ಕ್ಯಾನ್ಸರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗಾಗಿಯೂ ಬಳಸಲಾಗುತ್ತಿದೆ.

Reishi Mushroom

ರೀಶಿ ಅಣಬೆ? ಏನಿದು?

ಈ ಅಣಬೆಗಳು ಏಷ್ಯಾ ಖಂಡದ ಸಮಷಿತೋಷ್ಣ ಮತ್ತು ತೇವ ವಲಯದಲ್ಲಿ ಬೆಳೆಯುವ ಶಿಲೀಂಧ್ರಜಾತಿಗೆ ಸೇರಿದ ಸಸ್ಯವರ್ಗವಾಗಿದೆ. ಇದಕ್ಕೆ ಗ್ಯಾನೋಡರ್ಮಾ ಲುಸಿಡಂ ಮತ್ತು ಲಿಂಗ್ಝಿ ಎಂಬ ಹೆಸರುಗಳೂ ಇವೆ. ಈ ಅಣಬೆಯಲ್ಲಿ ಮುಖ್ಯವಾಗಿ ಟ್ರಿಟರ್ಪೆನಾಯ್ಡ್ಸ್, ಪಾಲಿಸ್ಯಾಖರೈಡ್ಸ್ ಮತ್ತು ಪೆಪ್ಟಿಡೋಗ್ಲೈಕ್ಯಾನ್ಸ್ ಎಂಬ ಅಂಶಗಳಿವೆ ಹಾಗೂ ಇವೆಲ್ಲವೂ ಕೆಲವಾರು ಬಗೆಯ ಔಷಧೀಯ ಗುಣಗಳನ್ನು ಪಡೆದಿದ್ದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಮತ್ತು ಕ್ಯಾನ್ಸರ್ ವಿರುದ್ದ ಹೋರಾಡಲು ನೆರವಾಗುತ್ತವೆ. ಈ ಅಣಬೆಯ ರುಚಿ ಕೊಂಚ ಕಹಿಯಾಗಿದ್ದರೂ ಇವು ಸೇವನೆಗೆ ಯೋಗ್ಯವಾಗಿವೆ ಹಾಗೂ ಇದರ ಹೊರಭಾಗ ದೊರಗಾಗಿರುತ್ತದೆ. ಈ ಅಣಬೆ ಮಾರುಕಟ್ಟೆಯಲ್ಲಿ ಸಿದ್ಧರೂಪದ ಹೆಚ್ಚುವರಿ ಆಹಾರ, ದ್ರವರೂಪ ಅಥವಾ ಪುಡಿಯ ರೂಪದಲ್ಲಿಯೂ ಲಭ್ಯವಿದೆ.

ಅಣಬೆಗಳಲ್ಲಿ ಕಾಣಬರುವ ನೆರಿಗೆಗಳಂತಹ ಭಾಗದಲ್ಲಿ 'ಫಲಭರಿತ ಭಾಗ'ವನ್ನು ಹೊಂದಿದ್ದು ಈ ಭಾಗವನ್ನು ಔಷಧೀಯ ರೂಪ, ಟೀ, ಪುಡಿ, ದ್ರವರೂಪ ಹಾಗೂ ಪ್ರತ್ಯೇಕಿಸಲ್ಪಟ್ಟ ರೂಪದಲ್ಲಿ ಬಳಸಲಾಗುತ್ತದೆ. ಈ ಅಣಬೆಗಳಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ, ಅಲ್ಪ ಪ್ರಮಾಣದ ಪ್ರೋಟೀನ್ ಮತ್ತು ಕರಗುವ ನಾರು ಉತ್ತಮ ಪ್ರಮಾಣದಲ್ಲಿದೆ. ರೀಶಿ ಅಣಬೆಯ ಆರೋಗ್ಯಕರ ಪ್ರಯೋಜನಗಳು

