For Quick Alerts
ALLOW NOTIFICATIONS  
For Daily Alerts

Budget 2022 for health : ಬಜೆಟ್‌ : ಜನರ ಆರೋಗ್ಯ ವೃದ್ಧಿಗೆ ಏನೆಲ್ಲಾ ಯೋಜನೆಗಳನ್ನು ಒಳಗೊಂಡಿದೆ?

|

ಕೇಂದ್ರ ಹಣಕಾಸು ಸಚಿವೆ 2022ರ ಕೇಂದ್ರ ಬಜೆಟ್‌ ಮಂಡಿಸಿದ್ದಾರೆ. ಆರೋಗ್ಯಕ್ಕೆ ಈ ವರ್ಷದ ಬಜೆಟ್‌ನಲ್ಲಿ ಏನೆಲ್ಲಾ ಯೋಜನೆಗಳಿವೆ ಎಂದು ಹೇಳುವ ಮೊದಲು ಕೊರೊನಾ ಸಾಂಕ್ರಾಮಿಕ ಅದು ಜನರ ಮೇಲೆ ಬೀರಿರುವ ಮಾನಸಿಕ ಒತ್ತಡ ಇವುಗಳ ಕುರಿತು ಹೇಳಿದರು. ' ನಾವೀಗ ಒಮಿಕ್ರಾನ್‌ನ ಮಧ್ಯದಲ್ಲಿದ್ದೇವೆ, ನಮ್ಮ ಲಸಿಕೆ ಅಭಿಯಾನಕ್ಕೆ ವೇಗ ನೀಡಿರುವುದರಿಂದ ತುಂಬಾನೇ ಪ್ರಯೋಜನವಾಯ್ತು, ಕಳೆದ ಎರಡು ವರ್ಷಗಳಿಂದ ಆರೋಗ್ಯ ಮೂಲ ಸೌಕರ್ಯಗಳಲ್ಲೂ ಸಾಕಷ್ಟೂ ಅಭಿವೃದ್ಧಿಯಾಗಿದೆ, ನಾವು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ, ನಿಮ್ಮಲ್ಲರ ಪ್ರೀತಿಯ ಜೊತೆಗೆ ಬೆಳವಣಿಗೆಯಾಗುತ್ತದೆ ಎಂಬ ಬಲವಾದ ಭರವಸೆಯೊಂದಿಗೆ ಮುಂದುವರೆಯುತ್ತಿದ್ದೇವೆ' ಎಂದು ಹೇಳಿದರು.

Budget 2022 Highlights for Health Sector in Kannada

ಸರ್ಕಾರ ಮುಂಬರುವ 6 ವರ್ಷಗಳಲ್ಲಿ ಸುಮಾರು 64,180 ಕೋಟಿ ರೂಗಳನ್ನು ಆರೋಗ್ಯ ವೃದ್ಧಿಗಾಗಿ ಮೀಸಲಿಟ್ಟಿದೆ ಎಂದು ಹೇಳಿದರು.

2022 ಬಜೆಟ್‌ನ ಆರೋಗ್ಯ ಯೋಜನೆಗಳ ಪ್ರಮುಖ ಅಂಶಗಳೆಂದರೆ

* ನ್ಯಾಷನಲ್ ಡಿಜಿಟಲ್‌ ಹೆಲ್ತ್‌ ಇಕೋಸಿಸ್ಟಮ್: ರಾಷ್ಟ್ರೀಯ ಮಟ್ಟದಲ್ಲಿ ಡಿಜಿಟಲ್‌ ಇಕೋಸಿಸ್ಟಮ್‌ ಅಳವಡಿಸುವುದರಿಂದ ಚಿಕಿತ್ಸೆ ನೀಡುವವರು ಹಾಗೂ ಚಿಕಿತ್ಸೆ ಪಡೆಯುವವರು ಡಿಜಿಟಲ್‌ ಆಗಿ ನೋಂದಣಿ ಮಾಡಬೇಕು, ಈ ಪ್ರತ್ಯೇಕ ಆರೋಗ್ಯ ಗುರುತಿನಿಂದ ಎಲ್ಲಿ ಇದ್ದರೂ ಚಿಕಿತ್ಸೆ ಪಡೆಯಬಹುದಾಗಿದೆ.
ಆರೋಗ್ಯ ಮತ್ತು ಶಿಕ್ಷಣ ಸೆಸ್(ಕಿರು ತೆರಿಗೆ) ಅನ್ನು ವ್ಯವಹಾರ ವೆಚ್ಚವಾಗಿ ತೋರಿಸಲು ಸರ್ಕಾರದ ತೆರಿಗೆ ವ್ಯವಸ್ಥೆಯಲ್ಲಿ ಅನುಮತಿ ಇಲ್ಲ. ಸಂಸತ್ತಿನಲ್ಲಿಂದು ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಈ ವಿಷಯ ಸ್ಪಷ್ಟಪಡಿಸಿದರು.

