For Quick Alerts
ALLOW NOTIFICATIONS  
For Daily Alerts

ಟಿವಿ ವೀಕ್ಷಿಸುವಾಗ ಹೀಗೆ ಮಾಡಿದರೆ ಕಣ್ಣಿಗೆ ಹಾನಿಯಾಗುವುದಿಲ್ಲ

|

ವ್ಯತಿರಿಕ್ತವಾಗಿತ್ತು. ಟಿವಿ ಇರುವ ಮನೆಗಳ ಸಂಖ್ಯೆಯು ತುಂಬಾ ಕಡಿಮೆ ಇತ್ತು. ಇಂದು ಟಿವಿ ಎಷ್ಟು ಮುಂದುವರಿದಿದೆ ಎಂದರೆ ಅದರಲ್ಲಿ ಪ್ರತಿಯೊಂದು ಕಾರ್ಯಕ್ರಮ ಹಾಗೂ ಜಗತ್ತಿನ ಆಗುಹೋಗುಗಳನ್ನು ತಿಳಿಯಬಹುದಾಗಿದೆ. ಟಿವಿ ಬಗ್ಗೆ ಇಂದು ಯಾಕೆ ಮಾತನಾಡುತ್ತಿದ್ದಾರೆ ಎಂದು ನಿಮಗೆ ಅನಿಸಬಹುದು. ಯಾಕೆಂದರೆ ಇಂದು ವಿಶ್ವ ಟಿವಿ ದಿನ.

TV
ಹೌದು, 1996ರಲ್ಲಿ ಮೊದಲ ಸಲ ನವಂಬರ್ 21 ಮತ್ತು 22ರಂದು ನಡೆದ ವಿಶ್ವದ ಮೊದಲ ಟಿವಿ ಫಾರಂನಲ್ಲಿ ವಿಶ್ವ ಟಿವಿ ದಿನವನ್ನು ಆಚರಿಸಲು ವಿಶ್ವಸಂಸ್ಥೆಯಲ್ಲಿ ನಿರ್ಧರಿಸಲಾಯಿತು. ಇದರಿಂದಾಗಿ ಮಾಧ್ಯಮಗಳಿಗೆ ಒಂದು ವೇದಿಕೆ ಮತ್ತು ಮಾಹಿತಿಯನ್ನು ಟಿವಿಯ ಮೂಲಕ ಹರಡುವಂತಹ ಪ್ರಾಮುಖ್ಯತೆಯ ಬಗ್ಗೆ ತಿಳಿದುಬಂತು. ವಿಶ್ವದಲ್ಲಿ ಬದಲಾವಣೆ ಉಂಟುಮಾಡುವಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಕೂಡ ಇಲ್ಲಿ ಚರ್ಚೆ ಮಾಡಲಾಯಿತು. ವಿಶ್ವ ಟಿವಿ ದಿನದಂದು ನಾವು ಟಿವಿ ನೋಡುವುದರಿಂದ ಕಣ್ಣಿಗೆ ಆಗುವಂತಹ ಆಯಾಸವನ್ನು ಹೇಗೆ ಕಡಿಮೆ ಮಾಡಬಹುದು ಎಂದು ತಿಳಿಯುವ.

ದಿನವಿಡೀ ನೀವು ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಿದ ಬಳಿಕ ಮನೆಗೆ ಹೋಗಿ ಪುನಃ ಟಿವಿ ನೋಡಲು ಆರಂಭಿಸಿದರೆ ಆಗ ಖಂಡಿತವಾಗಿಯೂ ಕಣ್ಣಿಗೆ ಆಯಾಸವಾಗುವುದು. ಟಿವಿ ನೋಡುವ ವೇಳೆ ಕಣ್ಣಿಗೆ ಆಗುವ ಹಾನಿಯನ್ನು ನಿವಾರಿಸಲು ಇಲ್ಲಿ ಕೆಲವು ಸರಳ ಸಲಹೆಗಳು ಇವೆ.