ಕ್ಯಾನ಼್ಸರ್ ನಿಂದ ರಕ್ಷಣೆ ನೀಡುತ್ತದೆ

ಈ ಅಣಬೆಗಳಲ್ಲಿ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣವಿದೆ. ಒಂದು ಅಧ್ಯಯನದ ಪ್ರಕಾರ ಈ ಅಣಬೆಯ ಸೇವನೆಯಿಂದ ಕ್ಯಾನ್ಸರ್ ಪೀಡಿತ ಜೀವಕೋಶಗಳು ನಷ್ಟಹೊಂದುತ್ತವೆ. ಅಲ್ಲದೇ ಇನ್ನೊಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ನಿಗ್ರಹಿಸಲೂ ಈ ಅಣಬೆಗಳು ನೆರವಾಗುತ್ತವೆ.

Reishi Mushroom

ಉದ್ವೇಗ ಮತ್ತು ಖಿನ್ನತೆಗೆ ವಿರುದ್ದ ಹೋರಾಡುತ್ತದೆ

ರೀಶಿ ಅಣಬೆಯ ಸೇವನೆಯ ಮೂಲಕ ಉದ್ವೇಗ ಮತ್ತು ಖಿನ್ನತೆಯ ತೀವ್ರತೆಯನ್ನು ತಗ್ಗಿಸಬಹುದಾಗಿದೆ. ಒಂದು ಅಧ್ಯಯನ ವಿವರಿಸಿದ ಪ್ರಕಾರ ಸ್ತನ ಕ್ಯಾನ್ಸರ್ ನಿಂದ ಗುಣಮುಖರಾದ ನಲವತ್ತೆಂಟು ವ್ಯಕ್ತಿಗಳ ಗುಂಪು ಸತತ ನಾಲ್ಕು ವಾರಗಳ ಕಾಲ ಈ ಅಣಬೆಯನ್ನು ಸೇವಿಸುತ್ತಾ ಬಂದಾಗ ಇವರಲ್ಲಿ ಸುಸ್ತು ಕಡಿಮೆಯಾಗಿರುತ್ತದೆ.

ಆರೋಗ್ಯಕರ ಹೃದಯಕ್ಕೆ ಉತ್ತಮವಾಗಿದೆ

ಅಧ್ಯಯನದ ಪ್ರಕಾರ ರೀಶಿ ಅಣಬೆಯ ಸೇವನೆಯಿಂದ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಮತ್ತು ಟ್ರೈಗ್ಲಿಸರೈಡುಗಳು ತಗ್ಗುತ್ತವೆ. ಅಲ್ಲದೇ ನರಗಳ ಒಳಭಾಗದಲ್ಲಿ ಎದುರಾಗುವ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ತನ್ಮೂಲಕ ಉರಿಯೂತ ಮತ್ತು ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ.

ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ

ರೀಶಿ ಅಣಬೆಯಲ್ಲಿರುವ ಕೆಲವು ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುವ ಗುಣ ಹೊಂದಿವೆ. Phytochemistryಎಂಬ ಮಾಧ್ಯಮದಲ್ಲಿ ಪ್ರಕಟವಾದ ಲೇಖನದ ಪ್ರಕಾರ ರೀಶಿ ಅಣಬೆ ಸೇವಿಸಿದ ಬಳಿಕ ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ಇನ್ಸುಲಿನ್ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. ಅಂದರೆ ಈ ಅಣಬೆಯ ಸೇವನೆಯಿಂದ ದೇಹ ಇನ್ಸುಲಿನ್ ಅನ್ನು ಸಕ್ಕರೆಯನ್ನು ರಕ್ತದ ಮೂಲಕ ದೇಹದ ಅಂಗಾಂಶಗಳಿಗೆ ತಲುಪಿಸುವ ಕ್ಷಮತೆಯನ್ನು ಉತ್ತಮಗೊಳಿಸುತ್ತದೆ, ಈ ಮೂಲಕ ದೇಹಕ್ಕೆ ಅಗತ್ಯವಾದ ಇಂಧನ ದೊರಕುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೀಶಿ ಅಣಬೆಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಎಂದು Pharmacological Sciences ಎಂಬ ಮಾಧ್ಯಮದಲ್ಲಿ ಪ್ರಕಟವಾಗಿದೆ. ಈ ಅಣಬೆಯಲ್ಲಿರುವ ಕೆಲವು ಪೋಷಕಾಂಶಗಳು ರಕ್ತದಲ್ಲಿರುವ ಬಿಳಿರಕ್ತಕಣಗಳ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಇವುಗಳ ನೈಸರ್ಗಿಕ ಕ್ರಿಮಿಗಳನ್ನು ಕೊಲ್ಲುವ ಶಕ್ತಿಹೆಚ್ಚುತ್ತದೆ, ತನ್ಮೂಲಕ ಹಲವಾರು ಸೋಂಕು ಹಾಗೂ ಕ್ಯಾನ್ಸರ್ ಪೀಡಿತ ಜೀವಕೋಶಗಳ ವಿರುದ್ದ ಹೋರಾಡುತ್ತದೆ.

ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ

ರೀಶಿ ಅಣಬೆಯ ಸೇವನೆಯ ಮೂಲಕ ದೇಹದಲ್ಲಿ ಕೆಲವು ಬಗೆಯ ರಾಸಾಯನಿಕ ಕ್ರಿಯೆಗಳು ಸುಗಮವಾಗಿ ನಡೆಯುತ್ತವೆ ಹಾಗೂ ವಿಶೇಷವಾಗಿ ಯಕೃತ್ ಗೆ ಜೀವರಾಸಾಯನಿಕ ಕ್ರಿಯೆಗೆ ಸಹಕರಿಸುವ (adaptogen) ಗುಣದಿಂದಾಗಿ ಯಕೃತ್ ನ ಕಾರ್ಯಕ್ಷಮತೆ ಹೆಚ್ಚುತ್ತದೆ ಹಾಗೂ ಯಕೃತ್ ನ ಕಾಯಿಲೆಗಳಿಂದ ರಕ್ಷಿಸುತ್ತದೆ. International Journal of Medicinal Mushrooms ಎಂಬ ಮಾಧ್ಯಮದ ವರದಿಯ ಪ್ರಕಾರ ರೀಶಿ ಅಣಬೆಯಲ್ಲಿರುವ ಆಂಟಿಆಕ್ಸಿಡೆಂಟುಗಳಿಗೆ ಒಂದಕ್ಕಿಂತ ಹೆಚ್ಚು ಬಗೆಯ ಗುಣಗಳಿವೆ (hepatoprotective) ಹಾಗೂ ಇವು ಯಕೃತ್ ನ ಕ್ಷಮತೆಯನ್ನು ಉತ್ತಮಗೊಳಿಸುತ್ತವೆ.

Reishi Mushroom

ಅಲರ್ಜಿ, ಅಸ್ತಮಾ ಮತ್ತು ಸೋಂಕುಗಳ ವಿರುದ್ದ ಹೋರಾಡುತ್ತದೆ

ರೀಶಿ ಅಣಬೆಗಳಲ್ಲಿರುವ ಕ್ರಿಯಾತ್ಮಕ ಅಂಶಗಳಾದ ಟೈಟರ್ಪೀನ್ಸ್ (triterpenes) ಎಂಬ ಪೋಷಕಾಂಶ ಗ್ಯಾನೋಡೆರಿಕ್ ಆಮ್ಲದ ಒಂದು ಬಗೆಯಾಗಿದ್ದು ಅಲರ್ಜಿ ಹಾಗೂ ಅಸ್ತಮಾ ಕಾಯಿಲೆಗೆ ಸಂಬಂಧಿಸಿದ ರಾಸಾಯನಿಕೆ ಪ್ರತಿಕ್ರಿಯೆ (histamine reactions) ಗಳನ್ನು ಕಡಿಮೆ ಮಾಡುತ್ತದೆ. ಇದೇ ಗುಣದಿಂದಾಗಿ ರೀಶಿ ಅಣಬೆಗಳನ್ನು ಅಸ್ತಮಾ ಕಾಯಿಲೆಗೆ ನೈಸರ್ಗಿಕ ಔಷಧಿಯ ರೂಪದಲ್ಲಿ ಸೇವಿಸಲಾಗುತ್ತದೆ. ಅಲ್ಲದೇ ಇದರಲ್ಲಿರುವ ಟ್ರೈಟರ್ಪೀನ್ಸ್ ಗಳು ದೇಹಕ್ಕೆ ಎರಗುವ ವೈರಸ್, ಅತಿಸೂಕ್ಷ್ಮಜೀವಿ ಮತ್ತು ಶಿಲೀಂಧ್ರದ ಸೋಂಕುಗಳಿಂದ ರಕ್ಷಿಸುತ್ತದೆ.

