For Quick Alerts
ALLOW NOTIFICATIONS  
For Daily Alerts

ಹಾರ್ಮೋನಲ್ ಅಸಮತೋಲನ ಇರುವವರು ಈ ಆಹಾರ ತಿನ್ನಬೇಡಿ

|

ಇತ್ತೀಚಿಗೆ ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನತೆ ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ. ಮೂರು ಮಹಿಳೆಯರಲ್ಲಿ ಒಬ್ಬರಿಗೆ ಈ ಸಮಸ್ಯೆ ಇರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಈಗಿನ ಜೀವನ ಕ್ರಮ ಮತ್ತು ದಿನೇ ದಿನೇ ಅನುಸರಿಸುತ್ತಿರುವ ಆಹಾರ ಪದ್ಧತಿ ಇದಕ್ಕೆ ಒಂದು ಕಾರಣವಾಗಿದೆ ಎಂದು ಹೇಳಬಹುದು. ಮನೆಯಲ್ಲಿ ಪ್ರತಿ ದಿನ ಸೇವನೆ ಮಾಡುತ್ತಿರುವ ಕೆಲವು ಆಹಾರ ಪದಾರ್ಥಗಳು ಕೂಡ ಹಾರ್ಮೋನುಗಳ ಸಮತೋಲನವನ್ನು ತಪ್ಪಿಸುತ್ತವೆ.

Foods To Avoid If You are Struggling With Hormonal Imbalance

ಹಾಗಾಗಿ ಕೆಲವು ಆಹಾರಗಳನ್ನು ಸೇವನೆ ಮಾಡುವುದನ್ನು ತಪ್ಪಿಸುವುದು ಅಥವಾ ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ.

1. ರೆಡ್ ಮೀಟ್/ ಮಾಂಸಾಹಾರ : -

1. ರೆಡ್ ಮೀಟ್/ ಮಾಂಸಾಹಾರ : -

ಮಹಿಳೆಯರು ಕೆಂಪು ಮಾಂಸಾಹಾರದಿಂದ ಸಾಧ್ಯವಾದಷ್ಟು ದೂರ ಉಳಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಸ್ಯಾಚುರೇಟೆಡ್ ಮತ್ತು ಹೈಡ್ರೋಜಿನೇಟೆಡ್ ಕೊಬ್ಬಿನ ಅಂಶಗಳು ಸಾಕಷ್ಟು ಅಡಗಿವೆ. ಇವುಗಳು ಆರೋಗ್ಯಕ್ಕೆ ತುಂಬಾ ಹಾನಿಕರ. ಕೆಂಪು ಮಾಂಸಾಹಾರ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಹಾರ್ಮೋನುಗಳ ಸಮತೋಲನ ತಪ್ಪುತ್ತದೆ. ಇದರ ಬದಲು ಕೋಳಿ ಮೊಟ್ಟೆ, ಫ್ಯಾಟಿ ಫಿಷ್ ಗಳನ್ನು ಸೇವನೆ ಮಾಡಬಹುದು. ಫ್ಯಾಟಿ ಫಿಷ್ ಗಳಲ್ಲಿ ಒಮೆಗಾ - 3 ಫ್ಯಾಟಿ ಆಸಿಡ್ ಅಂಶಗಳು ಸಾಕಷ್ಟು ಕಂಡು ಬರುತ್ತವೆ. ಇವು ನಿಮ್ಮ ಆರೋಗ್ಯವನ್ನು ಹೆಚ್ಚು ಸುಧಾರಿಸುತ್ತವೆ.

