For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಹಾಗೂ ಪರಿಣಾಮಕಾರಿ ಮನೆಮದ್ದುಗಳು

|

ಮಳೆಗಾಲ ಆರಂಭವಾದ ಬಳಿಕ ಹೆಚ್ಚಾಗಿ ಕೇಳಿಬರುವಂತಹ ಜ್ವರದ ಹೆಸರೆಂದರೆ ಅದು ಡೆಂಗ್ಯೂ. ಡೆಂಗ್ಯೂ ಜ್ವರವು ಇಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಇದು ಪ್ರಾಣಕ್ಕೆ ಹಾನಿ ಉಂಟು ಮಾಡುವ ಜ್ವರವಾಗಿದೆ. ರಾಜ್ಯದಲ್ಲಿ ಮಾತ್ರಲ್ಲದೆ ಇದು ವಿಶ್ವದೆಲ್ಲಡೆಯಲ್ಲೂ ವ್ಯಾಪಕವಾಗಿ ಹಬ್ಬಿದೆ. ವಿಶ್ವದೆಲ್ಲೆಡೆಯಲ್ಲಿ ಉಷ್ಣವಲಯ ಮತ್ತು ಉಪಉಷ್ಣವಲಯದ ನಗರ ಹಾಗೂ ಉಪನಗರಗಳಲ್ಲಿ ಇದು ಅತಿಯಾಗಿ ಕಂಡುಬರುವುದು. ಸೊಳ್ಳೆಗಳಿಂದ ಹರಡುವಂತಹ ಡೆಂಗ್ಯೂ ಜ್ವರಕ್ಕೀಡಾದ ವ್ಯಕ್ತಿಯು ಹತ್ತು ದಿನಗಳಲ್ಲಿ ಚೇತರಿಕೆ ಪಡೆದುಕೊಳ್ಳಬಹುದು. ಆದರೆ ಇದು ತೀವ್ರವಾದರೆ ಆಗ ಪ್ರಾಣಕ್ಕೆ ಹಾನಿ ಖಚಿತ.

Dengue

ಚಿಕಿತ್ಸೆ

ಡೆಂಗ್ಯೂಗೆ ಯಾವುದೇ ನಿಖರವಾದ ಚಿಕಿತ್ಸೆಗಳು ಇಲ್ಲ. ಆದರೆ ಆರಂಭದಲ್ಲೇ ಇದನ್ನು ಪತ್ತೆ ಮಾಡಿದರೆ ಮತ್ತು ಸರಿಯಾದ ವೈದ್ಯಕೀಯ ವ್ಯವಸ್ಥೆಯಿಂದ ಚಿಕಿತ್ಸೆ ನೀಡಿದರೆ ಆಗ ಪ್ರಾಣಹಾನಿ ಆಗುವಂತಹ ಸಾಧ್ಯತೆಯು ಶೇ.1ಕ್ಕಿಂತಲೂ ಕಡಿಮೆ ಎಂದು ವಿಶ್ವ ಸಂಸ್ಥೆಯು ಹೇಳಿದೆ. ಡೆಂಗ್ಯೂ ಜ್ವರ ಬಂದ ವೇಳೆ ದೇಹದಲ್ಲಿ ದ್ರವಾಂಶವನ್ನು ಹೆಚ್ಚಾಗಿ ಕಾಯ್ದುಕೊಳ್ಳುವುದು ಅತೀ ಅಗತ್ಯವಾಗಿರುವುದು.

ಲಸಿಕೆ

ಡೆಂಗ್ಯೂಗೆ ಮೊದಲ ಲಸಿಕೆಯನ್ನು 2015ರ ಡಿಸೆಂಬರ್ ನಲ್ಲಿ ಸಾನೊಫಿ ಪಾಶ್ಚರ್ ಎಂಬವರು ಕಂಡುಹಿಡಿದರು. ಇದನ್ನು ಡೆಂಗ್ವಾಕ್ಸಿಯಾ (ಸಿವೈಡಿ-ಟಿಡಿವಿ) ಎಂದು ಕರೆಯಲಾಗುತ್ತದೆ. ಈ ಲಸಿಕೆಯನ್ನು ಸುಮಾರು 20ಕ್ಕೂ ಹೆಚ್ಚು ರಾಷ್ಟ್ರಗಳು ಒಪ್ಪಿಕೊಂಡಿವೆ ಮತ್ತು ಇದನ್ನು 9ರಿಂದ 45ರ ಹರೆಯದ ಜನರಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ತಡೆ

ಡೆಂಗ್ಯೂ ಜ್ವರವನ್ನು ಬರದಂತೆ ತಡೆಯಲು ಅತೀ ಪ್ರಮುಖ ವಿಧಾನವೆಂದರೆ ಅದು ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳುವುದು. ಸೊಳ್ಳೆ ಕಡಿಯದಂತೆ ನೀವು ಈ ವಿಧಾನಗಳನ್ನು ಪಾಲಿಸಿಕೊಂಡು ಹೋಗಬಹುದು. ಕಸವನ್ನು ಸರಿಯಾಗಿ ವಿಲೇವಾರಿ ಮಾಡಿ.

