For Quick Alerts
ALLOW NOTIFICATIONS  
For Daily Alerts

ಯೀಸ್ಟ್ ಸೋಂಕಿಗೆ ಪರಿಣಾಮಕಾರಿ ಮನೆಮದ್ದುಗಳಿವು

|

ಮಾನವನ ದೇಹವೇ ಹಾಗೆ, ಹಲವಾರು ರೀತಿಯ ಸೋಂಕುಗಳು ಹಾಗೂ ಕಾಯಿಲೆಗಳು ಕಾಡುತ್ತಲೇ ಇರುತ್ತದೆ. ಹೀಗಾಗಿ ಆರೋಗ್ಯವು ಹದಗೆಡುವುದು. ಇಂತಹ ಸಮಯದಲ್ಲಿ ಕೆಲವೊಂದು ಸೋಂಕುಗಳು ತಾವಾಗಿಯೇ ಹೋದರೆ, ಇನ್ನು ಕೆಲವು ಸೋಂಕುಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಅದರಲ್ಲೂ ಶಿಲೀಂಧ್ರ ಸೋಂಕು ದೇಹದಲ್ಲಿ ಕಾಡಿದ ವೇಳೆ ಅದು ತನ್ನಷ್ಟಕ್ಕೆ ಮಾಯವಾಗುವುದು. ಹಾಗೆ ಅದು ಹೋಗದೆ ಇದ್ದರೆ ಅದನ್ನು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ನಿವಾರಣೆ ಮಾಡಬಹುದಾಗಿದೆ.

yeast infection

ಸಾಮಾನ್ಯವಾಗಿ ಶಿಲೀಂಧ್ರ ಸೋಂಕು ನಿವಾರಣೆ ಮಾಡಲು ಬಳುಸವಂತಹ ವಿಧಾನವೆಂದರೆ ಸೋಂಕು ನಿವಾರಕ ಕ್ರೀಮ್, ಮಾತ್ರೆಗಳು ಇತ್ಯಾದಿ. ನೈಸರ್ಗಿಕ ವಿಧವಾಗಿ ಇದನ್ನು ನಿವಾರಣೆ ಮಾಡಬೇಕೆಂದು ನೀವು ಬಯಸಿದ್ದರೆ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು. ಗರ್ಭಿಣಿ, ಬಾಣಂತಿಯರು ಮತ್ತು ಮಧುಮೇಹಿಗಳಿಗೆ ಈ ಮನೆಮದ್ದುಗಳನ್ನು ಬಳಸದೆ ಇರಲು ಸಲಹೆ ಮಾಡಲಾಗುತ್ತದೆ. ಇಂತಹವರು ಶಿಲೀಂಧ್ರ ಸೋಂಕು ಇದ್ದರೆ ಆಗ ವೈದ್ಯರನ್ನು ಭೇಟಿ ಮಾಡುವುದು ಒಳಿತು. ಶಿಲೀಂಧ್ರ ಸೋಂಕಿಗೆ ಇರುವ ಮನೆಮದ್ದುಗಳು ಯಾವುದು ಎಂದು ತಿಳಿದುಕೊಳ್ಳುವ.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್ ಒಂದು ಅದ್ಭುತವಾಗಿರುವಂತಹ ಔಷಧಿ ಎಂದು ಪರಿಗಣಿಸಲಾಗಿರುವುದು. ಆಪಲ್ ಸೀಡರ್ ವಿನೇಗರ್ ಅನ್ನು ಆಂತರಿಕ ಮತ್ತು ದೇಹದ ಮೇಲೆ ಹಚ್ಚಿಕೊಂಡು ಸೋಂಕು ನಿವಾರಣೆಗೆ ಬಳಕೆ ಮಾಡಬಹುದಾಗಿದೆ. ಆಪಲ್ ಸೀಡರ್ ವಿನೇಗರ್ ಶಿಲೀಂಧ್ರ ವಿರೋಧಿಯಾಗಿದೆ ಮತ್ತು ಇದು ಯೋನಿ ಭಾಗದಲ್ಲಿ ಪಿಎಚ್ ಮಟ್ಟವನ್ನು ಕಾಪಾಡುವುದು. ಶಿಲೀಂಧ್ರ ಉತ್ಪತ್ತಿಯನ್ನು ತಡೆಯಲು ಇದು ಆರೋಗ್ಯಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ನೆರವಾಗುವುದು.

ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಆಪಲ್ ಸೀಡರ್ ವಿನೇಗರ್ ಗೆ ಒಂದು ಲೋಟ ನೀರು ಬೆರೆಸಿ ಕುಡಿಯಬೇಕು ಅಥವಾ ಒಂದು ಕಪ್ ಚಹಾ ಗೆ ಹಾಕಿಕೊಂಡು ಕುಡಿಯಬಹುದು. ನೇರವಾಗಿ ಇದನ್ನು ಹಚ್ಚಿಕೊಳ್ಳಲು ಆಪಲ್ ಸೀಡರ್ ವಿನೇಗರ್ ನಲ್ಲಿ ಬಟ್ಟೆಯನ್ನು ಅದ್ದಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಬೇಕು. 30 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ನೀರಿನಲ್ಲಿ ಇದನ್ನು ತೊಳೆಯರಿ. ಬಿಸಿ ನೀರಿಗೆ ಒಂದು ಕಪ್ ಆಪಲ್ ಸೀಡರ್ ವಿನೇಗರ್ ಹಾಕಿಕೊಂಡು ಅದರಿಂದ ಸ್ನಾನ ಮಾಡಬಹುದು.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಕಿರಿಕಿರಿ ಹಾಗೂ ಉರಿಯೂತ ಉಂಟು ಮಾಡುವಂತಹ ಚರ್ಮಕ್ಕೆ ತೆಂಗಿನ ಎಣ್ಣೆಯು ಶಮನ ನೀಡುವುದು ಮತ್ತು ಇದರಲ್ಲಿ ಇರುವಂತಹ ಶಿಲೀಂಧ್ರ ವಿರೋಧಿ ಗುಣಗಳು ಸೋಂಕು ಉಂಟು ಮಾಡುವಂತಹ ಶಿಲೀಂಧ್ರದ ವಿರುದ್ಧ ಹೋರಾಡುವುದು.

ಪರಿಶುದ್ಧ, ಸಾವಯವವಾಗಿರುವಂತಹ ತೆಂಗಿನೆಣ್ಣೆಯನ್ನು ನೇರವಾಗಿ ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ದಿನಕ್ಕೆ ಎರಡರಿಂದ ಮೂರು ಸಲ ನೀವು ಇದನ್ನು ಬಳಕೆ ಮಾಡಿದರೆ ಯಾವುದೇ ಅಡ್ಡ ಪರಿಣಾಮಗಳು ಇರದು.

ಮೊಸರು

ಮೊಸರು

ಯಾವುದೇ ಮಿಶ್ರಣವಿಲ್ಲದೆ ಇರುವಂತಹ ಸಾಮಾನ್ಯ ಮೊಸರು ಲ್ಯಾಕ್ಟೋಬಾಸಿಲಸ್ ಎನ್ನುವ ಅಂಶವನ್ನು ಒಳಗೊಂಡಿದೆ. ಇದು ಶಿಲೀಂಧ್ರ ವಿರುದ್ಧ ಹೋರಾಡಲು ನೆರವಾಗುವುದು. ಯಾವುದೇ ರುಚಿಕಾರಕಗಳನ್ನು ಹಾಕದೆ ಇರುವಂತಹ ಸಾಮಾನ್ಯ ಮೊಸರನ್ನು ತಿನ್ನಬೇಕು. ಇದಕ್ಕೆ ಯಾವುದೇ ರೀತಿಯ ಸಕ್ಕರೆ ಕೂಡ ಹಾಕಬಾರದು. ಇದನ್ನು ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಖಂಡಿತವಾಗಿಯೂ ಇದು ನೆರವಾಗುವುದು. ಇದನ್ನು ನೇರವಾಗಿ ಕೂಡ ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಬಹುದು.

