For Quick Alerts
ALLOW NOTIFICATIONS  
For Daily Alerts

ಬಿಪಿ ನಿಯಂತ್ರಣದಲ್ಲಿಡಲು ಅಶ್ವಗಂಧ ಬಳಸುವುದು ಹೇಗೆ?

|

ಅಶ್ವಗಂಧ ಆಯುರ್ವೇದದಲ್ಲಿ ಚಿರಪರಿಚಿತ ಔಷಧೀಯ ಗಿಡಮೂಲಿಕೆ. ನಮ್ಮ ಹಿರಿಯರು ಇದನ್ನು ಹಿರೇಮದ್ದು ಅಂತಾನೂ ಕರೆಯುತ್ತಿದ್ದರು. ಯಾಕೆಂದರೆ ಇದರ ಔಷಧೀಯ ಗುಣ ಹಿರಿದಾಗಿದ್ದು, ಸರ್ವರೋಗಕ್ಕೂ ಪರಿಹಾರ ಅಶ್ವಗಂಧದಲ್ಲಿದೆ. ಅಶ್ವಗಂಧದ ಬೇರು, ತೊಗಟೆ, ಬೀಜ ಹಾಗೂ ಹಣ್ಣುಗಳನ್ನೂ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತೆ. ಇದು ಫಲವತ್ತತೆಯಿಂದ ಹಿಡಿದು ರಕ್ತದೊತ್ತಡದವರೆಗೂ ಹಲವಾರು ಸಮಸ್ಯೆಗಳನ್ನು ನಿವಾರಿಸುವ ಗುಣ ಹೊಂದಿದೆ. ಅಲ್ಲದೇ ಇದು ರಕ್ತದಲ್ಲಿ ಅಧಿಕಮಟ್ಟದ ಗ್ಲುಕೋಸ್‌ ಹೊಂದಿರುವವರಿಗೂ ಔಷಧವಾಗಿ ಬಳಕೆಯಾಗುತ್ತೆ. ಮಧುಮೇಹಕ್ಕೆ ಅಶ್ವಗಂಧ ಹೇಗೆ ಪ್ರಯೋಜನಕಾರಿ, ಸಕ್ಕರೆಯಮಟ್ಟವನ್ನು ನಿಯಂತ್ರಿಸುವಲ್ಲಿ ಇದು ಹೇಗೆ ಸಹಾಯ ಮಾಡುತ್ತೆ ಎನ್ನುವ ವಿವರಣೆ ಈ ಲೇಖನದಲ್ಲಿದೆ ನೋಡಿ.

ಮಧುಮೇಹವನ್ನು ನಿರ್ವಹಿಸುವಲ್ಲಿ ಅಶ್ವಗಂಧದ ಉಪಯೋಗ

ಮಧುಮೇಹವನ್ನು ನಿರ್ವಹಿಸುವಲ್ಲಿ ಅಶ್ವಗಂಧದ ಉಪಯೋಗ

ಅಶ್ವಗಂಧವು ಮಧುಮೇಹ ಅಥವಾ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ, ಆದರೆ ಪರಿಸ್ಥಿತಿ ಮತ್ತು ಅದರ ರೋಗಲಕ್ಷಣಗಳನ್ನು ನಿರ್ವಹಿಸಲು ಇದು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತೆ. ಅಧ್ಯಯನವೊಂದರ ಪ್ರಕಾರ ಅಶ್ವಗಂಧದ ಸರಿಯಾದ ಬಳಕೆಯು ಇನ್ಸುಲಿನ್ ಸ್ರವಿಸುವಿಕೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ ಮತ್ತು ಸ್ನಾಯು ಕೋಶಗಳಲ್ಲಿ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ ಎಂದು ತಜ್ಞರೂ ವಿವರಿಸಿದ್ದಾರೆ.

