For Quick Alerts
ALLOW NOTIFICATIONS  
For Daily Alerts

ಕುಟುಂಬದ ಸದಸ್ಯರ ಆರೋಗ್ಯ ಹಾಗೂ ಫಿಟ್ನೆಸ್‌ಗಾಗಿ ಹೀಗೆ ಮಾಡಿ

|

ಪ್ರತೀವರ್ಷ ಜೂನ್ 13ನ್ನು ಕುಟುಂಬ ಆರೋಗ್ಯ ಹಾಗೂ ಸದೃಢ ದಿನ(Family fitness and healthday)ವೆಂದು ಆಚರಿಸಲಾಗುವುದು.

Health Tips For Families To Stay Fit And Healthy

ಆರೋಗ್ಯ ಅಂತ ಬಂದಾಗ ಅಲ್ಲಿಯ ಒಬ್ಬ ವ್ಯಕ್ತಿಯ ಆರೋಗ್ಯದಷ್ಟೇ ಕುಟುಂಬದವರ ಆರೋಗ್ಯವೂ ಮುಖ್ಯವಾಗಿರುತ್ತದೆ. ಕುಟುಂಬದಲ್ಲಿಒಬ್ಬರ ಆರೋಗ್ಯದಲ್ಲಿ ವ್ಯತ್ಯಾಸವಾದರೂ ಅದರ ಪ್ರಭಾವ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಕುಟುಂಬದ ಇತರ ಸದಸ್ಯರ ಮೇಲೆ ಬೀಳುತ್ತದೆ.

ಆದ್ದರಿಂದ ಒಂದು ಕುಟುಂಬ ಸಂತೋಷವಾಗಿರಬೇಕೆಂದರೆ ಮನೆಯಲ್ಲಿರುವವರ ಆರೋಗ್ಯ ಕೂಡ ಮುಖ್ಯವಾಗಿರುತ್ತದೆ. ಮನೆಯಲ್ಲಿ ವಯಸ್ಸಾದವರು ಹಾಗೂ ಮಕ್ಕಳು ಇದ್ದರೆ ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಇನ್ನುಮನೆಯವರ ಆರೋಗ್ಯಕ್ಕಾಗಿ ಜೀವನಶೈಲಿಯಲ್ಲಿಯೂ ಬದಲಾವಣೆ ಮಾಡಬೇಕು.

ಇಲ್ಲಿ ನಾವು ಕುಟುಂಬದವರ ಆರೋಗ್ಯಕ್ಕಾಗಿ ಮಾಡಬೇಕಾದ ಕೆಲವೊಂದು ಸಿಂಪಲ್ ಟಿಪ್ಸ್ ನೀಡಿದ್ದೇವೆ ನೋಡಿ:

1. ಜೊತೆಗೆ ವ್ಯಾಯಾಮ ಮಾಡಿ

1. ಜೊತೆಗೆ ವ್ಯಾಯಾಮ ಮಾಡಿ

ಮನೆಯ ಹತ್ತಿರ ಪಾರ್ಕ್ ಎಲ್ಲರೂ ಜೊತೆಯಾಗಿ ಪಾರ್ಕ್‌ಗೆ ನಡೆಯಲು ಹೋಗಿ. ಇನ್ನು ಮನೆಯವರು ಜೊತೆಯಾಗಿ ವ್ಯಾಯಾಮ ಮಾಡಿ. ಇದರಿಂದ ಎರಡು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. 1. ಮನೆಯವರ ಆರೋಗ್ಯ ವೃದ್ಧಿಯಾಗುವುದು 1. ಕುಟುಂಬದವರ ಬಾಂಧವ್ಯ ಕೂಡ ಮತ್ತಷ್ಟು ಗಟ್ಟಿಯಾಗುವುದು.