ಬೊರಿಕ್ ಆಮ್ಲ

ಬೊರಿಕ್ ಆಮ್ಲ

ಯೋನಿ ಭಾಗದ ಶಿಲೀಂಧ್ರ ಸೋಂಕು ನಿವಾರಣೆ ಮಾಡಲು ಬೊರಿಕ್ ಆಮ್ಲವನ್ನು ಬಳಸಲು ಸಲಹೆ ಮಾಡಲಾಗುತ್ತದೆ. ಸೋಂಕು ನಿವಾರಣೆ ಮಾಡಲು ಯೋನಿ ಭಾಗಕ್ಕೆ 600 ಮಿ.ಗ್ರಾಂ.ಬೊರಿಕ್ ಪೌಡರ್ ಕ್ಯಾಪ್ಸೂಲ್ ಅನ್ನು ಪ್ರತಿನಿತ್ಯವೂ 14 ದಿನಗಳ ಕಾಲ ಯೋನಿಗೆ ಹಾಕಬೇಕು. ಆದರೆ ಇದನ್ನು ದೀರ್ಘಕಾಲ ತನಕ ಬಳಕೆ ಮಾಡಬಾರದು ಎಂದು ಹೇಳಲಾಗುತ್ತದೆ. ಇದು ಬಾಯಿ ಮೂಲಕ ಸೇವನೆಗೆ ವಿಷಕಾರಿ ಆಗಿರುವ ಕಾರಣದಿಂದ ಇದರ ಸೇವನೆ ಮಾಡಲೇಬಾರದು.

ಚಾ ಮರದ ಎಣ್ಣೆ

ಚಾ ಮರದ ಎಣ್ಣೆ

ಚಾ ಮರದ ಎಣ್ಣೆಯಲ್ಲಿ ಶಿಲೀಂಧ್ರ ವಿರೋಧಿ, ಸೂಕ್ಷ್ಮಾಣು ವಿರೋಧಿ ಮತ್ತು ನಂಜು ನಿರೋಧಕ ಗುಣಗಳು ಇವೆ. ಕೆಲವು ಹನಿ ಚಾ ಮರದ ಎಣ್ಣೆಯನ್ನು ಜೇನುತುಪ್ಪ ಮತ್ತು ತೆಂಗಿನ ಎಣ್ಣೆಯ ಜತೆಗೆ ಮಿಶ್ರಣ ಮಾಡಿಕೊಂಡು ಅದನ್ನು ನೇರವಾಗಿ ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ನೇರವಾಗಿ ಕೇವಲ ಚಾ ಮರದ ಎಣ್ಣೆಯನ್ನು ಮಾತ್ರ ಯೋನಿ ಭಾಗಕ್ಕೆ ಹಚ್ಚಿಕೊಳ್ಳಬೇಡಿ. ಯಾಕೆಂದರೆ ಇದು ಕಿರಿಕಿರಿ ಉಂಟು ಮಾಡಬಹುದು. ಚಾ ಮರದ ಎಣ್ಣೆಯನ್ನು ಮೊದಲ ಸಲ ಬಳಕೆ ಮಾಡುತ್ತಲಿದ್ದರೆ ಆಗ ನೀವು ಇದನ್ನು ದೇಹದ ಬೇರೆ ಭಾಗದ ಚರ್ಮಕ್ಕೆ ಹಚ್ಚಿಕೊಂಡು ಪರೀಕ್ಷಿಸಿಕೊಳ್ಳಿ. ಇದು ನಿಮಗೆ 12 ಗಂಟೆಯಲ್ಲಿ ಅದರ ಪ್ರತಿಕ್ರಿಯೆ ತೋರಿಸಿಕೊಡುವುದು.

