For Quick Alerts
ALLOW NOTIFICATIONS  
For Daily Alerts

ಅಜೀರ್ಣದಿಂದ ಹೊಟ್ಟೆನೋವೇ? ಈ ಮನೆಮದ್ದುಗಳು ಪರಿಣಾಮಕಾರಿ ನೋಡಿ

|

ಅಜೀರ್ಣ ಸಮಸ್ಯೆ ಯಾವಾಗ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ತಿಂದ ಆಹಾರದಲ್ಲಿ ಗ ಹೆಚ್ಚು ಕಮ್ಮಿಯಾದರೆ ಅಥವಾ ತಿಂದ ಆಹಾರವನ್ನು ಅರಗಿಸಿಕೊಳ್ಳುವ ಸಾಮಾರ್ಥ್ಯ ನಮ್ಮ ದೇಹಕ್ಕೆ ಇಲ್ಲದಿದ್ದರೆ ಅಜೀರ್ಣ ಉಂಟಾಗುವುದು. ಆಗ ಹೊಟ್ಟೆ ನೋವು ಉಂಟಾಗುವುದು.

Natural Way Of Treating Indigestion With Home Remedies | Boldsky Kannada
Stomach Pain By Indigestion, Try This Home Remedies

ಈ ಸಮಸ್ಯೆ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಉಂಟಾಗುತ್ತದೆ. ತುಂಬಾ ತಿನ್ನುವುದು, ಜಗಿಯದೆ ಬೇಗ-ಬೇಗ ತಿನ್ನುವುದು, ಅಧಿಕ ಕೊಬ್ಬಿನ ಅಥವಾ ಖಾರದ ಆಹಾರ ಪದಾರ್ಥ ಸೇವನೆ, ಅತ್ಯಧಿಕ ಮದ್ಯ ಸೇವನೆ, ಮಾನಸಿಕ ಒತ್ತಡ ಈ ಎಲ್ಲಾ ಸಮಸ್ಯೆಗಳಿಂದ ಅಜೀರ್ಣ ಸಮಸ್ಯೆ ಉಂಟಾಗುವುದು.

ಅಜೀರ್ಣ ಸಮಸ್ಯೆಗೆ ಮನೆಮದ್ದು ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಅಜೀರ್ಣಕ್ಕೆಕೆಲ ಮನೆಮದ್ದು ನೀಡಿದ್ದೇವೆ, ಇವುಗಳು ನಿಮ್ಮ ಹೊಟ್ಟೆ ನೋವು ಬೇಗನೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

1. ಶುಂಠಿ

1. ಶುಂಠಿ

ಇದನ್ನು ಅಜೀರ್ಣ ಸಮಸ್ಯೆಗೆ ಮನೆಮದ್ದಾಗಿ ಹೆಚ್ಚಾಗಿ ಬಳಸಲಾಗುತ್ತಿದೆ. ಆ್ಯಸಿಡ್ ರಿಫ್ಲೆಕ್ಸ್ ಉಂಟಾದಾಗ ಇದನ್ನು ಬಾಯಿಗೆ ಹಾಕಿ ಜಗಿದರೆ ಸಾಕು. ಇಲ್ಲಾಂದರೆ ಊಟದ ಬಳಿಕ ಸ್ವಲ್ಪ ಶುಂಠಿ ಟೀ ಮಾಡಿ ಕುಡಿದರೆ ಸಾಕು ಜೀರ್ಣಕ್ರಿಯೆಗೆ ಸಹಕಾರಿ, ಹೊಟ್ಟೆ ನೋವು ಕಡಿಮೆಯಾಗುವುದು.

2. ಅಜ್ವೈನ್

2. ಅಜ್ವೈನ್

ಅಜ್ವೈನ್‌ ಅಜೀರ್ಣ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಇದನ್ನು ಸ್ವಲ್ಪ ಬಾಯಿಗೆ ಹಾಕಿ ಜಗಿದರೆ ಸಾಕು ಹೊಟ್ಟೆ ಉಬ್ಬುವುದು ಕಡಿಮೆಯಾಗುವುದು, ಗ್ಯಾಸ್‌ ಟ್ರಬಲ್ ಇರುವುದಿಲ್ಲ.

