For Quick Alerts
ALLOW NOTIFICATIONS  
For Daily Alerts

ಹಂದಿಜ್ವರದ ಬಗ್ಗೆ ನೀವು ತಿಳಿಯಲೇಬೇಕಾದ ಎಲ್ಲಾ ಸಂಗತಿಗಳು

|

ಹೆಸರೇ ತಿಳಿಸುವಂತೆ ಈ ಕಾಯಿಲೆ ಹಂದಿಗಳಿಗೆ ಬರುವಂತಹದ್ದಾಗಿದ್ದು ಅಪರೂಪಕ್ಕೆ ಮನುಷ್ಯರಿಗೂ ದಾಟಬಹುದು. ಇದೊಂದು ಭಾರೀ ಪ್ರಬಲ ಸಾಂಕ್ರಾಮಿಕ ರೋಗವಾಗಿದ್ದು ಇನ್ಫ್ಲುಯೆಂಜಾ ಹರಡುವ ಹಲವಾರು ವೈರಸ್ಸುಗಳಲ್ಲಿ ಯಾವುದೇ ಒಂದರಿಂದ ಬರಬಹುದು. ಹಂದಿಗಳಲ್ಲಿ ಒಂದಕ್ಕೆ ಈ ರೋಗ ಆವರಿಸಿದರೆ ಇದನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸ್ಪರ್ಷಿಸುವ ಮೂಲಕ, ಗಾಳಿಯ ಮೂಲಕ ಹಾಗೂ ಸೋಂಕಿಗೊಳಗಾಗಿದ್ದರೂ ಯಾವುದೇ ಸೂಚನೆ ನೀಡದ ಹಂದಿಗಳ ಮೂಲಕ ಇತರ ಹಂದಿಗಳಿಗೆ ಹರಡುತ್ತದೆ. ಜಗತ್ತಿನ ಹಲವಾರು ಕಡೆಗಳಲ್ಲಿ ಈ ಹಂದಿಗಳಿಗೆ ಸ್ವೈನ್ ಫ್ಲೂ ನಿರೋಧಕ ಲಸಿಕೆಗಳನ್ನು ನೀಡಲಾಗಿರುತ್ತದೆ.

ಅತಿ ಸಾಮಾನ್ಯವಾಗಿ ಆವರಿಸುವ ಹಂದಿಜ್ವರ H1N1ಇನ್ಫ್ಲುಯೆಂಜಾ ವಿಧದ ಉಪವಿಧವಾಗಿದೆ. ಇದರ ಹೊರತಾಗಿ ಕೆಲವೊಮ್ಮೆ ಇತರ ಉಪವಿಧಗಳಾದ H1N2,H3N1ಹಾಗೂ H3N2 ಮೊದಲಾದ ಉಪವಿಧಗಳಿಂದಲೂ ಎದುರಾಗಬಹುದು. 2009 ರಲ್ಲಿ ಸಾಂಕ್ರಾಮಿಕ ವಾಗಿದ್ದ ಈ ಜ್ವರ ಭಾರೀ ಪ್ರಮಾಣದಲ್ಲಿ ಮನುಷ್ಯರಿಗೆ ಆವರಿಸಿತ್ತು ಹಾಗೂ ಇದಕ್ಕೆ H1N1ಉಪವಿಧ ವೈರಸ್ ಪ್ರಮುಖ ಕಾರಣವಾಗಿತ್ತು. ಆದರೆ ಈ ವರ್ಷ ಎದುರಾಗಿದ್ದ ರೋಗಕ್ಕೆ ಕಾರಣವಾದ ವೈರಸ್ ಕೇವಲ ಹಂದಿಯಿಂದ ಮಾತ್ರ ಬಂದಿರಲಿಲ್ಲ. ಈ ವೈರಸ್ ಇತರ ಫ್ಲೂ ವೈರಸ್ಸುಗಳ ವಂಶವಾಹಿನಿಯನ್ನು ಹಕ್ಕಿಗಳ ವೈರಸ್ ಮತ್ತು ಮನುಷ್ಯರ ವೈರಸ್ ಗಳ ವಿಧಗಳಿಂದಲೂ ಪಡೆದಿತ್ತು.

swine flu

ಲಕ್ಷಣಗಳು:

ಹಂದಿಜ್ವರದ ಲಕ್ಷಣಗಳೂ ಸಾಮಾನ್ಯ ಫ್ಲೂ ಜ್ವರದ ಲಕ್ಷಣಗಳನ್ನೇ ಬಹುತೇಕವಾಗಿ ಹೋಲುತ್ತವೆ. ಇವುಗಳೆಂದರೆ:

*ಮೈ ಕೈ ನೋವು

*ಮೈ ನಡುಕ

*ಕೆಮ್ಮು

*ತಲೆನೋವು

*ಗಂಟಲ ಬೇನೆ

*ಜ್ವರ

*ಸುಸ್ತು

*ಅಪರೂಪದ ಸಂದರ್ಭಗಳಲ್ಲಿ ಕೆಲವು ಜನರಲ್ಲಿ ವಾಂತಿ ಮತ್ತು ಅತಿಸಾರವಾಗುವುದೂ ಕಂಡುಬಂದಿದೆ.

ಈ ಸೂಚನೆಗಳು ಕಂಡು ಬಂದ ತಕ್ಷಣವೇ ಸಾಮಾನ್ಯ ಫ್ಲೂ ಜ್ವರಕ್ಕೆ ನೀಡುವ ಸರಳ ಚಿಕಿತ್ಸೆಗಳಿಂದಲೇ ಜ್ವರವನ್ನು ನಿಯಂತಿಸ್ರಬಹುದು. ಆದರೂ, ವೈದ್ಯರು ಈ ಜ್ವರ ಹಂದಿಜ್ವರವಿರಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಗಳನ್ನು ನಡೆಸಬಹುದು ಹಾಗೂ ಈ ಲಕ್ಷಣಗಳಿಂದ ಪರಿಹಾರ ಪಡೆದುಕೊಳ್ಳಲು ಸೂಕ್ತ ಸಲಹೆ ನೀಡಬಹುದು.

ಚಿಕಿತ್ಸೆ

ಹಂದಿಜ್ವರವನ್ನು ಸಮರ್ಥವಾಗಿ ನಿಗ್ರಹಿಸುವ ಔಷಧಿಗಳು ಈಗ ಲಭ್ಯವಿವೆ. ಇವುಗಳಲ್ಲಿ ಪ್ರಮುಖವಾದ ಎರಡು ಔಷಧಿಗಳೆಂದರೆ amantadineಮತ್ತು rimantadine.ಇದರ ಹೊರತಾಗಿ influenza neuraminidase protein ಎಂಬ ಜ್ವರಕ್ಕೆ ಕಾರಣವಾದ ಪ್ರೋಟೀನುಗಳನ್ನು ತಗ್ಗಿಸುವ ಔಷಧಿಗಳಾದ oseltamivir ಮತ್ತು zanamivir ಎಂಬ ಔಷಧಿಗಳನ್ನೂ ವೈದ್ಯರು ಶಿಫಾರಸ್ಸು ಮಾಡಬಹುದು.ಸಾಮಾನ್ಯವಾಗಿ, ಹಂದಿಜ್ವರ ಪೀಡಿದ ರೋಗಿಗಳು ಹೆಚ್ಚಿನ ವೈದ್ಯಕೀಯ ಆರೈಕೆಯ ಅವಶ್ಯಕತೆ ಇಲ್ಲದೇ ಶೀಘ್ರವೇ ಗುಣಮುಖರಾಗುತ್ತಾರೆ.

swine flu

ಕಾರಣಗಳು:

ಹಂದಿಜ್ವರ ಮನುಷ್ಯರಿಗೆ ಆವರಿಸಲು ಕೆಲವು ಸಂದರ್ಭಗಳು ಮಾತ್ರವೇ ಕಾರಣವಾಗಬಲ್ಲುವು. ಅವುಗಳೆಂದರೆ:

* ಸೋಂಕುಪೀಡಿತ ಹಂದಿಗಳೊಂದಿಗಿನ ಸಂಪರ್ಕ: ಹಂದಿಜ್ವರ ಆವರಿಸಲು ಇದು ಅತಿ ಹೆಚ್ಚಿನ ಸಾಮಾನ್ಯ ಕಾರಣವಾಗಿದೆ. ಸೋಂಕುಪೀಡಿತ ಹಂದಿಯ ಯಾವುದೇ ಬಗೆಯ ಸ್ಪರ್ಷದಿಂದಲೂ ಸೋಂಕು ಮನುಷ್ಯರಿಗೆ ಹರಡಲು ಸಾಧ್ಯವಿದೆ.

* ಸೋಂಕುಪೀಡಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವುದು: ಈ ಬಗೆಯ ಹರಡುವಿಕೆ ಅಪರೂಪವಾಗಿದೆ, ಆದರೆ ಸೋಂಕುಪೀಡಿತ ವ್ಯಕ್ತಿಯೊಂದಿಗೆ ನಿಕಟ ಒಡನಾಟದಲ್ಲಿರುವ ವ್ಯಕ್ತಿಗಳಿಗೆ ಇದು ಸುಲಭವಾಗಿ ಹರಡುತ್ತದೆ.

* ಸೋಂಕುಪೀಡಿತ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ದೇಹಸಂಪರ್ಕದ ಮೂಲಕ ಹರಡುವುದು. ಸಾಮಾನ್ಯವಾಗಿ ಸೋಂಕುಪೀಡಿತ ವ್ಯಕ್ತಿಯ ನಿಕಟ ಸಹವರ್ತಿ ಗುಂಪುಗಳಲ್ಲಿ ಒಬ್ಬರಿಗಾದರೂ ಈ ಸೋಂಕು ಇರುವುದು ಕಂಡುಬಂದಿದೆ.

ಅಪಾಯದ ಸಾಧ್ಯತೆಗಳು

ಕೆಲವು ವ್ಯಕ್ತಿಗಳಿಗೆ ಇತರರಿಗಿಂತಲೂ ಈ ಜ್ವರ ಆವರಿಸುವ ಸಾಧ್ಯತೆ ಹೆಚ್ಚು. ಈ ವ್ಯಕ್ತಿಗಳೆಂದರೆ:

* ಅರವತ್ತೈದು ವರ್ಷಕ್ಕೂ ಹೆಚ್ಚು ವಯಸ್ಸಿನ ವ್ಯಕ್ತಿಗಳು

* ಐದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳು

* ಗರ್ಭಿಣಿಯರು

* ಗಂಭೀರ ಸ್ಥಿತಿಯ ಕಾಯಿಲೆ ಹೊಂದಿರುವ ವ್ಯಕ್ತಿಗಳು

* ದೀರ್ಘಾವಧಿಯ ಆಸ್ಪಿರಿನ್ ಚಿಕಿತ್ಸೆ ಪಡೆಯುತ್ತಿರುವ ಹದಿಹರೆಯದವರು

* ರೋಗ ನಿರೋಧಕ ವ್ಯವಸ್ಥೆ ಕುಂಠಿತವಾಗಿರುವ ಯಾವುದೇ ವ್ಯಕ್ತಿಗಳು

ಮುನ್ನೆಚ್ಚರಿಕೆಗಳು

ಈ ಜ್ವರಕ್ಕೆ ಕೇವಲ ಒಂದೇ ಔಷಧಿ ಸಾಕಾಗದು, ಹಾಗಾಗಿ ಮನೆಯಲ್ಲಿ ಈ ಜ್ವರ ಬರದಂತೆ ಕಾಪಾಡಿಕೊಳ್ಳಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಒಂದು ವೇಳೆ ವೈರಸ್ ಸೋಂಕಿನ ಜ್ವರ ಲಕ್ಷಣಗಳು ಕಂಡುಬರಲು ಪ್ರಾರಂಭವಾದರೆ ಮನೆಯ ಎಲ್ಲರೂ ತಪ್ಪದೇ ಅನುಸರಿಸಬೇಕಾದ ಕ್ರಮಗಳೆಂದರೆ:

* ನಿಯಮಿತವಾಗಿ ಸೋಪು ಬಳಸಿ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು

* ಸಾಕಷ್ಟು ನಿದ್ದೆ ಪಡೆಯುವುದು

* ಸಾಕಷ್ಟು ವ್ಯಾಯಾಮ

* ಮಾನಸಿಕ ಒತ್ತಡಗಳನ್ನು ನಿರ್ವಹಿಸುವುದು

* ಸಾಕಷ್ಟು ದ್ರವಾಹಾರ ಸೇವಿಸುವುದು

* ಸಮತೋಲನ ಆಹಾರ ಸೇವಿಸುವುದು

* ವೈರಸ್ ಇರುವ ಸಂಭಾವ್ಯ ಸ್ಥಳಗಳನ್ನು ಸ್ಪರ್ಷಿಸುವುದನ್ನು ಆದಷ್ಟೂ ತಪ್ಪಿಸುವುದು

* ಸೋಂಕು ಇರುವ ವ್ಯಕ್ತಿಗಳ ಸಮೀಪ ಸುಳಿಯುವುದನ್ನು ಆದಷ್ಟೂ ತಪ್ಪಿಸುವುದು.

* ಒಂದು ವೇಳೆ ನೀವಿರುವ ಸ್ಥಳದಲ್ಲಿ ಹಂದಿಜ್ವರ ಸಾಂಕ್ರಾಮಿಕವಾಗಿದ್ದರೆ ಈ ಸ್ಥಳದಲ್ಲಿ ಗುಂಪಿನಿಂದ ಆದಷ್ಟೂ ದೂರವಿರುವುದು

swine flu

ಈ ಸೋಂಕು ಎದುರಾದರೆ ಹರಡುವ ಸಂಭವ ತಗ್ಗಿಸುವುದು ಹೇಗೆ?

ಒಂದು ವೇಳೆ ವ್ಯಕ್ತಿಯೊಬ್ಬರಿಗೆ ಸೋಂಕು ತಗಲಿರುವುದು ಖಾತರಿಯಾದರೆ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಇವುಗಳೆಂದರೆ:

*ಈ ವ್ಯಕ್ತಿಯ ಸಂಪರ್ಕ ಇತರ ವ್ಯಕ್ತಿಗಳೊಂದಿಗೆ ಆಗುವುದನ್ನು ಆದಷ್ಟೂ ತಪ್ಪಿಸುವುದು

ಶಾಲೆಗೆ ಅಥವಾ ಕೆಲಸಕ್ಕೆ ಹೋಗಬಾರದು

*ಕೆಮ್ಮು ಮತ್ತು ಸೀನು ಎದುರಾದರೆ ಕಡ್ಡಾಯವಾಗಿ ಬಾಯಿ ಮೂಗುಗಳನ್ನು ಬಟ್ಟೆ ಅಥವಾ ಟಿಶ್ಯೂ ಕಾಗದದಿಂದ ಅಡ್ಡವಿರಿಸಬೇಕು. ಒಂದು ವೇಳೆ ಆ ಕ್ಷಣಕ್ಕೆ ಏನೂ ಲಭ್ಯವಿಲ್ಲದಿದ್ದರೆ ಎರಡೂ ಹಸ್ತಗಳನ್ನು ಮೂಗು ಬಾಯಿಗಳಿಗೆ ಅಡ್ಡವಾಗಿರಿಸಬೇಕು. ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

*ಸ್ವಚ್ಛಗೊಳಿಸಿದ ಬಟ್ಟೆ ಮತ್ತು ಟಿಶ್ಯೂ ಕಾಗದಗಳನ್ನು ಹೊರಗೆಸೆಯದೇ ಕಸದ ಬುಟ್ಟಿಯಲ್ಲಿಯೇ ವಿಸರ್ಜಿಸಿ.

ರೋಗಿ ಸ್ಪರ್ಷಿಸಿದ ಎಲ್ಲಾ ಸ್ಥಳಗಳನ್ನು ಒರೆಸಿ ಸ್ವಚ್ಛಗೊಳಿಸುತ್ತಾ ಇರಬೇಕು

*ವೈದ್ಯರು ನೀಡಿರುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.

English summary

Everything you need to know about swine flu

Swine flu is a disease of pigs that can, in rare cases, be passed to humans. It is a highly contagious respiratory disease caused by one of many Influenza A viruses.The disease is spread among pigs by direct and indirect contact, aerosols, and from pigs that are infected but do not have symptoms.In many parts of the world, pigs are vaccinated against swine flu.
Story first published: Friday, July 26, 2019, 11:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X