For Quick Alerts
ALLOW NOTIFICATIONS  
For Daily Alerts

ಮನೆಮದ್ದುಗಳು: ಶೀತ ಕಡಿಮೆ ಮಾಡಲು ಈ ಔಷಧಗಳು ಬೆಸ್ಟ್

|

ಸಾಮಾನ್ಯ ಶೀತದಷ್ಟೇ ಸರ್ವೇ ಸಾಮಾನ್ಯವಾಗಿದ್ದು ಶೀತಕ್ಕೆ ಮಾಡುವ ಮನೆಮದ್ದುಗಳು. ಈಗಂತೂ ಶೀತ, ಕೆಮ್ಮು ಬಂದಾಗ ಆಸ್ಪತ್ರೆಗೆ ಹೋಗುವ ಬದಲು ಮನೆ ಮದ್ದುಗಳ ಮೊರೆ ಹೋಗುತ್ತಿದ್ದೇವೆ. ಆದರೆ ಕೆಲವೊಂದು ಮನೆಮದ್ದುಗಳನ್ನು ಮಾಡಿದಾಗ ಬೇಗ ಗುಣಮುಖವಾದರೆ, ಇನ್ನು ಕೆಲವೊಮ್ಮೇ ಯಾವುದೇ ಪರಿಣಾಮ ಬೀರುವುದಿಲ್ಲ.

ಮನೆಮದ್ದುಗಳು: ಶೀತ ಕಡಿಮೆ ಮಾಡಲು ಈ ಔಷಧಗಳು ಬೆಸ್ಟ್ | Home Remedies For Cold | Boldsky Kannada
Home Remedies: That work effectively For Cold

ಏಕೆ ಕೆಲವೊಮ್ಮೆ ಸಾಮಾನ್ಯ ಶೀತಕ್ಕೆ ಮಾಡುವ ಮನೆಮದ್ದುಗಳು, ಆ್ಯಂಟಿಬಯೋಟಿಕ್‌ಗಳು ಶೀತವನ್ನು ಕಡಿಮೆ ಮಾಡುವುದಿಲ್ಲ, ಶೀತ ಕಡಿಮೆ ಮಾಡಲು ಏನು ಮಾಡಬೇಕು, ಯಾವ ಮದ್ದುಗಳು ಸಾಮಾನ್ಯ ಶೀತ ಕಡಿಮೆ ಮಾಡಲು ಸಹಕಾರಿ ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ಶೀತ ಕಡಿಮೆ ಮಾಡುವ ಮನೆಮದ್ದುಗಳು

ಶೀತ ಬಂದಾಗ ಕೆಲವೊಮ್ಮೆ ವಾರವಾದರೂ ಕಡಿಮೆಯಾಗುವುದಿಲ್ಲ. ಶೀತ ಕಡಿಮೆಯಾಗಬೇಕೆಂದರೆ ವಿಶ್ರಾಂತಿ ತೆಗೆದುಕೊಳ್ಳಬೇಕು ಹಾಗೂ ಈ ಟಿಪ್ಸ್ ಪಾಲಿಸಿ ಕಡಿಮೆಯಾಗುವುದು.

 * ನೀರು ಕುಡಿಯಿರಿ

* ನೀರು ಕುಡಿಯಿರಿ

ನೀರು,ತಾಜಾ ಜ್ಯೂಸ್, ಮೂಳೆ ಬೇಯಿಸಿ ಅದರ ನೀರು, ಸೂಪ್, ನೀರಿಗೆ ಜೇನು ಹಾಕಿ ಕುಡಿಯುವುದು, ನೀರಿಗೆ ಜೇನು ಹಾಕಿ ಕುಡಿಯುವುದು ಇವೆಲ್ಲಾ ಶೀತ ಕಡಿಮೆ ಮಾಡಲು ಸಹಕಾರಿ. ಕಾಫಿಯಲ್ಲಿ ಕೆಫೀನ್‌ ಅಂಶವಿರುವುದರಿಂದ ಕಾಫಿ ಕುಡಿಯಬೇಡಿ ಅಲ್ಲದೆ ಸೋಡಾ ಮುಂತಾದ ತಂಪು ಜ್ಯೂಸ್‌ ತೆಗೆದುಕೊಳ್ಳಬೇಡಿ, ಇದು ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ.

* ವಿಶ್ರಾಂತಿ

ಇನ್ನು ದೇಹದ ಆರೈಕೆಗೆ ಬಹುಮುಖ್ಯವಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಇದು ಬೇಗನೆ ಗುಣಮುಖವಾಗಲು ಸಹಕಾರಿ.

