For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಕಾಡುವ ಬಾಯಿಹುಣ್ಣಿನ ಸಮಸ್ಯೆಗೆ ಎಳೆನೀರಿನಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ?

|

ಶೀತಲವಾದ ಚಳಿಗಾಲದ ತಿಂಗಳುಗಳು ಕ್ರಮೇಣವಾಗಿ ನೇಪಥ್ಯಕ್ಕೆ ಸರಿದು ಈಗಾಗಲೇ ಬಿರುಬಿಸಿಲಿನ ಹಗಲುಗಳು ಹಾಗೂ ಸಹಿಸಲಸಾಧ್ಯವಾದ ಸೆಖೆಯ ರಾತ್ರಿಗಳಿಗೆ ದಾರಿ ಮಾಡಿ ಕೊಟ್ಟಾಗಿದೆ. ಹೊರಗಡೆ ಕಾಲಿಡಲೇ ಯೋಚಿಸುವಂತೆ ಮಾಡುವ ಧಗಧಗಿಸುವ ಸೂರ್ಯ, ನಮ್ಮ ಬಗ್ಗೆ ನಮಗೇ ಹೇವರಿಕೆಯಾಗುವಂತೆ ಮಾಡುವ ಬೆವರಿನ ವಾಸನೆಯಿಂದ ನಾರುವಂತಾಗುವ ದಿನಗಳಿವು! ಬಿರುಬೇಸಿಗೆಯ ಈ ಋತುಮಾನವು ತನ್ನ ಸಂಗಡ ಹತ್ತುಹಲವು ಆರೋಗ್ಯ ಸಮಸ್ಯೆಗಳನ್ನೂ ಹೊತ್ತುತರುತ್ತದೆ.

Coconut Water benefits

ಸಾಕಷ್ಟು ಕಾಳಜಿ ವಹಿಸದೇ ಹೋದರೆ, ಈ ಬೇಸಿಗೆಯ ತಿಂಗಳುಗಳು ನಿರ್ಜಲೀಕರಣ (ಡಿಹೈಡ್ರೇಷನ್) ದ ಕಿರಿಕಿರಿಯಿಂದ ಮೊದಲ್ಗೊಂಡು ಬಿಸಿಲ ಹೊಡೆತದವರೆಗೂ, ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ತೊಂದರೆಗಳವರೆಗೂ ನಿಮ್ಮ ಒಟ್ಟಾರೆ ಆರೋಗ್ಯವನ್ನ ಇನ್ನಿಲ್ಲದಂತೆ ಹಿಂಡಿ ಹಿಪ್ಪೆಮಾಡಿಬಿಡಬಲ್ಲವು.

ಬೇಸಿಗೆ ಕಾಲದ ಮತ್ತೊಂದು ವೇದನಾಭರಿತ ಕಿರಿಕಿರಿಯೆಂದರೆ ಅದು ಬಾಯಿಯಲ್ಲಿ ಉಂಟಾಗುವ ಹುಣ್ಣುಗಳು. ಈ ಬಾಯಿಹುಣ್ಣುಗಳು ಉಂಟಾಗುವುದಕ್ಕೆ ಕಾರಣಗಳು ಹಲವಾರಿವೆ ಹಾಗೂ ಈ ಬಾಯಿ ಹುಣ್ಣುಗಳು ಕೇವಲ ಬೇಸಿಗೆಯ ಅವಧಿಯಲ್ಲಷ್ಟೇ ಕಾಣಿಸಿಕೊಳ್ಳಬೇಕೆಂದೇನಿಲ್ಲ!! ವರ್ಷದ ಯಾವುದೇ ಅವಧಿಯಲ್ಲಿಯೂ ಬಾಯಿಹುಣ್ಣುಗಳು ಕಾಣಿಸಿಕೊಂಡಾವು.

ಆದರೆ ಬೇಸಿಗೆಯ ಕಾಲದಲ್ಲಿ, ಈ ಬಾಯಿ ಹುಣ್ಣುಗಳು ವಿರುದ್ಧ ಹೋರಾಡುವುದಕ್ಕೆ ಒಂದು ಸಂಜೀವಿನಿ ಇದೆ ಹಾಗೂ ಆ ಸಂಜೀವಿನಿ ಮತ್ಯಾವುದೂ ಅಲ್ಲ, ನಮ್ಮೆಲ್ಲರಿಗೂ ಚಿರಪರಿಚಿತವಾಗಿರುವ ಅಮೃತಸಮಾನವಾದ ಎಳನೀರು!!