ಚೀನಾದ ಸಾಂಪ್ರಾದಾಯಿಕ ಔಷಧಿಗಳಲ್ಲಿ ರೀಶಿ ಅಣಬೆ

ಚೀನಾದ ಸಾಂಪ್ರಾದಾಯಿಕ ಔಷಧಿಗಳಲ್ಲಿ ರೀಶಿ ಅಣಬೆಗಳನ್ನು ದೇಹದಾರ್ಡ್ಯತೆ ಹೆಚ್ಚಲು, ಶಕ್ತಿ, ವೃದ್ದಾಪ್ಯ ಆವರಿಸುವ ಗತಿಯನ್ನು ನಿಧಾನಗೊಳಿಸಲು, ಯಕೃತ್ ಮತ್ತು ಹೃದಯದ ಆರೋಗ್ಯ ವೃದ್ದಿಸಲು ಹಾಗೂ ಒಟ್ಟಾರೆ ಆರೊಗ್ಯ ಉತ್ತಮಗೊಳ್ಳಲು ಬಳಸಲಾಗುತ್ತದೆ. ಅಲ್ಲದೇ ಈ ಅಣಬೆಯ ಸೇವನೆಯಿಂದ ವ್ಯಗ್ರಗೊಂಡ ಮನಸ್ಸನ್ನು ತಿಳಿಯಾಗಿಸಲು ಹಾಗೂ ಶಾಂತಿಯಿಂದಿರಲು ನೆರವಾಗುತ್ತದೆ. ಇದೇ ಕಾರಣದಿಂದ ಹಲವಾರು ಧಾರ್ಮಿಕ ಪದ್ದತಿಗಳಲ್ಲಿ ಈ ಅಣಬೆಯನ್ನು ಬಳಸಲಾಗುತ್ತಿದೆ.

ರೀಶಿ ಅಣಬೆಯ ಸೇವನೆಯ ಅಪಾಯಗಳು

ಈ ಅಣಬೆಯ ಸೇವನೆ, ಇದು ಯಾವ ಬಗೆಯ ಅಣಬೆ, ಯಾವ ರೂಪದಲ್ಲಿ ಸೇವಿಸಲಾಗುತ್ತದೆ, ಯಾವ ಅನಾರೋಗ್ಯಕ್ಕೆ ಈ ಅಣಬೆಯ ಸೇವನೆಯನ್ನು ಸಲಹೆ ಮಾಡಲಾಗಿದೆ ಹಾಗೂ ವ್ಯಕ್ತಿಯ ವಯಸ್ಸು ಮತ್ತು ಆರೋಗ್ಯವನ್ನು ಆಧರಿಸಿರುತ್ತದೆ. ಒಂದು ವೇಳೆ ಸತತವಾಗಿ ಮೂರರಿಂದ ಆರು ತಿಂಗಳ ಕಾಲ ಸೇವಿಸಿದರೆ ಇವುಗಳ ಸೇವನೆಯಿಂದ ಅಲರ್ಜಿಕಾರಕ ಪರಿಣಾಮ ಕಂಡುಬರಬಹುದು. ಇವುಗಳಲ್ಲಿ ಚರ್ಮದಲ್ಲಿ ಸೂಕ್ಷ್ಮಗೆರೆಗಳು, ತಲೆನೋವು, ತಲೆ ಸುತ್ತುವುದು, ತುರಿಕೆ, ಮೂಗಿನಿಂದ ರಕ್ತ ಸೋರುವುದು, ಅಜೀರ್ಣತೆ ಹಾಗೂ ಮಲವಿಸರ್ಜನೆಯ ಸಮಯದಲ್ಲಿ ರಕ್ತ ಕಾಣಿಸಿಕೊಳ್ಳುವುದು ಮೊದಲಾದವು ಎದುರಾಗುತ್ತವೆ. ಎಚ್ಚರಿಕೆ: ಒಂದು ವೇಳೆ ನಿಮಗೆ ಕಡಿಮೆ ರಕ್ತದೊತ್ತಡದ ಅಥವಾ ಮಧುಮೇಹದ ತೊಂದರೆ ಇದ್ದರೆ ಈ ಅಣಬೆಗಳನ್ನು ಸೇವಿಸಬಾರದು.

