Just In
Don't Miss
- Movies
ದರ್ಶನ್ ಫಾರಂ ಹೌಸ್ಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ್
- News
ರಾಮ ಮಂದಿರ ನಿರ್ಮಾಣ ಯಾವಾಗ ಪೂರ್ಣ, ತಗುಲುವ ವೆಚ್ಚವೆಷ್ಟು?
- Sports
ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್
- Finance
ಜನವರಿ 1ರಿಂದ 22ರ ತನಕ ಎಫ್ ಪಿಐನಿಂದ ರು. 18,456 ಕೋಟಿ ಹೂಡಿಕೆ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಲೂಗಡ್ಡೆ ಎಂದು ಅಲ್ಲಗಳೆಯದಿರಿ: ಇದರಲ್ಲಿದೆ ಈ ಕಾಯಿಲೆಗಳಿಗೆ ಮದ್ದು
ಆದರೆ ಆಲೂಗಡ್ಡೆಯ ನಿತ್ಯ ನಿಯಮಿತ ಸೇವನೆಯಿಂದ ತಮ್ಮ ದೇಹಕ್ಕೆ ಉಂಟಾಗುವ ಪ್ರಯೋಜನಗಳ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಆಲೂಗಡ್ಡೆಗಳಲ್ಲಿ ಇರುವ ಅನೇಕ ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ದೇಹಕ್ಕೆ ಬಹಳಷ್ಟು ಸಹಕಾರಿಯಾಗಿ ಕೆಲಸ ಮಾಡುತ್ತವೆ. ಆಲೂಗಡ್ಡೆ ಜ್ಯೂಸ್ ನಿಂದ ಉಂಟಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಸವಿವರ ಮಾಹಿತಿಯನ್ನು ಈ ಲೇಖನ ನಿಮಗೆ ತಿಳಿಸಿಕೊಡಲಿದೆ.

1. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ
ಆಲೂಗಡ್ಡೆಗಳಲ್ಲಿ ಆಲ್ಕಲೈನ್ ಎಂಬ ಅಂಶ ಬಹಳಷ್ಟಿದ್ದು, ಮನುಷ್ಯನ ದೇಹದ ಅನ್ನನಾಳವನ್ನು ಶುಚಿಗೊಳಿಸಿ, ಅದಕ್ಕೆ ಬೇಕಾದ ಪೌಷ್ಟಿಕ ಸತ್ವಗಳನ್ನು ಒದಗಿಸಿ ಜೀರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಅಧ್ಯಯನ ಒಂದು ಹೇಳುವ ಪ್ರಕಾರ ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ಕಡಿಮೆ ಮಾಡಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡಿ ಹೊಟ್ಟೆಯ ಇನ್ನಿತರ ಸಮಸ್ಯೆಗಳನ್ನು ದೂರ ಮಾಡುತ್ತದೆ. ಪಿಂಕ್ ಆಲೂಗಡ್ಡೆಗಳ ಜ್ಯೂಸ್ ಹೊಟ್ಟೆಯ ಅಲ್ಸರ್ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುತ್ತದೆ.
ಆದ್ದರಿಂದ ಪ್ರತಿ ದಿನ ಎರಡು ಅಥವಾ ಮೂರು ಬಾರಿ ಮಧ್ಯಾಹ್ನದ ಊಟಕ್ಕೆ ಮುಂಚೆ ಅರ್ಧ ಕಪ್ ಆಲುಗಡ್ಡೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

2. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಆಲೂಗಡ್ಡೆ ಜ್ಯೂಸ್ ನಲ್ಲಿ ಮನುಷ್ಯನ ದೇಹದ ಸೋಂಕು ಮತ್ತು ಸಾಮಾನ್ಯ ಶೀತದ ನಿವಾರಣೆಗಾಗಿ ಹೇಳಿ ಮಾಡಿಸಿದ ಆಂಟಿ - ಆಕ್ಸಿಡೆಂಟ್ ಎಂದು ಗುರುತಿಸಿಕೊಂಡ ವಿಟಮಿನ್ ' ಸಿ ' ಅಂಶ ಗಣನೀಯ ಪ್ರಮಾಣದಲ್ಲಿ ಇದೆ. ಈ ಅಂಶ ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯನ್ನು ಹೊರಗಿನ ಹಾನಿಕಾರಕ ರೋಗಕಾರಕಗಳಿಂದ ರಕ್ಷಿಸಿ ದೀರ್ಘ ಕಾಲದ ಕಾಯಿಲೆಗಳನ್ನು ಆರಾಮವಾಗಿ ಗುಣ ಪಡಿಸುತ್ತದೆ.

