For Quick Alerts
ALLOW NOTIFICATIONS  
For Daily Alerts

ಮಧುಮೇಹ ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡುತ್ತೆ ಈ ಹರ್ಬ್ಸ್

|

ಮಧುಮೇಹ ಎಂಬುವುದು ಸೈಲೆಂಟ್‌ ಕಿಲ್ಲರ್. ಒಮ್ಮೆ ಬಂದ್ರೆ ಅದನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣ ಗುಣಮುಖರಾಗಲು ಸಾದ್ಯವಿಲ್ಲ. ಮಧುಮೇಹ ಬಂದ್ರೆ ಮಾತ್ರೆ ಅಥವಾ ಇನ್ಸುಲಿನ್‌ ತೆಗೆದುಕೊಳ್ಳಬೇಕು, ಆಹಾರಕ್ರಮದ ಬಗ್ಗೆ ತುಂಬಾನೇ ಎಚ್ಚರವಹಿಸಬೇಕು.

ದೇಹದಲ್ಲಿ ಸಕ್ಕರೆಯಂಶ ಹೆಚ್ಚಿಸುವ ಆಹಾರ ಸೇವಿಸುವಂತಿಲ್ಲ. ಅಲ್ಲದೆ ಮಧುಮೇಹ ಈ ಕೊರೊನಾ ಸಮಯದಲ್ಲಿ ಮತ್ತಷ್ಟು ಅಪಾಯಕಾರಿಯಾಗಿ ಕಾಡಿದೆ. ಬ್ಲ್ಯಾಕ್ ಫಂಗಸ್‌ನಂಥ ಸಮಸ್ಯೆ ಕೊರೊನಾ ಸೋಂಕಿತ ಮಧುಮೇಹಿಗಳಲ್ಲಿಯೇ ಕಂಡು ಬರುತ್ತಿದೆ, ಆದ್ದರಿಂದ ಮಧುಮೇಹಿಗಳಿಗೆ ಕೊರೊನಾ ಸೋಂಕು ತಗುಲಿದರೆ ತುಂಬಾ ಅಪಾಯಕಾರಿಯಾಗಿದೆ.

ಆದ್ದರಿಂದ ಮಧುಮೇಹಿಗಳು ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಬೇಕು. ಈ ನಿಟ್ಟಿನಲ್ಲಿ ಹರ್ಬ್ಸ್ ಅಂದ್ರೆ ಕೆಲವೊಂದು ಗಿಡಮೂಲಿಕೆಗಳು ಸಹಕಾರಿಯಾಗಿದೆ. ಇದನ್ನು ನ್ಯಾಚುರಾಪತಿ ಚಿಕಿತ್ಸೆಯಲ್ಲೂ ಬಳಸಲಾಗುವುದು. ಯಾವೆಲ್ಲಾ ಹರ್ಬ್ಸ್ ಸಕ್ಕರೆಯಂಶ ನಿಯಂತ್ರಣದಲ್ಲಿ ಇಡಲು ಸಹಕಾರಿ ಎಂದು ನೋಡೋಣ ಬನ್ನಿ:

ಮಧುನಾಶಿನಿ (Gurmar)

ಮಧುನಾಶಿನಿ (Gurmar)

ಇದರ ಹೆಸರೇ ಮಧುಮೇಹವನ್ನು ನಿಯಂತ್ರಿಸುವ ಸಸ್ಯ ಎಂಬುವುದಾಗಿ ಹೇಳುತ್ತದೆ. ಇದನ್ನು ಆಯುರ್ವೇದಲ್ಲಿ ಮಧುಮೇಹ ನಿಯಂತ್ರಣಕ್ಕೆ ಬಳಸಲಾಗುವುದು. ಇದು ವ್ಯಕ್ತಿಯ ಸಿಹಿ ಬಯಕೆಯನ್ನು ನಿಯಂತ್ರಿಸುವುದು, ಅಲ್ಲದೆ ರಕ್ತದಲ್ಲಿರುವ ಅಧಿಕ ಗ್ಲುಕೋಸ್‌ ಸರಿಯಾದ ಬಳಕೆಗೆ ಸಹಾಯ ಮಾಡುತ್ತೆ.