ಅಲೋವೆರಾ

ಅಲೋವೆರಾ

ಅಲೋವೆರಾದಲ್ಲಿ ಇರುವಂತಹ ಹಲವಾರು ರೀತಿಯ ಅಂಶಗಳು ಶಿಲೀಂಧ್ರ ಸೋಂಕು ನಿವಾರಣೆ ಮಾಡಲು ನೆರವಾಗುವುದು. ಅಲೋವೆರಾ ಲೋಳೆಯಲ್ಲಿ ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದರ ಸೇವನೆಯಿಂದ ಬಿಳಿ ರಕ್ತದ ಕಣಗಳು ಹೆಚ್ಚಾಗುವುದು ಮತ್ತು ಶಿಲೀಂಧ್ರ ವಿರುದ್ಧ ಹೋರಾಡಲು ನೆರವಾಗುವುದು. ಸುಧಾರಣೆ ಕಾಣುವ ತನಕ ಪ್ರತಿನಿತ್ಯವು ಅಲೋವೆರಾ ಜ್ಯೂಸ್ ಅನ್ನು ಕುಡಿಯಬಹುದು. ಎರಡು ಚಮಚ ತಾಜಾ ಅಲೋವೆರಾ ಲೋಳೆಯನ್ನು ಹಣ್ಣಿನ ಜ್ಯೂಸ್ ಗೆ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಅಲೋವೆರಾ ಲೋಳೆಯನ್ನು ನೇರವಾಗಿ ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಬಹುದು.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಪುದೀನಾ ಎಣ್ಣೆಯಲ್ಲಿ ಕೂಡ ಚಾ ಮರದ ಎಣ್ಣೆಯಂತೆ ಶಿಲೀಂಧ್ರ ವಿರೋಧಿ ಗುಣಗಳು ಇವೆ. ಆದರೆ ಇದನ್ನು ಸಾರಗುಂದಿಸದೆ ಬಳಸಿದರೆ ಅದು ತುಂಬಾ ಕಿರಿಕಿರಿ ಉಂಟು ಮಾಡುವುದು. ಇದರಿಂದ ಕೆಲವು ಹನಿ ಪುದೀನಾ ಎಣ್ಣೆಯನ್ನು ಬೇರೆ ಯಾವುದೇ ಎಣ್ಣೆಯ ಜತೆಗೆ ಮಿಶ್ರಣ ಮಾಡಿ ಹಚ್ಚಿಕೊಳ್ಳಿ. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ಪ್ರತಿನಿತ್ಯ ಪುದೀನಾ ಚಹಾ ಕುಡಿದರೆ ಅದರಿಂದ ಸೋಂಕು ನಿವಾರಣೆಗೆ ಸಹಕಾರಿ ಆಗಿರುವುದು. ಹೀಗೆ ಚಹಾ ಮಾಡಿ ಕುಡಿದರೆ ಅದರಿಂದ ಚೇತರಿಕೆಗೆ ತುಂಬಾ ನೆರವಾಗಲಿದೆ ಮತ್ತು ವೇಗ ಸಿಗಲಿದೆ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀಯು ಹಲವಾರು ವಿಧದ ಆರೋಗ್ಯ ಗುಣಗಳನ್ನು ಹೊಂದಿದೆ. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ನಿಂದಾಗಿ ದೇಹವು ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು. ಪ್ರತಿನಿತ್ಯವು ಗ್ರೀನ್ ಟೀ ಕುಡಿದರೆ ಅದರಿಂದ ಸೋಂಕು ನಿವಾರಣೆಗೆ ಸಹಕಾರಿ ಆಗಿರಲಿದೆ. ಬಳಸಿದ ಗ್ರೀನ್ ಟೀ ಬ್ಯಾಗ್ ಅನ್ನು ತೆಗೆದುಕೊಂಡು ಅದನ್ನು ಫ್ರಿಡ್ಜ್ ನಲ್ಲಿ ಇಟ್ಟುಬಿಡಿ. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ಸ್ನಾನ ಮಾಡುವ ವೇಳೆ ಗ್ರೀನ್ ಟೀ ಎಲೆಗಳನ್ನು ಹಾಕಿಕೊಂಡರೆ ಅದು ಸೋಂಕು ನಿವಾರಣೆಗೆ ನೆರವಾಗುವುದು.

ಕಲ್ಲುಪ್ಪು

ಕಲ್ಲುಪ್ಪು

ಕಿರಿಕಿರಿ ಉಂಟು ಮಾಡುವ ಚರ್ಮಕ್ಕೆ ಶಮನ ನೀಡಲು ಕಲ್ಲುಪ್ಪು ತುಂಬಾ ಪರಿಣಾಮಕಾರಿ ಆಗಿದೆ. ಇದು ಶಿಲೀಂಧ್ರವನ್ನು ಕೊಲ್ಲಲು ನೆರವಾಗುವುದು. ನೀವು ಸ್ನಾನ ಮಾಡಲು ನೀರಿಗೆ ಒಂದು ಕಪ್ ಕಲ್ಲುಪ್ಪು ಬಳಸಿಕೊಳ್ಳಬಹುದು. ಬಿಸಿ ನೀರಿಗೆ ಹಾಕಿದ ಕಲ್ಲುಪ್ಪಿನಿಂದ ಸ್ನಾನ ಮಾಡಿ ಅಥವಾ ಅದರಲ್ಲಿ 10-15 ನಿಮಿಷ ಕಾಲ ನೆನೆಯಿರಿ. ವಾರದಲ್ಲಿ ಮೂರು ಸಲ ಹೀಗೆ ಮಾಡಬೇಕು. ಇದನ್ನು ಅತಿಯಾಗಿ ಬಳಕೆ ಮಾಡಬೇಡಿ.