ಔಷಧಿ ರೂಪದಲ್ಲಿ ಎಷ್ಟು ಸೇವಿಸಬಹುದು?

ದಿನವೊಂದರ ಅವಧಿಯಲ್ಲಿ ಎರಡರಿಂದ ಒಂಭತ್ತು ಗ್ರಾಂನಷ್ಟು ರೀಶಿ ಅಣಬೆಯಿಂದ ಪ್ರತ್ಯೇಕಿಸಲ್ಪಟ್ಟ ಅಂಶವನ್ನು ಪುಡಿ, ಮಾತ್ರೆ ಅಥವಾ ದ್ರವರೂಪದಲ್ಲಿ ಸೇವಿಸಬಹುದು. ರೀಶಿ ಅಣಬೆಯ ಪಾಕವಿಧಾನಗಳು

ರೀಶಿ ಅಣಬೆಯ ಟೀ

ಅವಶ್ಯವಿರುವ ಸಾಮಾಗ್ರಿಗಳು: 113 ಗ್ರಾಂನಷ್ಟು ಒಣಗಿಸಿದ ರೀಶಿ ಅಣಬೆ

ಎಂಟು ಕಪ್ ನೀರು

ವಿಧಾನ: ಅಣಬೆಯನ್ನು ಚಿಕ್ಕದಾಗಿ ಹೆಚ್ಚಿ ನೀರಿಲ್ಲದೇ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ.

ಈ ಪುಡಿಯನ್ನು ಒಂದು ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ.

ಸುಮಾರು ಎಂಟು ಕಪ್ ನಷ್ಟು ನೀರನ್ನು ಬಿಸಿಮಾಡಿ, ಕುದಿಯಲು ಪ್ರಾರಂಭವಾದೊಡನೆ ಮಸ್ಲಿನ್ ಬಟ್ಟೆಯನ್ನು ಈ ನೀರಿಗೆ ಹಾಕಿ ಬಿಸಿಮಾಡುವುದನ್ನು ಮುಂದುವರೆಸಿ. ಈ ನೀರು ಅರ್ಧದಷ್ಟಾದ ಬಳಿಕ ಈ ಬಟ್ಟೆಯನ್ನು ನಿವಾರಿಸಿ ಬಿಸಿಬಿಸಿಯಿದ್ದಂತೆಯೇ ಕುಡಿಯಿರಿ.

Reishi Mushroom

ರೀಶಿ ಅಣಬೆ, ಕ್ಯಾರೆಟ್ ಮತ್ತು ಕೇಲ್ ಎಲೆಗಳ ಸೂಪ್

ಅಗತ್ಯವಿರುವ ಸಾಮಾಗ್ರಿಗಳು.

