For Quick Alerts
ALLOW NOTIFICATIONS  
For Daily Alerts

ಕೆಟ್ಟ ಅಭ್ಯಾಸಗಳನ್ನು ಬಿಡಲು ಮನಃಶಾಸ್ತ್ರದ ಸಲಹೆಗಳು

|

ಒಂದು ಅಭ್ಯಾಸವನ್ನು ಅಥವಾ ಕೆಟ್ಟ ಹವ್ಯಾಸವನ್ನು ಆರಂಭಿಸುವುದು ಸುಲಭ ಆದರೆ ಅದನ್ನು ಬಿಡುವುದು ಅಥವಾ ಅದರಿಂದ ಹೊರಬರುವುದು ಬಹಳ ಕಷ್ಟ. ಎಷ್ಟೋ ಜನರಿಗೆ ಅದು ತಮ್ಮ ದೇಹಕ್ಕೆ ಹಾನಿಕಾರಕ ಎಂಬುದು ಅರಿವಿದ್ದರೂ ಕೂಡ ಆ ಅಭ್ಯಾಸವನ್ನು ಬಿಡಲು ಸಾಧ್ಯವಾಗುವುದೇ ಇಲ್ಲ!.

ಸಮಯಕ್ಕೆ ಸರಿಯಾಗಿ ವ್ಯಾಯಾಮ ಮಾಡುವುದು, ಆರೋಗ್ಯಕರವಾಗಿ ತಿನ್ನುವುದು ಇನ್ನೂ ಮುಂತಾದ ಉತ್ತಮ ಅಭ್ಯಾಸಗಳನ್ನು ಬೆಳೆಸುವಲ್ಲಿ ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ. ನಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅವು ಮುಖ್ಯವೆಂದು ನಮಗೆ ತಿಳಿದಿದೆ ಹಾಗಾಗಿ ಈ ಉತ್ತಮ ಅಭ್ಯಾಸಗಳನ್ನು ಅಥವಾ ಹವ್ಯಾಸಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ದಿನವೂ ಶ್ರಮಿಸುತ್ತೇವೆ. ಆದರೆ ಸತ್ಯವನ್ನು ಹೇಳುವುದಾದರೆ, ಕೆಟ್ಟ ಅಭ್ಯಾಸಗಳು ಏನಾದರೂ ಇದ್ದರೆ, ಅದು ನಮ್ಮನ್ನು ಉಪಪ್ರಜ್ಞೆಯಿಂದ ಮತ್ತೆ ಮತ್ತೆ ಪುನರಾವರ್ತಿಸುವಂತೆ ಮಾಡುತ್ತದೆ.

ಅದು ಸಿಗರೇಟು ಸೇದುವುದಿರಲಿ ಅಥವಾ ಕ್ಯಾಲೋರಿ ತುಂಬಿದ ಸಿಹಿತಿಂಡಿಗಳನ್ನು ಅತಿಯಾಗಿ ತಿನ್ನುವುದಿರಲಿ, ನಾವೆಲ್ಲರೂ ಪ್ರತಿದಿನವೂ ಈ ಅಭ್ಯಾಸದ ಪ್ರಚೋದನೆಯನ್ನು ನಿಲ್ಲಿಸಲು ಮತ್ತು ನಮ್ಮ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲು ಸಾಕಷ್ಟು ಪ್ರಯತ್ನಿಸುತ್ತೇವೆ ಆದರೆ ನಮ್ಮ ಈ ಗುರಿಯನ್ನು ಸಾಧಿಸುವಲ್ಲಿ ಮತ್ತೆ ಮತ್ತೆ ವಿಫಲರಾಗುತ್ತೇವೆ. ಈ ಸಮಸ್ಯೆಯನ್ನು ನಿವಾರಿಸಲು ನಿಮಗೆ ಸಹಾಯ ಮಾಡಲು, ಹೆಸರಾಂತ ಮನೋವೈದ್ಯ ಜಡ್ಸನ್ ಬ್ರೂಯರ್ ಅವರ್ ಹೇಳಿದ ಕೆಲವು ಉಪಾಯಗಳಿವೆ. ಅವು ನಿಮ್ಮ ಕೆಟ್ಟ ಅಭ್ಯಾಸಗಳಿಂದ ಹೊರಬರಲು ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತವೆ.