 ಗಂಟಲು ಕೆರೆತ ಕಡಿಮೆಮಾಡಿಕೊಳ್ಳಿ

ಗಂಟಲು ಕೆರೆತ ಕಡಿಮೆಮಾಡಿಕೊಳ್ಳಿ

ಒಂದು ಲೋಟ ಬಿಸಿ ನೀರಿಗೆ ಅರ್ಧ ಚಮಚ ಉಪ್ಪು ಹಾಕಿ ಆಗಾಗ ಬಾಯಿ ಮುಕ್ಕಳಿಸಿ, ಇದು ಗಂಟಲು ಕೆರೆತ ಕಡಿಮೆಯಾಗುತ್ತದೆ. ಆದರೆ 6 ವರ್ಷದ ಕೆಳಗಿನ ಮಕ್ಕಳಿಗೆ ಉಪ್ಪು ನೀರು ಮುಕ್ಕಳಿಸುವುದು ಗೊತ್ತಾಗುವುದಿಲ್ಲ. ಇಂಥ ಮಕ್ಕಳಿಗೆ ಐಸ್ ಕೊಡುವುದು, ಕ್ಯಾಂಡಿ ಕೊಡುವುದು ಒಳ್ಳೆಯದು.

ಮೂಗು ಕಟ್ಟುವುದಕ್ಕೆ ಏನು ಮಾಬೇಕು?'

ಮೂಗು ಕಟ್ಟುವುದಕ್ಕೆ ಏನು ಮಾಬೇಕು?'

ನಾಸಲ್ ಡ್ರಾಪ್ಸ್ ಬಳಸಿ. ಇನ್ನು ಮಕ್ಕಳಿಗೆ ನಾಸಲ್ ಡ್ರಾಪ್ಸ್ ಹಾಕಿದರೆ ಅವರಿಗೆ ಉಸಿರಾಡಲು ಸಹಕಾರಿಯಾಗುತ್ತದೆ. ಸ್ವಲ್ಪ ದೊಡ್ಡ ಮಕ್ಕಳಿಗೆ ಸಲೈನೆ ನಾಸಲ್ ಸ್ಪ್ರೇ ಬಳಸಬಹುದು, ಇನ್ನು ದೊಡ್ಡವರು ಸ್ಟೀಮ್ ತೆಗೆದುಕೊಳ್ಳುವುದರಿಂದ ಸ್ವಲ್ಪ ಸಮಧಾನವಾಗುವುದು. ಬಿಸಿ ನೀರಿಗೆ ಒಂದೆರಡು ಹನಿ ನೀಲಗಿರಿ ಅಥವಾ ಪುದೀನಾ ಎಣ್ಣೆ ಹಾಕಿ ಹಬೆ ತೆಗೆದುಕೊಳ್ಳಬಹುದು,

ನೋವು ಕಡಿಮೆಯಾಗಲು

ನೋವು ಕಡಿಮೆಯಾಗಲು

6 ತಿಂಗಳಿನ ಹಾಗೂ ಅದಕ್ಕಿಂತ ಚಿಕ್ಕಮಕ್ಕಳಿಗೆ acetaminophen ನೀಡಬಹುದು. ಅದಕ್ಕಿಂತ ದೊಡ್ಡ ಮಕ್ಕಳಿಗೆ acetaminophen ಅಥವಾ ibuprofen ನೀಡಬಹುದು (ಆದರೆ ಈ ಔಷಧ ನೀಡುವ ಮುನ್ನ ನಿಮ್ಮ ಮಕ್ಕಳ ತಜ್ಞರ ಸಲಹೆ ಪಡೆಯುವುದು ಕಡ್ಡಾಯ). ದೊಡ್ಡವರಿಗೆ ಆಸ್ಪಿರಿನ್ ಮಾತ್ರೆ ಒಳ್ಳೆಯದು. ಆದರೆ ಚಿಕನ್‌ ಪಾಕ್ಸ್ ಬಂದು ಚೇತರಿಸಿಕೊಳ್ಳುವ ಮಕ್ಕಳಿಗೆ ಈ ಔಷಧ ನೀಡಬಾರದು. ನೀಡಿದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು.

ಬಿಸಿ ಬಿಸಿ ನೀರು ಕುಡಿಯಿರಿ

ಬಿಸಿ ಬಿಸಿ ನೀರು ಕುಡಿಯಿರಿ

ಇನ್ನು ಶೀತ, ಕೆಮ್ಮು ಉಂಟಾದಾಗ ಬಿಸಿ ಬಿಸಿ ನೀರು ಕುಡಿಯಿರಿ, ಚಿಕನ್ ಸೂಪ್‌, ಟೀ , ಬಿಸಿ ಬಿಸಿಯಾದ ಸೇಬಿನ ಜ್ಯೂಸ್ ಇವೆಲ್ಲಾ ಕುಡಿಯುವುದರಿಂದ ಶೀತ ಬೇಗ ಕಡಿಮೆಯಾಗುವುದು. ಟೊಮೆಟೊ ಸೂಪ್ ಕೂಡ ಒಳ್ಳೆಯದೇ.