ಇನ್ನೊಂದು ಅಧ್ಯಯನದಲ್ಲಿ ವಿವರಿಸಿರುವಂತೆ, ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಅಶ್ವಗಂಧದ ಬೇರಿನ ಪುಡಿಯನ್ನು ನೀಡುವುದು ಅವರ ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿರ್ವಹಿಸಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒತ್ತಡ-ಸಂಬಂಧಿತ ಆರೋಗ್ಯ ಪರಿಸ್ಥಿತಿಗಳನ್ನು ಅನುಭವಿಸುತ್ತಿರುವ ವಯಸ್ಕರಲ್ಲಿ ಉಪವಾಸದಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸಲು ಮತ್ತು ನಿರ್ವಹಿಸಲು ಅಶ್ವಗಂಧವು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳೂ ಕಂಡುಕೊಂಡಿವೆ. ಅಶ್ವಗಂಧವು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಉತ್ತಮ ಔಷಧಿಯಾಗಿದ್ದು ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ವ್ಯಕ್ತಿಗೆ ಸಹಾಯ ಮಾಡುತ್ತದೆ.

ಅಶ್ವಗಂಧ ಸೇವಿಸುವ ವಿಧಾನ

ಅಶ್ವಗಂಧ ಸೇವಿಸುವ ವಿಧಾನ

ಅಶ್ವಗಂಧವನ್ನು ಸೇವಿಸುವ ಮುನ್ನ ಅದನ್ನು ಯಾವ ರೀತಿ ಸೇವಿಸಬೇಕು ಎನ್ನುವುದರ ಕುರಿತು ವೈದ್ಯರೊಂದಿಗೆ ಮಾತನಾಡುವುದನ್ನು ಮರೆಯದಿರಿ. ಅಶ್ವಗಂಧವನ್ನು ಸೇವಿಸುವ ವಿಧಾನದ ಕುರಿತು ಈ ಕೆಳಗೆ ವಿವರಿಸಲಾಗಿದೆ ನೋಡಿ.

ಹಾಲಿನೊಂದಿಗೆ ಅಶ್ವಗಂಧ

ಹಾಲಿನೊಂದಿಗೆ ಅಶ್ವಗಂಧ

ಬಾಣಲೆಯಲ್ಲಿ ಒಂದು ಲೋಟ ಹಾಲು ಮತ್ತು ಅರ್ಧ ಗ್ಲಾಸ್ ನೀರನ್ನು ತೆಗೆದುಕೊಂಡು ಅದನ್ನು ಕುದಿಸಿ. ಅದಕ್ಕೆ 1/2 ಚಮಚ ಅಶ್ವಗಂಧದ ಬೇರಿನ ಪುಡಿಯನ್ನು ಸೇರಿಸಿ ಮತ್ತು ಸ್ವಲ್ಪ ಸಮಯ ಕುದಿಸಿ.

ಇದಕ್ಕೆ ಸ್ವಲ್ಪ ಪುಡಿಮಾಡಿದ ಬಾದಾಮಿ ಮತ್ತು ವಾಲ್ನಟ್ ಸೇರಿಸಿ. ನಿಮ್ಮ ಅದ್ಭುತ ಪಾನೀಯವು ಕುಡಿಯಲು ಸಿದ್ಧ.

ಅಶ್ವಗಂಧ ಟೀ

ಅಶ್ವಗಂಧ ಟೀ

ಅಶ್ವಗಂಧ ಮೂಲಿಕೆಯನ್ನು ಚಹಾದ ರೂಪದಲ್ಲಿ ಬೆಳಿಗ್ಗೆ ಕುಡಿಯುವುದು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲು ಉತ್ತಮವಾಗಿದೆ. ನೀವು ಚೆನ್ನಾಗಿ ನಿದ್ದೆ ಮಾಡಲು ಇದನ್ನು ನಿಮ್ಮ ಬೆಡ್‌ಟೈಮ್‌ ಟೀ ಅಥವಾ ಹಾಲಿಗೆ ಸೇರಿಸಬಹುದು.

ಎನರ್ಜಿ ಬೂಸ್ಟರ್ ಮಿಕ್ಸ್

ಎನರ್ಜಿ ಬೂಸ್ಟರ್ ಮಿಕ್ಸ್

ಅಶ್ವಗಂಧ, ಅರಿಶಿನ, ಗುಡುಚಿ, ನೆಲ್ಲಿಕಾಯಿ ಚೂರ್ಣ ಮತ್ತು ಹಿಮಾಲಯನ್ ರೋಸ್‌ ಸಾಲ್ಟ್‌ ಮಿಶ್ರಣ ಮಾಡಿ. ಒಂದು ಪ್ಯಾನ್‌ನಲ್ಲಿ ಒಂದು ಲೋಟದಷ್ಟು ನೀರು ಸೇರಿಸಿ. ನೀರನ್ನು ಕುದಿಸಿ ಮತ್ತು ಅದಕ್ಕೆ ಮಿಶ್ರಣವನ್ನು ಸೇರಿಸಿ. ಅದನ್ನು ಕುದಿಯಲು ಬಿಡಿ ಮತ್ತು ನಂತರ ಮಿಶ್ರಣವನ್ನು ಸೋಸಿ ಕುಡಿಯಿರಿ. ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲು ಇದನ್ನು ಕುಡಿಯಿರಿ.

ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿರುವುದರ ಲಕ್ಷಣಗಳು

ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿರುವುದರ ಲಕ್ಷಣಗಳು

ಮಧುಮೇಹ ಅಥವಾ ಅಧಿಕ ರಕ್ತದ ಸಕ್ಕರೆಯ ಮಟ್ಟವು ಆರೋಗ್ಯ ಸ್ಥಿತಿಯಾಗಿದ್ದು ಅದನ್ನು ಎಂದಿಗೂ ಗುಣಪಡಿಸಲಾಗುವುದಿಲ್ಲ, ಆದರೆ ಕೆಲವು ಜೀವನಶೈಲಿಯ ಬದಲಾವಣೆಗಳೊಂದಿಗೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ನಿಮಗೆ ಮಧುಮೇಹವಿದೆಯೇ ಎನ್ನುವುದನ್ನು ಈ ಲಕ್ಷಣಗಳಿಂದಲೂ ತಿಳಿದುಕೊಳ್ಳಬಹುದು ನೋಡಿ.

*ಹೆಚ್ಚಿದ ಬಾಯಾರಿಕೆ

* ಒಣ ಬಾಯಿ

* ಆಗಾಗ್ಗೆ ಮೂತ್ರ ವಿಸರ್ಜನೆ

* ವಿಪರೀತ ಆಯಾಸ ಮತ್ತು ಸುಸ್ತು

* ದೃಷ್ಟಿ ನಷ್ಟ ಅಥವಾ ಮಸುಕಾದ ದೃಷ್ಟಿ

* ವಿವರಿಸಲಾಗದ ತೂಕ ನಷ್ಟ

*ಮರುಕಳಿಸುವ ಸೋಂಕುಗಳು

ಅಶ್ವಗಂಧದ ಆರೋಗ್ಯ ಪ್ರಯೋಜನಗಳು

ಅಶ್ವಗಂಧವು ಅಧಿಕ ರಕ್ತದ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವಲ್ಲಿ ಮಾತ್ರವಲ್ಲ ಹಲವಾರು ಇತರ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲೂ ಉತ್ತಮ ಔಷಧವಾಗಿದೆ.

* ಅಶ್ವಗಂಧದ ಸೇವನೆ ಮಧುಮೇಹವನ್ನು ನಿಯಂತ್ರಿಸುವುದು.

* ಅಶ್ವಗಂಧವು ಉರಿಯೂತ ವಿರೋಧಿಯಾಗಿದೆ.

* ಕ್ಯಾನ್ಸರ್ ವಿರೋಧಿ

* ಬ್ಯಾಕ್ಟೀರಿಯಾ ವಿರೋಧಿ

* ಅಶ್ವಗಂಧದ ಸೇವನೆಯು ಒತ್ತಡ ಮತ್ತು ಆತಂಕವನ್ನು ನಿರ್ವಹಿಸುವುದು

* ಅಶ್ವಗಂಧ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ

* ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯನ್ನು ಸುಧಾರಿಸುತ್ತದೆ

* ಫಲವತ್ತತೆಯನ್ನು ಹೆಚ್ಚಿಸುತ್ತದೆ

*ಅಶ್ವಗಂಧದ ಸೇವನೆಯು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ

* ನೆನಪಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ

* ಅಶ್ವಗಂಧದ ನಿಯಮಿತ ಸೇವನೆಯು ಹೃದಯದ ಆರೋಗ್ಯವನ್ನು ಉತ್ತಮಗೊಳಿಸುವುದು.

English summary

How To Use Ashwaganda to Reduce blood sugar levels in kannada

Ayurveda Tips: Here how to use ashwaganda to reduce blood sugar read on...
Story first published: Saturday, October 22, 2022, 15:47 [IST]
X
Desktop Bottom Promotion