For Quick Alerts
ALLOW NOTIFICATIONS  
For Daily Alerts

ಮಿಡ್‌ನೈಟ್‌ನಲ್ಲಿ ತಿಂಡಿ ತಿನ್ನುವ ಮನಸ್ಸಾಗುವವರು ಈ ತಿಂಡಿಗಳನ್ನು ಆರಾಮವಾಗಿ ಸೇವಿಸಬಹುದು..

|

ಹೆಚ್ಚಿನವರಿಗೆ ಮಧ್ಯರಾತ್ರಿ ಹಸಿವಾಗುವುದಿದೆ. ನಿದ್ದೆಯಿಂದ ತಕ್ಷಣ ಎದ್ದು ಏನಾದರೂ ತಿನ್ನಬೇಕು ಎಂಬ ಆಸೆಯಾಗುವುದು. ಇದು ಸಹಜ, ಹಾಗಂತ ಸಿಕ್ಕಸಿಕ್ಕ ಆಹಾರಗಳನ್ನ ಸೇವಿಸಿದರೆ, ಆರೋಗ್ಯಕ್ಕೆ ಹಾನಿ, ಜೊತೆಗೆ ತೂಕ ಹೆಚ್ಚಾಗುವ ಭಯ ಬೇರೆ. ಹಾಗಾದರೆ ಹಸಿವಿನಿಂದಲೇ ಮಲಗಬೇಕಾ ಎಂಬ ಪ್ರಶ್ನೆ ಬರುವುದು? ಚಿಂತೆ ಬೇಡ. ನಾವಿಲ್ಲಿ ನೀಡಿರುವ ತಿಂಡಿಗಳನ್ನು ನೀವು ಯಾವುದೇ ಭಯವಿಲ್ಲದೇ ಸೇವಿಸಬಹುದು. ಇದು ನಿಮ್ಮ ಮಿಡ್‌ನೈಟ್ ಕ್ರೇವಿಂಗ್ಸ್ ತೃಪ್ತಿಪಡಿಸುವುದಲ್ಲದೇ, ಆರೋಗ್ಯಕ್ಕೂ ಉತ್ತಮ.

ಮಿಡ್‌ನೈಟ್ ಕ್ರೆವಿಂಗ್ ವೇಳೆ ಯಾವುದೇ ಭಯವಿಲ್ಲದೇ ಸೇವಿಸಬಹುದಾದ ಕೆಲವು ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಬೆರ್ರಿಗಳು:

ಬೆರ್ರಿಗಳು:

ಬೆರ್ರಿಗಳಲ್ಲಿ ಫೈಬರ್ ತುಂಬಿದ್ದು, ಇದು ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಜೊತೆಗೆ ಅವುಗಳಲ್ಲಿ ಮೆಗ್ನೀಸಿಯಮ್ ಇದ್ದು, ಈ ಖನಿಜವು ನರಗಳನ್ನು ಮತ್ತು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ.

ಪೀನಟ್ ಸ್ಯಾಂಡ್‌ವಿಚ್ :

ಪೀನಟ್ ಸ್ಯಾಂಡ್‌ವಿಚ್ :

ಪೀನಟ್ ಬಟರ್‌ನಲ್ಲಿ ಟ್ರಿಪ್ಟೊಫಾನ್ ಇದ್ದು, ಅದು ನಿದ್ರೆಯನ್ನು ಉತ್ತೇಜಿಸಲು ಮೆದುಳಿನಲ್ಲಿ ಮೆಲಟೋನಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಟ್ರೈಪ್ಟೊಫಾನ್ ಮೆದುಳಿಗೆ ಹೆಚ್ಚು ಲಭ್ಯವಾಗಲು ಬ್ರೆಡ್‌ನಂತಹ ಕಾರ್ಬೋಹೈಡ್ರೇಟ್‌ಗಳು ಬೇಕಾಗುತ್ತವೆ. ಆದ್ದರಿಂದ ಪೀನಟ್ ಬಟರ್ ಹಾಗೂ ಬ್ರೆಡ್ ನಿದ್ರೆಗೆ ಮುಂಚಿನ ಲಘು ಉಪಾಹಾರಕ್ಕಾಗಿ ಮತ್ತು ಪೌಷ್ಟಿಕಾಂಶಕ್ಕೆ ಸೂಕ್ತವಾಗಿದೆ.

ಪಾಪ್‌ಕಾರ್ನ್ :

ಪಾಪ್‌ಕಾರ್ನ್ :

ಉಪ್ಪಿನ ಮತ್ತು ಗರಿಗರಿಯಾದ ಏನನ್ನಾದರೂ ತಿನ್ನಲು ಇಚ್ಛಿಸುವವರಿಗೆ, ಪಾಪ್‌ಕಾರ್ನ್ ಸೇವಿಸುವಂತೆ ನಾವು ಸೂಚಿಸುತ್ತೇವೆ. ಇದು ಹೆಚ್ಚು ನಾರಿನಾಂಶವಿರುವ ತಿಂಡಿಯಾಗಿದ್ದು, ಅದು ಮುಂದಿನ ಊಟದ ತನಕ ನಿಮ್ಮನ್ನು ಪೂರ್ಣವಾಗಿರಿಸುತ್ತದೆ. ಬೆಣ್ಣೆ ಮತ್ತು ಉಪ್ಪಿನ ಬದಲಿಗೆ, ಅದಕ್ಕೆ ಆಲಿವ್ ಎಣ್ಣೆ ಅಥವಾ ತಾಜಾ ಗಿಡಮೂಲಿಕೆಗಳಂತಹ ಹೃದಯಕ್ಕೆ ಆರೋಗ್ಯಕರವಾದ ಕೊಬ್ಬುಗಳನ್ನು ಸೇರಿಸಿ. ವಾಸ್ತವವಾಗಿ, ಮೂರು ಕಪ್‌ಗಳಷ್ಟು ಪಾಪ್‌ಕಾರ್ನ್‌ 100 ಕ್ಕಿಂತ ಕಡಿಮೆ ಕ್ಯಾಲೊರಿಗಳನ್ನು ಮತ್ತು ಸರಿಸುಮಾರು 4 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಇದು ಆ ಕ್ಷಣಕ್ಕೆ ಹೊಟ್ಟೆ ತುಂಬಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈ ಫ್ರೂಟ್ಸ್:

