For Quick Alerts
ALLOW NOTIFICATIONS  
For Daily Alerts

ರಾತ್ರಿಯಲ್ಲಿ ಬೆವರಲು ಕಾರಣ ಮತ್ತು ತಡೆಗಟ್ಟುವುದು ಹೇಗೆ?

|

ನಮ್ಮ ದೇಹದಲ್ಲಿ ಉತ್ಪತ್ತಿಯಾಗೋ ಕಶ್ಮಲಗಳನ್ನ ನಮ್ಮ ದೇಹ ಮಲ, ಮೂತ್ರಾದಿಗಳ ರೂಪದಲ್ಲಷ್ಟೇ ಹೊರಹಾಕೋದಲ್ಲ. ಜೊತೆಗೆ ಬೆವರಿನ ರೂಪದಲ್ಲೂ ದೇಹದ ತ್ಯಾಜ್ಯವನ್ನ ಹೊರಹಾಕುತ್ತೆ. ನಮ್ಮ ದೇಹ ಬೆವರನ್ನ ಉತ್ಪಾದಿಸೋ ಮೂಲಕ ತನ್ನ ಉಷ್ಣತೆಯನ್ನ ಕೂಡಾ ಸಮತೋಲನದಲ್ಲಿ ಇಟ್ಟುಕೊಳ್ಳುತ್ತೆ. ಹಾಗಾಗಿ ಇತಿಮಿತಿಯಲ್ಲಿ ಬೆವರೋದು ಆರೋಗ್ಯಕ್ಕೆ ಒಳ್ಳೇದೇ.

ಆದರೆ ಕೆಲವರಿಗೆ ಈ ಬೆವರು ಅನ್ನೋದು ಅತೀ ಅನ್ನೋವಷ್ಟು ಉತ್ಪತ್ತಿ ಆಗುತ್ತೆ. ಹಾಗೆ ಅತಿಯಾಗಿ ಉತ್ಪತ್ತಿಯಾಗೋದು ಅಂದ್ರೆ ಅದ್ಯಾವುದೋ ಅನಾರೋಗ್ಯದ ಸೂಚನೇನೇ ಆಗಿರುತ್ತೆ. ನಾಲ್ಕು ಜನ್ರ ಜೊತೆ ಮುಕ್ತವಾಗಿ ಬೆರೆಯೋಕೆ ಈ ಅತಿಬೆವರು ತೀರಾ ಮುಜುಗುರ ಉಂಟುಮಾಡುತ್ತೆ. ಇನ್ನು ಕೆಲವರಿಗೆ ಈ ಅತಿಯಾಗಿ ಬೆವರೋದು ರಾತ್ರಿ ಹೊತ್ತಲ್ಲಿ. ಅಂತಹವರ ಪಾಲಿಗೆ ನಿದ್ದೆ ಅನ್ನೋದು ಮರೀಚಿಕೆ ಆಗ್ಬಿಡುತ್ತೆ.

ರಾತ್ರಿ ಮಲಗೋ ಹೊತ್ತಲ್ಲಿ ಸಿಕ್ಕಾಪಟ್ಟೆ ಬೆವರೋ ಇಂತಹವರು ಅದೆಷ್ಟು ಕಿರಿಕಿರಿ ಅನುಭವಿಸುತ್ತಾರಂದ್ರೆ, ಇಡೀ ರಾತ್ರಿ ಇವರಿಗೆ ನಿದ್ದೇನೇ ಮಾಡೋಕಾಗಲ್ಲ. ರಾತ್ರಿ ಹೊತ್ತಲ್ಲಿ ಆ ಥರ ವಿಪರೀತ ಬೆವರೋದಕ್ಕೂ ನಾನಾ ಕಾರಣಗಳಿವೆ. ಆದ್ರೂ ಒಂದು ಸಮಾಧಾನದ ಸಂಗತಿ ಏನಪ್ಪಾ ಅಂತಂದ್ರೆ, ಈ ಸಮಸ್ಯೆಗೆ ಸಾಕಷ್ಟು ಪರಿಹಾರೋಪಾಯಗಳೂ ಇವೆ. ಆ ಪರಿಹಾರೋಪಾಯಗಳನ್ನ ಅಳವಡಿಸಿಕೊಂಡ್ರೆ ರಾತ್ರಿ ಹೊತ್ತು ವಿಪರೀತ ಬೆವರೋದೂ ನಿಲ್ಲುತ್ತೆ, ನಿದ್ದೇನೂ ಚೆನ್ನಾಗಿ ಬರುತ್ತೆ.

ರಾತ್ರಿ ವಿಪರೀತವಾಗಿ ಬೆವರೋದಕ್ಕೆ ಕಾರಣಗಳೇನೇನು ಅನ್ನೋದನ್ನ ನಾವೀಗ ಮೊದಲು ತಿಳ್ಕೋಳ್ಳೋಣ. ಆಮೇಲೆ ಅದಕ್ಕಿರೋ ಪರಿಹಾರಗಳೇನೂ ಅನ್ನೋದನ್ನೂ ಒಂದೊಂದಾಗಿ ತಿಳ್ಕೊಳ್ಳೋಣ.