ಓರೆಗಾನೊ ಎಣ್ಣೆ

ಓರೆಗಾನೊ ಎಣ್ಣೆ

ಓರೆಗಾನೊ ಎಣ್ಣೆಯು ಶಿಲೀಂಧ್ರ ಸೋಂಕು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಕಾರ್ವಾಕ್ರೋಲ್ ಮತ್ತು ಥೈಮೋಲ್ ಎನ್ನುವ ಅಂಶಗಳಿದ್ದು, ಶಿಲೀಂಧ್ರ ಅತಿಯಾಗಿ ಬೆಳೆಯುವ ವಿರುದ್ಧ ಮತ್ತು ನಿರ್ಜಲೀಕರಣವಾಗದಂತೆ ಇದು ತಡೆಯುವುದು. ಇದರ ವಿರುದ್ಧ ಶಿಲೀಂಧ್ರವು ಯಾವುದೇ ರೀತಿಯಲ್ಲಿ ಪ್ರತಿರೋಧವನ್ನು ಒಡ್ಡುವುದಿಲ್ಲ ಮತ್ತು ದೀರ್ಘಬಳಕೆಗೂ ಇದು ಸುರಕ್ಷಿತವಾಗಿದೆ. 2-4 ಹನಿ ಓರೆಗಾನೊ ಎಣ್ಣೆಯನ್ನು ಒಂದು ಲೋಟ ನೀರಿಗೆ ಹಾಕಿಕೊಂಡು ಪ್ರತಿನಿತ್ಯವು ಕುಡಿಯಬೇಕು. ನಿಮಗೆ ಇದರ ರುಚಿ ಹಿಡಿದ ಬಳಿಕ 5-6 ಹನಿ ಹಾಕಿಕೊಳ್ಳಬಹುದು. ಇದು ಗುಣಮುಖ ಮಾಡುವುದು ಮಾತ್ರವಲ್ಲದೆ ಮತ್ತೆ ಶಿಲೀಂಧ್ರವು ಮರಳದಂತೆ ತಡೆಯುವುದು.

ಶಿಲೀಂಧ್ರ ಸೋಂಕು ಬರದಂತೆ ತಡೆಯಲು ಇತರ ಕೆಲವು ವಿಧಾನಗಳು

ಶಿಲೀಂಧ್ರ ಸೋಂಕು ಬರದಂತೆ ತಡೆಯಲು ಇತರ ಕೆಲವು ವಿಧಾನಗಳು

* ಶಿಲೀಂಧ್ರವು ಹೆಚ್ಚಾಗಿ ತೇವಾಂಶ ಇರುವ ಜಾಗದಲ್ಲಿ ಬೆಳೆಯುವುದು. ಹೀಗಾಗಿ ನೀವು ಜನನೇಂದ್ರಿಯದ ಭಾಗವನ್ನು ಒಣಗಿರುವಂತೆ ನೋಡಿಕೊಳ್ಳಿ.

* ದೀರ್ಘಕಾಲ ತನಕ ಬಿಗಿಯಾಗಿರುವ ಒಳಉಡುಪು ಮತ್ತು ಬಟ್ಟೆಗಳನ್ನು ಧರಿಸದಂತೆ ನೋಡಿಕೊಳ್ಳಿ. ಇದರಿಂದ ಬೆವರು ಜಮೆಯಾಗುವುದು.

* ಹತ್ತಿ ಬಟ್ಟೆಯು ತೇವಾಂಶ ಹೀರಿಕೊಳ್ಳುವ ಕಾರಣದಿಂದಾಗಿ ಯಾವಾಗಲೂ ನೀವು ಹತ್ತಿ ಬಟ್ಟೆಯ ಒಳ ಉಡುಪು ಬಳಸಿಕೊಳ್ಳಿ.

