For Quick Alerts
ALLOW NOTIFICATIONS  
For Daily Alerts

ಅಶ್ವತ್ಥ ಮರದ ತೊಗಟೆಯಿಂದ ಆರೋಗ್ಯಕ್ಕಿದೆ ಸಾಕಷ್ಟು ಲಾಭ

|

ಭಾರತೀಯರು ಅಶ್ವತ್ಥ ವೃಕ್ಷವನ್ನು ತುಂಬಾ ಪೂಜ್ಯನೀಯವೆಂದು ಭಾವಿಸುವರು. ಕೆಲವರು ಅಶ್ವತ್ಥ ಮರಕ್ಕೆ ದಿನಾಲೂ ಸುತ್ತ ಬರುವರು. ಇದರಿಂದ ಬರುವ ಗಾಳಿಯು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹಲವಾರು ದೇವರುಗಳು ಈ ಮರದಲ್ಲಿ ನೆಲೆ ನಿಂತಿರುವರು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.

Health Benefits of People Tree in kannada

ಈ ಮರವು ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ನೀಡುವುದು. ಇದರ ಎಲೆ, ಕೊಂಬೆ, ತೊಗಟೆ ಇತ್ಯಾದಿಗಳನ್ನು ಬಳಸಿಕೊಂಡು ಮನೆಮದ್ದುಗಳನ್ನು ಕೂಡ ಮಾಡುವರು. ಆಯುರ್ವೇದದಲ್ಲೂ ಇದರ ಎಲೆಗಳನ್ನು ಕೆಲವೊಂದು ಕಾಯಿಲೆಗಳಿಗೆ ಮದ್ದಾಗಿ ಬಳಸಲಾಗುತ್ತಿದೆ. ಇದರ ಎಲೆ ಮಾತ್ರವಲ್ಲದೆ, ತೊಗಟೆ ಕೂಡ ಔಷಧೀಯ ಗುಣಗಳನ್ನು ಹೊಂದಿದ್ದು, ಇದು ಮೂತ್ರಕೋಶದ ಸೋಂಕಿನ ಸಮೇತ ನಾನಾ ರೀತಿ ಕಾಯಿಲೆಗಳನ್ನು ದೂರವಿಡುವುದು.

ಅಶ್ವತ್ಥ ಮರದ ತೊಗಟೆಯಿಂದ ಯಾವೆಲ್ಲಾ ಲಾಭಗಳು ಸಿಗುವುದು ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

ಮೊಡವೆ ನಿವಾರಣೆ

ಮೊಡವೆ ನಿವಾರಣೆ

ದೇಹದಲ್ಲಿ ಮೂಡುವಂತಹ ಯಾವುದೇ ರೀತಿಯ ಬೊಕ್ಕೆಗಳನ್ನು ಅಶ್ವತ್ಥ ಮರದ ತೊಗಟೆಯು ನಿವಾರಣೆ ಮಾಡುವುದು. ಇದರ ತೊಗಡೆಯನ್ನು ಬೊಕ್ಕೆ ಮತ್ತು ಮೊಡವೆಗಳಿಗೆ ಹಚ್ಚಿ. ಇದು ಬೇಗನೆ ಒಣಗುವುದು ಹಾಗೂ ಶಮನವಾಗುವುದು. ಮೊಡವೆಗಳು ಅತಿಯಾಗಿದ್ದರೆ ಆಗ ನೀವು ಇದನ್ನು ಬಳಸಿಕೊಳ್ಳಿ. ಮಕ್ಕಳ ಮೈಮೇಲೆ ಬೊಕ್ಕೆ ಬಿದ್ದರೆ ಆಗ ನೀವು ಇದನ್ನು ಹಚ್ಚಬಹುದು.

