For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಈ ಆಹಾರಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು

|

ವರ್ಷದ ಅತ್ಯಂತ ತಂಪಗಿನ ಕಾಲದಲ್ಲಿ ಸದ್ಯ ಬದುಕುತ್ತಿದ್ದೇವೆ. ಈ ಚಳಿಗಾಲವು ಸಂತೋಷ, ಸಂಭ್ರಮದ ಜೊತೆಗೆ ಅನೇಕ ಕಾಲೋಚಿತ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ. ವಾತಾವರಣವು ಹೆಚ್ಚು ಶೀತವಾಗಿರುವುದರಿಂದ, ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವುದು ಸಹಜ.

ಆದರೆ, ನಾವು ಸೇವಿಸುವ ಕೆಲವೊಂದು ಆಹಾರವೂ ಸಹ, ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅದ್ದರಿಂದ ಚಳಿಗಾಲದಲ್ಲಿ ಅಂತಹ ಆಹಾರಗಳಿಂದ ದೂರವಿರುವುದು ಉತ್ತಮ. ಹಾಗಾದರೆ, ಅಂತಹ ಆಹಾರಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಚಳಿಗಾಲದಲ್ಲಿ ಸೇವಿಸಬಾರದಂತಹ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ಸಂಸ್ಕರಿಸಿದ ಸಕ್ಕರೆಯಿಂದ ತಯಾರಿಸಿದ ಸಿಹಿತಿಂಡಿಗಳು:

1. ಸಂಸ್ಕರಿಸಿದ ಸಕ್ಕರೆಯಿಂದ ತಯಾರಿಸಿದ ಸಿಹಿತಿಂಡಿಗಳು:

ಚಳಿಗಾಲದಲ್ಲಿ ಸಿಹಿಯಾಗಿರುವುದು ತಿನ್ಬೇಕು ಅಂತ ಆಸೆಯಾಗಿ ಬೇಕರಿ ಹೋಗಿ, ಸ್ವೀಟೋ, ಕೇಕೋ ತಿನ್ನುತ್ತಿದ್ದೀರಾ? ಹಾಗಾದ್ರೆ ಅದನ್ನು ಇಂದೇ ಇಲ್ಲಿಸಿ. ಏಕೆಂದರೆ ಚಳಿಗಾಲ ಮತ್ತು ಸಂಸ್ಕರಿಸಿದ ಸಿಹಿತಿಂಡಿಗಳು ಎಂದಿಗೂ ಉತ್ತಮವಾದ ಸಂಯೋಜನೆಯಲ್ಲ. ಸಕ್ಕರೆ ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಸಿಹಿ ಬಯಕೆಗಳನ್ನು ಪೂರೈಸಲು, ಕಾಲೋಚಿತ ಹಣ್ಣುಗಳಂತಹ ಆರೋಗ್ಯಕರ ಆಯ್ಕೆಗಳಿಗೆ ಹೋಗುವುದು ಉತ್ತಮ.

2. ಕರಿದ ಆಹಾರಗಳು:

2. ಕರಿದ ಆಹಾರಗಳು:

ಬೀದಿಬದಿಯ ಪಕೋಡಗಳು ಬಾಯಿಗೆ ರುಚಿ ನೀಡಬಹುದು ಆದರೆ, ಅದು ನಿಮ್ಮ ಆರೋಗ್ಯಕ್ಕೆ ಉತ್ತಮವಲ್ಲ. ಇಂತಹ ಕ್ರೇವಿಂಗ್ಸ್ ನಿಮಗಾಗುತ್ತಿದ್ದರೆ, ಅದನ್ನು ಆದಷ್ಟು ನಿಯಂತ್ರಿಸಿಕೊಳ್ಳಬೇಕು. ಏಕೆಂದರೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಸಮಸ್ಯೆಗಳನ್ನು ಉಂಟುಮಾಡಬಹುದು. ಕರಿದ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಜೊತೆಗೆ ಆರೋಗ್ಯಕರವಲ್ಲ. ಆದ್ದರಿಂದ ಚಳಿಗಾಲದಲ್ಲಿ, ಈ ಆಹಾರ ಪದಾರ್ಥಗಳು ನಿಮ್ಮ ಚಯಾಪಚಯ ದರವನ್ನು ನಿಧಾನಗೊಳಿಸಿ, ನಿಮ್ಮಲ್ಲಿ ಆಲಸ್ಯತನ ಹುಟ್ಟಲು ಕಾರಣವಾಗುತ್ತವೆ. ಆದ್ದರಿಂದ ಚಳಿಗಾಲದಲ್ಲಿ ಚಟುವಟಿಕೆಯಿಂದ ಕೂಡಿರಬೇಕಾದರೆ, ಕರಿದ ಅಥವಾ ಹುರಿದ ಆಹಾರಗಳನ್ನು ದೂರಮಾಡಿ.

