For Quick Alerts
ALLOW NOTIFICATIONS  
For Daily Alerts

ಕ್ಯಾಂಡಿಡ ಸೋಂಕು ನಿವಾರಣೆಗೆ ಇಲ್ಲಿವೆ ಕೆಲವು ಮನೆಮದ್ದುಗಳು

|

ಚರ್ಮವನ್ನು ಹಲವಾರು ರೀತಿಯ ಸೋಂಕುಗಳು ಹಾಗೂ ಬ್ಯಾಕ್ಟೀರಿಯಾಗಳು ಕಾಡುತ್ತಲಿರುವುದು, ಇದರಿಂದಾಗಿ ಚರ್ಮದ ನಾನಾ ಸಮಸ್ಯೆಗಳು ಬರುವುದು. ನಮ್ಮ ದೇಹದಲ್ಲಿ ಏನಾದರೂ ವ್ಯತ್ಯಯವಾದ ವೇಳೆ ಇಂತಹ ಸೋಂಕು ಕಾಣಿಸಬಹುದು ಅಥವಾ ಹೊರಗಿನಿಂದ ಬಂದಿರುವಂತಹ ಸೋಂಕುಕಾರಕದಿಂದಲೂ ಇದು ಕಾಡಬಹುದು.

Home Remedies For Candida Fungal Infections In Kannada

ಕ್ಯಾಂಡಿಡಾ ಎನ್ನುವುದು ಕೂಡ ಒಂದು ರೀತಿಯ ಸೋಂಕು ಆಗಿದ್ದು, ಇದು ಕೆಲವೊಂದು ಸಲ ಪ್ರತಿರೋಧಕ ಶಕ್ತಿ ದುರ್ಬಲವಾದಾಗ, ಬ್ಯಾಕ್ಟೀರಿಯಾ ಸೋಂಕು, ರೋಗ ನಿರೋಧಕಗಳು, ಗರ್ಭನಿರೋಧಕಗಳನ್ನು ದೀರ್ಘಕಾಲ ಬಳಸುವುದು ಮತ್ತು ಗರ್ಭಧಾರಣೆ ವೇಳೆ ಸಂಭವಿಸಬಹುದು.

ಕ್ಯಾಂಡಿಡ ಸಮಸ್ಯೆಯು ಕಂಡುಬಂದರೆ ಆಗ ಅತಿಯಾದ ತುರಿಕೆ ಮತ್ತು ಚರ್ಮವು ಕೆಂಪಾಗುವುದು. ಇದು ಚರ್ಮ, ಬಾಯಿ, ಹೊಟ್ಟೆ, ಮೂತ್ರಕೋಶ ಮತ್ತು ಯೋನಿಯಲ್ಲಿ ಕಂಡುಬರುವುದು. ಕ್ಯಾಂಡಿಡ ಶಿಲೀಂಧ್ರವು ಹೆಚ್ಚಾಗಿ ಬಿಸಿ ಹಾಗೂ ತೇವಾಂಶವಿರುವ ಪ್ರದೇಶಗಳಲ್ಲಿ ಬೆಳೆಯುವುದು. ಅದರಲ್ಲೂ ಇದು ಮಧುಮೇಹಿಗಳನ್ನು ಹೆಚ್ಚು ದಾಳಿ ಮಾಡುವುದು.