3. ಎದೆಯುರಿಯ ನಿವಾರಣೆ
ಮನುಷ್ಯನಿಗೆ ಎದೆಯುರಿ ಉಂಟಾಗುವ ಕಾರಣವೆಂದರೆ ಹೊಟ್ಟೆಯಲ್ಲಿನ ಆಮ್ಲ ಹಿಂಬದಿಯಲ್ಲಿ ಹರಿಯಲು ಪ್ರಾರಂಭ ಮಾಡಿ ನೇರವಾಗಿ ಅನ್ನನಾಳಕ್ಕೆ ಬಂದು ಸೇರುತ್ತದೆ. ಅನ್ನನಾಳ ಎದೆ ಭಾಗದಲ್ಲಿರುವುದರಿಂದ ಸಾಮಾನ್ಯವಾಗಿ ಎದೆಯುರಿ ಉಂಟಾದಂತೆ ಭಾಸವಾಗುತ್ತದೆ.
ಆಲೂಗಡ್ಡೆ ಜ್ಯೂಸ್ ನಲ್ಲಿ ಹೊಟ್ಟೆಯ ಒಳ ಪದರಕ್ಕೆ ಬೇಕಾದ ಅಗತ್ಯ ಸಂಯುಕ್ತಗಳು ಬಹಳಷ್ಟಿವೆ. ಇವುಗಳು ಹೊಟ್ಟೆಯ ಆಮ್ಲವನ್ನು ಹೆಚ್ಚಾಗದಂತೆ ತಗ್ಗಿಸಿ ಜಠರಗರುಳಿನ ಉರಿಯೂತವನ್ನು ಗುಣ ಪಡಿಸುತ್ತದೆ.
ಆದ್ದರಿಂದ ಊಟಕ್ಕೆ ಅರ್ಧ ಗಂಟೆ ಮುಂಚೆ ಪ್ರತಿ ದಿನ 3 ರಿಂದ 4 ಟೇಬಲ್ ಚಮಚಗಳಷ್ಟು ಆಲೂಗಡ್ಡೆ ಜ್ಯೂಸ್ ಕುಡಿಯುವುದು ಸೂಕ್ತ ಎಂಬುದು ನಮ್ಮ ಭಾವನೆ.

4. ಯಕೃತ್ ಕಾರ್ಯ ಚಟುವಟಿಕೆ ಅಭಿವೃದ್ಧಿ
ಆಲೂಗಡ್ಡೆ ಜ್ಯೂಸ್ ನ ಇನ್ನೊಂದು ಪ್ರಮುಖ ಉಪಯೋಗವೆಂದರೆ ಪಿತ್ತಕೋಶದ ಸೋಂಕುಗಳನ್ನು ಗುಣಪಡಿಸಿ ಯಕೃತ್ ಅಥವಾ ಲಿವರ್ ಅಂಗದ ಶುದ್ಧೀಕರಣದಲ್ಲಿ ಭಾಗಿಯಾಗುತ್ತದೆ.
ಅಂದರೆ ಆಲೂಗಡ್ಡೆ ಜ್ಯೂಸ್ ಮನುಷ್ಯನ ದೇಹದ ತ್ಯಾಜ್ಯ ವಸ್ತುಗಳನ್ನು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವ ಲಿವರ್ ನ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ನಿರ್ವಿಷಕಾರಿ ಏಜೆಂಟ್ ಎನ್ನಿಸಿಕೊಂಡಿದೆ.

