For Quick Alerts
ALLOW NOTIFICATIONS  
For Daily Alerts

ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ? ಇಲ್ಲಿದೆ ಉತ್ತರ

By Shreeraksha
|

ಮನುಷ್ಯನಿಗೆ ವಯಸ್ಸಾದ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಗೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ವಯಸ್ಸಾದ ಮೇಲೆ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯೆಂದರೆ ಮಲಬದ್ಧತೆ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಜೀರ್ಣಕ್ರಿಯೆಯ ಸಮಸ್ಯೆಗಳು.

Fig fights against constipation

ಈಗಿನ ಕಾಲದಲ್ಲಿ ಈ ಸಮಸ್ಯೆಗಳು ಕೇವಲ ವಯಸ್ಸಾದ ಜನರಲ್ಲಿ ಮಾತ್ರವಲ್ಲ, ಚಿಕ್ಕ ವಯಸ್ಸಿನವರಿಂದ ಹಿಡಿದು ಯುವಕರವರೆಗೂ ಎಲ್ಲರಲ್ಲೂ ಕಾಣಸಿಗುತ್ತದೆ. ಅದಕ್ಕೆ ಮುಖ್ಯ ಕಾರಣ ಅಂದ್ರೆ ನಾವು ಅನುಸರಿಸುತ್ತಿರುವ ಅನಾರೋಗ್ಯಕರ ಜೀವನಶೈಲಿ. ಈ ಮಲಬದ್ಧತೆ ಸಮಸ್ಯೆಯನ್ನು ಆಹಾರದ ಬದಲಾವಣೆ ಹಾಗೂ ವ್ಯಾಯಾಮದಿಂದ ಬದಲಾಯಿಸಬಹುದಾಗಿದೆ.

ಇದಕ್ಕಿಂತ ಹೆಚ್ಚಾಗಿ, ನೈಸರ್ಗಿಕವಾಗಿ ಕೆಲಸ ಮಾಡುವ ಮತ್ತು ಮಲಬದ್ಧತೆಯನ್ನು ನಿವಾರಿಸುವ ಹಲವಾರು ಆಹಾರಗಳಿವೆ. ಅದರಲ್ಲಿ ಅಂಜೂರ ಕೂಡ ಒಂದು. ಪ್ರಕೃತಿ ದತ್ತವಾಗಿ ಲಭ್ಯವಿರುವ ಅಂಜೂರದ ಹಣ್ಣುಗಳು ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳೋಣ.

ಅಂಜುರದ ಹಣ್ಣು ಹೇಗೆ ಮಲಬದ್ಧತೆ ಸಮಸ್ಯೆಗೆ ರಾಮಬಾಣ

ಅಂಜುರದ ಹಣ್ಣು ಹೇಗೆ ಮಲಬದ್ಧತೆ ಸಮಸ್ಯೆಗೆ ರಾಮಬಾಣ

ಅಂಜೂರದ ಹಣ್ಣುಗಳು ಸಿಹಿಯಾಗಿರುವುದರಿಂದ ಅದನ್ನು ದೈನಂದಿನ ಆಹಾರದಲ್ಲಿ ಬಳಕೆ ಮಾಡುವುದು ಕಷ್ಟದ ಕೆಲಸವಲ್ಲ. ಇತರ ಎಲ್ಲಾ ಒಣ-ಹಣ್ಣುಗಳಂತೆ, ಅಂಜೂರದ ಹಣ್ಣುಗಳು ಸಹ ಅಗತ್ಯವಾದ ಆಹಾರ ಅಂಶಗಳಿಂದ ತುಂಬಿವೆ. ಅವುಗಳಲ್ಲಿ ಫೈಬರ್ ಮತ್ತು ವಿಟಮಿನ್ ಎ ಯಥೇಚ್ಛವಾಗಿದೆ. ಅವು ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತವೆ. ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸುವುದರ ಮತ್ತೊಂದು ಪ್ರಯೋಜನವೆಂದರೆ, ಮೂಳೆ ಮತ್ತು ಸ್ನಾಯುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ನಿಮ್ಮನ್ನು ದೇಹದ ನೋವಿನ ಸಮಸ್ಯೆಗಳಿಂದ ದೂರವಿರಿಸುತ್ತದೆ.