ಟಿವಿ ನೋಡುವ ವೇಳೆ ಲೈಟ್ ಗಳು ಉರಿಯುತ್ತಿರಲಿ

ಟಿವಿ ನೋಡುವ ವೇಳೆ ಲೈಟ್ ಗಳು ಉರಿಯುತ್ತಿರಲಿ

ನಾವು ಯಾವಾಗಲೂ ಹಾಸಿಗೆ ಮೇಲೆ ಬಿದ್ದುಕೊಂಡು ಲೈಟ್ ಆಫ್ ಮಾಡಿಕೊಂಡು ಟಿವಿ ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಇದು ನಿಜವಾಗಿಯೂ ಕಣ್ಣಿಗೆ ತುಂಬಾ ಹಾನಿ ಉಂಟು ಮಾಡುವುದು. ಇದರಿಂದ ನೀವು ಟಿವಿ ನೋಡುವ ವೇಳೆ ಲೈಟ್ ಉರಿಸಿ. ಇದರಿಂದ ಕಣ್ಣುಗಳಿಗೆ ಹಾನಿ ಆಗದು.

ವಿರಾಮ ತೆಗೆದುಕೊಳ್ಳಿ

ವಿರಾಮ ತೆಗೆದುಕೊಳ್ಳಿ

ನೀವು ನಿರಂತರವಾಗಿ ಟಿವಿ ನೋಡಿದರೆ ಅದರಿಂದ ಖಂಡಿತವಾಗಿಯೂ ಕಣ್ಣುಗಳಿಗೆ ಹಾನಿ ಆಗುವುದು. ಇದರ ಬದಲಿಗೆ ನೀವು ಗಂಟೆಗೊಮ್ಮೆ ವಿರಾಮ ತೆಗೆದುಕೊಂಡರೆ ಆಗ ತುಂಬಾ ಒಳ್ಳೆಯದು. ಜಾಹೀರಾತು ಬಂದ ವೇಳೆ ನೀವು ಎದ್ದು ಬೇರೆ ಕಡೆ ಸ್ವಲ್ಪ ಸುತ್ತಾಡಿ ಬನ್ನಿ. ಇದರಿಂದ ಕಣ್ಣುಗಳಿಗೆ ಆರಾಮ ಸಿಗುವುದು. ಅದೇ ರೀತಿಯಾಗಿ ಬೆನ್ನು ನೋವಿನ ಸಮಸ್ಯೆಯನ್ನು ಇದರಿಂದ ತಡೆಯಬಹುದು. ನಡೆಯುವಾಗ ತುಂಬಾ ದೂರದಲ್ಲಿ ಇರುವಂತಹ ವಸ್ತುಗಳ ಕಡೆ ಹೆಚ್ಚು ದೃಷ್ಟಿ ಹರಿಸಿ.

ಪ್ರಜ್ವಲಿಸುವ ಬೆಳಕನ್ನು ಕಡಿಮೆ ಮಾಡಿ

ಪ್ರಜ್ವಲಿಸುವ ಬೆಳಕನ್ನು ಕಡಿಮೆ ಮಾಡಿ

ಟಿವಿ ಪರದೆ ಮೇಲೆ ಯಾವುದೇ ಪ್ರಜ್ವಲಿಸುವ ಬೆಳಕು ಬೀಳದಂತೆ ನೋಡಿಕೊಳ್ಳಿ. ಇದಕ್ಕಾಗಿ ನೀವು ಬೆಳಕಿನಿಂದ ಟಿವಿಯನ್ನು 90 ಡಿಗ್ರಿಯಲ್ಲಿ ಇಡಬೇಕು. ಆಂಟಿ ಗ್ಲೇರ್ ಗ್ಲಾಸ್ ಗಳನ್ನು ಸಹ ನೀವು ಹಾಕಿಕೊಳ್ಳಬಹುದು.