5. ರ್ಯುಮ್ಯಾಟಿಡ್ ಆರ್ಥ್ರೈಟಿಸ್ ಗುಣ
ರ್ಯುಮ್ಯಾಟಿಡ್ ಆರ್ಥ್ರೈಟಿಸ್ ಎಂಬುದು ಮನುಷ್ಯನಿಗೆ ಎದುರಾಗುವ ಒಂದು ದೀರ್ಘಕಾಲದ ಉರಿಯೂತದ ಸಮಸ್ಯೆ. ಇದು ಸಾಮಾನ್ಯವಾಗಿ ಕೈ ಮತ್ತು ಕಾಲಿನ ಭಾಗದ ಕೀಲುಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ.
ಆಲೂಗಡ್ಡೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ರ್ಯುಮ್ಯಾಟಿಡ್ ಆರ್ಥ್ರೈಟಿಸ್ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಏಕೆಂದರೆ ಆಲೂಗಡ್ಡೆ ಜ್ಯೂಸ್ ನಲ್ಲಿ ವಿಟಮಿನ್ 'ಸಿ' ಅಂಶ ಯಥೇಚ್ಛವಾಗಿದ್ದು, ಇತರ ಪೋಷಕಾಂಶಗಳ ಜೊತೆ ಮನುಷ್ಯನ ದೇಹದ ಮೇಲೆ ಕೆಲಸ ಮಾಡುತ್ತದೆ.
ಆದ್ದರಿಂದ ಊಟಕ್ಕೆ ಮುಂಚೆ ಒಂದು ಅಥವಾ ಎರಡು ಟೀ ಚಮಚದಷ್ಟು ಹಸಿ ಆಲೂಗಡ್ಡೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

6. ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ
ಮನುಷ್ಯನಿಗೆ ದಿನ ನಿತ್ಯದ ನಾನಾ ಕೆಲಸ ಕಾರ್ಯಗಳನ್ನು ಮಾಡಲು ದೈಹಿಕ ಶಕ್ತಿ ಸಾಮರ್ಥ್ಯದ ಅಗತ್ಯವಿದೆ. ದೇಹದಲ್ಲಿ ಶಕ್ತಿ ಉತ್ಪತ್ತಿ ಆಗಬೇಕೆಂದರೆ ಅದಕ್ಕೆ ತಕ್ಕಂತಹ ಆಹಾರದ ಸೇವನೆ ಬಹಳ ಮುಖ್ಯ.
ಅಂತಹ ಆಹಾರಗಳಲ್ಲಿ ಆಲೂಗಡ್ಡೆ ಜ್ಯೂಸ್ ಸಹ ಒಂದು. ಹೌದು, ಹಸಿ ಆಲೂಗಡ್ಡೆ ಜ್ಯೂಸ್ ನಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ಹೆಚ್ಚಾಗಿದ್ದು ನೀವು ಮನುಷ್ಯನ ದೇಹದಲ್ಲಿ ಶಕ್ತಿ ಉತ್ಪಾದನೆಗೆ ಬಹಳಷ್ಟು ಸಹಾಯ ಮಾಡುತ್ತವೆ.
ಇವುಗಳ ಜೊತೆಗೆ ಆಲೂಗಡ್ಡೆ ಜ್ಯೂಸ್ ನಲ್ಲಿ ವಿಟಮಿನ್ 'ಬಿ' ಅಂಶ ಕೂಡ ಇದ್ದು ಇದು ಮನುಷ್ಯ ಸೇವಿಸಿದ ಕಾರ್ಬೋಹೈಡ್ರೇಟ್ ಅಂಶಗಳನ್ನು ಗ್ಲೂಕೋಸ್ ಅಂಶಗಳನ್ನಾಗಿ ಪರಿವರ್ತಿಸಲು ಸಹಾಯ ಮಾಡಿ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚು ಮಾಡುತ್ತದೆ.

7. ಮೂತ್ರ ಪಿಂಡಗಳ ಕಾರ್ಯಕ್ಷಮತೆ ಹೆಚ್ಚಾಗುತ್ತದೆ
ಆಲೂಗಡ್ಡೆ ಜ್ಯೂಸ್ ತನ್ನಲ್ಲಿ ಪೊಟ್ಯಾಷಿಯಂ ಅಂಶವನ್ನು ಹೊಂದಿದ್ದು ಇದು ಮನುಷ್ಯನ ಕಿಡ್ನಿಗಳ ಕಾರ್ಯ ಚಟುವಟಿಕೆಯನ್ನು ಬಲಪಡಿಸುತ್ತದೆ.
ಪೊಟ್ಯಾಶಿಯಂ ಒಂದು ಎಲೆಕ್ಟ್ರೋಲೈಟ್ ಆಗಿದ್ದು, ಇದು ಮನುಷ್ಯನ ದೇಹದ ದ್ರವಗಳನ್ನು ನಿಯಂತ್ರಣ ಮಾಡಿ ಮಾಂಸ - ಖಂಡಗಳ ಕೆಲಸ ಕಾರ್ಯಗಳನ್ನು ಹೆಚ್ಚಿಸುತ್ತದೆ.

