For Quick Alerts
ALLOW NOTIFICATIONS  
For Daily Alerts

CIDP ಕಾಯಿಲೆ ಬಗ್ಗೆ ಗೊತ್ತೇ? ಕೈ-ಕಾಲುಗಳು ಬಲಹೀನವಾಗುತ್ತಿದೆ ಅನಿಸಿದರೆ ಜಾಗ್ರತೆ

|

CIDP ಎಂಬ ಸಮಸ್ಯೆ ಯಾರಿಗೆ ಯಾವಾಗ ಬೇಕಾದರೂ ಬರಬಹುದು. ಇದೊಂದು ಅಟೋಇಮ್ಯೂನೆ ಕಾಯಿಲೆಯಾಗಿದ್ದು ಈ ಕಾಯಿಲೆ ಬಂದರೆ ದೇಹವು ತನ್ನ ಅಂಗಾಂಶಗಳ ಮೇಲೆ ದಾಳಮಾಡುತ್ತೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ Chronic inflammatory demyelinating polyradiculoneuropathy ಎಂದು ಕರೆಯಲಾಗುವುದು.

CIDP

ಈ ಕಾಯಿಲೆ ಬಗ್ಗೆ ಮತ್ತಷ್ಟು ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

 CIDP ಎಂದರೇನು?

CIDP ಎಂದರೇನು?

ದೇಹದಲ್ಲಿರುವ ರೋಗ ನಿರೋಧಕ ಅಂಗಾಂಶಗಳ ಮೇಲೆ ದಾಳಿ ಮಾಡುವ ಕಾಯಿಲೆಯಾಗಿದೆ. ಇದಕ್ಕೆ ನಿಖರ ಕಾರಣವೇನು ಎಂಬುವುದು ಗೊತ್ತಿಲ್ಲ, ಈ ಕಾಯಿಲೆ ವಂಶವಾಹಿಯಾಗಿ ಬರುವಂಥದ್ದಲ್ಲ.

ಯಾರಿಗೆ CIDP ಅಪಾಯ ಹೆಚ್ಚು?

ಈ ಕಾಯಿಲೆ ಯಾರಿಗೆ ಬೇಕಾದರೂ ಬರಬಹುದು. ಆದರೆ 50-60 ವರ್ಷದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಅದರಲ್ಲೂ ಮಹಿಳೆಯರಲ್ಲಿ ಕಂಡು ಬರುತ್ತದೆ.

 CIDP ಲಕ್ಷಣಗಳೇನು?

CIDP ಲಕ್ಷಣಗಳೇನು?

* ಕಾಲು ಹಾಗೂ ಕೈಗಳಲ್ಲಿ ಕಚಗುಳಿಯಾದಂತಾಗುವುದು

* ಕಾಲು, ಕೈಗಳು ಸ್ವಾಧೀನ ಕಳೆದುಕೊಳ್ಳುವುದು

* ನಡೆದಾಡಲು ಕಷ್ಟವಾಗುವುದು

* ಕೈ ಕಾಲುಗಳಲ್ಲಿ ಸ್ಪರ್ಶಜ್ಞಾನ ಕಡಿಮೆಯಾಗುವುದು

CIDP ಪತ್ತೆ ಹೇಗೆ?

ಈ ಕಾಯಿಲೆ ಅನೇಕ ಸಲ ಪ್ರಾರಂಭದಲ್ಲಿ ಗುರುತು ಹಿಡಿಯಲು ಸಾಧ್ಯವಾಗುವುದಿಲ್ಲ. ವೈದ್ಯರು ಕೆಲವೊಂದು ಪರೀಕ್ಷೆ ಮಾಡುವ ಮೂಲಕ ಕಂಡು ಹಿಡಿಯುತ್ತಾರೆ.

* ರಕ್ತ ಹಾಗೂ ಮೂತ್ರ ಪರೀಕ್ಷೆ ಮಾಡಲಾಗುವುದು

*ಎಲೆಕ್ಟ್ರೋಮಯೋಗ್ರಾಂ(ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಹರಿಸಿ ಕೈ-ಕಾಲುಗಳ ನರವನ್ನು ಪರೀಕ್ಷೆ ಮಾಡುವುದು) ಮಾಡಾಗುವುದು.

* ಕೆಲವರಿಗೆ ನರಗಳ ಬಯೋಸ್ಪೈ ಮಾಡಬೇಕಾಗುತ್ತೆ

CIDP ಕಾಯಿಲೆ ಇದ್ದಾಗ ಬದುಕು

CIDP ಕಾಯಿಲೆ ಇದ್ದಾಗ ಬದುಕು

CIDP ಚಿಕಿತ್ಸೆ ಪಡೆದಾಗ ಸಂಪೂರ್ಣ ಗುಣಮುಖರಾಗುವುದು ತುಂಬಾನೇ ಕಷ್ಟ, ಈ ರೋಗ ಲಕ್ಷನ ಆರಂಭದಲ್ಲಿಯೇ ಗುರುತಿಸಿದರೆ ರೋಗ ಲಕ್ಷಣ ಹೆಚ್ಚಾಗುವುದನ್ನು ತಡೆಗಟ್ಟಬಹುದು. ಈ ಕಾಯಿಲೆ ಬಂದಾಗ ಕೈ-ಕಾಲುಗಳಲ್ಲಿ ಶಕ್ತಿ ಕುಂದುವುದರಿಂದ ಬೇಸರ, ಖಿನ್ನತೆ ಉಂಟಾಗುವ ಸಾಧ್ಯತೆ ಇದೆ. ಈ ಕಾಯಿಲೆ ಇರುವವರಿಗೆ ಮನೆಯವರ ಬೆಂಬಲ ಅಗ್ಯತವಾಗಿರುತ್ತದೆ.

CIDP ಬಗ್ಗೆ ಪ್ರಮುಖ ಅಂಶಗಳು

*ಸಿಐಡಿಪಿ ಕಾಯಿಲೆ ತಕ್ಷಣಕ್ಕೆ ಬರುವಂಥದ್ದಲ್ಲ, ಇದನ್ನು ನಿಧಾನವಾಗಿ ಹೆಚ್ಚಾಗುವ ಕಾಯಿಲೆಯಾಗಿದೆ.

* ಕೈ-ಕಾಲುಗಳು ಬಲಹೀನವಾಗುವುದು ಈ ಕಾಯಿಲೆ ಪ್ರಮುಖ ಲಕ್ಷಣವಾಗಿದೆ.

*ಬೇಗನೆ ಚಿಕಿತ್ಸೆ ನೀಡಿದರೆ ಕಾಯಿಲೆ ಸ್ವರೂಪ ಗಂಭೀರವಾಗುವುದನ್ನು ತಡೆಗಟ್ಟಬಹುದು.

English summary

Chronic inflammatory demyelinating polyradiculoneuropathy: Reason for CIDP, know the symptoms, Diagnose, Treatment have a look,

Chronic inflammatory demyelinating polyradiculoneuropathy: Reason for CIDP, know the symptoms, Diagnose, Treatment have a look, CIDP
Story first published: Tuesday, October 11, 2022, 11:43 [IST]
X
Desktop Bottom Promotion