2. ಮಕ್ಕಳಿಗೆ ಫಿಟ್ನೆಸ್ ಗಿಫ್ಟ್ ನೀಡಿ

2. ಮಕ್ಕಳಿಗೆ ಫಿಟ್ನೆಸ್ ಗಿಫ್ಟ್ ನೀಡಿ

ನೀವು ಫಿಟ್ನೆಸ್‌ ಕಡೆ ತುಂಬಾ ಗಮನ ನೀಡಿದರೆ ಮಕ್ಕಳು ಕೂಡ ಅದನ್ನು ನೋಡಿ ಕಲಿಯುತ್ತಾರೆ. ಇನ್ನು ಮಕ್ಕಳಿಗೆ ಸೈಕಲ್, ಟೆನ್ನಿಸ್ ಬಾಲ್ ಮತ್ತು ಬ್ಯಾಟ್, ಸ್ಕೇಟರ್‌ ಮುಂತಾದವುಗಳನ್ನು ಗಿಫ್ಟ್ ನೀಡಿ. ಹೀಗೆ ಮಾಡುವ ಮೂಲಕ ಅವರು ದೈಹಿಕವಾಗಿ ಹೆಚ್ಚು ಆಟ ಆಡುವಂತೆ ಮಾಡಬಹುದು. ಇಲ್ಲದಿದ್ದರೆ ಮಕ್ಕಳು ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತವೆ. ಇದರಿಂದ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹಾಳಾಗುವುದು.

3. ಹೊಸ ಆಟ ಆಡಿ

3. ಹೊಸ ಆಟ ಆಡಿ

ಮಕ್ಕಳಿಗೆ ಬೋರ್ ಅನಿಸಿದರೆ ಅವರು ಆಡಲು ಇಷ್ಟಪಡುವುದಿಲ್ಲ, ಆದ್ದರಿಂದ ಅವರು ಖುಷಿ ಪಡುವ ಆಟ ಆಡಿ, ಹೊಸ ಆಟಗಳನ್ನು ಕಲಿಸಿ, ಇತರ ಮಕ್ಕಳ ಜೊತೆ ಆಡಲು ಬಿಡಿ. ಇನ್ನು ಟ್ರಕ್ಕಿಂಗ್, ಹೈಕಿಂಗ್‌ ಇವುಗಳನ್ನು ಮಕ್ಕಳ ಜೊತೆಯಲ್ಲಿಯೇ ಮಾಡಿ.

4. ಪೋಷಕಾಂಶದ ಆಹಾರದ ಕಡೆಗೆ ಹೆಚ್ಚಿನ ಗಮನ ನೀಡಿ

4. ಪೋಷಕಾಂಶದ ಆಹಾರದ ಕಡೆಗೆ ಹೆಚ್ಚಿನ ಗಮನ ನೀಡಿ

ಆರೋಗ್ಯಕರವಾಗಿರಬೇಕೆಂದರೆ ಪೋಷಕಾಂಶವಿರುವ ಆಹಾರದ ಕಡೆಗೂ ಹೆಚ್ಚಿನ ಗಮನ ಕೊಡಬೇಕು. ನೀವು ಪೋಷಕಾಂಶವಿರುವ ಆಹಾರ ತಿಂದರೆ ಮಕ್ಕಳು ಅದನ್ನು ತಿನ್ನುವುದನ್ನು ಕಲಿಯುತ್ತವೆ, ಇಲ್ಲದಿದ್ದರೆ ಅವರು ಬರೀ ಫಾಸ್ಟ್‌ ಫುಡ್‌ಗಳನ್ನೇ ಇಷ್ಟಪಡುತ್ತಾರೆ. ಮಕ್ಕಳ ಹಾಗೂ ನಿಮ್ಮ ತಟ್ಟೆಯಲ್ಲಿ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ.

5. ಫಿಟ್ನೆಸ್ ಗುರಿಯ ಕಡೆಗೆ ಗಮನ ನೀಡಿ

5. ಫಿಟ್ನೆಸ್ ಗುರಿಯ ಕಡೆಗೆ ಗಮನ ನೀಡಿ

ಬೊಜ್ಜು ಮೈ ಕರಗಿಸುವ ಗುರಿ ಹೊಂದಿ. ಮಕ್ಕಳಿಗಂತೂ ಬೊಜ್ಜು ಮೈ ಬರಲು ಬಿಡಲೇ ಬೇಡಿ, ಅವರು ದೈಹಿಕವಾಗಿ ಹೆಚ್ಚು ಆಟ ಆಡುವಂತೆ ಮಾಡಿ, ಮನೆಯಲ್ಲಿ ಕುಣಿದು ಕುಪ್ಪಳಿಸಿದರೂ ಪರ್ವಾಗಿಲ್ಲ, ಆದರೆ ಸುಮ್ಮನೆ ಒಂದು ಕಡೆ ಟಿವಿ, ಮೊಬೈಲ್‌ ನೋಡುತ್ತಾ ಕೂತರೆ ಅವರು ಗಲಾಟೆ ಮಾಡುವುದಿಲ್ಲ, ಆದರೆ ಬೊಜ್ಜು ಬರುತ್ತದೆ.