ಕ್ಯಾಂಡಿಡ ಸಮಸ್ಯೆಯು ದೀರ್ಘಕಾಲಿಕವಾಗಿದ್ದರೆ ಅದರಿಂದ ನಿಶ್ಯಕ್ತಿ, ತಲೆಭಾರವಾಗುವುದು, ಕಿರಿಕಿರಿ ಮತ್ತು ನೆನೆಪಿನ ಶಕ್ತಿ ಕುಂದುವುದು. ನಿಮಗೆ ಇದು ದೀರ್ಘಕಾಲಿಕವಾಗಿ ಇದೆಯಾ ಅಥವಾ ತಾತ್ಕಾಲಿಕವಾಗಿ ಬಂದಿದೆಯಾ ಎನ್ನುವುದು ಮುಖ್ಯವಿಲ್ಲ. ನೀವು ಇದಕ್ಕೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ನಾವೆಲ್ಲರೂ ನಿತ್ಯದ ಅಡುಗೆಯಲ್ಲಿ ಬೆಳ್ಳುಳ್ಳಿ ಬಳಕೆ ಮಾಡುತ್ತೇವೆ. ಇದು ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಇರುವಂತಹ ಶಿಲೀಂಧ್ರ ವಿರುದ್ಧ ಹೋರಾಡು ಗುಣವು ಕ್ಯಾಂಡಿಡ ಸೋಂಕಿನ ವಿರುದ್ಧ ಹೋರಾಡುವ ಗುಣ ಹೊಂದಿದೆ. ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ಸೇವನೆ ಮಾಡಿ. ದಿನಕ್ಕೆ ಒಂದೆರಡು ಹಸಿ ಬೆಳ್ಳುಳ್ಳಿ ತಿಂದರೂ ಒಳ್ಳೆಯದು. ನಿಮಗೆ ಬೆಳ್ಳುಳ್ಳಿ ಘಾಟು ಇಷ್ಟವಾಗದೆ ಇದ್ದರೆ ಆಗ ನೀವು ಇದರ ಸಪ್ಲಿಮೆಂಟ್ ತೆಗೆದುಕೊಳ್ಳಬಹುದು. ದಿನಕ್ಕೆ ನೀವು 600-900 ಮಿ.ಗ್ರಾಂ. ಸೇವನೆ ಮಾಡಬಹುದು. ನೀವು ಹಸಿ ಬೆಳ್ಳುಳ್ಳಿಯನ್ನು ಬಾಧಿತ ಜಾಗಕ್ಕೆ ಹಚ್ಚಬಹುದು.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಸೋಂಕು ನಿವಾರಕ ಗುಣವನ್ನು ಹೊಂದಿರುವ ತೆಂಗಿನ ಎಣ್ಣೆಯು ಕ್ಯಾಂಡಿಡ ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಿರುವುದು. ಇದು ಮಧ್ಯಮ ಕೊಬ್ಬಿನಾಮ್ಲವನ್ನು ಹೊಂದಿದೆ. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕ್ಯಾಂಡಿಡವನ್ನು ಕೊಲ್ಲಲು ನೆರವಾಗುವುದು ಎಂದು ಅಧ್ಯಯನಗಳು ಹೇಳಿವೆ. ನೀವು ದಿನಕ್ಕೆ ನಾಲ್ಕು ಸಲ ಬಾಧಿತ ಜಾಗಕ್ಕೆ ತೆಂಗಿನ ಎಣ್ಣೆ ಹಚ್ಚಿಕೊಳ್ಳಿ ಮತ್ತು ನಿಮಗೆ ಇದರಲ್ಲಿ ಸುಧಾರಣೆ ಕಂಡುಬರುವುದು.

ನಿಮ್ಮ ಆಹಾರ ಕ್ರಮದಲ್ಲಿ ನೀವು ಇದನ್ನು ಬಳಕೆ ಮಾಡಬಹುದು. ನೀವು ದಿನಕ್ಕೆ ಒಂದು ಚಮಚ ಪರಿಶುದ್ಧ ತೆಂಗಿನ ಎಣ್ಣೆ ಕುಡಿಯಬಹುದು.

ಮೊಸರು

ಮೊಸರು

ಮೊಸರಿನಲ್ಲಿ ಜೀವಂತವಾದ ಪ್ರೋಬಯೋಟಿಕ್ ಗಳು ಇವೆ ಮತ್ತು ಇದು ಕ್ಯಾಂಡಿಡ ಅಥವಾ ಯೀಸ್ಟ್ ಸೋಂಕಿನ ವಿರುದ್ಧ ಹೋರಾಡುವುದು. ಲ್ಯಾಕ್ಟಿಕ್ ಆಮ್ಲವನ್ನು ಇದು ಹೊಂದಿರುವ ಕ್ಯಾಂಡಿಡ ಸೋಂಕನ್ನು ದೂರವಿಡುವುದು.

ಮೊಸರನ್ನು ನೀವು ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

ನೀವು ಮೊಸರನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಬಹುದು. ನೀವು ದಿನಕ್ಕೆ ಎರಡು ಸಲ ಹೀಗೆ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದು.

ಚಾ ಮರದ ಎಣ್ಣೆ

ಚಾ ಮರದ ಎಣ್ಣೆ

ಶಿಲಿಂಧ್ರ ವಿರೋಧಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವಂತಹ ಚಾ ಮರದ ಎಣ್ಣೆಯನ್ನು ಕ್ಯಾಂಡಿಡ ಸೋಂಕಿಗೆ ಬಳಸಬಹುದಾಗಿದೆ.

