For Quick Alerts
ALLOW NOTIFICATIONS  
For Daily Alerts

ಮಲೇರಿಯಾ ರೋಗವನ್ನು ತ್ವರಿತವಾಗಿ ನಿವಾರಣೆ ಮಾಡುವ ಮನೆಮದ್ದುಗಳು

|

ಮಳೆಗಾಲ ಬಂತೆಂದರೆ ಆಗ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ಇತ್ಯಾದಿ ಜ್ವರಗಳು ಕಾಣಿಸಿಕೊಂಡು ಪ್ರಾಣ ಹಾನಿ ಕೂಡ ಉಂಟು ಮಾಡುವುದು. ಮಲೇರಿಯಾ ಜ್ವರವು ಅನಾಫಿಲಿಸ್ ಎನ್ನುವ ಸೊಳ್ಳೆಯಿಂದ ಹಬ್ಬುತ್ತದೆ. ಈ ಸೊಳ್ಳೆಯು ಪ್ಲಾಸ್ಮೋಡಿಯಂ ವಿಭಾಗಕ್ಕೆ ಸೇರಿದ್ದಾಗಿದೆ. ವಿಶ್ವದಾದ್ಯಂತ ಮಲೇರಿಯಾವನ್ನು ಮಾರಕ ಮತ್ತು ಪ್ರಾಣಹಾನಿ ಉಂಟು ಮಾಡಬಲ್ಲ ರೋಗ ಎಂದು ಪರಿಗಣಿಸಲಾಗಿದೆ. ಪ್ಲಾಸ್ಮೋಡಿಯಂ ಪರಾವಲಂಬಿಯು ರಕ್ತಕಣದ ಒಳಗೆ ಹೋಗುವುದು ಮತ್ತು ಇಲ್ಲಿಂದ ಅದು ಯಕೃತ್ ಗೆ ಪ್ರವೇಶ ಮಾಡುವುದು. ಅಲ್ಲಿ ಅದು ಬೆಳೆದು, ತನ್ನ ವಂಶಾಭಿವೃದ್ಧಿ ಮಾಡುವುದು.

ಎರಡು ವಾರಗಳ ಬಳಿಕ ಈ ಪರಾವಲಂಬಿಗಳು ದಾಳಿ ಮಾಡಲು ಆರಂಭವಾಗುವುದು ಮತ್ತು ಕೆಂಪು ರಕ್ತ ಕಣಗಳ ಮೇಲೆ ಸೋಂಕು ತಗುಲಿ ಅದು ದೇಹದ ಮೇಲೆ ಪರಿಣಾಮ ಬೀರುವುದು. ಮಲೇರಿಯಾ ತಡೆಯಲು ನಮ್ಮ ಸುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಮತ್ತು ಸೊಳ್ಳೆಗಳಿಗೆ ವಂಶಾಭಿವೃದ್ಧಿ ಮಾಡಲು ನೀರು ನಿಲ್ಲದಂತೆ ಮಾಡಬೇಕು. ಇದರ ಹೊರತಾಗಿ ಕೆಲವೊಂದು ಮನೆಮದ್ದುಗಳಿಂದಲೂ ಮಲೇರಿಯಾ ತಡೆಯಬಹುದಾಗಿದೆ. ಉಷ್ಣ ವಲಯ ಹಾಗೂ ಉಪ ಉಷ್ಣ ವಲಯದಲ್ಲಿ ಈ ರೋಗವು ಹೆಚ್ಚು ಕಾಣಿಸಿಕೊಳ್ಳುವುದು. ಮಲೇರಿಯಾ ಬಾಧಿತ ತಾಯಿಯಿಂದ ಗರ್ಭದಲ್ಲಿರುವ ಮಗುವಿಗೂ ಹರಡಬಹುದು. ರಕ್ತ ಪೂರೈಕೆ, ಬಳಸಿದ ಸಿರೀಂಜ್ ಮತ್ತು ಅಂಗಾಂಗ ಕಸಿಯಿಂದಾಗಿ ಆರೋಗ್ಯವಂತ ವ್ಯಕ್ತಿಗೆ ಇದು ಬರಬಹುದು.

Malaria

ಸೊಳ್ಳೆ ಕಡಿತವನ್ನು ತಡೆಯುವ ಮೂಲಕವಾಗಿ ಮಲೇರಿಯಾ ಬರುವುದನ್ನು ತಪ್ಪಿಸಬಹುದು. ಸೊಳ್ಳೆ ಕಡಿತ ಉಂಟಾಗದಂತೆ ಸೊಳ್ಳೆ ಪರದೆ ಮತ್ತು ಸೊಳ್ಳೆ ಓಡಿಸುವ ಮದ್ದುಗಳನ್ನು ಬಳಸಿಕೊಳ್ಳಬೇಕು. ಮಲೇರಿಯಾ ಯಾವ ಹಂತದಲ್ಲಿ ಇದೆ ಎನ್ನುವುದನ್ನು ನೋಡಿಕೊಂಡು ವೈದ್ಯರು ಇದಕ್ಕೆ ಚಿಕಿತ್ಸೆ ನೀಡುವರು ಮತ್ತು ಯಾವ ಪರಾವಲಂಬಿ ಸೋಂಕು ತಗುಲಿದೆ ಎಂದು ತಿಳಿಯುವರು. ಮಲೇರಿಯಾಗೆ ಕೆಲವೊಂದು ಮನೆಮದ್ದುಗಳು ಇಲ್ಲಿವೆ.