ಕಾರಣ 1: ಮೆನೋಪಾಸ್ (ಋತುಚಕ್ರ ಕೊನೆಯಾಗೋದು)

ಕಾರಣ 1: ಮೆನೋಪಾಸ್ (ಋತುಚಕ್ರ ಕೊನೆಯಾಗೋದು)

ಮಹಿಳೆಯರಲ್ಲಿ ಋತುಚಕ್ರ ನಿಲ್ಲೋ ಹಂತಕ್ಕೆ ಬಂದಾಗ, ಬಹುತೇಕ ಮಹಿಳೆಯರು ಜ್ವರವೇರಿದಂತಹ ದೇಹ ತಾಪಮಾನವನ್ನ ಅನುಭವಿಸುತ್ತಾರೆ. ಋತುಚಕ್ರದ ಅಂತಿಮ ಘಟ್ಟದಲ್ಲಿ ದೇಹದಲ್ಲಿ ಹಾರ್ಮೋನುಗಳು ಏರುಪೇರಾಗೋದ್ರಿಂದ ಮಹಿಳೆಯರಿಗೆ ರಾತ್ರಿವೇಳೆ ವಿಪರೀತ ಬೆವರೋಕೆ ಶುರುವಾಗತ್ತೆ.

ಕಾರಣ 2: ನಿದ್ದೆಯಲ್ಲಿ ನಡುನಡುವೆ ಉಸಿರಾಟ ನಿಲ್ಲೋದು, ಪುನರಾರಂಭ ಆಗೋದು (ಸ್ಲೀಪ್ ಆಪ್ನಿಯಾ)

ಕಾರಣ 2: ನಿದ್ದೆಯಲ್ಲಿ ನಡುನಡುವೆ ಉಸಿರಾಟ ನಿಲ್ಲೋದು, ಪುನರಾರಂಭ ಆಗೋದು (ಸ್ಲೀಪ್ ಆಪ್ನಿಯಾ)

ರಾತ್ರಿ ನಿದ್ದೆ ಮಾಡೋವಾಗ ಮಧ್ಯೆಮಧ್ಯೆ ಉಸಿರೇ ನಿಂತುಹೋಗೋದು, ಆಮೇಲೆ ಮತ್ತೆ ಉಸಿರಾಟ ಶುರುವಾಗೋದು ಕೆಲವರಿಗಿರುತ್ತೆ. ಇದನ್ನೇ ಸ್ಲೀಪ್ ಆಪ್ನಿಯಾ ಅನ್ನೋದು. ಈ ಸ್ಲೀಪ್ ಆಪ್ನಿಯಾ ಬರೀ ಗೊರಕೆಗಷ್ಟೇ ಕಾರಣ ಆಗೋದಲ್ಲ ಜೊತೆಗೆ ಬಹಳಷ್ಟು ಮಂದಿಗೆ ವಿಪರೀತ ಬೆವರೋದಕ್ಕೂ ಶುರುವಾಗ್ಬಿಡುತ್ತೆ. ಹೀಗಾದಾಗ ಅಂಥವ್ರು ರಾತ್ರಿ ಹೊತ್ತಲ್ಲಿ ಪದೇ ಪದೇ ಮೂತ್ರವಿಸರ್ಜನೆಗೆ ಎದ್ದೇಳಬೇಕಾಗುತ್ತೆ.

ಕಾರಣ 3: ಹುಳಿತೇಗು

ಕಾರಣ 3: ಹುಳಿತೇಗು

ಈ ಹುಳಿತೇಗು ಅನ್ನೋದು ಬರೀ ಊಟ ಆದ್ಮೇಲಷ್ಟೇ ಆಗ್ಲೀ, ಅಥವಾ ಆಲ್ಕೋಹಾಲನ್ನೋ ಇಲ್ಲಾ ಕಾಫಿಯನ್ನೋ ಕುಡಿದಾದ ಮೇಲಷ್ಟೇ ಆಗ್ಲೀ ಬರೋದಲ್ಲ. ಹುಳಿತೇಗಿನ ತೊಂದರೆ ಇರೋ ಕೆಲವರಿಗೆ ರಾತ್ರಿಯಲ್ಲಿ ಕೆಮ್ಮಿನ ಕಿರಿಕಿರಿ ಮತ್ತು ರಾತ್ರಿಯಲ್ಲಿ ವಿಪರೀತವಾಗಿ ಬೆವರೋ ತೊಂದರೇನೂ ಇರುತ್ತೆ.