ಯೋನಿ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ಆಗ ಕೆಲವು ಹನಿ ತೈಲವನ್ನು ನೀವು ಟ್ಯಾಂಪ್ಟನ್ ನಿಗೆ ಹಾಕಿಕೊಂಡು ಬಳಸಿ. ನಾಲ್ಕರಿಂದ ಆರು ಗಂಟೆಗಳಲ್ಲಿ ಇದನ್ನು ಬದಲಾಯಿಸಿ.

ಬಾಯಿಯಲ್ಲಿ ಸಮಸ್ಯೆಯಿದ್ದರೆ ಆಗ ನೀವು ಏಳು ಹನಿ ಚಾ ಮರದ ಎಣ್ಣೆಯನ್ನು ಒಂದು ಕಪ್ ನೀರಿಗೆ ಹಾಕಿಕೊಂಡು ಬಾಯಿ ಮುಕ್ಕಳಿಸಿ. ದಿನದಲ್ಲಿ ಎರಡು ಸಲ ನೀವು ಹೀಗೆ ಮಾಡಿ. ಸೋಂಕು ಬೇಗನೆ ನಿವಾರಣೆ ಆಗುವುದು. ಇದನ್ನು ಕುಡಿಯಲು ಹೋಗಬೇಡಿ.

ಒರೆಗಾನೊ ತೈಲ

ಒರೆಗಾನೊ ತೈಲ

ಒರೆಗಾನೊ ಎಣ್ಣೆಯಲ್ಲಿ ಕಾರ್ವಕ್ರೊಲ್ ಎನ್ನುವ ಅಂಶವಿದ್ದು, ಇದು ಕ್ಯಾಂಡಿಡ ಸೋಂಕು ಬೆಳೆಯದಂತೆ ತಡೆಯುವುದು. ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಇದು ಕ್ಯಾಂಡಿಡವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ನೀವು ಕೆಲವು ಹನಿ ಒರೆಗಾನೊ ತೈಲವನ್ನು ಆಲಿವ್ ತೈಲದ ಜತೆಗೆ ಮಿಶ್ರಣ ಮಾಡಿಕೊಂಡು ಬಾಧಿತ ಜಾಗಕ್ಕೆ ಹಚ್ಚಿ ಮತ್ತು ಕೆಲವು ಗಂಟೆ ಹಾಗೆ ಬಿಡಿ. ದಿನಾಲೂ ಹೀಗೆ ಮಾಡಿ.

ಮೂರು ಹನಿ ಒರೆಗಾನೊ ಎಣ್ಣೆಯನ್ನು ಒಂದು ಲೋಟ ನೀರಿಗೆ ಹಾಕಿಕೊಂಡು ದಿನಕ್ಕೆ ಎರಡು ಸಲ ವಾರದ ಕಾಲ ಕುಡಿದರೆ ಫಲಿತಾಂಶ ಸಿಗುವುದು.

ನೀವು ಒರೆಗಾನೊ ಎಣ್ಣೆಯ ಕ್ಯಾಪ್ಸೂಲ್ ತೆಗೆದುಕೊಳ್ಳುತ್ತಿದ್ದರೆ, ಆಗ ನೀವು ಊಟದ ಬಳಿಕ ಒಂದು ಅಥವಾ ಎರಡು ಕ್ಯಾಪ್ಸೂಲ್ ಸೇವಿಸಿ. ಎರಡರಿಂದ ಮೂರು ವಾರಗಳ ಕಾಲ ನೀವು ಇದನ್ನು ಮುಂದುವರಿಸಿ.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಇದು ಹಲವಾರು ರೀತಿಯ ಕಾಯಿಲೆಗಳಿಗೆ ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಂಡಿಡ ಸೋಂಕು ನಿವಾರಣೆಗೂ ಇದು ಪರಿಣಾಮಕಾರಿ. ಇದು ದೇಹದಲ್ಲಿ ಪಿಎಚ್ ಮಟ್ಟವನ್ನು ಕಾಪಾಡಲು ತುಂಬಾ ಸಹಕಾರಿ ಆಗಿರುವುದು.

ಕಿಣ್ವಗಳಿಂದ ಸಮೃದ್ಧವಾಗಿರುವ ಇದು ಕ್ಯಾಂಡಿಡವನ್ನು ನಿಯಂತ್ರಣದಲ್ಲಿ ಇಡುವುದು. ಶಿಲೀಂಧ್ರಗಳಿಗೆ ಅಹಿತಕರ ವಾತಾವರಣ ಸೃಷ್ಟಿಸುವ ಇದು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗೆ ನೆರವಾಗುವುದು ಮತ್ತು ಕರುಳಿನಲ್ಲಿನ ಸಮತೋಲನ ಕಾಪಾಡುವುದು.