3. ಮಜ್ಜಿಗೆ:

3. ಮಜ್ಜಿಗೆ:

ಮಜ್ಜಿಗೆ ಆರೋಗ್ಯಕರವಾಗಿದ್ದರೂ, ಚಳಿಗಾಲದಲ್ಲಿ ಈ ಡೈರಿ ಉತ್ಪನ್ನವನ್ನು ತ್ಯಜಿಸುವುದು ಉತ್ತಮ. ತಂಪಾದ ಡೈರಿ ಉತ್ಪನ್ನಗಳು ಲೋಳೆಯ ಬಿಡುಗಡೆಯನ್ನು ಹೆಚ್ಚಿಸಬಹುದು, ಇದರಿಂದ ಕಾಲೋಚಿತ ಶೀತ ಮತ್ತು ಜ್ವರಕ್ಕೆ ಗುರಿಯಾಗಬಹುದು. ಆದರೆ ನಿಮಗೆ ದೇಹಕ್ಕೆ ಪ್ರೋಬಯಾಟಿಕ್‌ಗಳು ಅಗತ್ಯವಾಗಿರುವುದರಿಂದ ಇದಕ್ಕೆ ಮೊಸರು ಉತ್ತಮ ಆಯ್ಕೆಯಾಗಿದೆ. ಆದರೆ, ಅದನ್ನು ಸೇವಿಸುವ ಮೊದಲು ಸ್ವಲ್ಪ ಸಮಯ ರೆಫ್ರಿಜರೇಟರ್‌ನಿಂದ ಹೊರಗಿಡಲು ಪ್ರಯತ್ನಿಸಿ. ಇದರಿಂದ ಅದು ತುಂಬಾ ತಂಪಾಗಿರುವುದಿಲ್ಲ. ಅಲ್ಲದೆ, ಊಟಕ್ಕೆ ಮುಂಚಿತವಾಗಿ ಸೇವಿಸುವುದನ್ನ ಮರೆಯದಿರಿ.

4. ತಂಪು ಹಾಲಿನ ಪಾನೀಯಗಳು:

4. ತಂಪು ಹಾಲಿನ ಪಾನೀಯಗಳು:

ತಣ್ಣನೆಯ ಹಾಲಿನ ಉತ್ಪನ್ನಗಳು ಎಷ್ಟು ರುಚಿಕರವೋ, ಚಳಿಗಾಲದಲ್ಲಿ ಅಷ್ಟೇ ಅಪಾಯಕಾರಿ. ಆದ್ದರಿಂದ ಚಳಿಗಾಲದಲ್ಲಿ ಇಂತಹ ಪಾನೀಯಗಳನ್ನು ತ್ಯಜಿಸುವುದು ಉತ್ತಮ. ಮಿಲ್ಕ್‌ಶೇಕ್‌ಗಳಂತಹ ಹಾಲು ಆಧಾರಿತ ಪಾನೀಯಗಳು ಮತ್ತಷ್ಟು ಶೀತ ಉಂಟುಮಾಡಬಹುದು. ಇದು ಗಂಟಲು ನೋವು ಸೇರಿದಂತೆ ತೀವ್ರ ಕೆಮ್ಮಿಗೆ ಕಾರಣವಾಗುತ್ತದೆ. ಇದರ ಬದಲಾಗಿ, ಋತುವಿನ ಉದ್ದಕ್ಕೂ ಉತ್ತಮ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಆರೋಗ್ಯಕರ ದೇಹವನ್ನು ಹೊಂದಲು ಸರಳವಾದ ಅಥವಾ ಅರಿಶಿನ ಬೆರೆಸಿದ ಬೆಚ್ಚಗಿನ ಹಾಲನ್ನು ಸೇವಿಸಲು ಪ್ರಯತ್ನಿಸಿ.

5. ಕಡಲೆಬೀಜದ ಚಿಕ್ಕಿ:

5. ಕಡಲೆಬೀಜದ ಚಿಕ್ಕಿ:

ಸಹಜವಾಗಿಯೇ, ಕಡಲೆಬೀಜದ ಚಿಕ್ಕಿ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಬಾಯಲ್ಲಿ ನೀರೂರಿಸುವ ಸಿಹಿತಿಂಡಿಯಾಗಿದ್ದು, ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಇದರಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುವುದರಿಂದ ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂಬುದನ್ನು ಮರೆಯಬಾರದು. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ, ನಿಮ್ಮ ಸಕ್ಕರೆಯ ಸೇವನೆಯನ್ನು ತಪ್ಪಿಸಲು ಅಥವಾ ಮಿತಿಗೊಳಿಸಬೇಕು. ಚಿಕ್ಕಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಮಿತವಾಗಿದ್ದರೆ ಚೆನ್ನ.

