For Quick Alerts
ALLOW NOTIFICATIONS  
For Daily Alerts

ಹೊಟ್ಟೆ ಉಬ್ಬುವುದು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟುವುದು ಹೇಗೆ? ಮನೆಮದ್ದು ಏನು?

|

ಎಲ್ಲರೆದುರು ಅದನ್ನು ಬಿಡೋಕೆ ಆಗುತ್ತಾ? ಎಷ್ಟು ನಾಚಿಕೆ ಅಲ್ವಾ? ಆದರೆ ಏನ್ ಮಾಡೋದು, ಸಮಸ್ಯೆ ಮಾತ್ರ ದೂರವಾಗೋದೆ ಇಲ್ಲ. ಮಕ್ಕಳೇ ಇತ್ತೀಚೆಗೆ ರೇಗಿಸೋಕೆ ಪ್ರಾರಂಭಿಸಿದ್ದಾರೆ. ಏನ್ ಅದು ಎಷ್ಟು ಸಲ ಪುರ್ ಪುರ್ ಅಂತ ಬಿಡ್ತನೇ ಇರ್ತೀಯ ಅಂತಾರೆ. ಆದರೆ ಸಮಸ್ಯೆ ಯಾರಿಗೆ ಹೇಳೋಣ. ಅವರು ತಿನ್ನೋ ಆಹಾರನೇ ನಾನೂ ತಿಂತಿನಿ. ಮನೆ ಮಂದಿಗೆಲ್ಲಾ ಒಂದೇ ಅಡುಗೆ ಮಾಡಿದ್ರೂ ನನಗೆ ಮಾತ್ರ ಗ್ಯಾಸ್ಟ್ರಿಕ್ ಸಮಸ್ಯೆ ಅಂತ ಬೇಜಾರು ಮಾಡ್ಕೋಬೇಡಿ. ಗ್ಯಾಸ್ಟ್ರಿಕ್ ಸಮಸ್ಯೆಯ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಗ್ಯಾಸ್ ಅನ್ನೋದು ಸಹಜವೇ?

ಗ್ಯಾಸ್ ಅನ್ನೋದು ಸಹಜವೇ?

ಪ್ರತಿಯೊಬ್ಬ ವಯಸ್ಕರು ಸಾಮಾನ್ಯವಾಗಿ ದಿನಕ್ಕೆ 13 ರಿಂದ 21 ಬಾರಿ ಗ್ಯಾಸ್ ಹೊರಹಾಕುತ್ತಾರೆ.ಗ್ಯಾಸ್ ಅಥವಾ ವಾಯು ಅನ್ನುವುದು ಜೀರ್ಣಕ್ರಿಯೆ ಪ್ರಕ್ರಿಯೆಯ ಸಾಮಾನ್ಯ ಭಾಗ. ಆದರೆ ಈ ವಾಯು ನಿಮ್ಮ ಕರುಳಿನಲ್ಲಿ ಶೇಖರಣೆಯಾಗಿ ಹೊರಹೋಗದೆ ಇದ್ದಾಗ ನಿಮಗೆ ಸಮಸ್ಯೆ ಶುರುವಾಗುತ್ತದೆ. ನೀವು ನೋವು ಅನುಭವಿಸಬಹುದು ಮತ್ತು ಅಸ್ವಸ್ಥತೆಯನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.

ಅತಿಸಾರ ಅಥವಾ ಮಲಬದ್ಧತೆಗೆ ಕಾರಣವಾಗುವ ಯಾವುದೇ ಅನಿಲವೂ ಕೂಡ ನೋವು, ಉಬ್ಬುವಿಕೆ ಅಥವಾ ನಿಮ್ಮ ಅಸ್ವಸ್ಥತೆಯನ್ನು ಅಧಿಕಗೊಳಿಸುವುದಕ್ಕೆ ಕಾರಣವಾಗಬಹುದು. ಗ್ಯಾಸ್ ಇನ್ನೂ ಅನೇಕ ಕಾರಣದಿಂದ ಆಗಬಹುದು.

