For Quick Alerts
ALLOW NOTIFICATIONS  
For Daily Alerts

ಸಂಧಿವಾತ ಇರುವವರಿಗೆ ಹೈಡ್ರೋಥೆರಪಿ ಪರಿಣಾಮಕಾರಿ, ಈ ಚಿಕಿತ್ಸೆ ಮಾಡುವುದು ಹೇಗೆ?

|

ಸಂಧಿನೋವು ಬಂದರೆ ಸುಲಭವಾಗಿ ಹೋಗುವುದಿಲ್ಲ, ಕೆಲವರಿಗೆ ಹಲವು ಚಿಕಿತ್ಸೆ ಪಡೆದರೂ ಏನೂ ಪ್ರಯೋಜನ ಕಂಡು ಬಂದಿರುವುದಿಲ್ಲ, ಸಂಧಿವಾತದ ಸಮಸ್ಯೆಗೆ ಹೈಡ್ರೋಥೆರಪಿ ಪ್ರಯೋಜನಕಾರಿಯಾಗಿದೆ. ಹೈಡ್ರೋಥೆರಪಿ ನೀರಿನ ಒಳಗಡೆ ಮಾಡುವ ಚಿಕಿತ್ಸೆಯಾಗಿದೆ. ಯಾರಿಗೆ ಲಘು ಪಾರ್ಶ್ವವಾಯು ಉಂಟಾಗಿರುತ್ತದೋ ಅವರಿಗೆ ಕೂಡ ಈ ಚಿಕಿತ್ಸೆ ಪ್ರಯೋಜನಕಾರಿಯಾಗಿದೆ.

ಹೈಡ್ರೋಥೆರಪಿಯಲ್ಲಿ ನೀರಿನ ಉಷ್ಣೆತ 32 °C ನಿಂದ 36 °C ಇರಬೇಕು. ಸಂಧಿವಾತ, ಕೈ ಕಾಲು ಸೆಳೆತ, ಬೆನ್ನು ನೋವು ಈ ರೀತಿಯ ಸಮಸ್ಯೆ ಇರುವವರಿಗೆ ಈ ಚಿಕಿತ್ಸೆ ತುಂಬಾನೇ ಪ್ಯೋಜನಕಾರಿಯಾಗಿದೆ.

ಈ ಹೈಡ್ರೋಥೆರಪಿ ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ:

ಹೈಡ್ರೋಥೆರಪಿ ಎಂದರೇನು?

ಹೈಡ್ರೋಥೆರಪಿ ಎಂದರೇನು?

ಹೈಡ್ರೋಥೆರಪಿ ಎಂದರೆ ಮನೆಯಲ್ಲಿ ಒಂದು ಹದ ಉಷ್ಣತೆಯಲ್ಲಿ ಬಿಸಿ ನೀರಿನಲ್ಲಿ ಮಾಡುವ ಸ್ನಾನ ಅಥವಾ ಸ್ವಿಮ್ಮಿಂಗ್‌ ಫೂಲ್‌ನಲ್ಲಿ 32 °C ನಿಂದ 36 °C ಉಷ್ಣಾಂಶದ ನೀರಿನಲ್ಲಿ ಮಾಡುವ ಸ್ನಾನ.

ಆಯುರ್ವೇದದಲ್ಲಿ ಹಿಂದಿನಿಂದಲೂ ಈ ಚಿಕಿತ್ಸಾ ವಿಧಾನ ಬಳಸಲಾಗುತ್ತಿದೆ. ಕಳೆದ 20 ವರ್ಷಗಳಿಂದ ವೈದ್ಯಕೀಯ ವಿಜ್ಞಾನದಲ್ಲಿ ಈ ಚಿಕಿತ್ಸೆ ಮಾಡಲಾಗುತ್ತಿದೆ. ಐಕೈ ನೋವು, ಸಂಧಿ ನೋವು ಇರುವವರಿಗೆ ಈ ಚಿಕಿತ್ಸೆ ತುಂಬಾನೇ ಪ್ರಯೋಜನಕಾರಿಯಾಗಿದೆ.

ಯಾರಿಗೆ ಹೈಡ್ರೋಥೆರಪಿ ಒಳ್ಳೆಯದು?

ಯಾರಿಗೆ ಹೈಡ್ರೋಥೆರಪಿ ಒಳ್ಳೆಯದು?

*ಮೈಕೈ ನೋವು

* ದೇಹ ತುಂಬಾ ಬಿಗಿಯಾಗಿರುವುದು

* ಕೈ-ಕಾಲುಗಳಲ್ಲಿ ಊತ

* ಸ್ನಾಯುಗಳಲ್ಲಿ ನೋವು

* ಮುಟ್ಟಿನ ಸಮಯದಲ್ಲಿ ನೋವು

* ಇನ್ನು ಸುಟ್ಟ ಗಾಯಗಳಾದರೂ ಹೈಡ್ರೋಥೆರಪಿ ನೀಡಲಾಗುವುದು

ಹೈಡ್ರೋಥೆರಪಿಯನ್ನು ಗರ್ಭಿಣಿಯರು ಮಾಡಿಸಬಹುದೇ?