ಬಾಯಿಯ ಹುಣ್ಣು ನಿವಾರಣೆಗೆ

ಬಾಯಿಯ ಹುಣ್ಣು ನಿವಾರಣೆಗೆ

ಕೆಲವರಿಗೆ ಬಾಯಿಯಲ್ಲಿ ಪದೇ ಪದೇ ಹುಣ್ಣು ಬೀಳುತ್ತಿರುವುದು. ಇದಕ್ಕೆ ಯಾವುದೇ ಪರಿಹಾರವು ಸಿಗುವುದಿಲ್ಲ ಅಂತಹ ಸಂದರ್ಭದಲ್ಲಿ ನೋವು ಅತಿಯಾಗಿ ಆಹಾರ ಸೇವನೆಗೂ ಕಷ್ಟವಾಗುವುದು. ಈ ವೇಳೆ ಬಾಯಿಯ ಹುಣ್ಣು ನಿವಾರಣೆ ವಾಡಲು ನೀರಿನಲ್ಲಿ ಅಶ್ವತ್ಥ ಮರದ ತೊಗಟೆಯನ್ನು ಕುದಿಸಿ ಮತ್ತು ಇದನ್ನು ತಣ್ಣಗಾಗಿಸಿ. ನೀರನ್ನು ಸೋಸಿಕೊಂಡು ಹುಣ್ಣುಗಳಿಗೆ ದಿನದಲ್ಲಿ ಮೂರು ಸಲ ಹಚ್ಚಿದರೆ ಪರಿಹಾರ ಸಿಗುವುದು.

ಕೆಮ್ಮಿಗೆ ಪರಿಹಾರ

ಕೆಮ್ಮಿಗೆ ಪರಿಹಾರ

ದೀರ್ಘಕಾಲದಿಂದ ಕೆಮ್ಮುತ್ತಲಿದ್ದು, ಯಾವುದೇ ಸಿರಫ್ ಗಳು ಪ್ರಯೋಜನಕ್ಕೆ ಬಾರದೆ ಇದ್ದರೆ ಆಗ ನೀವು ಕೆಮ್ಮು ನಿವಾರಣೆ ಮಾಡಲು ಅಶ್ವತ್ಥ ಮರದ ತೊಗಟೆ ಬಳಸಿ. ತೊಗಟೆಯನ್ನು ನೀರಿನಲ್ಲಿ ಕುದಿಸಿ ಮತ್ತು ಇದನ್ನು ಉಗುರು ಬೆಚ್ಚಗೆ ಇರುವಾಗ ಸೋಸಿಕೊಂಡು ದಿನಕ್ಕೆ 3-4 ಸಲ ಬಾಯಿ ಮುಕ್ಕಳಿಸಿಕೊಳ್ಳಿ. ಇದು ಕೆಮ್ಮಿನಿಂದ ಪರಿಹಾರ ನೀಡುವುದು.

ಗಾಯ ಒಣಗಿಸುವುದು

ಗಾಯ ಒಣಗಿಸುವುದು

ಅಶ್ವತ್ಥ ಮರದ ತೊಗಟೆಯನ್ನು ಬಿಸಿಲಿನಲ್ಲಿ ಸರಿಯಾಗಿ ಒಣಗಿಸಿ ಮತ್ತು ಇದರ ಹುಡಿ ಮಾಡಿಕೊಳ್ಳಿ. ಇದನ್ನು ಗಾಯಕ್ಕೆ ಅಥವಾ ಹುಣ್ಣಿಗೆ ಹಚ್ಚಿಕೊಂಡರೆ ಅದು ಬೇಗನೆ ಗುಣವಾಗುವುದು. ಯಾವುದೇ ರೀತಿಯ ಸೋಂಕು ಕೂಡ ಕಾಡದು.

ಚರ್ಮ ಬಿಳಿಯಾಗುವುದು

ಚರ್ಮ ಬಿಳಿಯಾಗುವುದು

ವಯಸ್ಸಾಗುತ್ತಾ ಸಾಗಿದಂತೆ ಚರ್ಮದಲ್ಲಿ ನೆರಿಗೆ ಮೂಡಲು ಆರಂಭವಾಗುವುದು ಮತ್ತು ಇದನ್ನು ನಿವಾರಣೆ ಮಾಡಲು ನೀವು ಮುಖಕ್ಕೆ ಅಶ್ವತ್ಥ ಮರದ ತೊಗಟೆ ಬಳಸಿ.