8. ಹೃದಯದ ಆರೋಗ್ಯ ವೃದ್ಧಿಸುತ್ತದೆ
ಆಲುಗಡ್ಡೆಯಲ್ಲಿರುವ ಪೊಟ್ಯಾಶಿಯಂ ಅಂಶ ದೇಹದಲ್ಲಿ ಕಟ್ಟಿಕೊಂಡಿರುವ ಹೃದಯ ರಕ್ತ ನಾಳಗಳನ್ನು ತೆರವುಗೊಳಿಸಿ ಹೃದಯಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಕಾಯಿಲೆಗಳು ದೂರಾಗುತ್ತವೆ.

9. ದೈಹಿಕ ತೂಕದ ನಿರ್ವಹಣೆಯಲ್ಲಿ ಸಹಾಯಕ
ಹಸಿ ಆಲೂಗಡ್ಡೆ ಜ್ಯೂಸ್ ಅಧಿಕ ದೇಹದ ತೂಕ ಹೊಂದಿರುವವರಿಗೆ ಒಬ್ಬ ಒಳ್ಳೆಯ ಸ್ನೇಹಿತ ಎಂದೇ ಹೇಳಬಹುದು. ಏಕೆಂದರೆ ಇದರಲ್ಲಿರುವ ವಿಟಮಿನ್ 'ಸಿ' ಅಂಶ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ.
ಆದ್ದರಿಂದ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರು ಊಟದ ನಂತರ ಆಲೂಗಡ್ಡೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಊಟದ ನಂತರ ಹೊಟ್ಟೆ ಹಸಿವು ಕಡಿಮೆಯಾಗಿ ಇನ್ನಷ್ಟು ತಿನ್ನಬೇಕೆಂಬ ಹಂಬಲ ದೂರಾಗಿ ದೇಹದ ತೂಕ ತನ್ನಿಂತಾನೇ ಇಳಿಯುತ್ತದೆ.

10. ಗಾಯಗಳು ಬಹು ಬೇಗನೆ ಮಾಗುತ್ತವೆ
ಆಲೂಗಡ್ಡೆ ಜ್ಯೂಸ್ ನಲ್ಲಿ ಜಿಂಕ್ ಮತ್ತು ವಿಟಮಿನ್ 'ಸಿ' ಅಂಶವಿದ್ದು ಇದು ಗಾಯ ವಾಸಿಯಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಊದಿಕೊಂಡ ಮಾಂಸ - ಖಂಡಗಳನ್ನು ಸಹಜ ಸ್ಥಿತಿಗೆ ಮರಳಿಸುತ್ತದೆ.
ಸಾಮಾನ್ಯವಾಗಿ ಜಿಂಕ್ ಮತ್ತು ವಿಟಮಿನ್ ' ಸಿ ' ಎಂಬ ಅಂಶಗಳು ಕೊಲೆಜಿನ್ ಮತ್ತು ಪ್ರೋಟೀನ್ ಅಂಶಗಳ ಸಂಶ್ಲೇಷಣೆ ಮಾಡಲು ಮತ್ತು ಅಂಗಾಂಶಗಳ ಬೆಳವಣಿಗೆಗೆ ಉಪಯೋಗವಾಗುವಂತಹ ಕೋಶಗಳನ್ನು ಅಭಿವೃದ್ಧಿ ಪಡಿಸಲು ನೆರವಾಗುತ್ತವೆ. ಕೋಶಗಳ ಅಭಿವೃದ್ಧಿ ಹೊಂದಿದ ತಕ್ಷಣ ಗಾಯವಾಗಿರುವ ಜಾಗದಲ್ಲಿ ಚರ್ಮ ಬೆಳೆದು ಗಾಯ ವಾಸಿಯಾಗುತ್ತದೆ.