ಕಾರಣ 4: ಕ್ಷಯರೋಗ

ಕಾರಣ 4: ಕ್ಷಯರೋಗ

ಕ್ಷಯರೋಗದಿಂದ ಬಳಲ್ತಾ ಇರೋರಿಗೆ ಸಾಮಾನ್ಯವಾಗಿ ಸಂಜೆ ಹೊತ್ತಲ್ಲಿ ಜ್ವರ ಬರೋಕೆ ಶುರುವಾಗುತ್ತೆ. ಈ ಜ್ವರದ ಕಾರಣದಿಂದ ಅವ್ರಿಗೆ ರಾತ್ರಿಹೊತ್ತು ಸಿಕ್ಕಾಪಟ್ಟೆ ಬೆವರೋದಕ್ಕೆ ಶುರುವಾಗುತ್ತೆ. ಕ್ಷಯರೋಗಕ್ಕೆ ಕಾರಣ ಆಗಿರೋ ಬ್ಯಾಕ್ಟೀರಿಯಾ ದೇಹದಾದ್ಯಂತ ಹರಡಿಕೊಂಡಾಗಲೂ ರಾತ್ರಿ ಹೊತ್ತು ವಿಪರೀತ ಬೆವರೋಕೆ ಶುರುವಿಟ್ಟುಕೊಳ್ಳುತ್ತೆ

ಕಾರಣ 5: ಗರ್ಭಿಣಿಯಾದಾಗ

ಕಾರಣ 5: ಗರ್ಭಿಣಿಯಾದಾಗ

ಹಾರ್ಮೋನಿನಲ್ಲಾಗೋ ವ್ಯತ್ಯಯಗಳು, ತೂಕಗಳಿಕೆ, ಮತ್ತು ಅಗತ್ಯಕ್ಕಿಂತ ಜಾಸ್ತೀನೇ ಕೆಲ್ಸ ಮಾಡೋ ಥೈರಾಯಿಡ್ ಗ್ರಂಥಿ - ಇವುಗಳಿಂದಾಗಿ ಕೆಲವು ಗರ್ಭಿಣಿಯರಲ್ಲಿ ದೇಹದ ಉಷ್ಣಾಂಶ ಏರೋಕೆ ಶುರುವಾಗುತ್ತೆ. ಇದು ವಿಶೇಷವಾಗಿ ಆಗೋದು ಗರ್ಭಿಣಿಯರ ಎರಡನೆಯ ಮತ್ತು ಮೂರನೆಯ ತ್ರೈಮಾಸಿಕಗಳಲ್ಲಿ. ಕೆಲ ಗರ್ಭಿಣಿಯರ ವಿಷಯದಲ್ಲಿ ಹೆಚ್ಚಾಗೋ ಮೈಬಿಸಿ ರಾತ್ರಿ ಹೊತ್ತಲ್ಲಿ ಸಿಕ್ಕಾಪಟ್ಟೆ ಬೆವರೋದಕ್ಕೆ ಕಾರಣ ಆಗುತ್ತೆ.

ಕಾರಣ 6: ಇನ್ಫ಼ೆಕ್ಟಿವ್ ಎಂಡೋಕಾರ್ಡೈಟಿಸ್

ಕಾರಣ 6: ಇನ್ಫ಼ೆಕ್ಟಿವ್ ಎಂಡೋಕಾರ್ಡೈಟಿಸ್

ಹೃದಯದ ಆವರಣದ ಒಳಮೇಲ್ಮೈ ಅಥವಾ ಹೃದಯದ ಕವಾಟಗಳು ಉರಿಯೋದನ್ನೇ ಇನ್ಫ಼ೆಕ್ಟಿವ್ ಎಂಡೋಕಾರ್ಡೈಟಿಸ್ ಅನ್ತೀವಿ. ಈ ಪರಿಸ್ಥಿತೀಲಿ ಕೂಡಾ ರಾತ್ರಿಯಲ್ಲಿ ತುಂಬಾ ಬೆವರೋದು, ಸ್ವಲ್ಪ ಜ್ವರ, ಮತ್ತೆ ಸ್ನಾಯುಗಳಲ್ಲಿ ನೋವು ಉಂಟಾಗುತ್ತೆ. ಆ್ಯಂಟಿಬಯಾಟಿಕ್ ಗಳು ಮತ್ತು ಆ್ಯಂಟಿ-ಫ಼ಂಗಲ್ ಗಳೊಂದಿಗೆ ಈ ಅನಾರೋಗ್ಯ ಸ್ಥಿತೀನಾ ಆರೈಕೆ ಮಾಡ್ಬೋದು.

ಕಾರಣ 7: ಮೊನೋನ್ಯೂಕ್ಲಿಯೋಸಿಸ್

ಕಾರಣ 7: ಮೊನೋನ್ಯೂಕ್ಲಿಯೋಸಿಸ್

ಕಿಸ್ಸಿಂಗ್ ಡಿಸೀಸ್ ಅಂತಾನೋ ಕರೆಸಿಕೊಳ್ಳೋ ಈ ಮೊನೋನ್ಯೂಕ್ಲಿಯೋಸಿಸ್, ಒಂದು ಸೋಂಕು ರೋಗವಾಗಿದ್ದು, ಜೊಲ್ಲಿನೊಂದಿಗೆ ಹರಡೋ ಎಪ್ಸ್ಟೀನ್-ಬಾರ್ ವೈರಸ್ (ಇ.ಬಿ.ವಿ.) ಅನ್ನೋ ವೈರಾಣು ಈ ರೋಗಕ್ಕೆ ಕಾರಣ. ಮೈಕೈಯಲ್ಲಿ ತುಂಬಾ ಹೊತ್ತಿನವರೆಗೆ ವಿಪರೀತ ಆಯಾಸ ಕಾಣಿಸಿಕೊಳ್ಳೋದು ಈ ರೋಗದ ಅತೀ ಸಾಮಾನ್ಯ ಲಕ್ಷಣ ಆಗಿದ್ರೂನೂ, ಕೆಲವು ರೋಗಿಗಳು ಈ ರೋಗದ ಕಾರಣದಿಂದಾನೂ ರಾತ್ರಿ ಹೊತ್ತಲ್ಲಿ ವಿಪರೀತವಾಗಿ ಬೆವರೋದಿದೆ.