* ವ್ಯಾಯಾಮದ ಬಳಿಕ ನೀವು ಹಾಗೆ ಸ್ವಲ್ಪ ಸಮಯ ಕಳೆಯಬಹುದು. ಆದರೆ ನೀವು ಅತಿಯಾಗಿ ಬೆವರುತ್ತಿರುವ ಕಾರಣದಿಂದಾಗಿ ವ್ಯಾಯಾಮದ ವೇಳೆ ಧರಿಸಿದ ಬಟ್ಟೆಗಳನ್ನು ತಕ್ಷಣವೇ ತೆಗೆಯಬೇಕು. ಅದೇ ರೀತಿಯಾಗಿ ಈಜಿ ಬಂದ ಕೂಡಲೇ ಸಹ ಬಟ್ಟೆ ಬದಲಿಸಿ.

* ಟಾಂಪನ್ ಅಥವಾ ಪ್ಯಾಡ್ ಬದಲಿಸದೆ ಇದ್ದರೆ ಆಗ ನೀವು ಇಂತಹ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತೆ ಆಗುವುದು. ಇವುಗಳನ್ನು ಸುಮಾರು 6-8 ಗಂಟೆಗಳ ಕಾಲ ಬಳಕೆ ಮಾಡಬಹುದು ಎಂದು ಕಂಪೆನಿಗಳು ಜಾಹೀರಾತು ನೀಡಿದರೂ ನಾಲ್ಕು ಗಂಟೆಗೊಮ್ಮೆ ಬದಲಾವಣೆ ಮಾಡಿದರೆ ಒಳ್ಳೆಯದು.

* ಯೋನಿ ಭಾಗದ ಸುಗಂಧ ದ್ರವ್ಯ, ಸ್ಪ್ರೇ ಮತ್ತು ಲೋಷನ್ ಮತ್ತು ಇತರ ಯಾವುದೇ ರೀತಿಯ ಸ್ವಚ್ಛತಾ ಉತ್ಪನ್ನಗಳಲ್ಲಿ ಸುಗಂಧವು ಇರುವ ಕಾರಣದಿಂದಾಗಿ ಅದನ್ನು ಬಳಕೆ ಮಾಡಿದ ವೇಳೆ ಕಿರಿಕಿರಿ ಉಂಟಾಗುವುದು. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದ ಅಸಮತೋಲನಕ್ಕೂ ಇದು ಕಾರಣವಾಗಬಹುದು.

* ನೀರು ಇರುವಂತಹ, ಸುಗಂಧ ರಹಿತವಾಗ ಲ್ಯುಬ್ರಿಕೆಂಟ್ ಅನ್ನು ಲೈಂಗಿಕ ಕ್ರಿಯೆ ವೇಳೆ ಬಳಸಿಕೊಳ್ಳಿ. ಇದರ ಬಳಿಕ ನೀವು ಸ್ನಾನ ಮಾಡಿಕೊಳ್ಳಲು ಮರೆಯಬೇಡಿ.

* ಸಕ್ಕರೆಯಿಂದಾಗಿ ಶಿಲೀಂಧ್ರ ಸೋಂಕು ಹೆಚ್ಚಾಗುವುದು. ಹೀಗಾಗಿ ಸಕ್ಕರೆ ಸೇವನೆ ಕಡಿಮೆ ಮಾಡಿದರೆ ಒಳ್ಳೆಯದು.

* ಯಾವುದೇ ರೀತಿಯ ಆಂಟಿಬಯೋಟಿಕ್ ಗಳನ್ನು ನೀವಾಗಿಯೇ ಸೇವಿಸಬೇಡಿ ಮತ್ತು ವೈದ್ಯರ ಸಲಹೆ ಪಡೆದು ಇದನ್ನು ಬಳಸಿ.

English summary

Home Remedies For Yeast Infection

Here we are discussing about how to diagnose and treat a yeast infection at home. yeast infections symptoms are mild, or if you see them occurring for the first time, it is often best to wait for them to clear up by themselves. If they don’t clear up, there are several home remedies and over the top medications you can use to treat them. Read more.
Story first published: Friday, January 3, 2020, 17:10 [IST]
X
Desktop Bottom Promotion