*ಟೆಲಿ ಮೆಂಟಲ್‌ ಹೆಲ್ತ್‌ ಕಾರ್ಯಕ್ರಮ:

"ಸಾಂಕ್ರಾಮಿಕ ರೋಗವು ಎಲ್ಲಾ ವಯಸ್ಸಿನ ಜನರಲ್ಲಿಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿದೆ. ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳ ಪ್ರವೇಶವನ್ನು ಉತ್ತಮಗೊಳಿಸಲು, 'ರಾಷ್ಟ್ರೀಯ ದೂರವಾಣಿ ಮಾನಸಿಕ ಆರೋಗ್ಯ ಕಾರ್ಯಕ್ರಮ'ವನ್ನು ಪ್ರಾರಂಭಿಸಲಾಗುವುದು," ಎಂದು ಗೌರವಾನ್ವಿತ ಸಚಿವರು ಸಂಸತ್ತಿನಲ್ಲಿತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದರು.

ರಾಷ್ಟ್ರೀಯ ಟೆಲಿ ಮೆಂಟಲ್‌ ಹೆಲ್ತ್‌ ಕಾರ್ಯಕ್ರಮದ ಬಗ್ಗೆ ವಿವರಿಸಿದ ಮಾನ್ಯ ಸಚಿವರು, ಈ ಕಾರ್ಯಕ್ರಮವು 23 ದೂರವಾಣಿ ಮಾನಸಿಕ ಆರೋಗ್ಯ ಶ್ರೇಷ್ಠತಾ ಕೇಂದ್ರಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಬೆಂಗಳೂರು ಮೂಲದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಇದರ ನೋಡಲ್‌ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಮತ್ತು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ- ಬೆಂಗಳೂರು (ಐಐಐಟಿಬಿ) ಅಗತ್ಯ ತಾಂತ್ರಿಕ ಬೆಂಬಲವನ್ನು ನೀಡುತ್ತದೆ ಎಂದು ಅವರು ಹೇಳಿದರು.

ನಿಮ್ಹಾನ್ಸ್‌ ಅಡಿಯಲ್ಲಿ 23 ದೂರವಾಣಿ-ಮಾನಸಿಕ ಆರೋಗ್ಯ ಶ್ರೇಷ್ಠತಾ ಕೇಂದ್ರಗಳ ಜಾಲದೊಂದಿಗೆ ಎಲ್ಲರಿಗೂ ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆಯನ್ನು ಖಚಿತಪಡಿಸುತ್ತದೆ

ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್‌ ಮಾಂಡವಿಯಾ ಅವರು ಟ್ವಿಟರ್‌ನಲ್ಲಿಈ ಉಪಕ್ರಮವನ್ನು ಘೋಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಆರೋಗ್ಯ ಕೇಂದ್ರಗಳಲ್ಲಿ ಅಭಿವೃದ್ಧಿ: 112 ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಹೆಚ್ಚಿನ ಮೂಲ ಸೌಕರ್ಯಗಳಿಗೆ ವ್ಯವಸ್ಥೆ ಮಾಡಲಾಗುವುದು.

ಸೆಸ್":
ವ್ಯಾಪಾರ ವ್ಯವಹಾರದ ಆದಾಯ ಲೆಕ್ಕಾಚಾರಗಳನ್ನು ಆದಾಯ ತೆರಿಗೆಯ ವೆಚ್ಚಕ್ಕೆ ತೋರಿಸಲು ಅನುಮತಿ ಇಲ್ಲ. ವ್ಯವಹಾರದಿಂದ ಬರುವ ಆದಾಯಕ್ಕೆ ತೆರಿಗೆ ಮತ್ತು ಮೇಲ್ತೆರಿಗೆ(ಸರ್ ಚರ್ಜ್) ಅನ್ವಯವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.

ನಿರ್ದಿಷ್ಟ ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳಿಗೆ ಧನಸಹಾಯ ಮಾಡುವ ತೆರಿಗೆದಾರನ 'ಆರೋಗ್ಯ ಮತ್ತು ಶಿಕ್ಷಣ ಸೆಸ್'ಗೆ ಹೆಚ್ಚುವರಿಯಾಗಿ ಮೇಲ್ತೆರಿಗೆ ವಿಧಿಸಲಾಗುತ್ತದೆ. ಕೆಲವು ನ್ಯಾಯಾಲಯಗಳು 'ಆರೋಗ್ಯ ಮತ್ತು ಶಿಕ್ಷಣ ಸೆಸ್' ಅನ್ನು ವ್ಯಾಪಾರ ವೆಚ್ಚವಾಗಿ ತೋರಲು ಅನುಮತಿ ನೀಡಿವೆ.

English summary

Budget 2022 Highlights for Health Sector in Kannada

Budget 2022 for Health: Know about Union Budget 2022 Highlights for Health Sector. Check New reforms & schemes announced for the health sector in Budget 2022.
X
Desktop Bottom Promotion