ಕಾರಣ 8: ಫ್ಲೂ

ಕಾರಣ 8: ಫ್ಲೂ

ಫ್ಲೂ ಜ್ವರದಿಂದ ಬಳಲ್ತಾ ಇರೋರಲ್ಲಿ ಜ್ವರ, ಸಿಂಬಳ ಸುರೀತಾ ಇರೋ ಮೂಗು, ವಿಪರೀತ ಸುಸ್ತು ಇವೆಲ್ಲ ಕಂಡುಬರೋದು ಸರ್ವೇಸಾಮಾನ್ಯ. ಇದರ ಜೊತೆಗೆ ಫ಼್ಲೂ ಜ್ವರದಿಂದ ಬಳಲ್ತಾ ಇರೋ ಕಲವ್ರಲ್ಲಿ ರಾತ್ರಿ ತುಂಬಾ ಬೆವರೋದೂ ಇರುತ್ತೆ. ಸಾಮಾನ್ಯ ನೆಗಡಿಯಿಂದ ಬಳಲ್ತಾ ಇರೋರಲ್ಲಿ ನೀವು ಗಮನಿಸಬಹುದಾದ ಅಂಶ ಏನಂದ್ರೆ, ಸಾಮಾನ್ಯ ನೆಗಡಿ ರಾತ್ರಿ ಹೊತ್ತಲ್ಲಿ ಸಿಕ್ಕಾಪಟ್ಟೆ ಬೆವರನ್ನೇನೂ ಉಂಟು ಮಾಡೋಲ್ಲ!

ಕಾರಣ 9: ರಾತ್ರಿ ಹೊತ್ತು ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಕುಸಿತ ಉಂಟಾಗೋದು (ನಾಕ್ಟರ್ನಲ್ ಹೈಪೋಗ್ಲೈಸೀಮಿಯಾ)

ಕಾರಣ 9: ರಾತ್ರಿ ಹೊತ್ತು ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಕುಸಿತ ಉಂಟಾಗೋದು (ನಾಕ್ಟರ್ನಲ್ ಹೈಪೋಗ್ಲೈಸೀಮಿಯಾ)

ಟೈಪ್ 1 ಅಥವಾ ಟೈಪ್ 2 ಮಧುಮೇಹಿಗಳಲ್ಲಿ ನಾಕ್ಟರ್ನಲ್ ಹೈಪೋಗ್ಲೈಸೀಮಿಯಾದ ಕಾರಣದಿಂದ ರಾತ್ರಿ ಹೊತ್ತು ವಿಪರೀತ ಬೆವರು ಕಾಣಿಸಿಕೊಳ್ಳುತ್ತೆ. ರಾತ್ರಿ ಮಲಗಿರೋವಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ತಗ್ಗೋದರಿಂದ ಏರುಗತಿಯ ಹೃದಯಬಡಿತ, ದು:ಸ್ವಪ್ನಗಳು, ನಡುಕ, ಮತ್ತೆ ಜೊತೆಗೆ ಹಸಿವೂ ಕಾಣಿಸಿಕೊಳ್ಳಬಹುದು.

ಕಾರಣ 10: ಖಾರ ತಿನಿಸುಗಳು ಮತ್ತು ಬಿಸಿಯಾದ ಪಾನೀಯಗಳು

ಕಾರಣ 10: ಖಾರ ತಿನಿಸುಗಳು ಮತ್ತು ಬಿಸಿಯಾದ ಪಾನೀಯಗಳು

ರಾತ್ರಿ ಮಲಗೋದಕ್ಕೆ ಮುಂಚೆ, ಖಾರವಾಗಿರೋ ಪದಾರ್ಥಗಳನ್ನ ತಿನ್ನೋ ರೂಢಿ ನಿಮಗಿದೆ ಅಂತಾದರೆ, ನೀವು ರಾತ್ರಿ ಮಲಗೋವಾಗ ಬೆವರೋ ಸಾಧ್ಯತೆ ಜಾಸ್ತಿ ಇರುತ್ತೆ. ಅದೇ ರೀತಿ, ಮಲಗೋಕೆ ಮುಂಚೆ ಬಿಸಿ ಬಿಸಿಯಾದ ಪೇಯವನ್ನು ಕುಡಿಯೋ ಅಭ್ಯಾಸ ಇದ್ದರೂ ರಾತ್ರಿ ಬೆವರೋ ಸಾಧ್ಯತೆ ಜಾಸ್ತಿ. ವಿಶೇಷವಾಗಿ ಕೆಫೀನ್ ಯುಕ್ತ ಪೇಯಗಳು ಸ್ವೇದಗ್ರಂಥಿಗಳನ್ನ ಉದ್ರೇಕಗೊಳಿಸುತ್ವೆ.