ಬಿಕ್ಕಳಿಕೆಗೆ

ಬಿಕ್ಕಳಿಕೆಗೆ

ಪದೇ ಪದೇ ಬಿಕ್ಕಳಿಕೆ ಬರುತ್ತಲಿದ್ದರೆ ಆಗ ನೀವು ಅಶ್ವತ್ಥ ಮರದ ತೊಗಟೆ ಬಳಸಿಕೊಳ್ಳಿ. ಇದನ್ನು ನೀವು ಬೆಂಕಿಯಲ್ಲಿ ಸುಡಬೇಕು ಮತ್ತು ಅದರ ಬೂದಿಯನ್ನು ನೀರಿಗೆ ಹಾಕಿ. ಬೂದಿ ತಳದಲ್ಲಿ ಕುಳಿತ ಬಳಿಕ ನೀರನ್ನು ಕುಡಿದರೆ ಬಿಕ್ಕಳಿಗೆ ಪರಿಹಾರ ಸಿಗುವುದು.

ಒಡೆದ ಹಿಂಗಾಲಿಗೆ

ಒಡೆದ ಹಿಂಗಾಲಿಗೆ

ಹಿಂಗಾಲು ಒಡೆದಿದ್ದರೆ ಆಗ ನೀವು ಅಶ್ವತ್ಥ ಮರದ ತೊಗಡೆಯನ್ನು ಹಾಲಿನಲ್ಲಿ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ. ಇದು ಬೇಗ ಪರಿಹಾರ ನೀಡುವುದು. ನೀವು ಪಾದಗಳನ್ನು ರಾತ್ರಿ ಮಲಗುವ ಮೊದಲು ಸರಿಯಾಗಿ ತೊಳೆದು ಇದನ್ನು ಹಚ್ಚಿಕೊಳ್ಳಿ. ಕೆಲವೇ ದಿನಗಳಲ್ಲಿ ನಿಮಗೆ ಫಲಿತಾಂಶವು ಕಂಡುಬರುವುದು.

ಚರ್ಮದ ಸೋಂಕು ನಿವಾರಿಸುವುದು

ಚರ್ಮದ ಸೋಂಕು ನಿವಾರಿಸುವುದು

ಚರ್ಮದಲ್ಲಿ ಹಲವಾರು ರೀತಿಯ ಸೋಂಕುಗಳು ಕಾಣಿಸಿಕೊಳ್ಳುವುದು. ಇದರಲ್ಲಿ ಕಚ್ಚಿ, ತುರಿಕೆ ಇಸಬು ಕಾಣಿಸುವುದು. ಇದಕ್ಕಾಗಿ ಅಶ್ವತ್ಥ ಮರದ ತೊಗಟೆಯನ್ನು ಹಾಗೆ ರುಬ್ಬಿಕೊಂಡು ಅದನ್ನು ಬಾಧಿತ ಚರ್ಮಕ್ಕೆ ಹಚ್ಚಿಕೊಳ್ಳಿ. ಇದನ್ನು ನೀರಿನಲ್ಲಿ ಕುದಿಸಿ ಚರ್ಮವನ್ನು ಅದರಿಂದ ತೊಳೆದರೂ ಬೇಗನೆ ಪರಿಹಾರ ಸಿಗುವುದು. ಹೀಗೆ ಹಲವಾರು ವಿಧಗಳಿಂದ ಅಶ್ವತ್ಥ ಮರದ ತೊಗಟೆಯನ್ನು ಬಳಸಬಹುದು. ಇದು ಚರ್ಮದ ಕಾಂತಿ ಕೂಡ ವೃದ್ಧಿಸುವುದು.

English summary

Health Benefits of People Tree in kannada

Here we are discussing about Health Benefits of People Tree in kannada. Read more.
X
Desktop Bottom Promotion