For Quick Alerts
ALLOW NOTIFICATIONS  
For Daily Alerts

ಬ್ಯಾಕ್ಟೀರಿಯಾದಿಂದ ರಕ್ಷಣೆ ಪಡೆಯಲು ಮಣ್ಣಿನ ಲೋಟದಲ್ಲಿ ಚಹಾ ಸೇವಿಸಿ

|

ಪದೇ ಪದೇ ಕಾಫಿ/ಚಹಾ ಕುಡಿಯುವ ಅಭ್ಯಾಸ ಹಲವರಿಗಿದೆ. ಆದರೆ ಈ ಕಾಫಿ/ಚಹಾದ ರುಚಿ ಹೆಚ್ಚಿಸುವ ಮಣ್ಣಿನ ಗ್ಲಾಸ್‌ನಲ್ಲಿ ಕುಡಿಯುವವರ ಬಳಕೆ ತೀರಾ ಕಡಿಮೆ. ಇತ್ತೀಚೆಗೆ ಮಣ್ಣಿನ ಗ್ಲಾಸ್‌ನಲ್ಲಿ ಚಹಾ ಕುಡಿಯುವುದು ಟ್ರೆಂಡ್‌ ಆಗುತ್ತಿದೆ. ಇದಕ್ಕೆ ಕಾರಣ ಇದರಲ್ಲಿರುವ ಆರೋಗ್ಯ ಪ್ರಯೋಜನಗಳು.

ಮಣ್ಣಿನ ಮಡಿಕೆಯಲ್ಲಿ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಜತೆಗೆ ಚಹಾದ ರುಚಿ ಹಾಗೂ ಅದರ ಪರಿಮಳವನ್ನು ದ್ವಿಗುಣಗೊಳಿಸುತ್ತದೆ. ಅಲ್ಲದೆ ಪರಿಸರಕ್ಕೂ ಇದು ಬಹಳ ಉಪಕಾರಿಯಾಗಲಿದೆ. ಮಣ್ಣಿನ ಗ್ಲಾಸ್‌ನಲ್ಲಿ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಹೇಗೆ ಸಹಕಾರಿ ಮುಂದೆ ನೋಡೋಣ:

ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ

ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ

ಇಂದಿನ ದಿನಗಳಲ್ಲಿ ಕೇವಲ ಗ್ರಾಮೀಣ ಪ್ರದೇಶಗಳಲ್ಲಷ್ಟೇ ಅಲ್ಲ, ನಗರದಲ್ಲೂ ಮಣ್ಣಿನ ಗ್ಲಾಸ್‌ನಲ್ಲಿ ಚಹಾ ಕುಡಿಯುತ್ತಾರೆ. ಕಾರಣ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಗಾಜಿನ ಲೋಟದಲ್ಲಿ ಅಥವಾ ಪ್ಲಾಸ್ಟಿಕ್‌/ಪೇಪರ್‌ ಗ್ಲಾಸ್‌ನಲ್ಲಿ ಚಹಾವನ್ನು ಕುಡಿಯುವುದಕ್ಕಿಂತ ಮಣ್ಣಿನ ಗ್ಲಾಸ್‌ನಲ್ಲಿ ಚಹಾ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.

ಪ್ಲಾಸ್ಟಿಕ್ ಬಿಸಾಡುವ ಗ್ಲಾಸ್‌ನಲ್ಲಿ ಬಿಸಿ ಚಹಾವನ್ನು ಹಾಕುವುದರಿಂದ, ಅದರ ಕೆಲವು ಅಂಶಗಳು ಅಥವಾ ರಾಸಾಯನಿಕಗಳು ಚಹಾದಲ್ಲಿ ಮಿಶ್ರಣವಾಗುತ್ತವೆ, ಇದು ದೇಹದೊಳಗೆ ಹೋಗುವುದರಿಂದ ನಿಮಗೆ ಹಾನಿ ಮಾಡುತ್ತದೆ. ಆದರೆ ಮಣ್ಣಿನ ಗ್ಲಾಸ್‌ನಲ್ಲಿ ಚಹಾವನ್ನು ಕುಡಿದ ನಂತರ ಅದನ್ನು ಮತ್ತೆ ಬಳಸಲಾಗುವುದಿಲ್ಲ, ಇದರಿಂದಾಗಿ ನಾವು ಹೇಗಾದರೂ ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಲೂಬಹುದು. ಅಷ್ಟೇ ಅಲ್ಲ ಹಲವಾರು ಪ್ರಯೋಜನಗಳೂ ಇದೆ.

ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸುತ್ತದೆ

ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸುತ್ತದೆ

ಮಣ್ಣಿನ ಪಾತ್ರೆಗಳು ಕ್ಷಾರೀಯ ಗುಣಗಳನ್ನು ಹೊಂದಿದ್ದು, ಇದು ಮಾನವ ದೇಹದ ಆಮ್ಲೀಯ ಗುಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಣ್ಣಿನ ಪಾತ್ರೆಯಲ್ಲಿ ನಿತ್ಯ ತಿನ್ನುವುದರಿಂದ ಅಥವಾ ಚಹಾ ಕುಡಿಯುವುದರಿಂದ ದೇಹಕ್ಕೆ ಕ್ಯಾಲ್ಸಿಯಂನ ಪ್ರಮಾಣ ಸೇರುತ್ತದೆ. ಇದು ನಮ್ಮ ಮೂಳೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಮಣ್ಣಿನ ಗ್ಲಾಸ್‌ ಪರಿಸರ ಸ್ನೇಹಿ

ಮಣ್ಣಿನ ಗ್ಲಾಸ್‌ ಪರಿಸರ ಸ್ನೇಹಿ

ಪ್ಲಾಸ್ಟಿಕ್ ಬಳಕೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿರುತ್ತದೆ. ಪ್ಲಾಸ್ಟಿಕ್ ಬಿಸಾಡಬಹುದಾದ ಗ್ಲಾಸ್‌ಗಳಲ್ಲಿ ಚಹಾ ಕುಡಿಯುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಪ್ಲಾಸ್ಟಿಕ್ ಲೋಟಗಳು ಪರಿಸರಕ್ಕೆ ಹಾನಿಕರ. ಮತ್ತೊಂದೆಡೆ, ನೀವು ಮಣ್ಣಿನ ಗ್ಲಾಸ್‌ನಲ್ಲಿ ಚಹಾವನ್ನು ಸೇವಿಸಿದರೆ, ನೀವು ಪರಿಸರವನ್ನು ಉಳಿಸುತ್ತೀರಿ ಮತ್ತು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಏಕೆಂದರೆ ಮಣ್ಣಿನ ಗ್ಲಾಸ್‌ಗಳು ಪರಿಸರ ಸ್ನೇಹಿ. ಅವುಗಳನ್ನು ಬಳಸಿದ ನಂತರ, ಅವು ಮತ್ತೆ ಮಣ್ಣಾಗಿ ಪರಿವರ್ತನೆಗೊಳ್ಳುತ್ತವೆ.

English summary

Health Benefits of Drinking Tea in Kulhad in kannada

Here we are discussing about Health Benefits of Drinking Tea in Kulhad in kannada. Read more.
Story first published: Thursday, July 7, 2022, 13:35 [IST]
X
Desktop Bottom Promotion