1.ದ್ರಾಕ್ಷಿ

ದ್ರಾಕ್ಷಿಯಲ್ಲಿ ಕ್ವಿನೈನ್ ಎನ್ನುವ ಅಂಶವಿದೆ ಮತ್ತು ಇದು ಮಲೇರಿಯಾ ಉಂಟು ಮಾಡುವ ಪರಾವಲಂಬಿಗಳನ್ನು ತಟಸ್ಥಗೊಳಿಸುವುದು. ಇದು ಪರಾವಲಂಬಿಗಳನ್ನು ನಾಶ ಮಾಡುವುದು ಮತ್ತು ಪ್ರತಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವುದು. ಮಲೇರಿಯಾ ಇರುವ ರೋಗಿಯು ದ್ರಾಕ್ಷಿ ತಿನ್ನಬೇಕು ಮತ್ತು ದ್ರಾಕ್ಷಿ ಜ್ಯೂಸ್ ಕುಡಿಯಬೇಕು. ದ್ರಾಕ್ಷಿಯ ತಿರುಳನ್ನು ಕುದಿಸುವ ಮೂಲಕವಾಗಿ ಕ್ವಿನೈನ್ ಅಂಶವನ್ನು ನೇರವಾಗಿ ಪಡೆಯಬಹುದು. ಇದರಲ್ಲಿ ತುಂಬಾ ಪ್ರಬಲ ನಾರಿನಾಂಶ, ವಿಟಮಿನ್ ಎ ಮತ್ತು ಸಿ ಜತೆಗೆ ಕಾರ್ಬೊಹೈಡ್ರೇಟ್ಸ್ ಗಳು ಸಮೃದ್ಧ ಪ್ರಮಾಣದಲ್ಲಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಕೂಡ ಇದೆ ಮತ್ತು ಇದು ಮಲೇರಿಯಾ ನಿವಾರಣೆಗೆ ತುಂಬಾ ಪ್ರಮುಖ ಮನೆಮದ್ದಾಗಿದೆ.

2.ದಾಲ್ಚಿನ್ನಿ

ದಾಲ್ಚಿನ್ನಿಯಲ್ಲಿ ಉನ್ನತ ಮಟ್ಟದ ಔಷಧೀಯ ಗುಣಗಳು ಇವೆ ಮತ್ತು ಇದರಲ್ಲಿ ಸಿನ್ನಮಾಲ್ಡಿಹೈಡ್ ಎನ್ನುವ ಅಂಶವಿದ್ದು, ಇದು ಉರಿಯೂತ ನಿವಾರಣೆ ಮಾಡುವುದು. ಇದು ಪರಾವಲಂಬಿ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಸೇವನೆ ಮಾಡಿದರೆ ಮಲೇರಿಯಾದಿಂದ ಕಾಣಿಸಿಕೊಳ್ಳುವ ದೇಹದ ನೋವನ್ನು ಕಡಿಮೆ ಮಾಡಬಹುದು. ಇದನ್ನು ನೀರಿನಲ್ಲಿ ಕುದಿಸಬೇಕು ಮತ್ತು ಇದನ್ನು ಸೋಸಿಕೊಂಡು ಬಳಿಕ ಜೇನುತುಪ್ಪ ಹಾಕಿ ಕುಡಿಯಬೇಕು. ಹಸಿವು ಕಡಿಮೆ ಆಗುವುದು, ಸೆಳೆತ, ವಾಕರಿಕೆ ಇತ್ಯಾದಿ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು. ಮಲೇರಿಯಾ ನಿವಾರಣೆ ಮಾಡಲು ಈ ಮನೆಮದ್ದು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