6. ಮನೆಯವರ ನಡುವೆಯೇ ಸ್ಪರ್ಧೆ ಇಡಿ

6. ಮನೆಯವರ ನಡುವೆಯೇ ಸ್ಪರ್ಧೆ ಇಡಿ

ಕೆಲವೊಂದು ಫಿಟ್ನೆಸ್‌ ಸ್ಪರ್ಧೆ ಇಡಿ, ಉದಾಹರಣೆ ಮೈ ತೂಕ ಇಳಿಸುವುದು, ಇಲ್ಲಾ ಜಂಕ್‌ ಫುಡ್‌ಗಳಿಂದ ದೂರವಿರುವುದು ಹೀಗೆ ಯಾರು ವಿನ್ನರ್‌ ಆಗುತ್ತಾರೋ ಅವರಿಗೆ ಆಕರ್ಷಕ ಬಹುಮಾನ ನೀಡಿ. ಈ ರೀತಿ ಮಾಡುವುದರಿಂದ ಅವರಿಗೂ ಫಿಟ್ನೆಸ್‌ ಬಗ್ಗೆ ಮನೋಭಾವ ಮೂಡುವುದು.

 7. ನಿಮ್ಮ ಕೆಲಸವನ್ನು ನೀವೇ ಮಾಡಿ

7. ನಿಮ್ಮ ಕೆಲಸವನ್ನು ನೀವೇ ಮಾಡಿ

ಮನೆಯಲ್ಲಿ ಕ್ಲೀನಿಂಗ್ ಇವುಗಳನ್ನು ನೀವೇ ಮಾಡುವುದರಿಂದ ಕೂಡ ದೈಹಿಕ ವ್ಯಾಯಾಮ ಉಂಟಾಗುತ್ತದೆ. ಇನ್ನು ಆದಷ್ಟೂ ದೇಹಕ್ಕೆ ಶ್ರಮ ನೀಡುವ ವ್ಯಾಯಾಮ ಮಾಡಿ. ವ್ಯಾಯಾಮದ ಹೆಸರಿನಲ್ಲಿ ದೇಹವನ್ನು ತುಂಬಾ ದಂಡಿಸಬೇಡಿ, ದಿನದಲ್ಲಿ ಅರ್ಧ ಅಥವಾ ಒಂದು ವ್ಯಾಯಾಮ ಸಾಕು.

8. ಒಳ್ಳೆಯ ಮಾದರಿಯಾಗಿ

8. ಒಳ್ಳೆಯ ಮಾದರಿಯಾಗಿ

ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ, ಆದ್ದರಿಂದ ನಿಮ್ಮ ಅಭ್ಯಾಸಗಳು, ನಡುವಳಿಕೆ ಎಲ್ಲವೂ ಅವರಿಗೆ ಮಾದರಿಯಾಗಿರಲಿ. ನಿಮ್ಮ ಮಕ್ಕಳಲ್ಲಿ ಧನಾತ್ಮಕ ಭಾವನೆಗಳನ್ನು ತುಂಬಿ, ಇದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವುದು.

ಜಂಕ್ ಫುಡ್ಸ್, ಅಧಿಕ ಕ್ಯಾಲೋರಿ ಇರುವ ವಸ್ತುಗಳನ್ನು ಮನೆಗೆ ತರಲೇಬೇಡಿ. ಮಕ್ಕಳು ಬಯಸಿದಾಗ ಅಪರೂಪಕ್ಕೆ ಕೊಡಿಸುವುದರಲ್ಲಿ ತೊಂದರೆಯಿಲ್ಲ.

English summary

Health Tips For Families To Stay Fit And Healthy

Every year, Family Health and Fitness Day is celebrated on 13 June. This day promotes the importance of physical activities and encourages families to take part in physical activities together.
X
Desktop Bottom Promotion