ಊಟ ಸ್ವಲ್ಪ ಅಧಿಕ ಮಾಡಿದ್ದೇನೆ ಅಥವಾ ಜೀರ್ಣವಾಗುತ್ತಿಲ್ಲ, ಹೊಟ್ಟೆಯಲ್ಲಿ ಏನೋ ತಳಮಳ ಉಂಟಾಗುತ್ತಿದೆ ಎಂದು ಅನಿಸಿದಾಗ ಒಂದು ಚಮಚ ಅಜ್ವೈನ್ ಬಾಯಿಗೆ ಹಾಕಿ ಜಗಿದು ನೀರು ಕುಡಿದರೆ ಸಾಕು.

3. ಸೋಂಪು

3. ಸೋಂಪು

ಸೋಂಪಿನಲ್ಲಿ ಫೆಂಚೋನೆ, ಅನ್ತೋಲೆ ಎಂಬ ಅಂಶವಿರುವುದರಿಂದ ಇದು ಹೊಟ್ಟೆಯಲ್ಲಿರುವ ಗ್ಯಾಸ್‌ ಹೊರ ಹಾಕುವಲ್ಲಿ ಸಹಕಾರಿ. ಇದರಿಂದ ಹೊಟ್ಟೆ ಉಬ್ಬುವುದು ಕಡಿಮೆಯಾಗುವುದು, ಇದನ್ನು ಊಟವಾದ ಬಳಿಕ ಸ್ವಲ್ಪ ಬಾಯಿಗೆ ತಿನ್ನಬಹುದು, ಇಲ್ಲಾ ನೀರಿನಲ್ಲಿ ಹಾಕಿ ಕುದಿಸಿ ಕುಡಿದರೂ ಸಾಕು.

4. ನೆಲ್ಲಿಕಾಯಿ

4. ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿರುವ ಅನೇಕ ಔಷಧೀಯ ಗುಣಗಳಲ್ಲಿ ಅಜೀರ್ಣ ಸಮಸ್ಯೆ ಹೋಗಲಾಡಿಸುವುದು ಕೂಡ ಒಂದು. ಆಗಾಗ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರೆ ಆಮ್ಲ ಜ್ಯೂಸ್‌ ತುಂಬಾ ಸಹಕಾರಿ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲ ಜ್ಯೂಸ್‌ ಕುಡಿದರೆ ಸಾಕು ಈ ಸಮಸ್ಯೆ ಇಲ್ಲವಾಗುವುದು.

5. ನೀರು ಕುಡಿಯಿರಿ

5. ನೀರು ಕುಡಿಯಿರಿ

ಜೀರ್ಣವಾಗಲು ನಾವು ನೀರು ಕುಡಿಯಬೇಕು. ಅದರಲ್ಲೂ ಊಟದ ಬಳಿಕ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ದಿನದಲ್ಲಿ 8 ಲೋಟ ನೀರು ಕುಡಿಯಿರಿ. ಊಟವಾದ ಬಳಿಕ ಬಿಸಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು.

6. ಪುದೀನಾ

6. ಪುದೀನಾ

ಪುದೀನಾದಲ್ಲಿ ಆ್ಯಂಟಿಮೈಕ್ರೋಬಯಲ್ ಮತ್ತು ಗ್ಯಾಸ್ಟ್ರೋಇಂಟನ್‌ಸ್ಟೈನಲ್ ಅಂಶವಿರುವುದರಿಂದ ಅಜೀರ್ಣ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ. ಊಟದ ಬಳಿಕ ಒಂದು ಎಲೆ ಪುದೀನಾ ಬಾಯಿಗೆ ಹಾಕಿಕೊಳ್ಳಬಹುದು, ಇಲ್ಲಾ ಪುದೀನಾ ಜ್ಯೂಸ್‌ ಕುಡಿಯಬಹುದು. ಭರ್ಜರಿ ಊಟ ಮಾಡಿದ್ದಾಗ ಈ ರೀತಿ ಮಾಡಿದರೆ ಅಜೀರ್ಣ ಸಮಸ್ಯೆ ಕಾಡುವುದಿಲ್ಲ.

7. ನಿಂಬೆಜ್ಯೂಸ್, ಅಡುಗೆ ಸೋಡಾ ಮತ್ತು ನೀರು

7. ನಿಂಬೆಜ್ಯೂಸ್, ಅಡುಗೆ ಸೋಡಾ ಮತ್ತು ನೀರು

ಒಂದು ಲೋಟ ನೀರಿಗೆ ಚಿಟಕೆಯಷ್ಟು ಅಡುಗೆ ಸೋಡಾ ಹಾಕಿ ಅದಕ್ಕೆ ನಿಂಬೆರಸ ಹಾಕಿ ಕುಡಿದರೆ ಗ್ಯಾಸ್‌ ಹೊರ ಹೋಗುವುದು, ಹೊಟ್ಟೆಯೂ ನಿರಾಳವಾಗುವುದು. ತುಂಬಾ ಹೊಟ್ಟೆ ನೋವು ಕಾಣಿಸಿದಾಗ ಹೀಗೆ ಮಾಡಿ ಕುಡಿಯಿರಿ, ತಕ್ಷಣ ಕಡಿಮೆಯಾಗುವುದು.