6. ತಂಪು ಪಾನೀಯಗಳು ಮತ್ತು ಹಣ್ಣಿನ ರಸ:

6. ತಂಪು ಪಾನೀಯಗಳು ಮತ್ತು ಹಣ್ಣಿನ ರಸ:

ಚಳಿಗಾಲದಲ್ಲಿ ಸುಡುವ ಬಿಸಿಲಿಗೆ ಸೋಡಾವೋ ಅಥವಾ ಇನ್ಯಾವುದೋ ಕೋಲ್ಡ್ ಡ್ರಿಂಕ್ಸ್ ಕುಡಿಯುವ ಮನಸ್ಸಾಗುವುದು ಸಹಜ. ಆದರೆ ಚಳಿಗಾಲದಲ್ಲಿ ಇದಕ್ಕೆ ಸ್ವಲ್ಪ ಬ್ರೇಕ್ ಹಾಕುವುದು ಉತ್ತಮ. ಕೋಲಾ ಅಥವಾ ಸ್ಪ್ರೈಟ್‌ನಂತಹ ಸೋಡಾಗಳು ದೇಹದ ರಕ್ಷಣಾತ್ಮಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಏಕೆಂದರೆ ದೇಹವು ತಂಪು ಪಾನೀಯದ ತಾಪಮಾನವನ್ನು ದೇಹದ ಉಷ್ಣತೆಗೆ ತರಲು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಇದು ನಿಮ್ಮ ದೇಹವನ್ನು ದುರ್ಬಲಗೊಳಿಸಿ, ರೋಗಗಳಿಗೆ ಗುರಿಯಾಗುವಂತೆ ಮಾಡುತ್ತದೆ. ಇದೇ ಹಣ್ಣಿನ ರಸಗಳಿಗೂ ಅನ್ವಯವಾಗುತ್ತದೆ. ಹಣ್ಣಿನ ರಸಗಳು ಆರೋಗ್ಯಕರವಾಗಿದ್ದರೂ, ಶೀತ ಋತುವಿನಲ್ಲಿ ಉತ್ತಮ ಆಯ್ಕೆಯಾಗಿರುವುದಿಲ್ಲ, ಅದರಲ್ಲೂ ಅವು ಕೋಲ್ಡ್ ಆಗಿದ್ದರೆ ದೂರವಿಡುವುದು ಉತ್ತಮ.

7. ಸಂರಕ್ಷಿತ ಆಹಾರಗಳು:

7. ಸಂರಕ್ಷಿತ ಆಹಾರಗಳು:

ಪೂರ್ವಸಿದ್ಧ ಆಹಾರಗಳು ಅಥವಾ ಉಪ್ಪಿನಕಾಯಿಗಳು ತಮ್ಮ ಬಾಳಿಕೆ ಹೆಚ್ಚಿಸಲು ಹೆಚ್ಚುವರಿ ಉಪ್ಪು ಮತ್ತು ಎಣ್ಣೆಯ ಅಂಶವನ್ನು ಹೊಂದಿರುತ್ತವೆ. ಆದರೆ ಈ ಪ್ರಕ್ರಿಯೆಯು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಾಶಪಡಿಸುತ್ತದೆ. ಇದು ಕೆಲವು ವ್ಯಕ್ತಿಗಳಲ್ಲಿ ಅಲರ್ಜಿಯನ್ನು ಸಹ ಪ್ರಚೋದಿಸಬಹುದು. ಬದಲಿಗೆ ತಾಜಾ ಕಾಲೋಚಿತ ಆಹಾರವನ್ನು ಆಯ್ಕೆ ಮಾಡಬಹುದು. ಇವು ಚಯಾಪಚಯ ದರವನ್ನು ಸಮತೋಲನದಲ್ಲಿಟ್ಟು ಅಲರ್ಜಿಗಳು ಅಥವಾ ಕಾಲೋಚಿತ ಕಾಯಿಲೆಗಳನ್ನು ತಡೆಯಲು ನಿಮಗೆ ಸಹಾಯ ಮಾಡುತ್ತದೆ.

English summary

foods and drinks to avoid in winter to keep your health intact

Here we talking about foods and drinks to avoid in winter to keep your health intact, read on
Story first published: Sunday, December 25, 2022, 22:04 [IST]
X
Desktop Bottom Promotion