For Quick Alerts
ALLOW NOTIFICATIONS  
For Daily Alerts

ಮಳೆಗಾಲ: ಈ ಸೀಸನ್‌ನಲ್ಲಿ ಕಾಡುವ ಅಲರ್ಜಿ ಸಮಸ್ಯೆ ತಡೆಗಟ್ಟಲು ಟಿಪ್ಸ್

|

ಧೋ ಅಂತ ಮಳೆ ಸುರಿಯುತ್ತಿದೆ... ಈ ಸಮಯದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ, ಈ ಸಮಯದಲ್ಲಿ ಬ್ಯಾಕ್ಟಿರಿಯಾ, ಫಂಗಸ್‌ಗಳ ಚಟುವಟಿಕೆಯೂ ಜೋರಾಗಿ ಇರುತ್ತದೆ ಅಲ್ಲದೆ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುವುದು. ಈ ಕಾರಣದಿಂದಾಗಿ ನಾವು ಬೇಗನೆ ಕಾಯಿಲೆ ಬೀಳುತ್ತೇವೆ.

ಮಳೆಗಾಲದಲ್ಲಿ ಮಕ್ಕಳನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳಬೇಕು, ಸ್ವಲ್ಪ ಹೆಚ್ಚು-ಕಮ್ಮಿಯಾದರೂ ಶೀತ-ಕೆಮ್ಮು ಸಮಸ್ಯೆ ಕಾಡುವುದು. ಇನ್ನೂ ದೊಡ್ಡವರಿಗೂ ಶೀತ-ಕೆಮ್ಮು, ಅಲರ್ಜಿ ಮುಂತಾದ ಸಮಸ್ಯೆ ಕಾಡುವುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಆರೋಗ್ಯ ಕಾಪಾಡಲು ಕೆಲವೊಂದು ಆರೋಗ್ಯ ಟಿಪ್ಸ್ ನೀಡಿದ್ದೇವೆ ನೋಡಿ:

1. ಮೊಸರು, ಮಜ್ಜಿಗೆ ಹಾಗೂ ತರಕಾರಿಗಳನ್ನು ಹೆಚ್ಚು ಸೇವಿಸಿ

1. ಮೊಸರು, ಮಜ್ಜಿಗೆ ಹಾಗೂ ತರಕಾರಿಗಳನ್ನು ಹೆಚ್ಚು ಸೇವಿಸಿ

ಮಳೆಗಾಲದಲ್ಲಿ ಹಸಿ ತರಕಾರಿ ಸೇವನೆ ಕಡಿಮೆ ಮಾಡಿ, ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಇಲ್ಲದಿದ್ದರೆ ವಾಂತಿ-ಬೇಧಿ ಸಮಸ್ಯೆ ಕಾಡಬಹುದು. ಬೇಯಿಸಿದ ತರಕಾರಿಯಲ್ಲಿ ನಾರಿನಂಶ, ಪೋಷಕಾಂಶ ಇರುತ್ತದೆ. ಅಲ್ಲದೆ ಮಳೆಗಾಲದಲ್ಲಿ ಮೊಸರು, ಮಜ್ಜಿಗೆ ಸೇವನೆ ಕೂಡ ಒಳ್ಳೆಯದು, ಇದು ಈ ಸೀಸನ್‌ನಲ್ಲಿ ಕಾಡುವ ಅನೇಕ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುವುದು.

2. ಕಹಿ ಆಹಾರ ಪದಾರ್ಥಗಳ ಸೇವನೆ

2. ಕಹಿ ಆಹಾರ ಪದಾರ್ಥಗಳ ಸೇವನೆ

ಸೋರೆಕಾಯಿ, ಹಾಗಲಕಾಯಿ, ಕಹಿ ಬೇವಿನ ಕಾಯಿ, ಹರ್ಬಲ್ ಟೀ ಇವೆಲ್ಲಾ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಮಳೆಗಾಲದಲ್ಲಿ ನಿಮಗೆ ತುಂಬಾ ಆರೋಗ್ಯ ಸಮಸ್ಯೆ ಕಾಡುವುದಾದರೆ ಈ ಆಹಾರಗಳನ್ನು ಹೆಚ್ಚೆಚ್ಚು ಸವಿಯಿರಿ, ಇದರಿಂದ ಆರೋಗ್ಯ ಸಮಸ್ಯೆನ ಕಡಿಮೆಯಾಗುವುದು.

3. ಮನೆಯಲ್ಲಿ ತಯಾರಿಸುವ ಜ್ಯೂಸ್‌

3. ಮನೆಯಲ್ಲಿ ತಯಾರಿಸುವ ಜ್ಯೂಸ್‌

ಮಳೆಗಾಲದಲ್ಲಿ ಜ್ಯೂಸ್‌ ಕುಡಿಯಬೇಕೆಂದು ಅನಿಸಿದಾಗ ಮನೆಯಲ್ಲಿಯೇ ಜ್ಯೂಸ್‌ ಮಾಡಿ ಕುಡಿಯಿರಿ. ಅದರಲ್ಲೂ ಸೇಬಿನ ಜ್ಯೂಸ್‌, ಫ್ಯಾಷನ್‌ ಫ್ರೂಟ್ ಜ್ಯೂಸ್ ಇವೆಲ್ಲಾ ಲಿವರ್‌ನಲ್ಲಿರುವ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಕಾರಿ ಅಲ್ಲದೆ ಚಯಪಚಯ ಕ್ರಿಯೆಗೆ ಸಹಾಯ ಮಾಡುವುದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.