ಅತಿಯಾಗಿ ತಿನ್ನುವುದು

ಅತಿಯಾಗಿ ತಿನ್ನುವುದು

ನೀವು ತಿನ್ನುವಾಗ ಅಥವಾ ಕುಡಿಯುವುವಾಗ ಗ್ಯಾಸ್ ನುಂಗುವುದು

ಚ್ಯೂಯಿಂಗ್ ಗಮ್

ಧೂಮಪಾನ

ಕೆಲವು ನಿರ್ಧಿಷ್ಟ ಆಹಾರಗಳ ಸೇವನೆ

ನಿಮ್ಮ ವೈದ್ಯರನ್ನು ಸಂಪರ್ಕಿಸಿ:

ನಿಮ್ಮ ವೈದ್ಯರನ್ನು ಸಂಪರ್ಕಿಸಿ:

ಒತ್ತಡ, ಕೆಟ್ಟ ಆಹಾರ ಕ್ರಮದಿಂದ ಜೊತೆಗೆ ಮಲಬದ್ಧತೆ ಅಥವಾ ಬೇಧಿ ಅಥವಾ ತೂಕ ಇಳಿಸಿಕೊಳ್ಳುವಿಕೆ ಹೆಚ್ಚಾಗಿದ್ದು ಸಮಸ್ಯೆ ಗಂಭೀರ ಸ್ವರೂಪದ್ದಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಆನ್ ಲೈನ್ ನಲ್ಲಿಯೂ ಕೆಲವು ವೈದ್ಯರು ಲಭ್ಯವಿರುತ್ತಾರೆ. ಅವರ ಸಲಹೆಯನ್ನು ಕೂಡ ಪಡೆಯಬಹುದು.

ಗ್ಯಾಸ್ ಸಮಸ್ಯೆಯಿಂದ ಹೊರಬರುವುದು ಹೇಗೆ?

ಗ್ಯಾಸ್ ಸಮಸ್ಯೆಯಿಂದ ಹೊರಬರುವುದು ಹೇಗೆ?

ಹೆಚ್ಚಿನ ಸಂದರ್ಬದಲ್ಲಿ ನೀವೇನು ತಿನ್ನುತ್ತೀರಿ ಎಂಬುದರ ಮೇಲೆ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಆಹಾರವು ಸಣ್ಣ ಕರುಳಿನಲ್ಲಿ ಜೀರ್ಣವಾಗುತ್ತದೆ. ಜೀರ್ಣವಾಗದ ಭಾಗವಾಗಿ ನಿಮ್ಮ ಕರುಳಿನಲ್ಲಿ ಬ್ಯಾಕ್ಟೀರಿಯಾ, ಶಿಲೀಂದ್ರಗಳು ಕೆಲಸ ಮಾಡುತ್ತವೆ. ಆಹಾರವನ್ನು ಹುದುಗಿಸುತ್ತವೆ.ಈ ಸಮಯದಲ್ಲಿ ಮಿಥೇನ್ ಮತ್ತು ಹೈಡ್ರೋಜನ್ ಉತ್ಪಾದನೆ ಮಾಡಲಾಗುತ್ತದೆ. ಇವುಗಳನ್ನು ಫ್ಲಾಟಸ್ ಆಗಿ ಹೊರಹಾಕಲಾಗುತ್ತದೆ ಅಂದರೆ ಇದುವೇ ಗ್ಯಾಸ್.