Most Read: ಡೆಂಗ್ಯೂ ಜ್ವರವನ್ನು ಹತೋಟಿಯಲ್ಲಿಡುವ ಟಾಪ್ ಫುಡ್

ನೀರು ನಿಲ್ಲದಂತೆ ನೋಡಿಕೊಳ್ಳಿ

ಶೇ.10ರಷ್ಟು ಡೀಟ್ ಇರುವಂತಹ ಸೊಳ್ಳೆ ವಿರೋಧಿ ಉತ್ಪನ್ನಗಳನ್ನು ಬಳಸಿ.
ಮೈಪೂರ್ತಿ ಮುಚ್ಚುವ ಬಟ್ಟೆ ಧರಿಸಿ, ಕಾಯಿಲೆ ಮತ್ತು ಇತರ ಸೊಳ್ಳೆ ಓಡಿಸುವ ಉತ್ಪನ್ನಗಳನ್ನು ಬಳಸಿ.
ದಿನದ ವೇಳೆ ನೀವು ಬಾಗಿಲು ಹಾಗೂ ಕಿಟಕಿ ಮುಚ್ಚಿಡಿ ಮತ್ತು ಸಂಜೆ ವೇಳೆ ಕೂಡ ನೀವು ಹೀಗೆ ಮಾಡಿ. ಯಾಕೆಂದರೆ ಡೆಂಗ್ಯೂ ಸೊಳ್ಳೆಗಳು ಈ ಸಮಯದಲ್ಲಿ ಹೆಚ್ಚು ಚುರುಕಾಗಿರುವುದು. ಡೆಂಗ್ಯೂಗೆ ಕೆಲವು ಮನೆಮದ್ದುಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ನೈಸರ್ಗಿಕವಾಗಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಒಂದು ಕಪ್ ನೀರಿನಲ್ಲಿ ತುಳಸಿ ಎಲೆಗಳನ್ನು ಕುದಿಸಿ ಅದರ ನೀರನ್ನು ದಿನನಿತ್ಯವು ಕುಡಿಯಿರಿ.

ಬೇವಿನ ಎಣ್ಣೆಯೊಂದಿಗೆ ಕರ್ಪೂರ

ಬೇವಿನ ಎಣ್ಣೆಯ ಕೆಲವು ಹನಿಯನ್ನು ಹಾಕಿ ಒಂದು ಕರ್ಪೂರದ ತುಂಡನ್ನು ಕೋಣೆಯಲ್ಲಿ ಹಚ್ಚಿದರೆ ಆಗ ಸೊಳ್ಳೆಗಳ ಕಾಟದಿಂದ ದೂರವಾಗಬಹುದು.

ತೆಂಗಿನ ಎಣ್ಣೆ

ಬೇವಿನ ಎಣ್ಣೆಯ ಜತೆಗೆ ಕೆಲವು ಹನಿ ತೆಂಗಿನ ಎಣ್ಣೆ ಸೇರಿಸಿಕೊಂಡು ಅದನ್ನು ದೇಹಕ್ಕೆ ಹಚ್ಚಿಕೊಳ್ಳಿ. ಇದು ನೈಸರ್ಗಿಕವಾಗಿ ಸೊಳ್ಳೆಗಳನ್ನು ದೂರ ಮಾಡುವುದು.

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಸೊಳ್ಳೆಗಳನ್ನು ಓಡಿಸುವಲ್ಲಿ ತುಂಬಾ ಪ್ರಮುಖವಾಗಿರುವುದು. ಬೆಳ್ಳುಳ್ಳಿಯ ಗಡ್ಡೆ ಇಟ್ಟರೆ ಆಗ ಅದು ಸೊಳ್ಳೆಗಳನ್ನು ದೂರ ಮಾಡುವುದು.

Most Read: ಮಳೆಗಾಲದ ಮಹಾಮಾರಿ ಡೆಂಗ್ಯೂ ಜ್ವರ: ಇರಲಿ ಕಟ್ಟೆಚ್ಚರ!

ಸುತ್ತಮುತ್ತಲು ಸ್ವಚ್ಛವಾಗಿಡಿ

ಕೊನೆಯದಾಗಿ ಯಾವುದೇ ರೀತಿಯ ರೋಗಗಳು ಬರಲು ಕಾರಣವಾಗುವುದು ಸ್ವಚ್ಛತೆ ಇಲ್ಲದೆ ಇರುವುದು. ನೀವು ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಆಗ ಡೆಂಗ್ಯೂ ದೂರ ಮಾಡಬಹುದು. ನಿಮ್ಮ ಸುತ್ತಲು ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ.

English summary

Dengue: Treatment and home remedies

Dengue is a mosquito-borne viral infection that has flu-like symptoms. The incidences of dengue have increased globally over the past few decades making it important for us to take preventive measures and stay safe. Dengue is common in urban and semi-urban areas in the tropical and sub-tropical regions worldwide. People who get infected with mild dengue recover within 10 days but a severe case of dengue may create serious complications making the situation life-threatening.
X
Desktop Bottom Promotion