ಬಾಯಿಹುಣ್ಣಿನ ಸಮಸ್ಯೆಯನ್ನು ಎಳನೀರಿನಿಂದ ಬಗೆ ಹರಿಸುವುದು ಹೇಗೆ ಎಂದು ನೋಡೋಣ:

 ಬಾಯಿಹುಣ್ಣಿಗೆ ಎಳನೀರು

ಬಾಯಿಹುಣ್ಣಿಗೆ ಎಳನೀರು

ವಿಶೇಷವಾಗಿ ನಿಮ್ಮ ದಿನನಿತ್ಯದ ಆಹಾರಪದ್ಧತಿಯಲ್ಲಿ ಖಾರದ ಅಂಶವು ಹೆಚ್ಚಾಗಿದ್ದಲ್ಲಿ ಹಾಗೂ ಪೋಷಕಾಂಶಗಳ ಕೊರತೆಯಿದ್ದಲ್ಲಿ, ಈ ಬಾಯಿಯ ಹುಣ್ಣುಗಳು ಸರ್ವೇಸಾಧಾರಣವಾಗಿ ಕಾಣಿಸಿಕೊಳ್ಳುತ್ತವೆ. ಒಮ್ಮೊಮ್ಮೆ ನೀವು ತೀರಾ ಒತ್ತಡಕ್ಕೆ ಗುರಿಯಾದಾಗ ಇಲ್ಲವೇ ನೀವು ವಿಪರೀತ ಧೂಮಪಾನ ಮಾಡುವವರಾಗಿದ್ದರೂ ಕೂಡ ಬಾಯಿಹುಣ್ಣುಗಳ ಕಿರಿಕಿರಿ ಹೆಚ್ಚಾಗಿಯೇ ಬಾಧಿಸುತ್ತದೆ. ಕಾರಣಗಳು ಅದೇನೇ ಇರಲೀ, ಈ ಬಾಯಿಹುಣ್ಣುಗಳಂತೂ ತುಂಬಾ ನೋವಿನಿಂದ ಕೂಡಿರುತ್ತವೆ ಹಾಗೂ ಅನೇಕ ಬಾರಿ ನಿಮ್ಮ ಮಾತಾನಾಡುವ ಹಾಗೂ ಆಹಾರವನ್ನು ಜಗಿಯುವ ಸಾಮರ್ಥ್ಯಗಳ ಮೇಲೂ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಈ ಬಾಯಿಹುಣ್ಣುಗಳ ಉಪಟಳಗಳಿಂದ ಮುಕ್ತರಾಗಬೇಕಾದಲ್ಲಿ ನೀವು ಮಾಡಬೇಕಾದುದಿಷ್ಟೇ: ಒಂದು ಅಥವಾ ಎರಡು ದಿನಗಳ ಮಟ್ಟಿಗೆ ಮುಂಜಾನೆಯೇ ಎಳನೀರನ್ನು ಕುಡಿಯುವುದು!

ಎಳನೀರೇ ಏಕೆ ?

ಎಳನೀರೇ ಏಕೆ ?

ಆಯುರ್ವೇದದ ಪ್ರಕಾರ, ಶರೀರದಲ್ಲಾಗುವ ಉಷ್ಣತೆಯ ಹೆಚ್ಚಳವು ಬಾಯಿಯಲ್ಲಿ ಹುಣ್ಣುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ, ನಿಮ್ಮ ಶರೀರವು ವಿಪರೀತ ಶಾಖಕ್ಕೆ ಗುರಿಯಾಗುವ ಕಾರಣದಿಂದ ಬಾಯಿಯಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುವ ಸಾಧ್ಯತೆ ಅತೀ ಹೆಚ್ಚಾಗಿರುತ್ತದೆ. ಹಾಗಾಗಿ, ಬೆಳಗ್ಗೆ ಎದ್ದೊಡನೆಯೇ ಒಂದು ಲೋಟದಷ್ಟು ಎಳನೀರನ್ನು ಕುಡಿದರೆ ಅದು ಬಾಯಿ ಹುಣ್ಣುಗಳನ್ನು ಉಪಶಮನಗೊಳಿಸುವಲ್ಲಿ ನೆರವಾಗುತ್ತದೆ.

ಎಳನೀರು ಕೇವಲ ಪೋಷಕ ತತ್ತ್ವಗಳಿಂದ ಸಮೃದ್ಧವಾಗಿರುವುದಷ್ಟೇ ಅಲ್ಲ, ಜೊತೆಗೆ ಎಳನೀರಿನಲ್ಲಿ ಶೇ. 94 ರಷ್ಟು ನೀರೇ ಇದ್ದು, ಇದು ದೇಹವನ್ನು ತಂಪಾಗಿಸುವಲ್ಲಿ ನೆರವಾಗುತ್ತದೆ. ದೇಹದ ಉಷ್ಣಾಧಿಕ್ಯದ ಕಾರಣದಿಂದಾಗಿ ಬಾಯಿಯಲ್ಲಿ ಹುಣ್ಣುಗಳಾಗುತ್ತಿದ್ದರೆ, ದಿನಕ್ಕೆರಡು ಬಾರಿ ಎಳನೀರನ್ನು ಕುಡಿಯಿರಿ. ಎಳನೀರನ್ನು ಆದ್ಯತಾಪೂರ್ವಕವಾಗಿ ನಸುಕಿನ ವೇಳೆ ಖಾಲಿ ಹೊಟ್ಟೆಯಲ್ಲಿ ಹಾಗೂ ಮಧ್ಯಾಹ್ನದ ವೇಳೆ ಕುಡಿಯಿರಿ. ಎರಡು ಅಥವಾ ಮೂರು ದಿನಗಳವರೆಗೆ ಹೀಗೆ ಮಾಡಿರಿ. ಇದು ನಿಮ್ಮ ಶರೀರವನ್ನು ತಂಪಾಗಿಸುತ್ತದೆ ಹಾಗೂ ಪರೋಕ್ಷವಾಗಿ ಬಾಯಿಯ ಹುಣ್ಣುಗಳು ವಾಸಿಯಾಗಲು ನೆರವಾಗುತ್ತದೆ.