ಹೆಚ್ಚಿನವರಿಗೆ ತಮ್ಮ ಆಹಾರ ಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಗ್ಯಾಸ್ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆಹಾರದ ಡೈರಿಯನ್ನು ನೀವು ಕಾಪಾಡಿಕೊಳ್ಳುವ ಮೂಲಕ ಯಾವ ಆಹಾರವು ನಿಮಗೆ ಗ್ಯಾಸ್ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಈ ಸಮಸ್ಯೆ ಉಂಟು ಮಾಡುವ ಸಾಮಾನ್ಯ ಆಹಾರಗಳ ಪಟ್ಟಿ ಇಲ್ಲಿದು:

ಹೆಚ್ಚು ಫೈಬರ್ ಇರುವ ಆಹಾರ

ಹೆಚ್ಚು ಫೈಬರ್ ಇರುವ ಆಹಾರ

ಅತೀ ಹೆಚ್ಚು ಕೊಬ್ಬಿನಾಂಶ ಇರುವ ಆಹಾರ

ಹುರಿದಿರುವ ಅಥವಾ ಖಾರವಾಗಿರುವ ಆಹಾರ

ಕಾರ್ಬೋನೇಟೆಡ್ ಪಾನೀಯಗಳು - ಕೃತಕ ಆಹಾರ ಪದಾರ್ಥಗಳು ಇವುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕಡಿಮೆ ಕಾರ್ಬೊಹೈಡ್ರೇಟ್ ಗಳು, ಸಕ್ಕರೆ ಮುಕ್ತ ಉತ್ಪನ್ನಗಳು ಎಂದು ಹೇಳಲಾಗುವ ಸಕ್ಕರೆ ಆಲ್ಕೋಹಾಲ್,ಸೋರ್ಬಿಟಾಲ್ ಮತ್ತು ಮಲ್ಟಿಟಾಲ್ ಗಳು

ಬೀನ್ಸ್ ಮತ್ತು ಇತರೆ ಕ್ರೂಸಿಫೆರಸ್ ತರಕಾರಿಗಳು ಉದಾಹರಣೆಗೆ ಬ್ರೂಸೆಲ್ ಮೊಳಕೆಕಾಳುಗಳು, ಹೂಕೋಸು ಮತ್ತು ಬ್ರುಕೋಲಿ

ಲ್ಯಾಕ್ಟೋಸ್ ಅಂಶ ಅಧಿಕವಿರುವ ಆಹಾರಗಳು ಉದಾಹರಣೆಗೆ ಹಾಲು, ಚೀಸ್ ಮತ್ತು ಇತರೆ ಡೈರಿ ಪ್ರೊಡಕ್ಟ್ ಗಳು.

ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಕಂಡುಬರುವ ಅಣುಗಳು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಹುದುಗುವ ಆಲಿಗೋಸ್ಯಾಕ್ರಡೈಸ್ ಗಳು ಎಂದು ಇವುಗಳಿಗೆ ಹೇಳಲಾಗುತ್ತದೆ.ಡೈಸ್ಯಾಕ್ರಡೈಸ್ ಗಳು ಮತ್ತು ಮೋನೊಸ್ಯಾಕ್ರಡೈಸ್ ಗಳು ಮತ್ತು ಪಾಲಿಯಾನ್ಸ್ ಗಳು ಇವುಗಳಲ್ಲಿರುತ್ತದೆ.

ಹಾಗಾಗಿ ನಿಮಗೆ ಯಾವ ಆಹಾರಗಳು ಗ್ಯಾಸ್ಟ್ರಿಕ್ ಸಮಸ್ಯೆ ಉಂಟುಮಾಡುತ್ತವೆ ಎಂದು ಕಂಡುಹಿಡಿಯಲು ಏನು ತಿಂದಿರಿ, ಅದರಿಂದ ನಿಮ್ಮ ಆರೋಗ್ಯದಲ್ಲಿ ಏನು ವ್ಯತ್ಯಾಸವಾಯಿತು ಎಂದು ಗುರುತಿಸಿಕೊಳ್ಳುವುದಕ್ಕೆ ನಿಮ್ಮ ಆಹಾರದ ಡೈರಿ ಅನುಕೂಲ ಮಾಡಿಕೊಡುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆಯ ರೋಗಲಕ್ಷಣವನ್ನು ತೊಡೆದುಹಾಕಲು 8 ಪ್ರಮುಖ ಸಲಹೆಗಳು