ಒಂದು ಲೋಟ ನೀರಿಗೆ ಒಂದು ಚಮಚ ಪರಿಶುದ್ಧ ಆಪಲ್ ಸೀಡರ್ ವಿನೇಗರ್ ಹಾಕಿ. ಊಟಕ್ಕೆ ಮೊದಲು ನೀವು ಇದನ್ನು ನಿಧಾನವಾಗಿ ಕುಡಿಯಿರಿ. ನಿಮಗೆ ಲಕ್ಷಣಗಳು ಕಡಿಮೆ ಆಗುವ ತನಕ ಕುಡಿಯಿರಿ. ಇದು ಒಣಗುತ್ತಾ ಇರುವಾಗ ಅದು ನಿಮಗೆ ಹೆಚ್ಚಾದಂತೆ ಕಂಡುಬರಬಹುದು.

ನೀವು ಆಪಲ್ ಸೀಡರ್ ವಿನೇಗರ್ ನ್ನು ಬಾಧಿತ ಜಾಗಕ್ಕೆ ಹಚ್ಚಬಹುದು ಅಥವಾ ಒಂದು ಕಪ್ ವಿನೇಗರ್ ನ್ನು ಸ್ನಾನ ಮಾಡುವ ವೇಳೆ ಬಿಸಿ ನೀರಿಗೆ ಹಾಕಿ ಮತ್ತು ಇದರಲ್ಲಿ 15 ನಿಮಿಷ ನೆನೆಯಿರಿ. ಕೆಲವು ದಿನಗಳ ಕಾಲ ಹೀಗೆ ಮಾಡಿ.

ಆಲಿವ್ ಎಲೆ

ಆಲಿವ್ ಎಲೆ

ಆಲಿವ್ ಎಲೆಯಲ್ಲಿ ಉನ್ನತ ಮಟ್ಟದ ಶಿಲೀಂಧ್ರ ವಿರೋಧಿ ಗುಣಗಳು ಇರುವ ಕಾರಣದಿಂಧಾಗಿ ಇದು ಕ್ಯಾಂಡಿಡ ಸೋಂಕು ನಾಶ ಮಾಡುವುದು. ಇದೇ ವೇಳೆ ಪ್ರತಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುವುದು.

ಒಂದೆರಡು ಚಮಚ ಆಲಿವ್ ಎಲೆಯನ್ನು ನೀರಿನಲ್ಲಿ 15 ನಿಮಿಷ ಕಾಲ ಕುಡಿಸಿ. ಇದರ ಬಳಿಕ ಅದರನ್ನು ಕುಡಿಯಿರಿ. ದಿನದಲ್ಲಿ ಎರಡು ಮೂರು ಕಪ್ ಕುಡಿಯಿರಿ.

ದಿನದಲ್ಲಿ ನೀವು ಎರಡು ಮೂರು ಸಲ ಆಲಿವ್ ಸಾರವನ್ನು ಕೂಡ ಸೇವನೆ ಮಾಡಬಹುದು.

ಕ್ರಾನ್ಬೇರಿಗಳು

ಕ್ರಾನ್ಬೇರಿಗಳು

ಕ್ಯಾಂಡಿಡ ಸೋಂಕು ನಿವಾರಣೆಗೆ ಕ್ರಾನ್ಬೇರಿಗಳು ತುಂಬಾ ಪರಿಣಾಮಕಾರಿ ಆಗಿದೆ. ಇದರಲ್ಲಿ ಇರುವಂತಹ ಅರ್ಬುಟಿನ್ ಎನ್ನುವ ಅಂಶವು ಸೋಂಕು ನಿವಾರಣೆ ಮಾಡುವುದು.

ನೀವು ದಿನಕ್ಕೆ ಎರಡು ಮೂರು ಸಲ ಸಕ್ಕರೆ ಹಾಕದೆ ಇರುವಂತಹ ಕ್ರಾನ್ಬೇರಿ ಜ್ಯೂಸ್ ನ್ನು ಕುಡಿದರೆ ಅದರಿಂದ ಕ್ಯಾಂಡಿಡ ಸೋಂಕು ಕಡಿಮೆ ಮಾಡಬಹುದು.