8. ತುಳಸಿ

8. ತುಳಸಿ

ತುಳಸಿಯನ್ನು ಅಜೀರ್ಣ ಸಮಸ್ಯೆ ಹೋಗಲಾಡಿಸಲು ಮನೆಮದ್ದಾಗಿ ಬಳಸಬಹುದು. ಒಂದು ಕಪ್ ನೀರಿಗೆ 10 ತುಳಸಿ ಎಲೆ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ಬೆರೆಸಿ ಕುಡಿಯಿರಿ. ಇದರಿಂದ ಅಜೀರ್ಣ ಕಡಿಮೆಯಾಗುವುದು, ಹೊಟ್ಟೆ ನಿರಾಳವಾಗುವುದು.

9. ಲವಂಗ

9. ಲವಂಗ

ಲವಂಗದಲ್ಲಿ ಉರಿಯೂತ ಕಡಿಮೆ ಮಾಡುವ, ಅಲ್ಸರ್ ಸಮಸ್ಯೆ ಕಡಿಮೆ ಮಾಡುವ, ಗ್ಯಾಸ್ಟ್ರೋಪ್ರೊಟೆಕ್ಟಿವ್ ಅಂಶವಿದೆ. ಇದರಿಂದಾಗಿ ಜೀರ್ಣಕ್ರಿಯೆ ಹೋಗಲಾಡಿಸಲು ಸಹಕಾರಿ. ಎರಡು ಲವಂಗ ಬಾಯಿಗೆ ಹಾಕಿ ಜಗಿದು ಅದರ ರಸ ಕುಡಿದರೆ ಕೂಡ ಹೊಟ್ಟೆ ನೋವು ತಕ್ಷಣ ಕಡಿಮೆಯಾಗುವುದು.

10. ಬಾಳೆಹಣ್ಣು

10. ಬಾಳೆಹಣ್ಣು

ಊಟವಾದ ಬಳಿಕ ಒಂದು ಬಾಳೆಹಣ್ಣು ತಿನ್ನುವುದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಇದು ಜೀರ್ಣಕ್ರಿಯೆ ಹಾಗೂ ಮಲವಿಸರ್ಜನೆಗೆ ಸಹಕಾರಿ. ಊಟ ಸ್ವಲ್ಪ ಅಧಿಕವಾಯ್ತು, ಇಲ್ಲಾ ಅಜೀರ್ಣ ಉಂಟಾಗಬಹುದು ಎಂದು ಅನಿಸಿದರೆ ಊಟವಾದ ಬಳಿಕ ಒಂದು ಬಾಳೆಹಣ್ಣು ತಿನ್ನಿ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಕಾಡುವುದಿಲ್ಲ.

11. ಬರೀ ಅನ್ನ

11. ಬರೀ ಅನ್ನ

ಅಜೀರ್ಣ ಸಮಸ್ಯೆ ಹೋಗಲಡಿಸಲು ಬರೀ ಅನ್ನ ತಿನ್ನುವುದು ಕೂಡ ಒಳ್ಳೆಯದು. ಅನ್ನ ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಮಲವಿಸರ್ಜನೆಯಾಗುವುದು, ಇದರಿಂದ ಹೊಟ್ಟೆ ನಿರಾಳವಾಗುವುದು.

ಸೂಚನೆ: ಈ ಮನೆಮದ್ದುಗಳು ಅಜೀರ್ಣ ಸಮಸ್ಯೆ ಹೋಗಲಾಡಿಸಲು ತುಂಬಾ ಸಹಕಾರಿ. ಆದರೆ ಆಗಾಗ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಇವುಗಳನ್ನೇ ಮಾಡುತ್ತಾ ಇರಬೇಡಿ, ಬೇರೆ ಏನಾದರೂ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು. ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

English summary

Home Remedies for Indigestion: Natural Ways to Treat at Home

Indigestion is usually no cause for concern, and it can be treated using simple home remedies that will bring relief and won't have any side effects. Read on to know.
X
Desktop Bottom Promotion