For Quick Alerts
ALLOW NOTIFICATIONS  
For Daily Alerts

ಪ್ಯಾಂಕ್ರಿಯಾಸ್ ಕ್ಯಾನ್ಸರ್‌ನ 8 ಲಕ್ಷಣಗಳಿವು

|

ನಾವು ನಮ್ಮ ಕರಳು, ಹೃದಯ, ಮೆದುಳಿನ ಆರೋಗ್ಯದ ಬಗ್ಗೆ ಯೋಚಿಸುತ್ತೇವೆ, ಆದರೆ ಮೇದೋಜ್ಜೀರಕ ಗ್ರಂಥಿಯ(ಪ್ಯಾಂಕ್ರಿಯಾಸ್) ಆರೋಗ್ಯದ ಬಗ್ಗೆ ಯೋಚಿಸುವುದೇ ಇಲ್ಲ. ಆದರೆ ಈ ಗ್ರಂಥಿಗೆ ತೊಂದರೆ ಉಂಟಾದರೆ ಜೀವಕ್ಕೆ ಅಪಾಯ.

ಅದರಲ್ಲೂ ಪ್ಯಾಂಕ್ರಿಯಾಸ್‌ ಕ್ಯಾನ್ಸರ್ ಉಂಟಾದರೆ ತುಂಬಾನೇ ಅಪಾಯ. ಈ ಕ್ಯಾನ್ಸರ್ ಬಂದಾಗ ಮೊದಲಿಗೆ ಪತ್ತೆ ಹಚ್ಚಿದರೆ ಗುಣಪಡಿಸುವುದು ಸುಲಭ, ಆದರೆ ನಾಲ್ಕನೇ ಹಂತ ತಲುಪಿದರೆ ಅಪಾಯಕಾರಿ. ಪ್ಯಾಂಕ್ರಿಯಾಸ್ ಕ್ಯಾನ್ಸರ್ ಉಂಟಾದಾಗ ದೇಹದಲ್ಲಿ ಕೆಲವೊಂದು ಬದಲಾವಣೆ ಉಂಟಾಗುವುದು.

ಈ ಲೇಖನದಲ್ಲಿ ಪ್ಯಾಂಕ್ರಿಯಾಸ್‌ ಕ್ಯಾನ್ಸರ್‌ ಉಂಟಾದಾಗ ದೇಹದಲ್ಲಿ ಕಂಡು ಬರುವ ಲಕ್ಷಣಗಳ ಬಗ್ಗೆ ಹೇಳಲಾಗಿದೆ, ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಕ್ಯಾನ್ಸರ್ ಪರೀಕ್ಷೆ ಮಾಡಿಸಿದರೆ ಚಿಕಿತ್ಸೆಯಿಂದ ಗುಣಮುಖವಾಗುವ ಸಾಧ್ಯತೆ ಹೆಚ್ಚು.

ಪ್ಯಾಂಕ್ರಿಯಾಸ್‌ ಕ್ಯಾನ್ಸರ್‌ ಉಂಟಾದಾಗ ಕಂಡು ಬರುವ ಲಕ್ಷಣಗಳು

1. ತ್ವಚೆ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುಉದ

1. ತ್ವಚೆ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುಉದ

ಮೇದೋಜ್ಜೀರಕ ಗ್ರಂಥಿಯಲ್ಲಿ ತೊಂದರೆ ಇರುವಾಗ ಕಾಮಲೆ ರೋಗದ ಲಕ್ಷಣಗಳು ಕಂಡು ಬರುವುದು. ಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು. ಮಲ ಜೇಡಿಮಣ್ಣಿನ ಬಣ್ಣದಲ್ಲಿರುವುದು.

2. ಮಲದಲ್ಲಿ ವ್ಯತ್ಯಾಸ

2. ಮಲದಲ್ಲಿ ವ್ಯತ್ಯಾಸ

ಮಲ ದೇಹದಲ್ಲಿರುವ ಬೇಡದ ಪದಾರ್ಥಗಳನ್ನು ಹೊರಹಾಕುವ ಪ್ರಕ್ರಿಯೆಯಾಗಿದೆ. ಆದರೆ ಮಲ ನೋಡಿ ನಮ್ಮ ಆರೋಗ್ಯವನ್ನು ನಿರ್ಧರಿಸಬಹುದು. ಮೇದೋಜ್ಜೀರಕ ಗ್ರಂಥಿಗೆ ತೊಂದರೆ ಉಂಟಾದರೆ ಮಲ ಸ್ವಲ್ಪ ನೀರು-ನೀರಾಗಿ ಗ್ರೀಸ್ ರೀತಿ ಇರುತ್ತದೆ. ಹೊಟ್ಟೆ ಹಾಳಾದಾಗ ಕೆಲವೊಮ್ಮೆ ಈ ರೀತಿ ಉಂಟಾಗುವುದು ಸಹಜ. ಆದರೆ ಪ್ರತೀಬಾರಿ ಇದೇ ರೀತಿ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ.

 3. ಕಿಬ್ಬೊಟ್ಟೆ ನೋವು, ಸೊಂಟ ನೋವು

3. ಕಿಬ್ಬೊಟ್ಟೆ ನೋವು, ಸೊಂಟ ನೋವು

ಮೇದೋಜ್ಜೀರಕ ಗ್ರಂಥಿಗೆ ಕ್ಯಾನ್ಸರ್ ಉಂಟಾದರೆ ಕಿಬ್ಬೊಟ್ಟೆ ನೋವು, ಸೊಂಟ ನೋವು ಉಂಟಾಗುವುದು. ಹೊಟ್ಟೆನೋವು ಹಾಗೂ ಸೊಂಟ ನೋವು ಎರಡೂ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವರಲ್ಲಿ ಇದರಲ್ಲಿ ಒಂದು ನೋವು ಮಾತ್ರ ಕಂಡು ಬರಬಹುದು.