ನೀವು ದಿನಕ್ಕೆ ಎರಡು ಮೂರು ಸಲ ಕ್ಯಾನ್ಬೇರಿ ಮಾತ್ರೆಗಳನ್ನು ಸೇವನೆ ಮಾಡಬಹುದು.

ದಾಲ್ಚಿನಿ

ದಾಲ್ಚಿನಿ

ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಕೀಟನಾಶಕ ಗುಣವನ್ನು ಹೊಂದಿರುವಂತಹ ದಾಲ್ಚಿನಿಯು ಕ್ಯಾಂಡಿಡ ಸೋಂಕು ನಿವಾರಣೆಗೆ ತುಂಬಾ ಸಹಕಾರಿ ಆಗಿರುವುದು. ದಾಲ್ಚಿನಿ ಎಣ್ಣೆಯನ್ನು ಬಳಸಿಕೊಂಡು ಕ್ಯಾಂಡಿಡ ಸೋಂಕನ್ನು ನಿವಾರಣೆ ಮಾಡಬಹುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ.

ನೀವು ದಾಲ್ಚಿನಿ ಹುಡಿಯನ್ನು ಮೊಸರಿಗೆ ಮತ್ತು ಸಲಾಡ್ ಗೆ ಹಾಕಿ ಸೇವಿಸಬಹುದು ಅಥವಾ ಇದರ ಚಾ ಮಾಡಿ ಸೇವಿಸಬಹುದು.

ದಿನದಲ್ಲಿ ನೀವು ನಾಲ್ಕು ಗ್ರಾಂನಷ್ಟು ದಾಲ್ಚಿನಿ ಮಾತ್ರ ಸೇವನೆ ಮಾಡಬೇಕು. ದಾಲ್ಚಿನಿ ಎಣ್ಣೆಯನ್ನು 0.05ನಿಂದ 0.2 ಗ್ರಾಂನಷ್ಟು ನಿತ್ಯವೂ ಸೇವಿಸಹುದು. ಇದನ್ನು ನೀವು ಒಂದರಿಂದ ಎರಡು ತಿಂಗಳ ಕಾಲ ಮಾಡಿ.

ಕಪ್ಪು ವಾಲ್ ನಟ್

ಕಪ್ಪು ವಾಲ್ ನಟ್

ಇದರ ಸಿಪ್ಪೆಯಲ್ಲಿ ಉತ್ತಮ ಗುಣಮಟ್ಟದ ಟ್ಯಾನಿನ್ ಅಂಶವಿದ್ದು, ಇದು ಶಿಲೀಂಧ್ರ ವಿರೋಧಿ ಮತ್ತು ನಂಜುನಿರೋಧಕ ಗುಣ ಹೊಂದಿದೆ. ಶಿಲೀಂಧ್ರ ವಿರೋಧಿ ಮತ್ತು ರೋಗ ನಿರೋಧಕಗಳಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಂಡಿಡ ಸೋಂಕು ನಿವಾರಣೆ ಮಾಡಲು ಇದರ ಸಾರ ಅಥವಾ ಕ್ಯಾಪ್ಸೂಲ್ಸ್ ಬಳಕೆ ಮಾಡಿದರೆ

ಈ ಎಲ್ಲಾ ಮನೆಮದ್ದುಗಳೊಂದಿಗೆ ನೀವು ಕ್ಯಾಂಡಿಡ ತಡೆಯಲು ಉನ್ನತ ಮಟ್ಟದ ಕಾರ್ಬ್ರೋಹೈಡ್ರೇಟ್ ಮತ್ತು ಮತ್ತು ಸಕ್ಕರೆ ಇರುವ ಆಹಾರ ಸೇವನೆ ಕಡಿಮೆ ಮಾಡಬೇಕು. ಇದರಿಂದ ಕರುಳಿನಲ್ಲಿ ಯೀಸ್ಟ್ ಬೆಳವಣಿಗೆ ಹೆಚ್ಚಾಗುವುದು. ಪ್ರೋಬಯೋಟಿಕ್ ನ್ನು ನೀವು ಸೇವನೆ ಮಾಡುತ್ತಲಿರಿ. ಕೆಲವು ವಾರಗಳಲ್ಲಿ ಇದು ಬಗೆಹರಿಯದೆ ಇದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ.

English summary

Home Remedies For Candida Fungal Infections In Kannada

Here we are discussing about Home Remedies For Candida Fungal Infections In Kannada. Read more.
X
Desktop Bottom Promotion