For Quick Alerts
ALLOW NOTIFICATIONS  
For Daily Alerts

ನಿಂಬೆಸಿಪ್ಪೆಯಲ್ಲಿರುವ ಈ ಆರೋಗ್ಯ ಪ್ರಯೋಜನಗಳನ್ನ ಕೇಳಿದರೆ ಅದನ್ನು ಎಂದಿಗೂ ಎಸೆಯುವುದಿಲ್ಲ

|

ಬೇಸಿಗೆಯಲ್ಲಿ ತಂಪಾದ ಶರಬತ್ತು ತಯಾರಿಸುವುದರಿಂದ ಹಿಡಿದು, ತ್ವಚೆಯ ಕಾಂತಿಯನ್ನು ಹೆಚ್ಚಿಸುವವರೆಗೂ ಪ್ರತಿಯೊಬ್ಬರೂ ನಿಂಬೆಹಣ್ಣನ್ನು ಬಳಸಿರಬೇಕು. ಇದರಲ್ಲಿ ಆ್ಯಂಟಿ-ಆಕ್ಸಿಡೆಂಟ್ ಗುಣಗಳು ಇರುವುದರಿಂದ ನಿಂಬೆರಸ ದೇಹದಿಂದ ಕಲ್ಮಶವನ್ನು ಹೊರಹಾಕಲು ಮತ್ತು ಚರ್ಮವನ್ನು ಹೊಳೆಯಲು ಸಹಾಯ ಮಾಡುತ್ತದೆ.

ನಿಂಬೆಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಅದರ ಸಿಪ್ಪೆಗಳ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ನಿಂಬೆಯ ಸಿಪ್ಪೆಗಳಲ್ಲಿ ವಿಟಮಿನ್, ಖನಿಜಗಳು ಮತ್ತು ಫೈಬರ್ ಹೇರಳವಾಗಿದ್ದು, ಅದರ ರಸಕ್ಕಿಂತ ಹೆಚ್ಚಾಗಿ, ಜೀವಸತ್ವಗಳು ಸಿ, ಎ, ಫೋಲೇಟ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಿಪ್ಪೆಯಲ್ಲಿ ಇರುತ್ತವೆ. ನಿಂಬೆ ಸಿಪ್ಪೆಗಳ ಅಂತಹ ಕೆಲವು ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ನಿಂಬೆಯ ಸಿಪ್ಪೆಯಲ್ಲಿರುವ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ಹೇಳಲಾಗಿದೆ:

ಮೂಳೆಗಳನ್ನು ಬಲವಾಗಿಸುವುದು:

ಮೂಳೆಗಳನ್ನು ಬಲವಾಗಿಸುವುದು:

ಈ ಸಿಟ್ರಸ್ ಹಣ್ಣಿನ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಯಲ್ಲಿ ಹೇರಳವಾಗಿದ್ದು, ಇದು ಬಲವಾದ ಮೂಳೆಗಳು ಮತ್ತು ಹಲ್ಲುಗಳನ್ನ ಪಡೆಯಲು ಸಹಾಯ ಮಾಡುವುದು. ಆದ್ದರಿಂದ ಈ ನಿಂಬೆ ಹಣ್ಣಿನ ಸಿಪ್ಪೆಯನ್ನು ನೀವು ಸೇವಸಬಹುದು. ಇದಲ್ಲದೆ, ಇದು ಮೂಳೆ ರೋಗಗಳಾದ ಆಸ್ಟಿಯೊಪೊರೋಸಿಸ್, ರುಮಟಾಯ್ಡ್ ಸಂಧಿವಾತ ಮತ್ತು ಉರಿಯೂತದ ಪಾಲಿಯರ್ಥ್ರೈಟಿಸ್‌ನಿಂದ ರಕ್ಷಿಸಲು ಸಹ ಸಹಾಯ ಮಾಡುತ್ತದೆ.

ಸುಧಾರಿತ ರೋಗನಿರೋಧಕ ವ್ಯವಸ್ಥೆ:

ಸುಧಾರಿತ ರೋಗನಿರೋಧಕ ವ್ಯವಸ್ಥೆ:

ನಿಂಬೆ ಸಿಪ್ಪೆಯನ್ನು ಬಳಸುವುದರಿಂದ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಬಲವಾಗುವುದು. ಸದ್ಯದ ಪರಿಸ್ಥಿತಿಗೆ ಈ ರೊಗ ನಿರೋಧಕ ಶಕ್ತಿ ಎಂಬುದು ಬಹಳ ಮುಖ್ಯ. ಆದ್ದರಿಂದ ದೈನಂದಿನ ಜೀವನದಲ್ಲಿ ಬಳಸುವ ನಿಂಬೆ ಸಿಪ್ಪೆಯನ್ನು ಎಸೆಯಬೇಡಿ. ಅದರಿಂದ ಏನಾದರೂ ತಯಾರಿಸಿ ಬಳಸಿ.