ಕಾರಣ 11: ಮದ್ಯಪಾನ ಮಾಡೋದು

ಕಾರಣ 11: ಮದ್ಯಪಾನ ಮಾಡೋದು

ಮಲಗೋದಕ್ಕೆ ಮುಂಚೆ ನೀವೆಂದಾದರೂ ಮದ್ಯಸೇವನೆ ಮಾಡಿದ್ದು ನಿಮಗೆ ನೆನಪಿದೆಯಾ ? ಹಾಗಿದ್ದರೆ, ಹಾಗೆ ನೀವು ಸುರಾಪಾನ ಮಾಡಿ ಮಲಗಿ ಆಮೇಲೆ ನಿಮಗೆ ಎಚ್ಚರ ಆದಾಗ; ನಿಮ್ಮ ಹಾಸಿಗೆ, ಹೊದಿಕೆಗಳು ಬೆವರಿನಿಂದ ತೊಯ್ದು ತೊಪ್ಪೆಯಾಗಿದ್ದದ್ದೂ ನಿಮಗೆ ನೆನಪಿರಲೇಬೇಕು. ಮದ್ಯಪಾನ ಮಾಡಿದ ಮೇಲೆ ಹೀಗಾಗೋದು ಮಾಮೂಲೇ. ನಿಮ್ಮ ನರವ್ಯೂಹ, ನಿಮ್ಮ ದೇಹದ ಉಷ್ಣತೇನಾ ನಿಯಂತ್ರಣ ಮಾಡ್ದೇ ಇರೋ ಹಾಗೆ ನೀವು ಹೊಟ್ಟೆಗಿಳಿಸಿಕೊಂಡಿರೋ ಪರಮಾತ್ಮ ತಡೆಯುತ್ತೆ. ಇದು ಅತಿಯಾಗಿ ಬೆವರೋದಕ್ಕೆ ಕಾರಣ ಆಗುತ್ತೆ.

ಕಾರಣ 12: ಕ್ಯಾನ್ಸರ್

ಕಾರಣ 12: ಕ್ಯಾನ್ಸರ್

ಕಾರಣಾನೇ ಇಲ್ಲದೇ ಇದ್ದಕ್ಕಿದ್ದ ಹಾಗೆ ತೂಕ ನಷ್ಟ ಆಗೋದು, ಸಿಕ್ಕಾಪಟ್ಟೆ ಸುಸ್ತು ಇವೆರಡೂ ಕ್ಯಾನ್ಸರ್ ಖಾಯಿಲೆ ಲಕ್ಷಣಗಳಾಗಿರುವ ಸಾಧ್ಯತೆ ಹೆಚ್ಚು. ಇಷ್ಟು ಮಾತ್ರಾನೇ ಅಲ್ಲ, ಕೆಲವು ಸಲ ರಾತ್ರಿ ಬೆವರೋದು ಕ್ಯಾನ್ಸರ್ ಖಾಯಿಲೇನಾ ಸೂಚಿಸುತ್ತೆ. ಇನ್ನೊಂದೆಡೆ, ಕೆಲಬಗೆಯ ಕ್ಯಾನ್ಸರ್ ಗಳಿಗೆ ಕೊಡೋ ಚಿಕಿತ್ಸೆಯ ಕಾರಣದಿಂದಾನೇ ರೋಗಿಗೆ ರಾತ್ರಿ ಹೊತ್ತು ಸಿಕ್ಕಾಪಟ್ಟೆ ಬೆವರು ಕಿತ್ತುಬರುತ್ತೆ.

ಕಾರಣ 13: ಪಾರ್ಕಿನ್ಸನ್ ರೋಗ

ಕಾರಣ 13: ಪಾರ್ಕಿನ್ಸನ್ ರೋಗ

ಪಾರ್ಕಿನ್ಸನ್ ಖಾಯಿಲೆ ಇರೋರಿಗೆ ಮಾಂಸಖಂಡಗಳು ಸೆಟೆದುಕೊಳ್ಳೋದು, ಅಥವಾ ಸ್ನಾಯುಗಳ ವಿಪರೀತ ಚಲನೆ (ಡಿಸ್ಕೆನೇಸಿಯಾ) ಸರ್ವೇಸಾಮಾನ್ಯ. ಇಂತಹ ಸಂದರ್ಭದಲ್ಲಿ, ಪಾರ್ಕಿನ್ಸನ್ ಖಾಯಿಲೆ ಇರೋ ಮೂವರಲ್ಲಿ ಎಲ್ಲೂ ಒಬ್ರಿಗೆ ಹಗಲು ಅಥವಾ ರಾತ್ರಿ ಹೊತ್ತು ಮೈ ವಿಪರೀತ ಬೆವರುತ್ತೆ.