*1 ದೊಡ್ಡ ಚಮಚ ಆಲಿವ್ ಎಣ್ಣೆ

*1 ಮಧ್ಯಮ ಗಾತ್ರದ ನೀರುಳ್ಳಿ, ಚಿಕ್ಕದಾಗಿ ಹೆಚ್ಚಿದ್ದು

*4 ಒಣಗಿಸಿದ ಬೆಳ್ಳುಳ್ಳಿಯ ಎಸಳುಗಳು

*2 ಕ್ಯಾರೆಟ್, ಚಿಕ್ಕದಾಗಿ ತುಂಡರಿಸಿದ್ದು

*2 ದೊಡ್ಡ ಚಮಚ ತುರಿದ ಶುಂಠಿ

*1 ದೊಡ್ಡ ಜೀರಿಗೆಯ ಗಡ್ಡೆ ಚಿಕ್ಕದಾಗಿ ಕತ್ತರಿಸಿದ್ದು

*¼ ಕಪ್ ಚೆನ್ನಾಗಿ ಒಣಗಿಸಿ ಪುಡುಮಾಡಿದ ರೀಶಿ ಅಣಬೆ

*2 ಕಪ್ ನಷ್ಟು ಕ್ರೆಮಿನಿ ಅಣಬೆಗಳು, ಚಿಕ್ಕದಾಗಿ ಕತ್ತರಿಸಿದ್ದು

2 ಕಪ್ ಶಿಐಟೇಕ್ ಅಣಬೆ (shiitake mushrooms)

*6 ಕಪ್ ನೀರು

*¼ ಕಪ್ ಮೀಸೋ ಪೇಸ್ಟ್ (miso paste)

*½ ದೊಡ್ಡ ಚಮಚ್ ಥೈಮ್

*3 ಕಪ್ ನಷ್ಟು ಚಿಕ್ಕದಾಗಿ ಹೆಚ್ಚಿದ ಕೇಲ್ ಎಲೆಗಳು

*ಉಪ್ಪು ಮತ್ತು ಕಾಳುಮೆಣಸಿನ ಪುಡಿ -ರುಚಿಗೆ ತಕ್ಕಷ್ಟು

ವಿಧಾನ

ಒಂದು ಪಾತ್ರೆಯಲ್ಲಿ ಆಲಿವ್ ಎಣ್ಣೆ ಬಿಸಿಮಾಡಿ ನೀರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಎರಡು ನಿಮಿಷಗಳ ಕಾಲ ಹುರಿಯಿರಿ

ಇದಕ್ಕೆ ಶುಂಠಿ ಮತ್ತು ಅಣಬೆ ಪುಡಿಯ ಹೊರತಾಗಿ ಬೇರೆಲ್ಲಾ ತರಕಾರಿಗಳನ್ನು ಹಾಕಿ ಸುಮಾರು ಐದು ನಿಮಿಷಗಳ ಕಾಲ ಬಾಡಿಸಿ

ಬಳಿಕ ನೀರು, ಮೀಸೋ ಪೇಸ್ಟ್, ರೀಶಿ ಅಣಬೆ ಪುಡಿ ಹಾಗೂ ಇತರ ಸಾಂಬಾರ ಸಾಮಾಗ್ರಿಗಳನ್ನು ಸೇರಿಸಿ ಕುದಿಸಿ. ಈ ನೀರು ಕುದಿ ಬಂದ ಬಳಿಕ ಉರಿ ತಗ್ಗಿಸಿ ಸುಮಾರು ಒಂದು ಘಂಟೆಯ ಕಾಲ ಮುಂದುವರೆಯಲು ಬಿಡಿ. ಬಳಿಕ ಉಪ್ಪು ಮತ್ತು ಕಾಳುಮೆಣಸಿನ ಪುಡಿಗಳನ್ನು ರುಚಿಗೆ ತಕ್ಕಷ್ಟು ಬೆರೆಸಿ ಬಿಸಿಬಿಸಿಯಾಗಿ ಸೇವಿಸಿ.

English summary

Reishi Mushroom: Health Benefits, Risks & Recipe

Reishi mushroom is a fungus that grows in hot and humid locations in Asia. Reishi mushrooms are also known as Ganoderma lucidum or Lingzhi. It is composed of several chemical constituents such as triterpenoids, polysaccharides and peptidoglycans and comes with a lot of health benefits like strengthening the immune system and fighting cancer.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more