3.ತುಳಸಿ

ಮಲೇರಿಯಾದ ಕೆಲವು ಪ್ರಮುಖ ಲಕ್ಷಣಗಳಲ್ಲಿ ದೇಹ ಮತ್ತು ಗಂಟು ನೋವು ಪ್ರಮುಖವಾಗಿದೆ. ತುಳಸಿಯು ಉರಿಯೂತ ಮತ್ತು ಗಂಟು ನೋವನ್ನು ನಿವಾರಣೆ ಮಾಡುವುದು. ಮಲೇರಿಯಾದ ಲಕ್ಷಣಗಳನ್ನು ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ಇದನ್ನು ಹೆಚ್ಚಿನ ಆಯುರ್ವೇದದ ಔಷಧಿಯಲ್ಲಿ ಬಳಕೆ ಮಾಡಲಾಗುತ್ತದೆ ಮತ್ತು ಮಲೇರಿಯಾಗೂ ಇದು ಪರಿಣಾಮಕಾರಿ. ತುಳಸಿಯನ್ನು ಚಾಗೆ ಸೇರಿಸಿಕೊಂಡು ಕುಡಿಯಬಹುದು ಅಥವಾ ನೀರಿಗೆ ಹಾಕಿ ಕುದಿಸಿ, ಜೇನುತುಪ್ಪ ಹಾಕಿ ಕುಡಿಯಬೇಕು. ಇದು ಮಲೇರಿಯಾ ಇರುವ ವ್ಯಕ್ತಿಗೆ ತುಂಬಾ ಒಳ್ಳೆಯದು. ತುಳಸಿ ಮತ್ತು ಕರಿಮೆಣಸಿನ ಹುಡಿಯ ಪೇಸ್ಟ್ ಮಾಡಿಕೊಂಡು ಮಲೇರಿಯಾ ಜ್ವರ ಇರುವಾಗ ತಿನ್ನಬೇಕು.

4.ಫೀವರ್ ಬೀಜಗಳು

ಈ ಬೀಜಗಳಲ್ಲಿ ಅತ್ಯಾಧಿಕವಾದ ಔಷಧೀಯ ಗುಣಗಳು ಇವೆ. ಇದು ಮಲೇರಿಯಾ ಜ್ವರ ನಿವಾರಣೆ ಮಾಡುವುದು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚು ಮಾಡುವುದು. ಈ ಗಿಡಮೂಲಿಕೆಯು ಮಲೇರಿಯಾದ ಲಕ್ಷಣ ನಿವಾರಿಸುವುದು ಮತ್ತು ದೇಹದ ತಾಪಮಾನ ಕಡಿಮೆ ಮಾಡಿ, ಮಲೇರಿಯಾದಿಂದ ಬೇಗನೆ ಚೇತರಿಸಿಕೊಳ್ಳಲು ನೆರವಾಗುವುದು. ಫೀವರ್ ಬೀಜಗಳು ಮಲೇರಿಯಾದ ನಿವಾರಣೆಗೆ ಬಳಸುವ ಅತ್ಯುತ್ತಮ ಮನೆಮದ್ದು. ಮಲೇರಿಯಾ ನಿವಾರಣೆಗೆ ನೀವು ಇದನ್ನು ಬಳಸಿಕೊಳ್ಳಿ.

5.ಶುಂಠಿ

ಶುಂಠಿಯಲ್ಲಿ ಇರುವಂತಹ ಕೆಲವೊಂದು ಅಂಶಗಳಿಂದ ವಾಕರಿಕೆ, ಜ್ವರ, ಮೈಕೈ ನೋವು ಮತ್ತು ಹಸಿವನ್ನು ಹೆಚ್ಚಿಸುವ ಗುಣಗಳು ಇವೆ. ಶುಂಠಿಯು ಪ್ರತಿಯೊಂದು ಮನೆಮನೆಯಲ್ಲೂ ಲಭ್ಯವಿದೆ ಮತ್ತು ಇದನ್ನು ಮಲೇರಿಯಾ ವಿರುದ್ಧ ಹೋರಾಡಲು ಮನೆಮದ್ದಾಗಿ ಬಳಸಬಹುದು ಮತ್ತು ಇದರಿಂದ ಮಲೇರಿಯಾದ ಲಕ್ಷಣಗಳನ್ನು ನಿವಾರಿಸಬಹುದು. ಇದನ್ನು ನೀರಿನಲ್ಲಿ ಕುದಿಸಬೇಕು ಮತ್ತು ಸೇವಿಸಿದರೆ ಆಗ ತುಂಬಾ ವೇಗವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ. ನೈಸರ್ಗಿಕವಾಗಿ ಆಂಟಿಬಯೋಟಿಕ್ ಗುಣಗಳನ್ನು ಹೊಂದಿರುವ ಶುಂಠಿಯನ್ನು ಒಣ ದ್ರಾಕ್ಷಿಯ ಜತೆಗೆ ಸೇವನೆ ಮಾಡಿದರೆ ಮತ್ತಷ್ಟು ಒಳ್ಳೆಯದು. ಮಲೇರಿಯಾ ನಿವಾರಣೆಗೆ ಈ ಮನೆಮದ್ದನ್ನು ಬಳಸಿಕೊಳ್ಳಬಹುದು.

English summary

Most Effective Home Remedies To Cure Malaria

Malaria is a disease caused by the bite of an anopheles mosquito. The mosquito which causes malaria belongs to the plasmodium type. Malaria is considered to be one of the most deadly and life threatening diseases worldwide. The plasmodium parasite gets into the blood stream from where it travels to the liver where it matures and multiplies.
X
Desktop Bottom Promotion