ನಿಮ್ಮ ದೈನಂದಿನ ಆಹಾರದಲ್ಲಿ ಅಂಜೂರದ ಹಣ್ಣುಗಳನ್ನು ಸೇರಿಸುವ 4 ಸರಳ ವಿಧಾನಗಳು ಇಲ್ಲಿವೆ:

ಫಿಗ್ಸ್ ಬ್ರೂ:

ಫಿಗ್ಸ್ ಬ್ರೂ:

ಫಿಗ್ಸ್ ಬ್ರೂ ಅಂಜೂರದ ಆರೋಗ್ಯಕರ ಮತ್ತು ಸಿಹಿ ದ್ರವ ಸಾರವಾಗಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ನಿಮ್ಮ ದೇಹದಲ್ಲಿ ಅದ್ಭುತಗಳನ್ನು ಸೃಷ್ಠಿಮಾಡುತ್ತದೆ. ಸೇವಿಸಿದ ಆಹಾರ ಉತ್ತಮವಾಗಿ ಜೀರ್ಣವಾಗಲು ಸಹಾಯ ಮಾಅಡಿ ಮಲ್ಲಬದ್ಧತೆಯನ್ನು ಶಮನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಅಂಜೂರದ ಬ್ರೂ ತಯಾರಿಸಲು, ಸಣ್ಣ ಗಾತ್ರದ ಮಡಕೆ ತೆಗೆದುಕೊಂಡು ಅದನ್ನು ಮಧ್ಯಮ ಮೇಲೆ ಇರಿಸಿ. ನಂತರ, ಅದರಲ್ಲಿ 1 ಕಪ್ ನೀರನ್ನು ಸುರಿಯಿರಿ ಮತ್ತು ಕುದಿಸಿ. ಈಗ, ಆ ನೀರಿನಲ್ಲಿ 2 ಒಣಗಿದ ಅಂಜೂರದ ಹಣ್ಣುಗಳನ್ನು ಸೇರಿಸಿ ಮತ್ತು ಅಂಜೂರ ಮೃದುವಾಗುವವರೆಗೆ ಕುದಿಸಿ. ನಂತರ ಅದನ್ನು ಒಂದು ಗ್ಲಾಸಿಗೆ ಹಾಕಿ ಮತ್ತು ತಕ್ಷಣ ಕುಡಿಯಿರಿ. ಅಲ್ಲದೆ, ಬೇಯಿಸಿದ ಅಂಜೂರದ ಹಣ್ಣುಗಳನ್ನು ಸೇವಿಸಿ. ಈ ವಿಧಾನವು 2 ವ್ಯಕ್ತಿಗಳಿಗೆ ಅಂಜೂರದ ಬ್ರೂವನ್ನು ರಚಿಸುತ್ತದೆ. ಈ ದ್ರವವನ್ನು ಪ್ರತಿದಿನ ಕುಡಿಯಲು ಪ್ರಾರಂಭಿಸಿ ಮತ್ತು ನಿಮ್ಮ ದೇಹದಲ್ಲಿ ಬದಲಾಗುತ್ತಿರುವ ಪರಿಣಾಮವನ್ನು ಅನುಭವಿಸಿ.

ಒಣಗಿದ ಅಂಜೂರ:

ಒಣಗಿದ ಅಂಜೂರ:

ಒಣಗಿದ ಅಂಜೂರದ ಹಣ್ಣು ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಅಂಶದ ಹಿಂದಿನ ಕಾರಣವೆಂದರೆ, ಒಣಗಿದ ಅಂಜೂರದ ಹಣ್ಣುಗಳು ವಿಟಮಿನ್ ಬಿ 6 ನ ಸಮೃದ್ಧ ಮೂಲವಾಗಿದೆ, ಇದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಕಾರಣವಾಗುತ್ತದೆ. ಮಲಬದ್ಧತೆಯ ಸಮಸ್ಯೆಗಳನ್ನು ಎದುರಿಸಲು ಅವಶ್ಯವಿರುವ ಎಲ್ಲ ಸಹಾಯ ಮಾಡುತ್ತದೆ.