ಒರೆಗ್ನೋ (Oregano)

ಒರೆಗ್ನೋ (Oregano)

ಒರೆಗ್ನೋ ಇದು ಮಧುಮೇಹಿಗಳಿಗೆ ಎರಡು ರೀತಿಯಲ್ಲಿ ಸಹಕಾರಿಯಾಗಿದೆ.

1. ಇದು ರಕ್ತದಲ್ಲಿರುವ ಸಕ್ಕರೆಯಂಶವನ್ನು ನಿಯಂತ್ರಿಸುತ್ತದೆ

2. ಇದು ಮೇಧೋಜೀರಕ ಗ್ರಂಥಿಯ ಚಟುವಟಿಕೆ ಹೆಚ್ಚಿಸಿ ಇನ್ಸುಲಿನ್‌ ಉತ್ಪತ್ತಿಗೆ ಸಹಕರಿಸುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೆ ದೇಹದಲ್ಲಿ ಕಾರ್ಬೋಹೈಡ್ರೇಟ್ಸ್ ಸಂಗ್ರಹವಾಗುವುದನ್ನು ತಡೆಗಟ್ಟುತ್ತೆ.

ಲೋಳೆಸರ

ಲೋಳೆಸರ

ಈ ಸಸ್ಯ ಬಹುತೇಕ ಮನೆಗಳಲ್ಲಿ ಇದ್ದೇ ಇರುತ್ತದೆ. ಇದು ದೇಹದಲ್ಲಿ ಉರಿಯೂತ ಕಡಿಮೆ ಮಾಡಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ಉರಿಯೂತದ ಸಮಸ್ಯೆಯೇ ಮಧುಮೇಹ ಸೇರಿ ಅನೇಕ ಜೀವನಶೈಲಿ ಸಮಸ್ಯೆಗಳಿಗೆ ಕಾರಣವಾಗುವುದು.

ಶುಂಠಿ

ಶುಂಠಿ

ಶುಂಠಿ ನಮ್ಮ ಭಾರತೀಯರ ಬಹುತೇಕ ಅಡುಗೆಗಳಲ್ಲಿ ಇರುತ್ತದೆ, ಇದು ಆಹಾರಕ್ಕೆ ರುಚಿ ನೀಡುವುದು ಮಾತ್ರವಲ್ಲಿ ರಕ್ತದಲ್ಲಿ ಮಧುಮೇಹ ನಿಯಂತ್ರಣಕ್ಕೂ ಸಹಕಾರಿ.

ಮೆಂತೆ

ಮೆಂತೆ

ಮೆಂತೆ ಕೂಡ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ಸಹಕಾರಿ. ರಾತ್ರಿ 1 ಚಮಚ ಮೆಂತೆ ನೆನೆ ಹಾಕಿ, ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ.

ಸೇಜ್ (Sage)

ಸೇಜ್ (Sage)

ಇದನ್ನು ಕನ್ನಡದಲ್ಲಿ ಬೋಜ್‌ ಪತ್ರ ಎಲೆ ಎಂದು ಕೂಡ ಕರೆಯಲಾಗುವುದು. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ರಕ್ತದಲ್ಲಿ ಸಕ್ಕರೆಯಂಶ ಕಡಿಮೆ ಮಾಡುವುದು, ಇದನ್ನು ಟೀ ರೀತಿ ಕುಡಿಯುವುದು ಒಳ್ಳೆಯದು.

ರೋಸ್ಮೆರಿ:

ರೋಸ್ಮೆರಿ:

ರೋಸ್ಮೆರಿ ಮೈ ತೂಕ ಕಡಿಮೆ ಮಡುವುದು ಮಾತ್ರವಲ್ಲ, ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಕಾರಿಯಾಗಿದೆ.

ಜಿನ್‌ಸೆಂಗ್‌ (Ginseng)

ಜಿನ್‌ಸೆಂಗ್‌ (Ginseng)

ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಮಾತ್ರವಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಇದು ದೇಹವು ಕಾರ್ಬ್ಸ್ ಹೀರಿಕೊಳ್ಳುವುದನ್ನು ನಿಯಂತ್ರಿಸಿ ಇನ್ಸುಲಿನ್ ಉತ್ಪತ್ತಿ ಹೆಚ್ಚಿಸುವುದು.

English summary

Effective Herbs To Lower Blood Sugar Levels in kannada

Effective herbs to lower blood sugar levels in kannada, read on...
X
Desktop Bottom Promotion