ಕೆಮ್ಮು, ಶೀತ ಕಡಿಮೆ ಮಾಡಲು ಔಷಧ

ಕೆಮ್ಮು, ಶೀತ ಕಡಿಮೆ ಮಾಡಲು ಔಷಧ

5 ವರ್ಷಕ್ಕಿಂತ ಮೇಲ್ಪಟ್ಟವರಿಗೆ decongestants, antihistamines ಮತ್ತು ನೋವು ನಿವಾರಕಗಳು ಕೆಮ್ಮು, ಶೀತ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದನ್ನು ಅತ್ಯಧಿಕ ಬಳಸಿದರೆ ಅಡ್ಡ ಪರಿಣಾಮ ಉಂಟಾಗುವುದು, ಆದ್ದರಿಂದ ಈ ಔಷಧಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಬೇಕು. ಅಲ್ಲದೆ ಯಾವುದೇ ಔಷಧಗಳನ್ನು ತೆಗೆದುಕೊಳ್ಳುವ ಮುನ್ನ ಅದರ ಮೇಲೆ ಬರೆದಿರುವ ಸೂಚನೆಗಳನ್ನು ಓದಿ.

7. ಶೀತಕ್ಕೆ ಈ ಔಷಧಗಳು ಪರಿಣಾಮಕಾರಿಯಲ್ಲ

7. ಶೀತಕ್ಕೆ ಈ ಔಷಧಗಳು ಪರಿಣಾಮಕಾರಿಯಲ್ಲ

ಆ್ಯಂಟಿ ಬಯೋಟಿಕ್‌

ಇವುಗಳು ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತವೆ, ಆದರೆ ಶೀತಕ್ಕೆ ಪರಿಣಾಮಕಾರಿಯಲ್ಲ. ಇವುಗಳನ್ನು ಸೇವಿಸುವುದರಿಂದ ಬೇಗನೆ ಗುಣಮುಖವಾಗುವುದಿಲ್ಲ, ಇವುಗಳು ಬ್ಯಾಕ್ಟಿರಿಯಾ ನಾಶಕ್ಕಷ್ಟೇ ಸಹಕಾರಿ.

OTC ಔಷಧಗಳು

Over-the-counter cold and cough ಈ ಔಷಧಗಳು ದೊಡ್ಡವರಿಗೆ ನೀಡಬಹುದು ಆದರೆ ಮಕ್ಕಳಿಗೆ ನೀಡುವಂತಿಲ್ಲ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವುದು ತುಂಬಾ ಅಪಾಯಕಾರಿ.

8. ಶೀತ ಬೇಗ ಕಡಿಮೆಯಾಗಲು ಏನು ಮಾಡಬೇಕು?

8. ಶೀತ ಬೇಗ ಕಡಿಮೆಯಾಗಲು ಏನು ಮಾಡಬೇಕು?

ವಿಟಮಿನ್ ಸಿ

ಶೀತ, ಕೆಮ್ಮಿನಿಂದ ಬೇಗನೆ ಗುಣಮುಖವಾಗುವಲ್ಲಿ ವಿಟಮಿನ್ ಸಿ ಸಪ್ಲಿಮೆಂಟ್ ತುಂಬಾ ಸಹಕಾರಿ. ಇನ್ನು ವಿಟಮಿನ್ ಸಿ ಇರುವ ಆಹಾರವನ್ನು ಸೇವಿಸಿ. ವಿಟಮಿನ್ ಸಿ ಕೆಮ್ಮು, ಶೀತದಿಂದ ಬೇಗನೆ ಗುಣಮುಖವಾಗಲು ತುಂಬಾನೇ ಸಹಕಾರಿ.

ಎಕಿನೇಶಿಯ (Echinacea)

ವಾರಗಳಿಗಿಂತ ಮೇಲ್ಪಟ್ಟ ಶೀತ ಕಡಿಮೆ ಮಾಡುವಲ್ಲಿ ಎಕಿನೇಶಿಯಾ ತುಂಬಾ ಸಹಕಾರಿ. ದೊಡ್ಡವರಿಗೆ ಈ ಔಷಧ ಸೇಫ್‌, ಆದರೆ ಬೇರೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಎಕಿನೇಶಿಯಾ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

ಸತು:

ಇನ್ನು ಸತು ಸಪ್ಲಿಮೆಂಟ್‌ ಕೂಡ ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಆದರೆ ಸತು ಅಡ್ಡಪರಿಣಾಮ ಕೂಡ ಬೀರುವುದರಿಂದ ಇದನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬಾರದು.

English summary

Natural Remedies for the Common Cold

Cold remedies are almost as common as the common cold, but are they effective? Here are best home remedies to cure cold, have a look.
X
Desktop Bottom Promotion