4. ಕೀಟಗಳನ್ನು ದೂರವಿಡುವ ಮದ್ದು ಸಿಂಪಡಿಸಿ, ಕೀಟನಾಶಕಗಳನ್ನು ಬಳಸಿ

4. ಕೀಟಗಳನ್ನು ದೂರವಿಡುವ ಮದ್ದು ಸಿಂಪಡಿಸಿ, ಕೀಟನಾಶಕಗಳನ್ನು ಬಳಸಿ

ಮಳೆಗಾಲದಲ್ಲಿ ನೀರು ಹೊರಗಡೆ ಬಿಸಾಡಿದ ಡಬ್ಬದಲ್ಲಿ ಅಥವಾ ತೆಂಗಿನ ಚಿಪ್ಪಿನಲ್ಲಿ ಅಥವಾ ಇತರ ವೇಸ್ಟ್ ವಸ್ತುಗಳಲ್ಲಿ ನೀರು ನಿಲ್ಲುವುದು, ಇದರಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ಮರಿ ಮಾಡುವುದು, ಆದ್ದರಿಂದ ಮನೆಯ ಸುತ್ತ-ಮುತ್ತ ಇಂಥ ವಸ್ತುಗಳನ್ನು ಇಡಬೇಡಿ ಅಲ್ಲದೆ repellents ಅಥವಾ ಕೀಟ ನಾಶಕಗಳನ್ನು ಬಳಸಿ. ಸೊಳ್ಳೆ ಬಾರದಂತೆ ಸೊಳ್ಳೆ ಬತ್ತಿ ಅಥವಾ ರೆಪ್ಲೆಂಟ್ಸ್ ಬಳಸಿ. ಇನ್ನು ಕಾಲು ಹಾಗೂ ಕೈ ಮುಚ್ಚುವಂಥ ಉಡುಪು ಧರಿಸಿ, ಇದರಿಂದ ಸೊಳ್ಳೆ ಕಚ್ಚುವುದನ್ನು ತಡೆಗಟ್ಟಬಹುದು.

5. ದಿನದಲ್ಲಿ ಎರಡು ಬಾರಿ ಸ್ನಾನ ಮಾಡಿ

5. ದಿನದಲ್ಲಿ ಎರಡು ಬಾರಿ ಸ್ನಾನ ಮಾಡಿ

ಬೆಳಗ್ಗೆ ಸ್ನಾನ ಮಾಡುವ ಅಭ್ಯಾಸ ಇರುವವರು ಸಂಜೆ ಕೂಡ ಸ್ನಾನ ಮಾಡಿ. ಏಕೆಂದರೆ ಹೊರಗಡೆ ಹೋಗಿ ಮನೆಗೆ ಬಂದ ಮೇಲೆ ಬಿಸಿ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡಿ.

6. ಬೀದಿ ಬದಿಯ ಆಹಾರಗಳಿಂದ ದೂರವಿರಿ

6. ಬೀದಿ ಬದಿಯ ಆಹಾರಗಳಿಂದ ದೂರವಿರಿ

ಮಳೆಗಾಲದಲ್ಲಿ ಹೊರಗಡೆ ಬಿಸಿ-ಬಿಸಿಯಾದ ಬಜ್ಜಿ ಬೋಂಡಾ ಮುಂತಾದ ಸ್ನ್ಯಾಕ್ಸ್ ನೋಡುವಾಗ ಬಾಯಲ್ಲಿ ನೀರೂರುವುದು ಸಹಜ. ಆದರೆ ಮಳೆಗಾಲದಲ್ಲಿ ಬೀದಿ-ಬದಿಯ ಆಹಾರಗಳನ್ನು ದೂರವಿಟ್ಟಷ್ಟೂ ಆರೋಗ್ಯಕ್ಕೆ ಒಳ್ಳೆಯದು.

7. ತಂಪಾದ ಪಾನೀಯಗಳು, ತಣ್ಣೆಯ ವಸ್ತುಗಳನ್ನು ಸೇವಿಸಬೇಡಿ

7. ತಂಪಾದ ಪಾನೀಯಗಳು, ತಣ್ಣೆಯ ವಸ್ತುಗಳನ್ನು ಸೇವಿಸಬೇಡಿ

ಮಳೆಗಾಲದಲ್ಲಿ ಕೃತಕ ಸಿಹಿ ಇರುವ ತಂಪು ಪನೀಯಗಳನ್ನು ಶೇವಿಸಬೇಡಿ, ಫ್ರಿಡ್ಜ್‌ನಲ್ಲಿಟ್ಟ ಆಹಾರಗಳನ್ನು ಸೇವಿಸಬೇಡಿ ಅಲ್ಲದೆ ತಂಗಳು ಆಹಾರ ಸೇವನೆ ಕಡಿಮೆ ಮಾಡಿ.

ಬಿಸಿ-ಬಿಸಿಯಾದ ಆಹಾರ ಸೇವಿಸಿ, ಬಿಸಿ-ಬಿಸಿಯಾದ ನೀರು ಕುಡಿಯಿರಿ. ಮಳೆಗಾಲದಲ್ಲಿ ಒಂದು ಕಷಾಯ ಮಾಡಿ ಕುಡಿಯುವುದು ಒಳ್ಳೆಯದು.

English summary

Monsoon Health Tips To Help You Have Battle The Season Allergies

Monsoon health tips to help you have battle the season allergies, read on...
Story first published: Tuesday, July 13, 2021, 16:49 [IST]
X
Desktop Bottom Promotion