For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ಚಳಿಗಾಲ ಬರ್ತಿದೆ, ಉತ್ತಮ ಆರೋಗ್ಯಕ್ಕೆ ಈ ಪೋಷಕಾಂಶಗಳನ್ನು ಸೇವಿಸಲು ಮರೆಯದಿರಿ

|

ಕಾಲಕಾಲಕ್ಕೆ ತಕ್ಕಂತೆ ಋತುಗಳ ಬದಲಾಗುತ್ತಲೇ ಇರುತ್ತದೆ. ಅದೇ ರೀತಿ ಮಳೆಗಾಲ ಕಳೆದು ಇದೀಗ ಚಳಿಗಾಲ ಮೆಲ್ಲನೇ ಕಾಲಿಡುತ್ತಿದೆ. ಈ ವಾತಾವರಣ ಬದಲಾವಣೆ ಸಮಯದಲ್ಲಿ ನಮ್ಮ ಆರೋಗ್ಯ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಚಳಿಗಾಲ ಅಂದ್ರೆ, ಹೆಚ್ಚು ಶುಷ್ಕತೆ ಹಾಗೂ ದೇಹ ಒಳಗಿನಿಂದಲೇ ಒಣಗಲು ಆರಂಭವಾಗುತ್ತದೆ. ಆದ್ದರಿಂದ ಸರಿಯಾದ ಪೋಷಕಾಂಶ ನಿಮ್ಮ ದೇಹಕ್ಕೆ ಒದಗಿಸುವುದು ತುಂಬಾ ಮುಖ್ಯ.

ಮುಖ್ಯವಾಗಿ, ಮಹಿಳೆಯರು ಚಳಿಗಾಲದಲ್ಲಿ ತ್ವಚೆಗೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಪೋಷಕಾಂಶಗಳ ಕೊರತೆಯೇ ಕಾರಣ. ಆದ್ದರಿಂದ ನಾವಿಂದು ನಿಮ್ಮ ಚಳಿಗಾಲವನ್ನು ಸಂತೋಷ ಮತ್ತು ಆರೋಗ್ಯಕರವಾಗಿಸಲು ಏನು ಮಾಡಬೇಕು ಎಂಬುದನ್ನು ಹೇಳಲಿದ್ದೇವೆ.

ಚಳಿಗಾಲದಲ್ಲಿ ಮಹಿಳೆಯರ ಆರೋಗ್ಯ ಕಾಪಾಡಲು ಸೇರಿಸಬೇಕಾದ ಪೋಷಕಾಂಶಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಹುಳಿಯಾದ ಸಿಟ್ರಸ್ ಹಣ್ಣುಗಳೊಂದಿಗೆ ಆರೋಗ್ಯವನ್ನು ಸಿಹಿಗೊಳಿಸಿ:

ಹುಳಿಯಾದ ಸಿಟ್ರಸ್ ಹಣ್ಣುಗಳೊಂದಿಗೆ ಆರೋಗ್ಯವನ್ನು ಸಿಹಿಗೊಳಿಸಿ:

ಸಮೃದ್ಧವಾದ ಉತ್ಕರ್ಷಣ ನಿರೋಧಕ ಅಂಶಕ್ಕೆ ಹೆಸರುವಾಸಿಯಾದ ಈ ಮ್ಯಾಜಿಕ್ ವಿಟಮಿನ್ ಚಳಿಗಾಲದಲ್ಲಿ ಬೇಕೇಬೇಕು. ಕಿತ್ತಳೆ, ನಿಂಬೆಹಣ್ಣು, ಕಿವಿ, ಪಪ್ಪಾಯಿ ಮತ್ತು ಪೇರಳೆಯಂತಹ ಸಿಟ್ರಸ್-ಭರಿತ ಹಣ್ಣುಗಳಲ್ಲಿ ಸಮೃದ್ಧವಾಗಿ ಕಂಡುಬರುವ ವಿಟಮಿನ್ ಸಿ ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ವಿಟಮಿನ್‌ನ ಮತ್ತೊಂದು ಪ್ರಯೋಜನವೆಂದರೆ ಅದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ರೋಗಗಳು ಮತ್ತು ವೈರಾಣುಗಳಿಂದ ದೂರವಿಡುತ್ತದೆ. ಹೀಗಾಗಿ, ರೋಗ-ಮುಕ್ತ ಮತ್ತು ಹೊಳೆಯುವ ಚರ್ಮವನ್ನು ಚಳಿಗಾಲದಲ್ಲಿ ಪಡೆಯಲಯ ವಿಟಮಿನ್ ಸಿ ಸೇವನೆಯನ್ನು ಹೆಚ್ಚಿಸಿ.