ಸರಿಯಾದ ಅಂತರ ಕಾಯ್ದುಕೊಳ್ಳಿ

ಸರಿಯಾದ ಅಂತರ ಕಾಯ್ದುಕೊಳ್ಳಿ

ಟಿವಿಯಿಂದ ಸುಮಾರು 8-10 ಅಡಿ ದೂರದಲ್ಲಿ ಕುಳಿತುಕೊಳ್ಳಿ. ಇದು ನಿಮ್ಮ ಕಣ್ಣಿನ ನೇರಕ್ಕೆ ಅಥವಾ ಅದಕ್ಕಿಂತ ಕೆಳಗೆ ಇರಬೇಕು. ಟಿವಿ ಪರದೆಯನ್ನು ನೀವು ಮೇಲಕ್ಕೆ ಕಣ್ಣು ಹಾಯಿಸಿ ನೋಡಬಾರದು.

ಆಯಾಸ ನಿವಾರಿಸಿ

ಆಯಾಸ ನಿವಾರಿಸಿ

ಬಳಿಕ ನಿಮ್ಮ ಕಣ್ಣುಗಳಿಗೆ ತುಂಬಾ ಆಯಾಸವಾಗಿದ್ದರೆ ಆಗ ನೀವು ಕೆಲವೊಂದು ಕ್ರಮಗಳಿಂದ ಅದನ್ನು ಸರಿಪಡಿಸಬಹುದಾಗಿದೆ. ಕಣ್ಣುಗಳಿಗೆ ನಯವಾಗಿ ಮಸಾಜ್ ಮಾಡಿ. ಅದಕ್ಕೆ ಬಿಸಿ ಶಾಖ ನೀಡಿ ಅಥವಾ ಏನಾದರೂ ಸರಳ ಕಣ್ಣಿನ ವ್ಯಾಯಾಮ ಮಾಡಿ. ಪ್ರತಿನಿತ್ಯ 8 ಗಂಟೆಗಳ ಕಾಲ ನಿದ್ರೆ ಮಾಡಿದರೆ ಆಗ ಖಂಡಿತವಾಗಿಯೂ ಕಣ್ಣುಗಳಿಗೆ ವಿಶ್ರಾಂತಿ ಸಿಗುವುದು.

ಟಿವಿ ಅಪ್ ಗ್ರೇಡ್ ಮಾಡಿ

ಟಿವಿ ಅಪ್ ಗ್ರೇಡ್ ಮಾಡಿ

ಹೊಸ ಟಿವಿ ಬೇಕೆಂದು ನಿಮ್ಮ ಸಂಗಾತಿಗೆ ಮನವಿ ಮಾಡುತ್ತಿರಾದರೆ, ಆಗ ಇದಕ್ಕಿಂತ ಒಳ್ಳೆಯ ಅವಕಾಶವು ಮತ್ತೊಂದು ಇಲ್ಲ. ನೀವು ತುಂಬಾ ಹಳೆ ಟಿವಿ ಈಗಲೂ ಬಳಸುತ್ತಿದ್ದರೆ ಅದನ್ನು ಮಾರಿ ಬೇರೆ ಫ್ಲ್ಯಾಟ್ ಟಿವಿ ಖರೀದಿ ಮಾಡಿ. ಇದರಿಂದ ಬೆಳಕಿನ ಪ್ರಜ್ಞಲನ ಕಡಿಮೆ ಆಗುವುದು. ಟಿವಿ ಪರದೆ ದೊಡ್ಡದಾಗಿದ್ದರೆ ಆಗ ಅದರಿಂದ ಕಣ್ಣಿಗೆ ಒತ್ತಡವು ಕಡಿಮೆ ಬೀಳುವುದು.

English summary

How To Prevent Eye Strain While Watching TV

If you spend your whole day using the computer and then go home and watch TV, your eyes will definitely start to feel the strain. Here are some simple tips to prevent eye strain while you watch TV.
X
Desktop Bottom Promotion