11. ವಯಸ್ಸಾಗುವಿಕೆಯನ್ನು ತಡೆಯುತ್ತದೆ
ಆಲೂಗಡ್ಡೆ ಜ್ಯೂಸ್ ನಲ್ಲಿ ವಿಟಮಿನ್ 'ಬಿ' ಅಂಶ ಮತ್ತು ಆಂಟಿ - ಆಕ್ಸಿಡೆಂಟ್ ಗಳು ಹೆಚ್ಚಾಗಿದ್ದು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ.
ಇದರಿಂದ ದೇಹದ ಎಲ್ಲಾ ಚರ್ಮ ಕೋಶಗಳಿಗೂ ರಕ್ತ ಸಂಚಾರ ಉಂಟಾಗಿ ಕೋಶಗಳು ಪುನಶ್ಚೇತನಗೊಳ್ಳುತ್ತವೆ. ಚರ್ಮದ ಮೇಲಿನ ಸುಕ್ಕುಗಳು ಮತ್ತು ಅಲ್ಲಲ್ಲಿ ಮೂಡಿ ಬಂದ ಕಲೆಗಳು ಮಾಯವಾಗುತ್ತವೆ.
ಆದ್ದರಿಂದ ನಿಮ್ಮ ದೇಹದ ಚರ್ಮದ ಆರೋಗ್ಯಕ್ಕಾಗಿ ಆಲೂಗಡ್ಡೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಆಲೂಗಡ್ಡೆ ಜ್ಯೂಸ್ ತಯಾರಿಸುವ ಪ್ರಕ್ರಿಯೆ
ಆಲುಗಡ್ಡೆ ಜ್ಯೂಸ್ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು
- 2 ದಪ್ಪ ಆಲೂಗಡ್ಡೆಗಳು
- 2 ಕಪ್ ನೀರು ತರಕಾರಿ ಜ್ಯೂಸ್ (ಬೇಕಿದ್ದರೆ ಮಾತ್ರ)
ಆಲೂಗಡ್ಡೆ ಜ್ಯೂಸ್ ತಯಾರು ಮಾಡುವ ವಿಧಾನ
- ಮೊದಲು ಆಲೂಗಡ್ಡೆಗಳನ್ನು ಚೆನ್ನಾಗಿ ತೊಳೆದು ಸಣ್ಣ ಸಣ್ಣ ತುಂಡುಗಳನ್ನಾಗಿ ಸಿಪ್ಪೆ ತೆಗೆಯದೆ ಕತ್ತರಿಸಿ.
- ಒಂದು ಮಿಕ್ಸರ್ ಜಾರ್ ನಲ್ಲಿ ಕತ್ತರಿಸಿದ ಆಲೂಗಡ್ಡೆ ತುಂಡುಗಳು ಮತ್ತು ನೀರನ್ನು ಹಾಕಿ ಸುಮಾರು 2 ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ರುಬ್ಬಿಕೊಳ್ಳಿ.
- ಇದನ್ನು ಸೋಸಿ ಹಾಗೆ ಕುಡಿಯಬಹುದು. ಇಲ್ಲವೆಂದರೆ ನಿಮಗೆ ಇಷ್ಟವಾದ ಹಣ್ಣಿನ ರಸ ಅಥವಾ ತರಕಾರಿ ಜ್ಯೂಸ್ ಬೆರೆಸಿ ಸವಿಯಬಹುದು.

ನೀವು ಆಲೂಗಡ್ಡೆ ಜ್ಯೂಸ್ ಕುಡಿಯಬಹುದೇ ?
- ತಜ್ಞರ ಪ್ರಕಾರ ಯಾವುದೇ ಅನುಮಾನವಿಲ್ಲದೆ ನೀವು ಆಲೂಗಡ್ಡೆ ಜ್ಯೂಸ್ ಕುಡಿಯಬಹುದು.
- ನಿಮ್ಮ ಜೀರ್ಣ ಪ್ರಕ್ರಿಯೆ, ಎದೆಯುರಿ, ಚರ್ಮದ ಆರೋಗ್ಯ ಇತ್ಯಾದಿ ಸಂಬಂಧಿತ ಸಮಸ್ಯೆಗಳು ದೂರಾಗುತ್ತವೆ.
ಹಸಿ ಆಲೂಗಡ್ಡೆ ಜ್ಯೂಸ್ ವಿಷಕಾರಿಯೇ?
ಹಸಿ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಆರೋಗ್ಯ ಪರಿಣಾಮಗಳು ಉಂಟಾಗುವುದಿಲ್ಲ. ಹಸಿ ಆಲೂಗಡ್ಡೆ ಜ್ಯೂಸ್ ನಿಮ್ಮ ಆಹಾರ ಪದ್ಧತಿಯಲ್ಲಿ ನಿಯಮಿತವಾಗಿರಲಿ ಎಂಬುದು ನಮ್ಮ ಸಲಹೆ.