ಪರ್ಯಾಯವಾಗಿ, ನೀವು ತೆಂಗಿನ ಹಾಲಿನಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳುವುದರ ಮೂಲಕವೂ ಬಾಯಿಯ ಹುಣ್ಣುಗಳಿಂದ ಮುಕ್ತಿ ಪಡೆಯಬಹುದು. ಬಾಯಿ ಹುಣ್ಣುಗಳನ್ನು ಗುಣಪಡಿಸಿಕೊಳ್ಳುವುದಕ್ಕೆ, ನಿಜ ಅರ್ಥದಲ್ಲಿ, ಇದು ಒಂದು ಅತ್ಯುತ್ತಮ ಪರಿಹಾರೋಪಾಯವಾಗಿದೆ. ಪ್ರತಿದಿನವೂ ಹೀಗೆ ಮೂರರಿಂದ ನಾಲ್ಕು ಬಾರಿ ಮಾಡಿರಿ. ಬಾಯಿ ಹುಣ್ಣಿನ ನೋವು ಗಮನಾರ್ಹವಾಗಿ ಕಡಿಮೆಯಾಗಿರುವುದನ್ನು ನೀವೇ ಮನಗಾಣುವಿರಿ.

ಬೇಸಿಗೆಯಲ್ಲಿ ಎಳನೀರಿನಿಂದ ರಕ್ಷಣೆ

ಬೇಸಿಗೆಯಲ್ಲಿ ಎಳನೀರಿನಿಂದ ರಕ್ಷಣೆ

ಮೆಗ್ನೀಷಿಯಂ ನಿಂದ ಮೊದಲ್ಗೊಂಡು, ಪೊಟ್ಯಾಷಿಯಂ ನವರೆಗೆ, ಪ್ರೋಟೀನ್ ನವರೆಗೆ, ನಾರಿನಂಶದವರೆಗೆ ಶರೀರಕ್ಕೆ ಏನೇನೋ ಬೇಕೋ ಅವೆಲ್ಲವನ್ನೂ ಹಾಗೂ ಇನ್ನೂ ಹೆಚ್ಚಿನದನ್ನೂ ಒಳಗೊಂಡಿದೆ ಈ ಎಳನೀರು. ಜೊತೆಗೆ, ಈ ಎಳನೀರು ಆ್ಯಂಟಿ-ಆಕ್ಸಿಡೆಂಟ್ ಗಳ ಒಂದು ಪ್ರಚ್ಛನ್ನ ಆಗರವೇ ಆಗಿದ್ದು, ಇದು ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಅಧಿಕಗೊಳಿಸುತ್ತದೆ ಹಾಗೂ ಅನೇಕ ಖಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಎಳನೀರು ಅದೆಷ್ಟು ತಂಪಾದ ಪೇಯವೆಂದೂ ಎಲ್ಲರಿಗೂ ಗೊತ್ತೇ ಇದೆ. ಬೇಸಿಗೆಯ ದಿನಗಳಲ್ಲಿ, ಎಳನೀರಿನ ಈ ಎಲ್ಲ ಸದ್ಗುಣಗಳು ಜೊತೆಗೂಡಿ ನಿಮ್ಮ ಆರೋಗ್ಯ ಸ್ಥಿತಿಯನ್ನು ಉತ್ತಮಗೊಳಿಸಬಲ್ಲವು, ನಿಮ್ಮನ್ನು ತಂಪಾಗಿರಿಸಬಲ್ಲವು ಹಾಗೂ ಜೊತೆಗೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸಬಲ್ಲವು. ಬಾಯಿಹುಣ್ಣುಗಳ ನಿವಾರಣೆಗೆ ಬೇಕಾದ ಪೋಷಕಾಂಶಗಳನ್ನು ನಿಮ್ಮ ದೇಹಕ್ಕೆ ಒದಗಿಸುವ ಮೂಲಕ ಬಾಯಿಹುಣ್ಣುಗಳ ನೋವನ್ನು ಹತ್ತಿಕ್ಕಲು ಎಳನೀರು ನೆರವಾಗುತ್ತದೆ ಹಾಗೂ ಜೊತೆಗೆ ನಿಮ್ಮ ಶರೀರವನ್ನೂ ತಂಪಾಗಿರಿಸುತ್ತದೆ.

English summary

Drink Coconut Water To Get Rid Of Mouth Ulcers During Summer In Kannada

Drink Coconut Water to get rid of Mouth Ulcers during summer in Kannada, Read on..
Story first published: Wednesday, March 24, 2021, 14:49 [IST]
X
Desktop Bottom Promotion