2. ಸೋಯಾ ಉತ್ಪನ್ನಗಳು : -

2. ಸೋಯಾ ಉತ್ಪನ್ನಗಳು : -

ಸೋಯಾ ಉತ್ಪನ್ನಗಳಲ್ಲಿ ಮಹಿಳೆಯರ ದೇಹದ ಲೈಂಗಿಕ ಹಾಗೂ ಫಲವತ್ತತೆಯ ಹಾರ್ಮೋನುಗಳನ್ನು ಸಮತೋಲನ ತಪ್ಪುವಂತೆ ಮಾಡುವ ಗುಣ ಲಕ್ಷಣ ಇದೆ. ಮಹಿಳೆಯರಿಗೆ ಸೋಯಾದ ಯಾವುದೇ ಉತ್ಪನ್ನಗಳು ತುಂಬಾ ಆರೋಗ್ಯಕಾರಿ ಎಂದು ಸ್ವತಃ ವೈದ್ಯರೇ ಹೇಳುತ್ತಾರೆ. ಆದರೆ ಸೋಯಾ ದಲ್ಲಿ ಫೈಟೋ ಇಸ್ಟ್ರೋಜನ್ ಎಂಬ ಬಯೋ ಆಕ್ಟಿವ್ ಅಂಶ ಅಡಗಿದೆ. ಇದು ನಿಮ್ಮ ದೇಹದ ನೈಸರ್ಗಿಕ ಈಸ್ಟ್ರೋಜನ್ ಹಾರ್ಮೋನ್ ರೀತಿ ಕೆಲಸ ಮಾಡುತ್ತದೆ. ಇದರಿಂದ ನಿಮ್ಮ ಋತು ಬಂಧ ಚಕ್ರ ಅಸಹಜ ಸ್ಥಿತಿಗೆ ಒಳಗಾಗುತ್ತದೆ ಮತ್ತು ನಿಮ್ಮ ಫಲವತ್ತತೆಯ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮಹಿಳೆಯರು ತಮ್ಮ ದೇಹದಲ್ಲಿ ಹಾರ್ಮೋನುಗಳ ಅಸಮತೋಲನತೆ ಉಂಟಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಸೋಯಾ ಉತ್ಪನ್ನಗಳಿಂದ ಸಾಧ್ಯವಾದಷ್ಟು ದೂರವಿರುವುದು ಒಳ್ಳೆಯದು.

3. ಡೈರಿ ಉತ್ಪನ್ನಗಳು : -

3. ಡೈರಿ ಉತ್ಪನ್ನಗಳು : -

ಹಾಲು ಮತ್ತು ಇತರ ಡೈರಿ ಉತ್ಪನ್ನಗಳಲ್ಲಿ ಮಹಿಳೆಯರ ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳು ಸಿಗುತ್ತವೆ. ಆದರೆ ಡೈರಿ ಉತ್ಪನ್ನಗಳು ನಿಮ್ಮ ಆರೋಗ್ಯವನ್ನು ಸದೃಢವಾಗಿ ಕಾಪಾಡುವುದರ ಜೊತೆಗೆ ನಿಮ್ಮ ದೇಹದಲ್ಲಿ ಹಾರ್ಮೋನುಗಳ ಅಸಮತೋಲನತೆಯನ್ನು ಉಂಟು ಮಾಡುತ್ತವೆ. ಹಾಗಾಗಿ ಹಾಲಿನ ಸೇವನೆಯನ್ನು ಅತಿಯಾಗಿ ಮಾಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದು ಕರುಳಿನ ಉರಿಯೂತವನ್ನು ಉತ್ತೇಜಿಸಿ ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಯಾವುದೇ ಕ್ಷಣದಲ್ಲಿ ಬೇಕಾದರೂ ಮಧುಮೇಹ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಸಮಸ್ಯೆ ಇದ್ದ ಮಹಿಳೆಯರು ಡೈರಿ ಉತ್ಪನ್ನಗಳನ್ನು ಸ್ವಲ್ಪ ದೂರವಿಡುವುದು ಒಳ್ಳೆಯದು.

4. ಕೆಫೀನ್ ಅಂಶ : -

4. ಕೆಫೀನ್ ಅಂಶ : -

ಹೆಚ್ಚು ಕಾಫಿ ಮತ್ತು ಚಹಾ ಕುಡಿಯುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಆಲೋಚನೆ ಮಾಡಬೇಕು. ಏಕೆಂದರೆ ಕಾಫಿಯಲ್ಲಿರುವ ಕೆಫಿನ್ ಅಂಶ ನಿಮ್ಮ ದೇಹದಲ್ಲಿ ಕಾರ್ಟಿಸಾಲ್ ಅಂಶದ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ ಕಾರ್ಟಿಸಾಲ್ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುವ ಹಾರ್ಮೋನ್ ಆಗಿದೆ. ಇದರಿಂದ ನಿಮ್ಮ ದೇಹವನ್ನು ಬೇರೆ ಬಗೆಯ ಕಾಯಿಲೆಗಳಿಗೆ ಗುರಿ ಮಾಡುವ ಸಾಧ್ಯತೆ ಇದೆ. ಹಾಗಾಗಿ ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ಇದ್ದವರು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡಿ.