ಡ್ರೈ ಫ್ರೂಟ್ಸ್:

ವಾಲ್್ನಟ್ಸ್ ಮತ್ತು ಬಾದಾಮಿಯಂತಹ ಬೀಜಗಳು ನೈಸರ್ಗಿಕ ಮೆಲಟೋನಿನ್, ಪ್ರೋಟೀನ್ ಮತ್ತು ಮೆಗ್ನೀಷಿಯಂ ಅನ್ನು ಹೊಂದಿರುತ್ತವೆ. ಆದ್ದರಿಂದ ರಾತ್ರಿ ಹಸಿವಾದಾಗ ಬೆರಳೆಣಿಕೆಯಷ್ಟು ಡ್ರೈ ಫ್ರೂಟ್ಸ್ ತಿನ್ನುವುದರಿಂದ ನಿಮ್ಮ ಹಸಿವನ್ನೂ ನೀಗಿಸಬಹುದು ಜೊತೆಗೆ ಉತ್ತಮ ನಿದ್ರೆಯನ್ನು ಉಂಟುಮಾಡುತ್ತವೆ.

ಹುರಿದ ಕಡಲೆಬೀಜಗಳು:

ಹುರಿದ ಕಡಲೆಬೀಜಗಳು:

ಹುರಿದ ಕಡಲೆಬೀಜಗಳಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಮತ್ತು ಖನಿಜಾಂಶಗಳು ಅಧಿಕವಾಗಿದ್ದು, ಪೌಷ್ಟಿಕಾಂಶಭರಿತವಾದ ಕಡಿಮೆ ಕ್ಯಾಲೋರಿಯಿರುವ ತಿಂಡಿಯಾಗಿದೆ. ಇದು ಆಲೂಗೆಡ್ಡೆ ಚಿಪ್ಸ್ ನಂತಹ ತಿಂಡಿಗಳಿಗೆ ಆರೋಗ್ಯಕರ ಪರ್ಯಾಯವಾಗಿದ್ದು, ಹಸಿವಾದಾಗ ಹುರಿದ ಕಡಲೆಬೀಜವನ್ನು ಸೇವಿಸಿ.

ಅರಿಶಿನ ಹಾಲು :

ಅರಿಶಿನ ಹಾಲು :

ಹಾಲು ಕ್ಯಾಲ್ಸಿಯಂ, ರಂಜಕ, ವಿಟಮಿನ್ ಬಿ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಡಿ ನಂತಹ ಪ್ರಮುಖ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದು ಮೆದುಳಿಗೆ ಶಾಂತಗೊಳಿಸುವ ಪರಿಣಾಮವನ್ನು ನೀಡುತ್ತದೆ. ಅದಕ್ಕೆ ಅರಶಿನ ಸೇರಿಸಿ ಕುಡಿಯುವದರಿಂದ ನಿಮ್ಮ ರೋಗನಿರೋದಕ ಶಕ್ತಿ ಹೆಚ್ಚಾಗುವದಲ್ಲದೇ, ನಿಮಗೆ ಪರಿಪೂರ್ಣವಾದ ಒಳ್ಳೆಯ ನಿದ್ರೆ ನೀಡುತ್ತದೆ.

ಧಾನ್ಯದ ಬಿಸ್ಕೆಟ್‌ಗಳು:

ಧಾನ್ಯದ ಬಿಸ್ಕೆಟ್‌ಗಳು:

ರಾತ್ರಿ ನಿಮಗೆ ರುಚಿಕರವಾದ ಕುರುಕುಲಾದ ತಿಂಡಿ ತಿನ್ನಲು ಆಸೆಯಾದಾಗ ಸಂಪೂರ್ಣ ಧಾನ್ಯದ ಕ್ರ್ಯಾಕರ್ಸ್ ಸೂಕ್ತವಾದ ಆಯ್ಕೆಯಾಗಿದೆ. ಆದರೆ, ಅವುಗಳಿಗೆ ಉಪ್ಪು ಬೆರೆಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ಹಸಿ ಕ್ಯಾರೆಟ್, ಸೌತೆಕಾಯಿ ಮೊದಲಾದವುಗಳನ್ನು ಸಹ ಸೇವಿಸಬಹುದು.

English summary

Healthy Late-Night Snacks You Can Munch on Without Guilt in kannada

Here we talking about Healthy Late-Night Snacks You Can Munch on Without Guilt in kannada, read on
Story first published: Tuesday, October 19, 2021, 17:03 [IST]
X
Desktop Bottom Promotion