ಕಾರಣ 14: ಉದ್ವೇಗ ಮತ್ತು ಮಾನಸಿಕ ಒತ್ತಡ

ಕಾರಣ 14: ಉದ್ವೇಗ ಮತ್ತು ಮಾನಸಿಕ ಒತ್ತಡ

ವಿಪರೀತ ಉದ್ವೇಗ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಶರೀರದಲ್ಲಿ ಅಡ್ರಿನಾಲಿನ್ ನಂತಹ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ಈ ಹಾರ್ಮೋನಿನ ಸ್ರವಿಕೆ, ಹೃದಯಬಡಿತಾನಾ ಹೆಚ್ಸೋದಲ್ಲದೇ ಹಗಲು ಮತ್ತು ರಾತ್ರಿ ಸಿಕ್ಕಾಪಟ್ಟೆ ಮೈ ಬೆವರೋ ಹಾಗೆ ಮಾಡುತ್ತೆ. ಹಾಗೆ ಉತ್ಪತ್ತಿಯಾಗೋ ಬೆವರಿನ ವಾಸನೆ, ಬೇಸಿಗೆ ಕಾಲದಲ್ಲಿ ಮೈಯಿಂದ ಒಸರೋವಂತಹ ಅಥವಾ ವ್ಯಾಯಾಮ ಮಾಡೋವಾಗ ದೇಹದಿಂದ ಸುರಿಯೋವಂತಹ ಬೆವರಿನ ವಾಸನೆಗಿಂತ ಬೇರೇನೇ ರೀತಿಯದ್ದಾಗಿರುತ್ತದೆ. ಯಾಕಂದ್ರೆ ಉದ್ವೇಗ ಅಥವಾ ಮಾನಸಿಕ ಒತ್ತಡದ ಕಾರಣದಿಂದ ಉಂಟಾಗೋ ಬೆವರಿನಲ್ಲಿ ಬೇರೇನೇ ಗ್ರಂಥಿಯ ಪಾತ್ರ ಇರುತ್ತೆ.

ರಾತ್ರಿಯಲ್ಲಿ ಅತಿಯಾಗಿ ಬೆವರೋದಕ್ಕೆ ಕಾರಣಗಳೇನೇನು ಅಂತಾ ನೋಡಿದ್ವಿ. ಈಗ ಇದಕ್ಕಿರೋ ಪರಿಹಾರಗಳು ಏನೇನೂ ಅಂತಾ ಒಂದೊಂದಾಗಿ ನೋಡೋಣ:

ರಾತ್ರಿಯಲ್ಲಿ ಅತಿಯಾಗಿ ಬೆವರೋದಕ್ಕೆ ಕಾರಣಗಳೇನೇನು ಅಂತಾ ನೋಡಿದ್ವಿ. ಈಗ ಇದಕ್ಕಿರೋ ಪರಿಹಾರಗಳು ಏನೇನೂ ಅಂತಾ ಒಂದೊಂದಾಗಿ ನೋಡೋಣ:

ಪರಿಹಾರ 1: ನುರಿತ ವೈದ್ಯರನ್ನ ಭೇಟಿಯಾಗಿ

ನಾವು ಈಗಾಗಲೇ ಹೇಳಿರೋ ಪ್ರಕಾರ, ರಾತ್ರಿಯಲ್ಲಿ ಅತೀ ಬೆವರುವಿಕೆಗೆ ಹಲವಾರು ಕಾರಣಗಳಿರುತ್ವೆ. ಹಾಗಾಗಿ, ಈ ಕಿರಿಕಿರಿಯಿಂದ ಪಾರಾಗೋದಕ್ಕೆ ಖುದ್ದು ನೀವೇ ಮುಂದಾಗೋದರ ಬದಲು, ತಜ್ಞ ವೈದ್ಯರನ್ನ ಕಾಣಿ. ಉದಾಹರಣೆಗೆ, ಈಗ ನಿಮ್ಮ ವಿಚಾರದಲ್ಲಿ ರಾತ್ರಿ ಅತಿಯಾಗಿ ಬೆವರೋದಕ್ಕೆ ಹುಳಿತೇಗು ಕಾರಣ ಅಂತಿಟ್ಕೊಳ್ಳಿ. ಆಗ ನಿಮ್ಮ ವೈದ್ಯರು ಹುಳಿತೇಗಿನ ನಿವಾರಣೆಗಾಗಿ ನಿಮಗೆ ಜೌಷಧವನ್ನ ಸಲಹೆ ಮಾಡಿಯಾರು. ಒಮ್ಮೆ ನಿಮ್ಮ ಹುಳಿತೇಗಿನ ತೊಂದರೆ ನಿವಾರಣೆಯಾಯಿತಂತಾದರೆ, ಆ ಹುಳಿತೇಗಿನ ಕಾರಣದಿಂದಾಗಿ ನೀವು ರಾತ್ರಿ ಅತಿಯಾಗಿ ಬೆವರ್ತಾ ಇದ್ದಿದ್ದೂ ತನ್ನಿಂತಾನಾಗೇ ನಿವಾರಣೆಯಾಗುತ್ತೆ. ಆದರೂ ಕೂಡ, ಕೆಲವೊಮ್ಮೆ ಖಿನ್ನತೆಯ ನಿವಾರಣೆಗೇಂತಾ ಕೊಡೋ ಕೆಲವು ಜೌಷಧಗಳು (ಆ್ಯಂಟಿ-ಡಿಪ್ರೆಸೆಂಟ್ಸ್) ರಾತ್ರಿ ಬೆವರೋದಕ್ಕೆ ಕಾರಣ ಆಗಿರುತ್ವೆ. ನಿಮ್ಮ ವಿಷಯದಲ್ಲೂ ಇದು ನಿಜಾನೇ ಆಗಿದ್ರೆ, ಆ ಜೌಷಧದ ಈ ಅಡ್ಡಪರಿಣಾಮದ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ. ಆಗ ಅವರು ನಿಮಗೇಂತಾ ಒಂದೋ ಅದರ ಪ್ರಮಾಣವನ್ನ ಬದಲಿಸಿಯಾರು ಇಲ್ಲಾಂದ್ರೇ ಬೇರೊಂದು ಔಷಧವನ್ನ ಸಲಹೆ ಮಾಡಿಯಾರು.