ಹೈಡ್ರೋಥೆರಪಿಯನ್ನು ಗರ್ಭಿಣಿಯರು ಮಾಡಿಸಬಹುದೇ?

ಹೈಡ್ರೋಥೆರಪಿಯನ್ನು ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಮಾಡುವಾಗ ಜಾರಬಹುದು, ಅದರ ಹೊರೆತು ಪಡಿಸಿ ದೊಡ್ಡ ತೊಂದರೆಗಳಿಲ್ಲ. ಈ ಥೆರಪಿ ಬಳಿಕ ನೋವು ಹೆಚ್ಚಾದರೆ ಊತ ಅಥವಾ ಮೈಯಲ್ಲಿ ಗುಳ್ಳೆಗಳು ಕಂಡು ಬಂದರೆ ಕೂಡಲೇ ತಜ್ಞರಿಗೆ ತೋರಿಸಿ.

ಅತ್ಯಧಿಕ ರಕ್ತದೊತ್ತಡ ಇರುವ ಗರ್ಭಿಣಿಯರಿಗೆ ಹೈಡ್ರೋಥೆರಪಿ ಚಿಕಿತ್ಸೆ ಒಳ್ಳೆಯದು. ಕೆಲವರು ಹೆರಿಗೆಯಾಗಲು ಹೈಡ್ರೋಥೆರಪಿ ಚಿಕಿತ್ಸೆ ಬಯಸುತ್ತಾರೆ.

ಹೈಡ್ರೋಥೆರಪಿ ಪ್ರಯೋಜನಗಳು?

ಹೈಡ್ರೋಥೆರಪಿ ಪ್ರಯೋಜನಗಳು?

* ತುಂಬಾ ಸಮಯದಲ್ಲಿ ಕಾಡುತ್ತಿರುವ ಸಂಧಿ ನೋವು, ಮೈಕೈ ನೋವು ಕಡಿಮೆ ಮಾಡುವುದು

* ಬಿಗಿಯಾಗಿದ್ದ ಸ್ನಾಯುಗಳನ್ನು ಸಡಿಲವಾಗಿಸುತ್ತೆ

* ಜೀರ್ಣಕ್ರಿಯೆ ಉತ್ತಮ ಪಡಿಸುತ್ತದೆ

* ಹೈಡ್ರೋಥೆರಪಿ ತೂಕ ಇಳಿಕೆಗೂ ಸಹಕಾರಿ

* ಹೃದಯದ ಆರೋಗ್ಯ ಉತ್ತಮವಾಗಿಸುತ್ತೆ.

* ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿಸುತ್ತೆ

* ಸಂಧಿವಾತದ ಸಮಸ್ಯೆ ಇರುವವರಿಗೆ ಈ ಚಿಕಿತ್ಸೆ ತುಂಬಾನೇ ಪ್ರಯೋಜನಕಾರಿಯಾಗಿದೆ.

ಹೈಡ್ರೋಥೆರಪಿ ಚಿಕಿತ್ಸೆಯನ್ನು ತಜ್ಞರಿಂದ ಪಡೆಯಿರಿ.

ಹೈಡ್ರೋಥೆರಪಿಯಿಂದ ಅಡ್ಡಪರಿಣಾಮವಿದೆಯೇ?

ಹೈಡ್ರೋಥೆರಪಿಯಿಂದ ಸಾಮಾನ್ಯವಾಗಿ ಯಾವುದೇ ಅಡ್ಡಪರಿಣಾಮವಿಲ್ಲ. ಆದರೆ ನಿಮಗೆಥೆರಪಿ ಬಳಿ ನೋವು ಹೆಚ್ಚಾದರೆ, ಊತ ಕಂಡು ಬಂದರೆ, ಮೈಯಲ್ಲಿ ಗುಳ್ಳೆಗಳು ಕಂಡು ಬಂದರೆ ವೈದ್ಯರಿಗೆ ತೋರಿಸಿ.

ಹೈಡ್ರೋಥೆರಪಿ ಚಿಕಿತ್ಸೆಯಿಂದ ಆರೋಗ್ಯ ಸಮಸ್ಯೆ ದೂರಾಗಲು ಎಷ್ಟು ಸಮಯ ಬೇಕು?

ಇಂತಿಷ್ಟು ಸಮಯ ಎಂಬುವುದೇನೂ ಇಲ್ಲ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರು ಬೇಗನೆ ಗುಣಮುಖರಾದರೆ ಇನ್ನು ಕೆಲವರಿಗೆ ಸ್ವಲ್ಪ ಸಮಯ ಬೇಕಾಗುವುದು.

English summary

Hydrotherapy for Joint Pain: What Is It, and How Does It Help in Kannada

What is hydrotherapy, how it will help for arthritis, read on...
Story first published: Saturday, October 8, 2022, 11:23 [IST]
X
Desktop Bottom Promotion