For Quick Alerts
ALLOW NOTIFICATIONS  
For Daily Alerts

ಅಪಾನವಾಯು(ಹೂಸು) ತಡೆ ಹಿಡಿಯಬಾರದು, ಏಕೆ?

|

ಅಪಾನವಾಯು ಬಿಡುಗಡೆ ಎಂದರೆ ಹೆಚ್ಚು ಗೊಂದಲಕ್ಕೊಳಗಾಗದಿರಿ. ಹೂಸು ಬಿಡುವುದು ಎಂಬುದರ ಸಾಹಿತ್ಯಿಕ ರೂಪ ಅಷ್ಟೇ. ಇದು ನಾವು ಅಂದುಕೊಂಡಂತೆ ಅನಾರೋಗ್ಯಕರವೇನೂ ಅಲ್ಲ. ಬದಲಿಗೆ ಒತ್ತಡ ಬಂದಾಗ ಬಿಡುಗಡೆ ಮಾಡದೇ ಇದ್ದರೆ ಕೆಲವು ಅನಾರೋಗ್ಯಗಳು ಎದುರಾಗಬಹುದು.

ಅಪಾಯವಾಯು ಹೊಟ್ಟೆಯೊಳಗೆ ಒತ್ತಡ ನೀಡುತ್ತಿದೆ ಎಂದರೆ ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗಿರುವ ಕೆಲವು ಅನಿಲಗಳು ಬಿಡುಗಡೆಗೆ ಪ್ರಯತ್ನಿಸುತ್ತಿವೆ ಎಂದೇ ಆರ್ಥ. ಈ ವಾಯುಗಳು ಬಿಡುಗಡೆಯಾಗುವ ಕ್ರಿಯೆಯೇ ಹೂಸು! ಬಿಡುಗಡೆಯ ಬಳಿಕ ಎದುರಾಗುವ ನೆಮ್ಮದಿಯನ್ನು ವಿವರಿಸಲು ಸಾಧ್ಯವಿಲ್ಲ. ಸಾಮಾಜಿಕವಾಗಿ ಎಲ್ಲರಿಗೂ ತಿಳಿಯುವ ಹಾಗೆ ಅಪಾಯವಾಗು ಬಿಡುಗಡೆ ಮಾಡುವುದು ಅಸಹ್ಯಕರ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಯಾರು ಏನೆಂದುಕೊಳ್ಳುತ್ತಾರೋ ಎಂದು ಬಲವಂತವಾಗಿ ಅದುಮಿಟ್ಟರೆ ಇದು ಆರೋಗ್ಯಕ್ಕೆ ಮಾರಕವಾಗಬಹುದು.

ವಾಯುಪ್ರಕೋಪ ಎದುರಾಗಲು ನಮ್ಮ ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗುವ ಹಲವು ಬಗೆಯ ಅನಿಲಗಳೇ ಕಾರಣ. ಜಠರದಲ್ಲಿ ಉತ್ಪತ್ತಿಯಾಗುವ ಅನಿಲಗಳು ತೇಗಿನ ಮೂಲಕ ಹೊರಹೋದರೆ ಕರುಳಿನಲ್ಲಿ ಉತ್ಪತ್ತಿಯಾಗುವ ಅನಿಲಗಳು ಮಲದ್ವಾರದಿಂದ ಹೊರಬರುತ್ತದೆ.

ತೇಗನ್ನು ಅಸಹ್ಯಕರ ಎಂದು ಭಾವಿಸದ ಸಮಾಜ ಅಪಾನವಾಯುವನ್ನು ಮಾತ್ರ ಅಸಹ್ಯಕರ ಎಂದೇ ಪರಿಗಣಿಸುತ್ತದೆ. ಆದರೆ ಇದನ್ನು ಅದುಮಿಡುವುದು ಅನಾರೋಗ್ಯಕರವಾಗಿದೆ. ಬನ್ನಿ, ಅಪಾಯವಾಯುವಿನ ಬಿಡುಗಡೆಗೆ ಅವಸರವಾದರೆ ಇದನ್ನು ನಿರ್ವಹಿಸುವುದು ಎಷ್ಟು ಅಗತ್ಯ ಎಂಬುದನ್ನು ನೋಡೋಣ:

