For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಕಿಕ್‌ ಹೆಚ್ಚಿಸುತ್ತೆ ನೀರಾ

|

ನೀರಾ ರುಚಿ ಒಮ್ಮೆ ನೋಡಿದವರು ಅದನ್ನು ಖಂಡಿತ ಇಷ್ಟ ಪಟ್ಟೇ ಪಡುತ್ತಾರೆ. ನೀರಾವನ್ನು ಸಾಮಾನ್ಯವಾಗಿ ಪುರುಷರು ಮಾತ್ರವಲ್ಲ ಮಹಿಳೆಯರೂ ಇಷ್ಟಪಡುತ್ತಾರೆ. ಆಗಷ್ಟೇ ತೆಂಗಿನ ಮರದಿಂದ ಇಳಿಸಿದ ನೀರಾ ಕುಡಿಯಲು ರುಚಿಯಾಗಿರುತ್ತದೆ, ಕಿಕ್‌ ಕೂಡ ಹತ್ತುವುದಿಲ್ಲ, ಆದರೆ ನೀರಾ ತುಂಬಾ ಹೊತ್ತು ಇಟ್ಟು ಕುಡಿದರೆ ನಶೆ ಏರುತ್ತದೆ.

Neera Health Benefits

ನೀರಾ ನಶೆ ಏರಿಸುವ ವಸ್ತುವೇ ಅಗಿದ್ದರೂ ಹೆಂಡದಂತೆ ಆರೋಗ್ಯಕ್ಕೆ ಅಪಾಯಕಾರಿಯಾದ ವಸ್ತುವಲ್ಲ. ಇದನ್ನು ಕುಡಿಯುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಆಯುರ್ವೇದದಲ್ಲಿ ಹೇಳಲಾಗಿದೆ.

ನೀರಾವನ್ನು ತೆಂಗಿನ ಮರ ಹಾಗೂ ಈಚಲು ಮರದಿಂದ ನೀರಾ ತೆಗೆಯಲಾಗುವುದು. ಬೆಳಗ್ಗೆ ಹೊತ್ತಿನಲ್ಲಿ ಇದನ್ನು ತೆಗೆಯಲಾಗುವುದು, ನೀರಾ ತೆಗೆದ ತಕ್ಷಣ ಕುಡಿದರೆ ಅದರಲ್ಲಿ ಯಾವುದೇ ಮದ್ಯದ ಅಂಶ ಇಲ್ಲದ ಕಾರಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಆಯುರ್ವೇದದಲ್ಲಿ ಔಷಧಿಯಾಗಿ ನೀರಾ ಬಳಕೆ

ಆಯುರ್ವೇದದಲ್ಲಿ ಔಷಧಿಯಾಗಿ ನೀರಾ ಬಳಕೆ

ನೀರಾದಲ್ಲಿ ವಿಟಮಿನ್ ಸಿ, ಬಿ1, ಬಿ2, ಬಿ3 ಮತ್ತು ಬಿ6, ಸಕ್ಕರೆ, ಪ್ರೊಟೀನ್, ಕಾರ್ಬೋಹೈಡ್ರೇಟ್ಸ್ ಮುಂತಾದ ಅಂಶಗಳಿವೆ. ಆಯುರ್ವೇದದಲ್ಲಿ ಇದನ್ನು ಔಷಧಿಯಾಗಿ ಬಳಸಲಾಗುವುದು.

ನೀರ ಇತರ ಮದ್ಯದ ರೀತಿ ಅಲ್ಲ

ನೀರ ಇತರ ಮದ್ಯದ ರೀತಿ ಅಲ್ಲ

ಊರು ಕಡೆ ಸಿಗುತ್ತಿದ್ದ ನೀರಾ ಇದೀಗ ಬೆಂಗಳೂರಿನಲ್ಲಿ ಸಿಗುತ್ತಿದ್ದು, ಇದಕ್ಕೆ ಉತ್ತಮ ಬೇಡಿಕೆಯಿದೆ. ನೀರಾವನ್ನು ಕೆಲವರು ಮದ್ಯವೆಂದು ದೂರವಿಡುತ್ತಾರೆ. ನೀರಾ ಕುಡಿದರೆ ಕಿಕ್‌ ಆಗುವುದು, ಆದರೆ ಇದು ಮದ್ಯದ ರೀತಿಯಲ್ಲಿ ಸ್ಪಿರಿಟ್ ಅಲ್ಲ. ಇದರಲ್ಲಿ ಅನೇಕ ಆರೋಗ್ಯಕರ ಗುಣಗಳಿವೆ.

ಈ ನೀರಾ ಕುಡಿಯುವುದರಿಂದ ಈ ಕೆಳಗಿನ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ನೀರಾದ ಪ್ರಯೋಜನಗಳು

ನೀರಾದ ಪ್ರಯೋಜನಗಳು

  • ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
  • ಹೃದಯ ಸಂಬಂಧಿ ಸಮಸ್ಯೆ ಕಡಿಮೆ ಮಾಡುವುದು
  • ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ
  • ಎದೆ ಹಾಲುಣಿಸುವ ತಾಯಂದಿರಿಗೂ ಒಳ್ಳೆಯದು

    ಎದೆ ಹಾಲುಣಿಸುವ ತಾಯಂದಿರಿಗೂ ಒಳ್ಳೆಯದು

    • ಎದೆ ಹಾಲು ಹೆಚ್ಚಾಗುವುದು
    • ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ
    • ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
    • ಶೀತ, ಕೆಮ್ಮು ಕಡಿಮೆ ಮಾಡಲು ನೀರಾ ಸಹಕಾರಿ
    • ನೀರಾ ಹೆಚ್ಚು ಕುಡಿಯುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು

      ನೀರಾ ಹೆಚ್ಚು ಕುಡಿಯುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು

      * ನರಗಳ ಮೇಲೆ ಪರಿಣಾಮ ಬೀರುತ್ತದೆ.

      * ಲಿವರ್‌ ಸಮಸ್ಯೆ ಉಂಟಾಗುವುದು

      * ಅಧಿಕ ರಕ್ತದೊತ್ತಡ

English summary

Health Benefits Of Toddy

Fresh toddy keeps us fresh and is healthy. Toddy which is the wine of the palm or coconut tree is very nutritious and healthy. Toddy has a crucial role in Ayurvedic medication.
X
Desktop Bottom Promotion