ನಾವು ಕೆಟ್ಟ ಅಭ್ಯಾಸಗಳನ್ನು ಹೇಗೆ ಬೆಳೆಸಿಕೊಳ್ಳುತ್ತೇವೆ

ನಾವು ಕೆಟ್ಟ ಅಭ್ಯಾಸಗಳನ್ನು ಹೇಗೆ ಬೆಳೆಸಿಕೊಳ್ಳುತ್ತೇವೆ

ಡಾ. ಬ್ರೂಯರ್ ಅವರ ಒಂದು ಟೆಡ್ ಟಾಕ್ ನಲ್ಲಿ ನಿಮ್ಮ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲು ಮತ್ತು ಕೆಲವು ಹೊಸ ವಿಷಯಗಳಿಗೆ ಜಾಗವನ್ನು ಕಲ್ಪಿಸಲು ನೀವು ಸಾವಧಾನತೆ ಮತ್ತು ಕುತೂಹಲವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. ನಮ್ಮಲ್ಲಿ ಹೆಚ್ಚಿನವರು ಪ್ರಸ್ತುತದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಲು ಕಷ್ಟವಾಗಲು ಕಾರಣವೇನೆಂದರೆ, ಪ್ರತಿಫಲ ಆಧಾರಿತ ಕಲಿಕೆಯ ಪ್ರಕ್ರಿಯೆ, ಇದನ್ನು ಸಕಾರಾತ್ಮಕ ಮತ್ತು ಋಣಾತ್ಮಕ ಬಲವರ್ಧನೆ ಎಂದು ಕರೆಯಲಾಗುತ್ತದೆ.

"ನಾವು ವಿಜ್ಞಾನದಲ್ಲಿ ಪ್ರಸ್ತುತ ತಿಳಿದಿರುವ ಅತ್ಯಂತ ವಿಕಸನೀಯವಾಗಿ ಸಂರಕ್ಷಿಸಲ್ಪಟ್ಟ ಕಲಿಕೆಯ ಪ್ರಕ್ರಿಯೆಗಳಲ್ಲಿ ಒಂದರ ವಿರುದ್ಧ ಹೋರಾಡುತ್ತಿದ್ದೇವೆ, ಅದು ಮನುಷ್ಯನಿಗೆ ತಿಳಿದಿರುವ ಅತ್ಯಂತ ಮೂಲಭೂತ ನರಮಂಡಲಕ್ಕೆ ಸಂಬಂಧಿಸಿದ್ದಾಗಿದೆ" ಎಂದು ಅವರು ಪ್ರತಿಪಾದಿಸಿದರು.

ಯಾವುದೇ ಚಟುವಟಿಕೆಗಾಗಿ, ನಮ್ಮ ಮೆದುಳು ಅದನ್ನು "ಪ್ರಚೋದಕ, ನಡವಳಿಕೆ, ಪ್ರತಿಫಲ" ಎಂದು ಗ್ರಹಿಸುತ್ತದೆ. ಒಂದೇ ಚಟುವಟಿಕೆಯನ್ನು ನಿರ್ವಹಿಸಲು ಕೂಡಲೇ ನಾವು ಅನೇಕ ಪ್ರಚೋದಕಗಳನ್ನು ಅಭಿವೃದ್ಧಿಪಡಿಸುಕೊಳ್ಳುತ್ತಾ ಹೋಗುತ್ತೇವೆ. ನಾವು ಅದನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತೇವೆ ಮತ್ತು ಅದು ಅಂತಿಮವಾಗಿ ನಮಗೆ ಅಭ್ಯಾಸವಾಗಿಬಿಡುತ್ತದೆ.

ಪರಿಹಾರ

ಪರಿಹಾರ

ವೈದ್ಯರ ಪ್ರಕಾರ, ನಮ್ಮ ಲಾಭಕ್ಕಾಗಿ ಮತ್ತು ಕೆಟ್ಟ ಅಭ್ಯಾಸಗಳನ್ನು ಬಿಡಲು ಪ್ರಚೋದಕ, ನಡವಳಿಕೆ ಮತ್ತು ಪ್ರತಿಫಲದ ಪ್ರಕ್ರಿಯೆಯನ್ನೇ ನಾವು ಬಳಸಬೇಕು. "ಇದರ ಬದಲಾಗಿ ನಾವು, ನಮ್ಮ ಕ್ಷಣಿಕ ಅನುಭವದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಿಜವಾಗಿಯೂ ಕುತೂಹಲವಿದ್ದಿದ್ದರೆ?" ಹೀಗೆ ಅವರು ಪ್ರಶ್ನಿಸುತ್ತಾರೆ.