1. ಹೊಟ್ಟೆ ನೋವನ್ನು ಕಡಿಮೆಗೊಳಿಸುತ್ತದೆ

1. ಹೊಟ್ಟೆ ನೋವನ್ನು ಕಡಿಮೆಗೊಳಿಸುತ್ತದೆ

ಸಹಜವಾಗಿ, ವಾಯು ಹೊಟ್ಟೆ ಮತ್ತು ಕರುಳುಗಳಲ್ಲಿ ಉತ್ಪತ್ತಿಯಾದಾಗ ಇದು ಹೆಚ್ಚಿನ ಸ್ಥಳವನ್ನು ಆಕ್ರಮಿಸಿ ಈ ಅಂಗಗಳ ಒಳಗೋಡೆಗಳ ಮೇಲೆ ಒತ್ತಡವನ್ನು ಹೇರುತ್ತವೆ. ಪರಿಣಾಮವಾಗಿ ಹೊಟ್ಟೆಯ ಭಾಗ ಬೆಲೂನಿನಂತೆ ಉಬ್ಬಿಕೊಳ್ಳುತ್ತದೆ. ಕೊಂಚ ಹೊಟ್ಟೆನೋವೂ ಎದುರಾಗಬಹುದು. ನೋವು ಎದುರಾದ ಬಳಿಕವೂ ಬಿಡುಗಡೆ ಕಾಣದೇ ಇದ್ದರೆ ನೋವು ಉಲ್ಬಣಗೊಳ್ಳುತ್ತಲೇ ಹೋಗುವುದಲ್ಲದೇ ಇತರ ಅಂಗಗಳ ಮೇಲೂ ಈ ಒತ್ತಡ ಬಿದ್ದು ಇವುಗಳ ಕ್ಷಮತೆ ಕುಸಿಯಬಹುದು. ಈ ಸಂದರ್ಭದಲ್ಲಿ ವಾಯುವಿನ ಬಿಡುಗಡೆಯೇ ಅತಿ ಸುಲಭ ಪರಿಹಾರವಾಗಿದೆ. ಅಷ್ಟೇ ಅಲ್ಲ, ವಾಯುಪ್ರಕೋಪ ಬಿಡುಗಡೆಯಾಗದಿದ್ದರೆ ಇದರ ಪರಿಣಾಮದಿಂದ ತಲೆನೋವೂ ಎದುರಾಗಬಹುದು!

2. ಹೊಟ್ಟೆಯುಬ್ಬರಿಕೆಯನ್ನು ಕಡಿಮೆಗೊಳಿಸುತ್ತದೆ

2. ಹೊಟ್ಟೆಯುಬ್ಬರಿಕೆಯನ್ನು ಕಡಿಮೆಗೊಳಿಸುತ್ತದೆ

ಕೆಲವು ಆಹಾರಗಳ ಸೇವನೆಯಿಂದ ಹೊಟ್ಟೆಯುಬ್ಬರಿಕೆ ಹೆಚ್ಚೇ ಉಂಟಾಗುತ್ತದೆ. ಇದಕ್ಕೆ ಜಠರ ಮತ್ತು ಕರುಳುಗಳಲ್ಲಿ ಉಂಟಾಗುವ ನೀರು ಮತ್ತು ಗಾಳಿಯ ಮಿಶ್ರಣವೇ ಕಾರಣ. ಬಹುತೇಕ ಇವು ನೊರೆಯ ರೂಪದಲ್ಲಿರುತ್ತವೆ. ಸಾಮಾನ್ಯವಾಗಿ ಅಗತ್ಯಕ್ಕೂ ಹೆಚ್ಚು ಆಹಾರ ಸೇವಿಸಿದಾಗ ಮತ್ತು ಇದನ್ನು ಜೀರ್ಣಿಸಲು ಸಮಯದ ಸಾಲದೇ ಹೋದಾದ ಇದು ಎದುರಾಗುತ್ತದೆ. ಹೊಟ್ಟೆಯುಬ್ಬರಿಕೆ ಅಸಹನೆಯನ್ನು ಹೆಚ್ಚಿಸುವ ಜೊತೆಗೇ ನೀವಿನಿಂದಲೂ ಕೂಡಿರಬಹುದು.

ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ (Gastroenterology and Hepatology) ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಪಾಯವಾಯು ಎಂದರೆ ಉಬ್ಬರಿಕೆಗೆ ಒಳಗಾದ ಡ ಹೊಟ್ಟೆಯನ್ನು ತ್ವರಿತವಾಗಿ ಕಡಿಮೆ ಮಾಡುವುದಾಗಿದೆ. ಇದು ನಿಮಗೆ ಹೆಚ್ಚು ಹಾಯಾಗಿರಲು ಸಹಾಯ ಮಾಡುತ್ತದೆ.

3. ಇವು ಯಾವುದೋ ಆಹಾರ ಅಲರ್ಜಿಯ ಸೂಚನೆ ನೀಡುತ್ತಿರಬಹುದು

3. ಇವು ಯಾವುದೋ ಆಹಾರ ಅಲರ್ಜಿಯ ಸೂಚನೆ ನೀಡುತ್ತಿರಬಹುದು

ನೀವು ಯಾವುದಾದರೊಂದು ನಿರ್ದಿಷ್ಟ ಆಹಾರಕ್ಕೆ ಅಲರ್ಜಿಯನ್ನು ಹೊಂದಿದ್ದರೆ, ಮತ್ತು ನಿಮಗೆ ಇದರ ಬಗ್ಗೆ ಅರಿವಿಲ್ಲದೇ ಇದ್ದರೆ, ಅವುಗಳ ಸೇವನೆಯ ಬಳಿಕ ನೀವು ಹೆಚ್ಚಿನ ವಾಯುಪ್ರಕೋಪ ಎದುರಾಗಿರುವುದರ ಅನುಭವ ಪಡೆಯಬಹುದು. ಆದ್ದರಿಂದ, ಕೆಲವು ರೀತಿಯ ಆಹಾರವನ್ನು ಸೇವಿಸುವುದರಿಂದ ನಿಮಗೆ ವಾಯುಪ್ರಕೋಪ ಎದುಆಗಿದ್ದರೆ, ಇವು ನಿಮಗೆ ಅಲರ್ಜಿಕಾರಕ ಹಾಗೂ ಇವುಗಳನ್ನು ಸೇವಿಸದಿರಿ ಎಂಬುದನ್ನು ಸೂಚಿಸುವ ಎಚ್ಚರಿಕೆಯೂ ಆಗಿದೆ.