ಗ್ಯಾಸ್ಟ್ರಿಕ್ ಸಮಸ್ಯೆಯ ರೋಗಲಕ್ಷಣವನ್ನು ತೊಡೆದುಹಾಕಲು 8 ಪ್ರಮುಖ ಸಲಹೆಗಳು

ಹಾಗಂತ ಆಹಾರದ ಮಾದರಿಯನ್ನು ಬದಲಿಸಿಕೊಂಡ ಕೂಡಲೇ ಎಲ್ಲವೂ ಸರಿಯಾಗಿ ಬಿಡುತ್ತದೆ ಎಂದಲ್ಲ. ಬದಲಾಗಿ ಕೆಲವು ಇತರೆ ಮಾರ್ಗೋಪಾಯಗಳನ್ನು ಕೂಡ ನೀವು ಅನುಸರಿಸಬೇಕಾಗುತ್ತದೆ. ಅವುಗಳ ಕೆಲವು ಐಡಿಯಾಗಳನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಪುದೀನಾ

ಅಧ್ಯಯನವೊಂದು ಹೇಳಿರುವ ಪ್ರಕಾರ ಪುದೀನಾ ಟೀ ಅಥವಾ ಪುದೀನಾದಿಂದ ಮಮಮಂಮ ತಯಾರಿಸಲಾಗಿರುವ ಆಹಾರ ಪದಾರ್ಥಗಳಿಂದ ನಿಮ್ಮ ಗ್ಯಾಸ್ ಸಮಸ್ಯೆ ಮತ್ತು ಹೊಟ್ಟೆ ಗುಳುಗುಳು ಎಂದು ಶಬ್ದ ಮಾಡುವ ಸಮಸ್ಯೆ ಪರಿಹಾರವಾಗುತ್ತದೆ ಎನ್ನಲಾಗಿದೆ. ಪುದೀನಾ ಮಾತ್ರೆಗಳನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ. ಪುದೀನಾ ಕೆಲವರಿಗೆ ಎದೆಯುರಿ ಸಮಸ್ಯೆಯನ್ನು ಕೂಡ ಉಂಟು ಮಾಡಬಹುದು. ಯಾಕೆಂದರೆ ಪುದೀನಾದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಗುಣವಿದೆ ಮತ್ತು ಇದು ಕೆಲವು ಔಷಧಿಗಳ ಜೊತೆಗೆ ಬೆರೆತು ಅಡ್ಡಿಯಾಗಬಹುದು. ಉತ್ತಮ ಫಲಿತಾಂಶಕ್ಕಾಗಿ ಊಟಕ್ಕೂ ಮುನ್ನ ಒಂದು ಕಪ್ ಪೆಪ್ಪರ್ ಮಿಂಟ್ ಟೀ ಕುಡಿಯುವುದು ಒಳ್ಳೆಯ ಅಭ್ಯಾಸವಾಗಿರುತ್ತದೆ.

ಚಕ್ಕೆಯ ಟೀ

ಚಕ್ಕೆಯ ಟೀ

ಅಜೀರ್ಣತೆ ಸಮಸ್ಯೆ, ಹಿಡಿದಿಟ್ಟುಕೊಂಡಿರುವ ಗ್ಯಾಸ್ ಮತ್ತು ಹೊಟ್ಟೆಯಲ್ಲಿ ಗುಳುಗುಳು ಶಬ್ದ ಬರುವಂತ ಸಮಸ್ಯೆಗೆ ಚಕ್ಕೆಯ ಟೀ ಕೂಡ ಉತ್ತಮ ಪರಿಣಾಮ ಮಾಡಬಲ್ಲದು.ಕೆಲವು ವ್ಯಕ್ತಿಗಳಿಗೆ ಚಕ್ಕೆಯ ಟೀಯನ್ನು ಊಟಕ್ಕೂ ಮೊದಲು ಮತ್ತು ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಇದೆ.

