For Quick Alerts
ALLOW NOTIFICATIONS  
For Daily Alerts

ಮೂಲವ್ಯಾಧಿಯಿಂದ ಬಳಲುತ್ತಿರುವವರು ಈ ಮನೆಮದ್ದುಗಳನ್ನ ಪ್ರಯತ್ನಿಸಿ

|

ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿ ಅಥವಾ ಪೈಲ್ಸ್ ಕೂಡ ಹೆಚ್ಚಿನವನರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಗುದದ್ವಾರದ ಬಳಿ ಉಂಟಾಗುವ ಈ ಪೈಲ್ಸ್ ರಕ್ತಸ್ರಾವ, ಕಿರಿಕಿರಿ ಜೊತೆಗೆ ಸಾಕಷ್ಟು ನೋವನ್ನು ಸಹ ಉಂಟು ಮಾಡುವುದು. ಅಸಮರ್ಪಕ ಆಹಾರ ಸೇವನೆ ಹಾಗೂ ಅನುವಂಶಿಕವಾಗಿ ಈ ಸಮಸ್ಯೆಯನ್ನು ಪಡೆಯುತ್ತಾರೆ. ಜೊತೆಗೆ ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೂ ಈ ಸಮಸ್ಯೆ ಉಂಟಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇಂತಹ ಮೂಲವ್ಯಾಧಿಯಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಕೆಲವೊಂದು ಮನೆಮದ್ದುಗಳು ಸಹಾಯ ಮಾಡುತ್ತವೆ. ಅವುಗಳನ್ನು ಇಲ್ಲಿ ಹೇಳಲಾಗಿದೆ.

ಮೂಲವ್ಯಾಧಿಗೆ ಮನೆಯಲ್ಲಿ ಮಾಡಬಹುದಾದ ಸರಳ ಮತ್ತು ಪರಿಣಾಮಕಾರಿ ಚಿಕಿತ್ಸೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

Natural Treatment & Home Remedies For Piles in Kannada

1. ಬಾಳೆಹಣ್ಣು ಉತ್ತಮ ವಿರೇಚಕ ಎಂಬುದು ಎಲ್ಲರಿಗೂ ಗೊತ್ತು. ಆದರೆ ಬೇಯಿಸಿದ ಬಾಳೆಹಣ್ಣನ್ನು ದಿನಕ್ಕೆ ಎರಡು ಬಾರಿ ಸೇವಿಸುವುದು ಮೂಲವ್ಯಾಧಿಗೆ ಪರಿಣಾಮಕಾರಿ ಮನೆಮದ್ದು. ಚೆನ್ನಾಗಿ ಬೆಳೆದ ಬೇಯಿಸುವುದನ್ನು ಮರೆಯಬೇಡಿ.

2. ಮನೆಯಲ್ಲಿಯೇ ತಯಾರಿಸಿದ ಮೊಸರಿಗೆ ಸ್ವಲ್ಪ ಸಾಸಿವೆ ಪುಡಿಯನ್ನು ಸೇರಿಸಿ, ಸೇವಿಸುವುದು ಪೈಲ್ಸ್ ಗುಣಪಡಿಸುವಲ್ಲಿ ಪರಿಣಾಮಕಾರಿ.

3. ಶುಂಠಿ, ಜೇನುತುಪ್ಪ, ಸಿಹಿ ನಿಂಬೆ ರಸ ಮತ್ತು ಪುದೀನದಿಂದ ತಯಾರಿಸಿದ ಮಿಶ್ರಣವು ದೇಹವನ್ನು ತಂಪಾಗಿಡಲು ಮತ್ತು ವಿಷದಿಂದ ಮುಕ್ತವಾಗಿಡಲು ಸಹ ಪರಿಣಾಮಕಾರಿಯಾಗಿದೆ.

4. ಮೂಲಂಗಿಯಿಂದ ತಯಾರಿಸಿದ ಜ್ಯೂಸ್ ನೈಸರ್ಗಿಕ ಆಯ್ಕೆಗಳಲ್ಲಿ ಒಂದಾಗಿದ್ದು, ಮೂಲವ್ಯಾಧಿಯ ನೋವನ್ನು ಕಡಿಮೆ ಮಾಡುವುದು. ಒಂದರಿಂದ ಅರ್ಧ ಕಪ್ ವರೆಗೆ ಈ ರಸವನ್ನು ನಿಯಮಿತವಾಗಿ ಸೇವಿಸುವುದು ಪರಿಣಾಮಕಾರಿ ಫಲಿತಾಂಶ ನೀಡುವುದು.

5. ಪೈಲ್ಸ್ ನಿಂದ ಬಳಲುತ್ತಿರುವ ಜನರು, ಸಂಸ್ಕರಿಸಿದ ಆಹಾರಕ್ಕಿಂತ ಧಾನ್ಯಗಳನ್ನು ಸೇವಿಸುವುದು ಸೂಕ್ತ. ಮಾಗಿದ ಬಾಳೆಹಣ್ಣು ಮತ್ತು ಮೊಸರು ಜೊತೆಗೆ ಅನ್ನವನ್ನು ಸೇರಿಸಿ ತಯಾರಿಸುವ ಆಹಾರ ಆರೋಗ್ಯಕರ ಪೋಷಕಾಂಶಗಳಲ್ಲಿ ಒಂದಾಗಿದೆ.

6. ಪುಡಿಮಾಡಿದ ಹಾಗಲಕಾಯಿ ಎಲೆಗಳನ್ನು ಸಹ ಮೂಲವ್ಯಾಧಿ ಚಿಕಿತ್ಸೆಗೆ ಬಳಸಬಹುದು.

7. ಹುರಿದು, ಪುಡಿಮಾಡಿದ ಜೀರಿಗೆಯನ್ನು ಅರ್ಧ ಚಮಚ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಮೂಲವ್ಯಾಧಿಯ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಿಕೊಳ್ಳಬಹುದು.

8. ಈರುಳ್ಳಿ ರಸವನ್ನು ನೀರಿನೊಂದಿಗೆ ಬೆರೆಸಿ, ಅದಕ್ಕೆ ಚಿಟಿಕೆ ಸಕ್ಕರೆ ಸೇರಿಸಿ ಕುಡಿಯುವುದು ಸಹ ಆರೋಗ್ಯಕರ ಆಯ್ಕೆಯಾಗಿದೆ.

9. ಪೈಲ್ಸ್ ನಿಂದ ಊದಿಕೊಂಡ ರಕ್ತನಾಳಗಳ ಮೇಲೆ ಅಡಿಗೆ ಸೋಡಾವನ್ನು ಹಚ್ಚುವುದರಿಂದ ಉರಿಯೂತವನ್ನು ಕಡಿಮೆ ಮಾಡಬಹುದು.

10. ಅಲೋವೆರಾ ಜ್ಯೂಸ್ ಸೇವನೆ ಕೂಡ ಮೂಲವ್ಯಾಧಿಯ ಊತವನ್ನು ಕಡಿಮೆ ಮಾಡುತ್ತದೆ.

English summary

Natural Treatment & Home Remedies For Piles in Kannada

Here we talking about Natural treatment & Home Remedies For Piles in Kannada, read on
X
Desktop Bottom Promotion