4. ವಾಯುಪ್ರಕೋಪ ಕರುಳುಗಳಿಗೆ ಎದುರಾಗಿರುವ ಕಾಯಿಲೆಯ ಸೂಚನೆ

4. ವಾಯುಪ್ರಕೋಪ ಕರುಳುಗಳಿಗೆ ಎದುರಾಗಿರುವ ಕಾಯಿಲೆಯ ಸೂಚನೆ

ಒಂದು ವೇಳೆ ಅಪಾನವಾಯು ಬಿಡುಗಡೆಯಾದ ಬಳಿಕ ಅತಿ ಘಾಟು ಅಥವಾ ಅಸಹಜವಾದ ವಾಸನೆ ಎದುರಾದರೆ ಅಥವಾ ಸತತವಾಗಿ ಮತ್ತು ಕಡಿಮೆ ಸಮಯದ ಅಂತರಗಳಲ್ಲಿ ಅಪಾನವಾಯು ಹೊರಹೋಗುತ್ತಿದ್ದರೆ ಇದು ನಿಮ್ಮ ಕರುಳಿನ ಕ್ಷಮತೆಯಲ್ಲಿ ಏನೋ ತೊಂದರೆ ಇರುವ ಸೂಚನೆಯಾಗಿದೆ. ಇವುಗಳಿಂದ ಇತರ ಕರುಳಿನ ತೊಂದರೆ ಅಥವಾ ಮಲಬದ್ದತೆಯೂ ಕಾಣಿಸಿಕೊಳ್ಳಬಹುದು. ದೀರ್ಘಾವಧಿಯಲ್ಲಿ ಇವು ಅಪಾಯಕಾರಿ ತೊಂದರೆಗಳೇ ಆಗಿವೆ.

5. ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯಲು ನೆರವಾಗುತ್ತದೆ

5. ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯಲು ನೆರವಾಗುತ್ತದೆ

ಅಪಾಯವಾಯುವಿನಲ್ಲಿ ಅಲ್ಪ ಪ್ರಮಾಣದ ಪ್ರಮಾಣದ ಹೈಡ್ರೋಜನ್ ಸಲ್ಫೈಡ್ ಇರುತ್ತದೆ. ಮೂಗು ಮುಚ್ಚಿಕೊಳ್ಳುವ ದುರ್ಗಂಧಕ್ಕೆ ಇದೇ ಕಾರಣ. ಅಧ್ಯಯನಗಳ ಪ್ರಕಾರ, ನೀವು ದುರ್ಗಂಧದ ಕಾರಣದಿಂದ ಅಪಾಯವಾಯುವನ್ನು ಬಿಡುಗಡೆ ಮಾಡದೇ ಇದ್ದರೆ ಈ ಅನಿಲವು ನಿಮ್ಮ ದೇಹದೊಳಗೆ ಸಂಗ್ರಹವಾಗುತ್ತಲೇ ಇರುತ್ತದೆ ಮತ್ತು ತೀವ್ರತರವಾದ ಸಂದರ್ಭಗಳಲ್ಲಿ ಜೀವಕೋಶಗಳಿಗೆ ಹಾನಿ ಮತ್ತು ಹೃದಯದ ತೊಂದರೆಗಳು ಮತ್ತು ಪಾರ್ಶ್ವವಾಯುವಿಗೂ ಕಾರಣವಾಗಬಹುದು.

ಸಾಮಾನ್ಯ ಆರೋಗ್ಯದ ವ್ಯಕ್ತಿಗಳು ದಿನಕ್ಕೆ 14 ರಿಂದ 20 ಬಾರಿ ಅಪಾನವಾಯು ಬಿಡುಗಡೆ ಮಾಡಬೇಕು. ಈ ಮಿತಿಗಳಿಗೆ ಕಡಿಮೆ ಇದ್ದರೂ ಹೆಚ್ಚಿದ್ದರೂ ಇದಕ್ಕೆ ಅನಾರೋಗ್ಯದ ಕಾರಣಗಳಿರಬಹುದು. ಹಾಗಾಗಿ ಎಂದಿಗೂ ಇವುಗಳ ಒತ್ತಡವನ್ನು ಬಿಗಿ ಹಿಡಿಯದಿರಿ. ನಾಲ್ಕು ಜನರ ನಡುವೆ ಇರುವಾಗ ಒತ್ತಡ ಎದುರಾದರೆ ಯಾವುದೋ ನೆಪ ಹೇಳಿ ಕೊಂಚ ದೂರ ಬಂದು ನಿರಾಳರಾಗುವುದೇ ಆರೋಗ್ಯಕರ ಮತ್ತು ಮುಜುಗರಕ್ಕೆ ಒಳಗಾಗಲು ಅವಕಾಶ ನೀಡದ ಕ್ರಮವೂ ಆಗಿದೆ.

English summary

Reasons Why Farting Is Actually Very Good for You

Here are reasons why farting is actually very good for you, Read on.
X
Desktop Bottom Promotion