ಜೀರ್ಣಕ್ರಿಯೆಗೆ ಸಹಕಾರಿ:

ಜೀರ್ಣಕ್ರಿಯೆಗೆ ಸಹಕಾರಿ:

ನಿಂಬೆ ಜ್ಯೂಸ್ ಮಾತ್ರ ಜೀರ್ಣ ಕ್ರಿಯೆಗೆ ಸಹಾಯ ಮಾಡುವುದಲ್ಲ. ಅದರ ಸಿಪ್ಪೆಯೂ ಸಹ ಜೀರ್ಣಕ್ರಿಯೆಗೆ ಸಹಕಾರಿ. ಈ ಸಿಪ್ಪೆಯಲ್ಲಿರುವ ಖನಿಜಗಳು ಜೀರ್ಣಕ್ರಿಯೆಯನ್ನು ವೇಗಗೊಳಿಸುವ ಮೂಲಕ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದು. ಜೊತೆಗೆ ವಿವಿಧ ರೋಗಗಳಿಂದ ರಕ್ಷಿಸುತ್ತದೆ.

ತೂಕ ನಷ್ಟಕ್ಕೆ ಪ್ರಯೋಜನಕಾರಿ:

ತೂಕ ನಷ್ಟಕ್ಕೆ ಪ್ರಯೋಜನಕಾರಿ:

ನಿಂಬೆ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ಅಂಶವಿದೆ, ಇದು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುವುದು. ನೀವು ಸಹ ತೂಕ ಇಳಿಸಿಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ನಿಂಬೆ ಸಿಪ್ಪೆಗಳನ್ನು ಸೇವಿಸಿ.

ಕೊಲೆಸ್ಟ್ರಾಲ್ ನಿಯಂತ್ರಣ:

ಕೊಲೆಸ್ಟ್ರಾಲ್ ನಿಯಂತ್ರಣ:

ದೇಹದಲ್ಲಿರುವ ಅಧಿಕ ಪ್ರಮಾಣದ ಕೊಲೆಸ್ಟ್ರಾಲ್ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ನಿಂಬೆ ಸಿಪ್ಪೆಗಳಲ್ಲಿರುವ ಪಾಲಿಫಿನಾಲ್ಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಜೊತೆಗೆ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವುದು.

ರಕ್ತದೊತ್ತಡವನ್ನು ನಿಯಂತ್ರಿಸುವದು:

ರಕ್ತದೊತ್ತಡವನ್ನು ನಿಯಂತ್ರಿಸುವದು:

ನಿಂಬೆ ಸಿಪ್ಪೆಯಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ನಿಂಬೆ ಸಿಪ್ಪೆಯನ್ನು ಸೇವಿಸುವುದರಿಂದ ಅವರ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು, ನಿಮ್ಮ ಹೃದಯವೂ ಚೆನ್ನಾಗಿರುವುದು.

ಚರ್ಮದ ಆರೋಗ್ಯವನ್ನು ಕಾಪಾಡುವುದು:

ಚರ್ಮದ ಆರೋಗ್ಯವನ್ನು ಕಾಪಾಡುವುದು:

ಚರ್ಮದ ಆರೋಗ್ಯಕ್ಕಾಗಿ ನಿಂಬೆ ಸಿಪ್ಪೆ ಬಹಳ ಸಹಕಾರಿ. ಅದರ ಡಿಟೊಕ್ಸಿಫೈ ಗುಣಗಳಿಂದ ಮುಖದಲ್ಲಿ ಸುಕ್ಕುಗಳು, ಮೊಡವೆಗಳು, ಡಾರ್ಕ ಸರ್ಕಲ್ ಮತ್ತು ಕಪ್ಪು ಗುರುತುಗಳಿಂದ ರಕ್ಷಿಸಲು ನಿಂಬೆ ಸಿಪ್ಪೆಗಳು ಬಹಳ ಪ್ರಯೋಜನಕಾರಿ.

ಹಲ್ಲು ಮತ್ತು ಒಸಡುಗಳ ಆರೋಗ್ಯ:

ಹಲ್ಲು ಮತ್ತು ಒಸಡುಗಳ ಆರೋಗ್ಯ:

ನಿಂಬೆ ಸಿಪ್ಪೆಗಳಲ್ಲಿ ಸಿಟ್ರಿಕ್ ಆಮ್ಲ ಸಮೃದ್ಧವಾಗಿವೆ, ಇದು ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಹಾನಿಯನ್ನು ಸರಿಪಡಡಿಸಲು ಸಹಾಯ ಮಾಡುತ್ತದೆ, ಅವುಗಳ ಬಳಕೆಯು ಹಲ್ಲು ಮತ್ತು ಒಸಡುಗಳಿಗೆ ಸಂಬಂಧಿಸಿದ ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

English summary

Health Benefits of Lemon Peel in Kannada

Here we talking about Health benefits of lemon peel in Kannada, read on
X
Desktop Bottom Promotion