ಪರಿಹಾರ 2: ದೊಡ್ಡಪತ್ರೆ

ಪರಿಹಾರ 2: ದೊಡ್ಡಪತ್ರೆ

ನಿಮ್ಮ ಡಾಕ್ಟ್ರ ಜೊತೆಗೆ ಚರ್ಚಿಸಿ ಅವರ ಒಪ್ಪಿಗೆಯೊಂದಿಗೆ ದೊಡ್ಡಪತ್ರೆಯನ್ನ ಬಳಸೋದಕ್ಕೆ ಶುರುಮಾಡಿ. ಅದರಲ್ಲೂ ವಿಶೇಷವಾಗಿ ಋತುಚಕ್ರ ನೆಲ್ಲೋ ಘಟ್ಟವನ್ನ (ಮೆನೋಪಾಸ್) ನೀವು ತಲುಪಿರೋದಾದ್ರೆ. ಈ ಗಿಡಮೂಲಿಕೆಯ ಬಗ್ಗೆ ಒಂದಿಷ್ಟು ಅಧ್ಯಯನಗಳು ಪ್ರಕಟಗೊಂಡಿವೆ. ಆದರೆ, ಇಸವಿ 2019 ರಲ್ಲಿ ಪ್ರಕಟಗೊಂಡ ಒಂದು ಅಧ್ಯಯನ ವರದಿ ಹೇಳೋ ಪ್ರಕಾರ, ರಾತ್ರಿಯ ಅತೀ ಬೆವರುವಿಕೆಯನ್ನೂ ಒಳಗೊಂಡಂತೆ ಮೆನೋಫಾಸ್ ಹಂತವನ್ನ ತಲುಪಿರೋ ಮಹಿಳೆಯರ ಅನೇಕ ರೋಗಲಕ್ಷಣಗಳನ್ನ ತಗ್ಗಿಸೋದ್ರಲ್ಲಿ ದೊಡ್ಡಪತ್ರೆಯ ರಸದ ಪಾತ್ರ ಬಹಳ ದೊಡ್ಡದು. ಯಾವ ರೀತಿಯ ಪತ್ರೆಯನ್ನ ಇದಕ್ಕೇಂತ ಬಳಸ್ಕೋಬೇಕು ಅಂತಾ ತಿಳ್ಕೊಳ್ಳೋಕೆ ನಿಮ್ಮ ಜೌಷಧಿ ಅಂಗಡಿಯವರನ್ನ ವಿಚಾರಿಸಿ. ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ, ಮಧುಮೇಹ, ಅಥವಾ ಕ್ಯಾನ್ಸರ್ ಥರದ ಆರೋಗ್ಯ ಸಮಸ್ಯೆಗಳೇನಾದ್ರೂ ಇದ್ರೆ, ನಿಮ್ಮ ಡಾಕ್ಟ್ರ ಹತ್ರ ಸಲಹೆ ಪಡೀದೇನೇ ದೊಡ್ದಪತ್ರೇನಾ ಸೇವನೆ ಮಾಡೋದಕ್ಕೆ ಹೋಗ್ಬೇಡಿ.

ಪರಿಹಾರ 3: ಮಲಗೋ ಕೋಣೆಯ ಉಷ್ಣತೇನಾ ಕಡಿಮೆ ಮಾಡ್ಕೋಳಿ

ಪರಿಹಾರ 3: ಮಲಗೋ ಕೋಣೆಯ ಉಷ್ಣತೇನಾ ಕಡಿಮೆ ಮಾಡ್ಕೋಳಿ

ನಿಮ್ಮ ಬೆಡ್ರೂಮ್ ಉಷ್ಣತೇನಾ 16 ಡಿಗ್ರಿ ಸೆಲ್ಸಿಯಸ್ ಮತ್ತು 19 ಡಿಗ್ರಿ ಸೆಲ್ಸಿಯಸ್ ನ ನಡುವೆ ಇಟ್ಕೊಳ್ಳಿ. ತುಂಬಾ ಹೊದಿಕೆಗಳನ್ನ ಹೊದ್ದುಕೊಂಡು ಮಲಗೋದಾಗಲೀ ಅಥವಾ ಬೆಚ್ಚಗಿನ ಕಂಬಳಿಯನ್ನ ಹೊದ್ದುಕೊಂಡು ಮಲಗೋದಾಗಲೀ ಮಾಡ್ಬೇಡಿ. ಋತುಮಾನಕ್ಕೆ ತಕ್ಕ ಹಾಗೆ ಉಡುಪುಗಳನ್ನ ಧರಿಸಿ. ಉದಾಹರಣೆಗೆ ಹೇಳ್ಬೇಕೂಂದ್ರೆ, ಬಿರುಬೇಸಿಗೆಯಲ್ಲಿ ಫ಼್ಲನೆಲ್ ಪೈಜಾಮಾ ಹಾಕ್ಕೊಂಡು ಮಲಗೋದು ಸರಿಯಲ್ಲ.