ಸಕ್ರಿಯ ಇದ್ದಿಲು

ಸಕ್ರಿಯ ಇದ್ದಿಲು

ನಿಮ್ಮ ಕರುಳಿನಲ್ಲಿ ಶೇಖರವಾಗುವ ಗ್ಯಾಸ್ ಸಮಸ್ಯೆಯನ್ನು ನಿವಾರಣೆ ಮಾಡುವುದಕ್ಕೆ ಇರುವ ಮತ್ತೊಂದು ಬೆಸ್ಟ್ ಮಾರ್ಗವೆಂದರೆ ಸಕ್ರಿಯ ಇದ್ದಿಲು. ಊಟವಾದ ಒಂದು ಘಂಟೆಯ ನಂತರ ಮತ್ತು ಮುಂಚೆ ಈ ಮಾತ್ರೆಗಳನ್ನು ಸೇವಿಸಬಹುದು.

 ಆಪಲ್ ಸಿಡರ್ ವಿನೆಗರ್

ಆಪಲ್ ಸಿಡರ್ ವಿನೆಗರ್

ಬೆವರೇಜ್ ಅಥವಾ ಕೋಲ್ಡ್ ಡ್ರಿಂಕ್ಸ್ ಗಳ ಜೊತೆಗೆ ಒಂದು ಟೇಬಲ್ ಸ್ಪೂನ್ ಆಪಲ್ ಸಿಡರ್ ವಿನೆಗರ್ ನ್ನು ಸೇರಿಸಿ.ನೀರು ಅಥವಾ ಟೀ ಸೇರಿಸುವ ಹಾಗೆ ಇದನ್ನೂ ಸೇರಿಸಬಹುದು. ಊಟಕ್ಕಿಂತ ಮೊದಲು ಸೇವಿಸಿ ಮತ್ತು ಪ್ರತಿ ದಿನ ಮೂರು ಬಾರಿ ಸೇವಿಸುವ ಮೂಲಕ ಗ್ಯಾಸ್ ನ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ದೈಹಿಕ ಚಟುವಟಿಕೆ

ದೈಹಿಕ ಚಟುವಟಿಕೆ

ಗ್ಯಾಸ್ ನಿಂದ ಬರುವ ನೋವು ಮತ್ತು ಗ್ಯಾಸ್ಟ್ರಿಕ್ ನಿಂದಾಗುವ ಇತರೆ ಸಮಸ್ಯೆಗಳನ್ನು ವ್ಯಾಯಾಮದ ಕೂಡ ಕಡಿಮೆ ಮಾಡಿಕೊಳ್ಳಬಹುದು. ಊಟದ ನಂತರ ವಾಕಿಂಗ್ ಮಾಡಲು ಪ್ರಯತ್ನಿಸುವುದರಿಂದಾಗಿ ಗ್ಯಾಸ್ಟ್ರಿಕ್ ಕಡಿಮೆ ಮಾಡಿಕೊಳ್ಳಬಹುದು. ಗ್ಯಾಸಿನ ನೋವನ್ನು ಕಡಿಮೆ ಮಾಡಲು ಪ್ರಯತ್ನಿಸುವುದಾದರೆ ಜಂಪಿಂಗ್ ರೋಪ್, ಓಡುವುದು ಅಥವಾ ನಡೆದಾಡುವ ಅಭ್ಯಾಸ