5. ಸಂಸ್ಕರಿಸಿದ ಆಹಾರಗಳು :-

5. ಸಂಸ್ಕರಿಸಿದ ಆಹಾರಗಳು :-

ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಮನೆಯ ಆಹಾರ ಸೇವನೆ ಮಾಡುವುದಕ್ಕಿಂತ ಹೆಚ್ಚಾಗಿ ಮನೆಯ ಹೊರಗಿನ ಬೇಕರಿ ಮತ್ತು ಹೋಟೆಲ್ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಇವುಗಳಲ್ಲಿ ಸಂಸ್ಕರಿಸಿದ ಆಹಾರಗಳು ಕೂಡ ಒಂದು. ಸಂಸ್ಕರಿಸಿದ ಆಹಾರಗಳು ಹೆಚ್ಚು ದಿನಗಳ ಕಾಲ ಕೆಡಬಾರದು ಎಂಬ ಕಾರಣಕ್ಕೆ ಪ್ರಿಸರ್ವೇಟಿವ್ ಗಳನ್ನು ಬಳಕೆ ಮಾಡಿರುತ್ತಾರೆ. ಸೋಡಿಯಂ ಮತ್ತು ಸಕ್ಕರೆ ಪ್ರಮಾಣ ಇವುಗಳಲ್ಲಿ ಹೆಚ್ಚಾಗಿರುತ್ತದೆ. ಈ ಅಂಶಗಳು ನಿಮ್ಮ ದೇಹದಲ್ಲಿ ಉರಿಯೂತವನ್ನು ಹೆಚ್ಚು ಮಾಡಿ ಅಡ್ರಿನಲ್ ಗ್ರಂಥಿಗಳ ಮೇಲೆ ಒತ್ತಡ ಉಂಟು ಮಾಡುತ್ತದೆ ಇದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ ಮತ್ತು ಹಾರ್ಮೋನುಗಳ ಮಟ್ಟದಲ್ಲಿ ವಿಪರೀತ ಬದಲಾವಣೆ ಉಂಟಾಗುತ್ತದೆ. ಹಾಗಾಗಿ ಮನೆಯಲ್ಲಿ ಮಾಡಿದ ಶುದ್ಧ ಸಾಂಪ್ರದಾಯಿಕ ಅಡುಗೆ ಆಹಾರಗಳನ್ನು ಸೇವನೆ ಮಾಡುವತ್ತ ಒಲವು ತೋರಿ.

6 . ಕೆಲವು ತರಕಾರಿಗಳು : -

6 . ಕೆಲವು ತರಕಾರಿಗಳು : -

ಮಹಿಳೆಯರು ಸೇರಿದಂತೆ ಎಲ್ಲರೂ ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಕೆಲವೊಂದು ತರಕಾರಿಗಳು ಮಹಿಳೆಯರ ದೇಹದ ಹಾರ್ಮೋನುಗಳ ಸಮತೋಲನತೆಯ ವಿಚಾರದಲ್ಲಿ ಸ್ವಲ್ಪ ತೊಂದರೆ ಉಂಟು ಮಾಡುತ್ತವೆ. ಅವುಗಳೆಂದರೆ ಬದನೆಕಾಯಿ, ದಪ್ಪಮೆಣಸಿನಕಾಯಿ, ಆಲೂಗಡ್ಡೆ, ಟೊಮೆಟೊ ಹಣ್ಣುಗಳು, ಹೂಕೋಸು, ಬ್ರೊಕೋಲಿ, ಕೇಲ್ ಇತ್ಯಾದಿಗಳು. ಮಹಿಳೆಯರು ಈ ತರಕಾರಿಗಳನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು. ಏಕೆಂದರೆ ಇವುಗಳು ದೇಹದಲ್ಲಿ ಥೈರಾಯ್ಡ್ ಗ್ರಂಥಿಯ ಉರಿಯೂತವನ್ನು ಉಂಟು ಮಾಡಿ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಹಾಗಾಗಿ ಇವುಗಳನ್ನು ಹೆಚ್ಚಾಗಿ ಸೇವನೆ ಮಾಡಬಾರದು. ಉಳಿದ ಸೊಪ್ಪು - ತರಕಾರಿಗಳನ್ನು ಆರಾಮವಾಗಿ ಸೇವನೆ ಮಾಡಬಹುದು.

English summary

Foods To Avoid If You are Struggling With Hormonal Imbalance

Here are foods to avoid if you struggling with horomonal imbalance,read on.
Story first published: Monday, November 30, 2020, 15:12 [IST]
X
Desktop Bottom Promotion