ಹಸಿರು ಸೊಪ್ಪುಗಳನ್ನು ಬಿಡಲೇಬೇಡಿ:

ಹಸಿರು ಸೊಪ್ಪುಗಳನ್ನು ಬಿಡಲೇಬೇಡಿ:

ಹಸಿರು ತರಕಾರಿಗಳು ಹಲವಾರು ಪ್ರಮುಖ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ನಮ್ಮ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ. ಉದಾಹರಣೆಗೆ, ಪಾಲಕ್, ವಿಟಮಿನ್ ಎ ಮತ್ತು ಸಿ ಯ ಅತ್ಯುತ್ತಮ ಮೂಲವಾಗಿದೆ. ಹಸಿರು ಎಲೆಗಳಲ್ಲಿರುವ ಪ್ರೋಟೀನ್, ವಿಟಮಿನ್, ಖನಿಜ ಮತ್ತು ಕಬ್ಬಿಣದ ಅಂಶಗಳು ಅತ್ಯಂತ ಪ್ರಯೋಜನಕಾರಿಯಾಗಿದ್ದು, ನಿಮ್ಮ ಚರ್ಮದ ಗುಣಮಟ್ಟ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಚಳಿಗಾಲವು ಅದರ ಕಾಲೋಚಿತ ಹಸಿರು ಎಲೆಗಳ ತರಕಾರಿಗಳಿಗೆ ಹೆಸರುವಾಸಿಯಾಗಿದೆ. ಹೀಗಾಗಿ, ನೀವು ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು.

ಉತ್ಸಾಹಕ್ಕೆ ಬೆಚ್ಚಗಿನ ಮಸಾಲೆಗಳು:

ಉತ್ಸಾಹಕ್ಕೆ ಬೆಚ್ಚಗಿನ ಮಸಾಲೆಗಳು:

ಕೇಸರಿ, ಅರಿಶಿನ, ದಾಲ್ಚಿನ್ನಿ ಮತ್ತು ಏಲಕ್ಕಿಯಂತಹ ಭಾರತೀಯ ಮಸಾಲೆಗಳು ಚಳಿಗಾಲದಲ್ಲಿ ಅಪಾರವಾದ ಸಹಾಯ ಮಾಡುತ್ತವೆ. ಏಕೆಂದರೆ ಅವೆಲ್ಲವೂ ದೇಹಕ್ಕೆ ಅಗತ್ಯವಾದ ಉಷ್ಣತೆಯನ್ನು ನೀಡುತ್ತದೆ. ಮುಖ್ಯವಾಗಿ ಇವು ಶೀತ ಮತ್ತು ಜ್ವರದಂತಹ ಚಳಿಗಾಲದ ಸಾಮಾನ್ಯವಾದ ರೋಗಗಳನ್ನು ಹಿಮ್ಮೆಟ್ಟಿಸಲು ಕೆಲಸ ಮಾಡುತ್ತವೆ. ಕೇಕ್ ಮೇಲೆ ಚೆರ್ರಿಯಂತೆ, ಈ ಎಲ್ಲಾ ಮಸಾಲೆಗಳನ್ನು ಹಾಲು ಅಥವಾ ಚಹಾದಂತಹ ರುಚಿಕರವಾದ ಮತ್ತು ಬೆಚ್ಚಗಿನ ಪಾನೀಯಗಳ ಜೊತೆ ಸೇವಿಸಬಹುದು.