ಲ್ಯಾಕ್ಟಸ್ ಪೂರಕಗಳು

ಲ್ಯಾಕ್ಟಸ್ ಪೂರಕಗಳು

ಹಾಲಿನಲ್ಲಿರುವ ಸಕ್ಕರೆ ಅಂಶಕ್ಕೆ ಲ್ಯಾಕ್ಟೋಸ್ ಎನ್ನಲಾಗುತ್ತದೆ. ಯಾವ ವ್ಯಕ್ತಿಗಳಿಗೆ ಲ್ಯಾಕ್ಟೋಸ್ ಅಲರ್ಜಿ ಇರುತ್ತದೆಯೋ ಅವರಿಗೆ ಈ ಸಕ್ಕರೆಯನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಲ್ಯಾಕ್ಟೋಸ್ ನ್ನು ದೇಹದಿಂದ ಒಡೆಯಲು ಲ್ಯಾಕ್ಟಸ್ ನ್ನು ಅನ್ನೋ ಕಿಣ್ವವನ್ನು ದೇಹವು ಬಳಸುತ್ತದೆ. ಲ್ಯಾಕ್ಟಸ್ ನ ಮಾತ್ರೆಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ ಮತ್ತು ಅದರ ಸಹಾಯದಿಂದ ಕೂಡ ದೇಹದ ಲ್ಯಾಕ್ಟೋಸ್ ನ್ನು ಜೀರ್ಣ ಮಾಡಿಸಬಹುದು.

ಲವಂಗ

ಲವಂಗ

ಅಡುಗೆಯಲ್ಲಿ ಬಳಸುವ ಗಿಡಮೂಲಿಕೆಯಾಗಿದೆ ಲವಂಗ. ಲವಂಗದ ಎಣ್ಣೆಯೂ ಕೂಡ ಬ್ಲೋಟಿಂಗ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ಕಿಣ್ವಗಳು ಉತ್ಪಾದಿಸುವ ಅನಿಲವನ್ನು ಹೋಗಲಾಡಿಸಲು ಇದು ಸಹಾಯ ಮಾಡಬಲ್ಲದು. 8ಔನ್ಸ್ ನೀರಿಗೆ ಐದು ಡ್ರಾಪ್ ಎಣ್ಣೆಯನ್ನು ಸೇರಿಸಿ ಊಟದ ನಂತರ ಸೇವಿಸಬಹುದು.

ತಿನ್ನುವಾಗ ಇವುಗಳನ್ನು ಗಮನಿಸಿ

ತಿನ್ನುವಾಗ ಇವುಗಳನ್ನು ಗಮನಿಸಿ

ಯಾವುದೇ ವೈದ್ಯಕೀಯ ಕಷ್ಟದ ಸ್ಥಿತಿಯನ್ನು ನೀವು ಎದುರಿಸುತ್ತಿಲ್ಲ ಮತ್ತು ಕೇವಲ ಗ್ಯಾಸ್ ಸಮಸ್ಯೆಯೊಂದೆ ನಿಮ್ಮ ತೊಂದರೆಯಾಗಿದ್ದರೆ ಜೀವನಶೈಲಿ ಮತ್ತು ಆಹಾರ ಕ್ರಮ ಬದಲಾಯಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಪ್ರತಿ ಊಟವನ್ನೂ ಕುಳಿತುಕೊಂಡೇ ಮಾಡಿ ಮತ್ತು ನಿಧಾನವಾಗಿ ಮಾಡಿ.

ನೀವು ಮಾತನಾಡುವಾಗ ಅಥವಾ ತಿನ್ನುವಾಗ ಅತೀ ಹೆಚ್ಚು ಗಾಳಿಯನ್ನು ಸೇವಿಸಬೇಡಿ.

ಚೂಯಿಂಗ್ ಗಮ್ ಅಭ್ಯಾಸ ಬಿಡಿ

ಸೋಡಾ ಮತ್ತು ಇತರೆ ಕಾಬ್ರೋನೇಡೆಟ್ ಪಾನೀಯ ಸೇವನೆಯನ್ನು ತಪ್ಪಿಸಿ.

ಧೂಮಪಾನ ಬಿಟ್ಟುಬಿಡಿ.

ನಿಮ್ಮ ದಿನಚರಿಯಲ್ಲಿ ವ್ಯಾಯಾಮ ರೂಢಿಸಿ. ಉದಾಹರಣೆಗೆ ಊಟದ ನಂತರ ಯಾರ ಜೊತೆಯಾದರೂ ಮಾತನಾಡುತ್ತಾ ವಾಕ್ ಮಾಡಿ.