ಪರಿಹಾರ 4: ವ್ಯಾಯಾಮ

ಪರಿಹಾರ 4: ವ್ಯಾಯಾಮ

ಮಾನಸಿಕ ಉದ್ವೇಗ ಅಥವಾ ಮಾನಸಿಕ ಒತ್ತಡ ನಿಮ್ಮನ್ನ ರಾತ್ರಿ ಬೆವರೋ ಹಾಗೆ ಮಾಡ್ತಿದ್ರೆ, ಸಾಕಷ್ಟು ವ್ಯಾಯಾಮ ಮಾಡಿ. ನಿಮ್ಮ ಮನಸ್ಥಿತೀನಾ ಸುಧಾರ್ಸೋಕೆ ಇದು ಬಹಳ ಒಳ್ಳೇ ಪರಿಹಾರೋಪಾಯ. ಆರಾಮದಾಯಕ ತಂತ್ರಗಳು ಹಾಗೂ ಧ್ಯಾನ ಹೆಚ್ಚಿದ ಉದ್ವೇಗ ಮತ್ತೆ ಮಾನಸಿಕ ಒತ್ತಡಾನಾ ತಗ್ಗಿಸೋದ್ರಲ್ಲಿ ಬಹಳ ಸಹಕಾರಿ. ಇದಕ್ಕೆ ಇನ್ನೊಂದು ಪರಿಹಾರ ಏನೂಂತಂದ್ರೆ, ರಾತ್ರಿ ಮಲಗೋದಕ್ಕೆ ಮೊದಲು ನಿಮಗೆ ಕಿರಿಕಿರಿಯನ್ನ ಕೊಡೋವಂತಹಾ ಆ ಎಲ್ಲ ವಿಚಾರಗಳನ್ನೂ ಒಂದು ನೋಟ್ ಬುಕ್ಕಲ್ಲಿ ಬರೆದಿಟ್ಟು ಬಿಡಿ. ಹಾಗೆ ಬರೆದಿಟ್ಟ ವಿಚಾರಗಳ ಬಗ್ಗೆ ಏನಾದರೂ ಮಾಡೋದಕ್ಕೆ ನಿಮ್ಮಿಂದ ಸಾಧ್ಯಾನಾ ಅಂತಾ ಯೋಚ್ಸಿ ಇಲ್ಲಾ ಅವುಗಳ ಬಗ್ಗೆ ಯೋಚ್ನೆ ಮಾಡೋದನ್ನೇ ಬಿಡೋದರ ಮೂಲಕ ಮನಸ್ಸಿನ ಉದ್ವೇಗ ಅಥವಾ ಒತ್ತಡಾನಾ ಕಮ್ಮಿ ಮಾಡ್ಕೋಬೋದು.

ಪರಿಹಾರ 5: ಮದ್ಯಪಾನ ಹಾಗೂ ಖಾರ ಪದಾರ್ಥಗಳನ್ನ ತಿನ್ನೋದನ್ನ ಬಿಡೋದು

ಪರಿಹಾರ 5: ಮದ್ಯಪಾನ ಹಾಗೂ ಖಾರ ಪದಾರ್ಥಗಳನ್ನ ತಿನ್ನೋದನ್ನ ಬಿಡೋದು

ರಾತ್ರಿ ಹೊತ್ತು ತುಂಬಾ ಬೆವರೋ ಕಿರಿಕಿರಿಯಿಂದ ತಪ್ಪಿಸಿಕೊಳ್ಳೋಕೆ ಕೆಲವು ಸಲ ಮದ್ಯಪಾನ ಮತ್ತೆ ಹಾಗೇನೇ ಖಾರವಾಗಿರೋ ತಿನಿಸುಗಳನ್ನ ತಿನ್ನೋದನ್ನ ಬಿಟ್ಟರಷ್ಟೇ ಸಾಕು. ರಾತ್ರಿ ಬೆವರೋದು ನಿಂತೇ ಹೋಗುತ್ತೆ. "ಮದ್ಯಪಾನವನ್ನ ಬಿಡೋದು ನನ್ನಿಂದ ಆಗೋದೇ ಇಲ್ಲ" ಅನ್ನೋ ಮನೋಭಾವ ನಿಮ್ದಾಗಿದ್ರೆ, ದೇಹ ಪೂರ್ತಿ ಬತ್ತಿಹೋಗೋದನ್ನ ತಡೆಯೋಕೆ ಬೇಕಾದಷ್ಟು ನೀರನ್ನೂ ಕುಡೀರಿ.

English summary

Night Sweats Symptoms, Signs, Causes, Remedies in Kannada

Night sweats symptoms, signs,causes and remedies, read on...
X
Desktop Bottom Promotion