ಶೀತವನ್ನು ಸೋಲಿಸಲು ಡ್ರೈ ಫ್ರೂಟ್ಸ್:

ಶೀತವನ್ನು ಸೋಲಿಸಲು ಡ್ರೈ ಫ್ರೂಟ್ಸ್:

ಒಣ ಹಣ್ಣುಗಳು ಸಹ ಶೀತ ಮತ್ತು ಶುಷ್ಕ ಋತುವಿನಲ್ಲಿ ಉಷ್ಣತೆಯನ್ನು ಪಡೆಯುವ ಮತ್ತು ಶಾಖವನ್ನು ಉಳಿಸಿಕೊಳ್ಳುವ ಅತ್ಯುತ್ತಮ ರೂಪವಾಗಿದೆ. ಖರ್ಜೂರ ಮತ್ತು ಅಂಜೂರ ಭಾರತದಲ್ಲಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಸೇವಿಸುವ ಕೆಲವು ಡ್ರೈ ಫ್ರೂಟ್ಸ್‌ಗಳಾಗಿವೆ. ಇವೆರಡೂ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಸಮೃದ್ಧ ಮೂಲಗಳಾಗಿದ್ದು, ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇವುಗಳನ್ನು ಸಾಮಾನ್ಯವಾಗಿ ಬೆಚ್ಚಗಿನ ಹಾಲಿನೊಂದಿಗೆ ಸೇವಿಸಲಾಗುತ್ತದೆ.

ಬೆಣ್ಣೆ-ತುಪ್ಪ ಬಳಸಿ:

ಬೆಣ್ಣೆ-ತುಪ್ಪ ಬಳಸಿ:

ಚಳಿಗಾಲವು ತೀವ್ರವಾದ ಕೋಲ್ಡ್‌ನಿಂದ ನಮ್ಮ ಚರ್ಮ ಮತ್ತು ಕೂದಲನ್ನು ಒಣಗಿಸುವುದರಿಂದ, ದೇಹದ ಒಳಗಿನ ಪೋಷಣೆಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ನಿಮ್ಮ ಒಳಗಿನಿಂದ ಪೋಷಣೆಯನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ತುಪ್ಪವನ್ನು ಸೇವಿಸಬೇಕು. ತುಪ್ಪವು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ ಋತುವಿನಲ್ಲಿ ನಿಮ್ಮ ಆಹಾರದ ಪಟ್ಟಿಯಲ್ಲಿ ಇದು ಅತ್ಯಗತ್ಯವಾಗಿರುತ್ತದೆ.

ಕಿವಿ ಮಾತು:

ಕಿವಿ ಮಾತು:

ಜೀವನದ ಪ್ರತಿಯೊಂದು ಹಂತದಲ್ಲೂ ನಿಮ್ಮನ್ನು ಮತ್ತು ನಿಮ್ಮ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಕಾಳಜಿ ವಹಿಸುವುದು ಬಹಳ ಮುಖ್ಯ. ಚಳಿಗಾಲವು ಇತರ ಯಾವುದೇ ಋತುವಿಗಿಂತ ವಿಭಿನ್ನ ಆರೋಗ್ಯ ಸವಾಲುಗಳನ್ನು ತರಬಹುದು, ಹೀಗಾಗಿ, ತಮ್ಮ ಆಹಾರ ಮತ್ತು ಪೋಷಣೆಯನ್ನು ನಿಯಂತ್ರಿಸುವ ಅಗತ್ಯವಿದೆ. ಮೇಲಿನ ಕೆಲವು ಸಲಹೆಗಳನ್ನು ಸರಿಯಾಗಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

English summary

Nutritional Tips for Women to Take Care During Winter Season in Kannada

Here we talking about Nutritional Tips for Women to Take Care During Winter Season in Kannada, read on
Story first published: Thursday, October 28, 2021, 14:31 [IST]
X
Desktop Bottom Promotion