ನಿಮಗೆ ಗ್ಯಾಸ್ ಉತ್ಪತ್ತಿ ಮಾಡುತ್ತಿದೆ ಎಂದೆನಿಸುವ ಆಹಾರವನ್ನು ತ್ಯಜಿಸಿಬಿಡಿ.

ಸ್ಟ್ರಾ ಮೂಲಕ ಯಾವುದೇ ಪಾನೀಯ ಸೇವಿಸುವುದನ್ನು ನಿಲ್ಲಿಸಿ

 ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾದರೆ ಬರುವ ಸಮಸ್ಯೆಗಳು

ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾದರೆ ಬರುವ ಸಮಸ್ಯೆಗಳು

ಗ್ಯಾಸ್ಟ್ರಿಕ್, ನೋವು, ಮತ್ತು ಬ್ಲೋಟಿಂಗ್ ಸಮಸ್ಯೆ ಅತಿಯಾಗುವುದರಿಂದ ದೊಡ್ಡ ಸಮಸ್ಯೆಗಳೂ ಕೂಡ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ. ಅವುಗಳೆಂದರೆ

ಜಠರದ ಉರಿತ

ಲ್ಯಾಕ್ಟೋಸ್ ಅಸಹಿಷ್ಣುತೆ

ಹೊಟ್ಟೆ ಸಂಬಂಧಿ ಕಾಯಿಲೆ

ಕೋನ್ಸ್ ಸಮಸ್ಯೆ

ಮಧುಮೇಹ

ಜಠರದ ಹುಣ್ಣು

ಕೆರಳಿಸುವಂತಹ ಕರುಳಿನ ಇತರೆ ಕಾಯಿಲೆಗಳು

ಅಂತಿಮ ತೀರ್ಮಾನ

ಗ್ಯಾಸ್ಟ್ರಿಕ್ ಸಮಸ್ಯೆ ಖಂಡಿತ ನೋವಿರುವ ಕಾಯಿಲೆಯೇ. ಆದರೆ ಅದು ಅಪಾಯಕಾರಿಯಾಗಿರುವ ತೊಂದರೆಯಲ್ಲ. ಒಂದು ವೇಳೆ ಅದು ನಿಮಗೆ ಸಮಸ್ಯೆಯಾಗಿದ್ದರೆ ನಿಮ್ಮ ಆಹಾರ ಕ್ರಮವನ್ನು ಮೊದಲು ಪರಿಶೀಲಿಸಿ. ಜೀವನಶೈಲಿಯನ್ನು ಗಮನಿಸಿ. ನೀವೇನು ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಗಮನಿಸಿ. ಜೀವನಶೈಲಿಯ ಬದಲಾವಣೆ ಮತ್ತು ಸರಿಯಾದ ಡಯಟ್ ಯು ಈ ಸಮಸ್ಯೆಯನ್ನು ನಿಮ್ಮಿಂದ ದೂರವಾಗಿಸಬಲ್ಲವು. ಕೆಲವು ವಾರಗಳ ಡಯಟ್ ಮತ್ತು ಜೀವನಶೈಲಿಯ ಬದಲಾವಣೆಯ ನಂತರವೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡುತ್ತಲೇ ಇದ್ದರೆ ಖಂಡಿತ ಒಮ್ಮೆ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಇತರೆ ವೈದ್ಯಕೀಯ ತೊಂದರೆಗಳಿಂದ ನಿಮಗೆ ನೋವಿನ ಸಮಸ್ಯೆಯಾಗುತ್ತಿದೆಯೇ ಎಂಬ ಬಗ್ಗೆ ಅವರು ಸರಿಯಾಗಿ ಪರಿಶೀಲಿಸಿ ಹೇಳಬಲ್ಲರು.

English summary

Home Remedies to Get Rid of Gas Pain and Bloating Fast in Kannada

Here are home remedies to get rid of get rid of gas pain and bloating fast, read on,
X
Desktop Bottom Promotion