4. ಇದ್ದಕ್ಕಿದ್ದಂತೆ ತೂಕ ಇಳಿಕೆ

4. ಇದ್ದಕ್ಕಿದ್ದಂತೆ ತೂಕ ಇಳಿಕೆ

ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ತೂಕ ಇಳಿಕೆ ಉಂಟಾದರೆ ನಿರ್ಲಕ್ಷ್ಯ ಮಾಡಲೇಬಾರದು. ಎಷ್ಟೇ ತಿಂದರು ತೂಕ ಇಳಿಕೆಯಾಗುತ್ತಿದೆ ಎಂದರೆ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸುವುದು ಒಳ್ಳೆಯದು.

 5. ತಲೆಸುತ್ತು ಮತ್ತು ವಾಂತಿ

5. ತಲೆಸುತ್ತು ಮತ್ತು ವಾಂತಿ

ಮೇದೋಜ್ಜೀರಕ ಗ್ರಂಥಿಗೆ ಕ್ಯಾನ್ಸರ್ ಉಂಟಾದರೆ ಜೀರ್ಣಕ್ರಿಯೆಗೆ ತುಂಬಾನೇ ತೊಂದರೆ ಉಂಟಾಗುವುದು. ಮೇದೋಜ್ಜೀರಕ ಹೊಟ್ಟೆಯ ಬಲಭಾಗದಲ್ಲಿದ್ದು, ಚಿಕ್ಕ ಕರುಳಿನಲ್ಲಿರುತ್ತದೆ. ಜೀರ್ಣಕ್ರಿಯೆ ಸರಿಯದ ರೀತಿಯಲ್ಲಿ ನಡೆಯದೇ ಇದ್ದರೆ ವಾಂತಿ ಉಂಟಾಗುವುದು.

6. ಹೊಟ್ಟೆಯ ಭಾಗದಲ್ಲಿ ಚಿಕ್ಕ ಗಂಟು

6. ಹೊಟ್ಟೆಯ ಭಾಗದಲ್ಲಿ ಚಿಕ್ಕ ಗಂಟು

ಕೆಲವರಿಗೆ ಪಕ್ಕೆಲುಬು ಬಳಿ ಚಿಕ್ಕ ಗಂಟು ಕಂಡು ಬರುವುದು. ಗಾಲ್‌ಬ್ಲೇಡರ್ ಊತದಿಂದಾಗಿ ಈ ರೀತಿ ಉಂಟಾಗುತ್ತದೆ. ಪಿತ್ತರಸ ನಾಳ ಮತ್ತು ಗಾಲ್‌ಬ್ಲೇಡರ್ ಬ್ಲಾಕ್ ಆದರೆ ಈ ರೀತಿ ಉಂಟಾಗುವುದು.

7. ಕಾಲಿನಲ್ಲಿ ಊತ

7. ಕಾಲಿನಲ್ಲಿ ಊತ

ಪ್ಯಾಂಕ್ರಿಯಾಸ್‌ ಕ್ಯಾನ್ಸರ್‌ ಉಂಟಾದಾಗ ರಕ್ತ ಹೆಪ್ಪುಗಟ್ಟಿ ಕಾಲಿನಲ್ಲಿ ನೋವು ಉಂಟಾಗುವುದು. ರಕ್ತ ಹೆಪ್ಪುಗಟ್ಟುವುದು ತುಂಬಾನೇ ಅಪಾಯಕಾರಿ, ಇದರಿಂದ ಉಸಿರಾಟ ತೀವ್ರವಾಗುವುದು. ಈ ಲಕ್ಷಣಗಳು ಕಂಡು ಬಂದ ತಕ್ಷಣ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಎಂದು ಭಯ ಪಡಬೇಕಾಗಿಲ್ಲ, ಆದರೆ ಏಕೆ ಹೀಗಾಗಿದೆ ಎಂದು ಪರೀಕ್ಷೆ ಮಾಡಿಸುವುದು ಒಳ್ಳೆಯದು.

8. ದೇಹದಲ್ಲಿ ಸಕ್ಕರೆಯಂಶ ಅಧಿಕವಾಗುವುದು

8. ದೇಹದಲ್ಲಿ ಸಕ್ಕರೆಯಂಶ ಅಧಿಕವಾಗುವುದು

ಮೇಧೋಜೀರಕ ಗ್ರಂಥಿಗೆ ತೊಂದರೆ ಉಂಟಾದಾಗ ಇನ್ಸುಲಿನ್ ಉತ್ಪತ್ಪಿ ಮಾಡುವ ಕಣಗಳನ್ನು ಹಾಳು ಮಾಡುತ್ತದೆ, ಇದರಿಂದ ದೇಹದಲ್ಲಿ ಸಕ್ಕರೆಯಂಶ ಅಧಿಕವಾಗುವುದು, ಅಲ್ಲದೆ ತುಂಬಾ ಹಸಿವು, ಬಾಯಾರಿಕೆ ಉಂಟಾಗುವುದು.

English summary

Pancreatic Cancer And It's Symptoms

Here are what are the symptoms of Pancreatic Cancer have a look...
Story first published: Monday, November 9, 2020, 12:49 [IST]
X
Desktop Bottom Promotion