ತಾಜಾ ಅಥವಾ ಕಚ್ಚಾ ಅಂಜೂರ:

ತಾಜಾ ಅಥವಾ ಕಚ್ಚಾ ಅಂಜೂರ:

ನೀವು ಅಂಜೂರದ ಹಣ್ಣುಗಳನ್ನು ನೈಸರ್ಗಿಕ ಮತ್ತು ತಾಜಾ ರೂಪದಲ್ಲಿ ಸೇವಿಸಬಹುದು. ಇದು ನಿಮ್ಮ ದೇಹಕ್ಕೆ ಕ್ಯಾಲ್ಸಿಯಂನಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಸಿಹಿ ತಿನ್ನಬೇಕೆಂಬ ಹಂಬಲವನ್ನು ಕಡಮೆ ಮಾಡುತ್ತದೆ.ಇದನ್ನು ತಿಂದರೂ ಕೂಡ ನಿಮ್ಮ ಮಲಬದ್ಧತೆ ಸಮಸ್ಯೆಯು ನಿವಾರಣೆಯಾಗುತ್ತದೆ.

ನೆನೆಸಿದ ಅಂಜೂರ:

ನೆನೆಸಿದ ಅಂಜೂರ:

ಸಣ್ಣ ಗಾತ್ರದ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಉತ್ತಮ ಪ್ರಮಾಣದ ನೀರನ್ನು ಸುರಿಯಿರಿ. ನಂತರ, ಒಣಗಿದ ಅಂಜೂರದ 2-3 ತುಂಡುಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ, ನೀರನ್ನು ತೆಗೆದಿಡಿ. ಅಂಜೂರದ ಹಣ್ಣನ್ನು ಜೇನುತುಪ್ಪದೊಂದಿಗೆ ನೆನೆಸಿಡಿ. ಉತ್ತಮ ಪರಿಣಾಮವನ್ನು ಪಡೆಯಲು ನೀವು ಅವುಗಳನ್ನು ಖಾಲಿ ಹೊಟ್ಟೆಯಿಂದ ಸೇವಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಅಂಜೂರವು ಫೈಬರ್ನಲ್ಲಿ ಸಮೃದ್ಧವಾಗಿರುವುದರಿಂದ ಇದನ್ನು ಸುಲಭವಾಗಿ ಮತ್ತು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ನೀವು ಮಲಬದ್ಧತೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಗೆ ಫೈಬರ್ ಬಹಳ ಅವಶ್ಯಕವಾಗಿದೆ. ಅಂಜೂರದಲ್ಲಿ ಈ ಫೈಬರ್ ಹೆಚ್ಚಾಗಿರುತ್ತದೆ. ಇದು ಸುಲಭವಾಗಿ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ, ಮಲಬದ್ಧತೆಯನ್ನು ನಿಮ್ಮ ದೇಹದಿಂದ ದೂರವಿರಿಸುತ್ತದೆ.

ಈ ಎಲ್ಲಾ ವಿಧಾನಗಳು ಮತ್ತು ಪರಿಹಾರಗಳು ನಿಮ್ಮ ದೇಹಕ್ಕೆ ಉತ್ತಮ ಆಯ್ಕೆಗಳಾಗಿವೆ. ನೀವು ಹೊಟ್ಟೆಯ ಸಮಸ್ಯೆಗಳನ್ನು ಎದುರಿಸದ ವ್ಯಕ್ತಿಯಾಗಿದ್ದರೂ ಸಹ, ನಿಮ್ಮ ಜೀವನದಲ್ಲಿ ಈ ಪ್ರಯೋಜನಕಾರಿ ಹಣ್ಣನ್ನು ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ. ಹೊಟ್ಟೆಯ ತೊಂದರೆಗಳನ್ನು ಎದುರಿಸುತ್ತಿರುವವರು ನಿರಾಳರಾಗುತ್ತಾರೆ ಎಂದು ನಮಗೆ ಖಚಿತವಾಗಿದೆ. ಯಾವುದೇ ಆಹಾರ ಪದಾರ್ಥ ಆದರೂ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅಲ್ಲದೆ, ಈ ವಿಧಾನದಿಂದ ಪರಿಹಾರ ಪಡೆಯುತ್ತಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ದಿನಚರಿಯಲ್ಲಿ ಶೀಘ್ರದಲ್ಲೇ ಅಂಜೂರದ ಹಣ್ಣುಗಳನ್ನು ಸೇರಿಸಿ ಮತ್ತು ಆರೋಗ್ಯಕರ ಮತ್ತು ಒತ್ತಡರಹಿತ ಜೀವನವನ್ನು ನಡೆಸಲು ಸಿದ್ಧರಾಗಿ

English summary

How Figs Help In Fighting Constipation

How Figs Help in Fighting Constipation? Read on.
Story first published: Saturday, December 5, 2020, 19:00 [IST]
X
Desktop Bottom Promotion