ಒಂದು ಪ್ರಯೋಗದಲ್ಲಿ ಅವರು ಧೂಮಪಾನವನ್ನು ನಿಲ್ಲಿಸುವಂತೆ ಹೇಳುವ ಬದಲು, ಅವರು ಒಬ್ಬ ಮಹಿಳೆಯನ್ನು ಧೂಮಪಾನ ಮಾಡಲು ಹೇಳಿದರು, ಆದರೆ ಅವಳು ಅದನ್ನು ಮಾಡುವಾಗ ಅವಳ ದೇಹದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಕುತೂಹಲದಿಂದ ಗಮನಿಸುವಂತೆ ಹೇಳಿದರು. ಇದರ ನಂತರ, ಮಹಿಳೆಯು, "ಗಬ್ಬು ಚೀಸ್ನಂತೆ ವಾಸನೆ ಮತ್ತು ರಾಸಾಯನಿಕಗಳಂತಹ ರುಚಿ, ಯಾಕ್!" ಎಂದು ಪ್ರತಿಕ್ರಿಯಿಸಿದಳು!

ಡಾ. ಬ್ರೂಯರ್ ಮಹಿಳೆಯ ಪ್ರತಿಕ್ರಿಯೆಯನ್ನು ವಿವರಿಸಿದರು ಮತ್ತು ಅವರು ಜ್ಞಾನದಿಂದ ಬುದ್ಧಿವಂತಿಕೆಗೆ ಸ್ಥಳಾಂತರಗೊಂಡ ಕಾರಣ ಇದು ಸಂಭವಿಸಿದೆ ಎಂದು ಹೇಳಿದರು. "ಧೂಮಪಾನವು ಅವಳ ಎಲುಬುಗಳಿಗೆ ಕೆಟ್ಟದು ಎಂದು ಅವಳು ಅರಿತಳು ಹಾಗಾಗಿ ಧೂಮಪಾನವನ್ನು ಬಿಟ್ಟಳು. ಹೆಚ್ಚುಕಮ್ಮಿ ಅವಳಿಗೆ ಧೂಮಪಾನದ ಕಾಗುಣಿತವೇ ಮರೆತುಹೋಯಿತು! ಅವಳ ನಡವಳಿಕೆಯಿಂದ ಅವಳು ಭ್ರಮನಿರಸನಗೊಳ್ಳಲು ಪ್ರಾರಂಭಿಸಿದಳು" ಎಂದು ಅವರು ತಮ್ಮ ಪ್ರಯೋಗದ ಯಶಸ್ಸಿನ ಬಗ್ಗೆ ಟೆಡ್ ಮಾತುಕತೆಯಲ್ಲಿ ವಿವರಿಸಿದ್ದಾರೆ.

ಸಾವಧಾನತೆ / ಗಮನಿಸುವಿಕೆ ಎಂದರೇನು?

ಸಾವಧಾನತೆ / ಗಮನಿಸುವಿಕೆ ಎಂದರೇನು?

ಸಾಮಧಾನತೆ ಎಂದರೆ ನಮ್ಮ ನಡವಳಿಕೆಗಳ ಫಲಿತಾಂಶ ಮತ್ತು ಅದನ್ನು ಮತ್ತೆ ಮತ್ತೆ ಪುನರಾವರ್ತಿಸುವ ಫಲಿತಾಂಶವನ್ನು ಅರ್ಥಮಾಡಿಕೊಳ್ಳುವುದು. ಈ ಬಗ್ಗೆ ನಮಗೆ ಅರಿವಾದಾಗ, ನಾವು ನಮ್ಮಷ್ಟಕ್ಕೆ ಭ್ರಮನಿರಸನಗೊಳ್ಳುತ್ತೇವೆ ಮತ್ತು ಸ್ವಾಭಾವಿಕವಾಗಿ ಕೆಟ್ಟ ಅಭ್ಯಾಸಗಳನ್ನು ಬಿಡಲು ಮುಂದಾಗುತ್ತೇವೆ. ಸಾವಧಾನತೆಯನ್ನು ಅಭ್ಯಾಸ ಮಾಡಲು ಸಮಯ ತೆಗೆದುಕೊಳ್ಳಬಹುದು, ಆದರೆ ಕಾಲಾನಂತರದಲ್ಲಿ ನೀವು ಕೌಶಲ್ಯವನ್ನು ಕರಗತ ಮಾಡಿಕೊಳ್ಳಲು ಮತ್ತು ಕೆಟ್ಟ ಅಭ್ಯಾಸಗಳನ್ನು ಸುಲಭವಾಗಿ ತ್ಯಜಿಸಲು ಮತ್ತು ಹೊಸದನ್ನು ಅಭಿವೃದ್ಧಿಪಡಿಸಲು ಇದರಿಂದ ಸಾಧ್ಯವಾಗುತ್ತದೆ.

English summary

How To Break Bad Habits As per Psychology in Kannada

Here we are discussing about How To Break Bad Habits As per Psychology in Kannada. To help you overcome this problem, there is a trick propagated by renowned psychiatrist Judson Brewer - that can help you unlearn your bad habits. Read more.
X