For Quick Alerts
ALLOW NOTIFICATIONS  
For Daily Alerts

ಕಣ್ಣುಗಳ ಕಪ್ಪು ವರ್ತುಲ: ಲಕ್ಷಣಗಳು, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

|

ಕಣ್ಣುಗಳ ಸುತ್ತ, ವಿಶೇಷವಾಗಿ ಕೆಳಭಾಗದ ಚರ್ಮ ಘಾಸಿಗೊಂಡರೆ ಈ ಭಾಗದ ಚರ್ಮ ಕಪ್ಪಗಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಬ್ಲಾಕ್ ಐ ಎಂದು ಕರೆಯುತ್ತಾರೆ. ಏಕೆಂದರೆ ಈ ಭಾಗದ ಚರ್ಮದ ಅಡಿಯಲ್ಲಿರುವ ಸೂಕ್ಷ್ಮ ರಕ್ತನಾಳಗಳು ಬಿರಿದು ರಕ್ತ ಹೆಪ್ಪುಗಟ್ಟಿ ನೀಲಿಮಿಶ್ರಿತ ಕಂದುಬಣ್ಣಕ್ಕೆ ತಿರುಗುತ್ತದೆ. ಚರ್ಮದ ಹೊರಭಾಗದಿಂದ ಇದು ಬಹುತೇಕ ಕಪ್ಪಾಗಿಯೇ ಕಾಣುತ್ತದೆ. 'periorbital hematoma'ಎಂಬ ವೈದ್ಯಕೀಯ ಹೆಸರಿನ ಕಾಯಿಲೆಯನ್ನು ವೈದ್ಯರು ಹೃಸ್ವವಾಗಿ ಶೈನರ್ ('shiner')ಎಂದು ಗುರುತಿಸುತ್ತಾರೆ.

ಕಣ್ಣುಗಳ ಕಪ್ಪು ವರ್ತುಲಕ್ಕೆ ಏನು ಕಾರಣ?

ಈ ಭಾಗಕ್ಕೆ ಎದುರಾದ ಬಡಿತ ಅಥವಾ ಪೆಟ್ಟು ಪ್ರಮುಖ ಕಾರಣವಾಗಿದೆ. ಆಟದ ಸಮಯದಲ್ಲಿ ಬಡಿದ ಚೆಂಡು, ಥಟ್ಟನೇ ತೆರೆದ ಬಾಗಿಲು ಅಥವಾ ಇನ್ನೇನಾದರೂ ಹೊಡೆತ ಬಿದ್ದ ಬಳಿಕ ರಕ್ತನಾಳಗಳು ಬಿರಿದು ಒಡೆದು ಚರ್ಮದ ಅಡಿಯಲ್ಲಿ ರಕ್ತಸ್ರಾವವಾಗುತ್ತದೆ. ಕಣ್ಣಿನ ಕೆಳಭಾಗ ಮತ್ತು ರೆಪ್ಪೆಗಳ ಹೊರಪದರ ಮತ್ತು ಒಳಪದರಗಳು ಅತಿ ತೆಳುವಾಗಿರುವ ಕಾರಣ ಚಿಕ್ಕ ಪೆಟ್ಟನ್ನೂ ಸಹಿಸಿಕೊಳ್ಳದೇ ರಕ್ತನಾಳಗಳು ಒಡೆಯುತ್ತವೆ. ಅಲ್ಲದೇ ದಂತಚಿಕಿತ್ಸೆ, ಸೌಂದರ್ಯ ಚಿಕಿತ್ಸೆ ಅಥವಾ ತಲೆಬುರುಡೆಯ ಒಳಭಾಗದಲ್ಲಿ ಎದುರಾದ ಬಿರುಕುಗಳೂ ಈ ತೊಂದರೆಗೆ ಕಾರಣವಾಗಬಹುದು.

ಕಣ್ಣುಗಳ ಕಪ್ಪು ವರ್ತುಲದ ಲಕ್ಷಣಗಳು

ಬದಲಾದ ಬಣ್ಣ ಸ್ಪಷ್ಟ ಸೂಚನೆಯಾದರೆ, ಈ ಭಾಗದಲ್ಲಿ ಊದಿಕೊಳ್ಳುವುದೂ ಗಮನಕ್ಕೆ ಬರುತ್ತದೆ. ಮೊದಲು ಪೆಟ್ಟಾದ ಭಾಗದಲ್ಲಿ ಕಪ್ಪಗಾಗುವಿಕೆ ಮೊದಲಿಗೆ ಕೆಂಪಗಾಗಿ ಕಾಣಿಸಿಕೊಂಡು ಕ್ರಮೇಣ ನೀಲಿಬಣ್ಣಕ್ಕೆ ತಿರುಗುತ್ತಾ ಗಾಢ ನೇರಳೆ ಬಳಿಕ ಅಂತಿಮವಾಗಿ ಕಪ್ಪು ಬಣ್ಣವನ್ನು ಪಡೆಯುತ್ತದೆ. ಈ ತೊಂದರೆಯಿಂದಾಗಿ ದೃಷ್ಟಿ ಸಂಬಂಧಿತ ತೊಂದರೆಗಳೂ ಎದುರಾಗಬಹುದು. ಸಾಮಾನ್ಯವಾಗಿ ಒಡೆದ ರಕ್ತನಾಳಗಳು ತನ್ನಿಂತಾನೇ ಹೊಸದಾಗಿ ಹುಟ್ಟುತ್ತವೆ ಹಾಗೂ ರಕ್ತಪರಿಚಲನೆಯ ಮೂಲಕ ಹಳೆಯ ಹೆಪ್ಪುಗಟ್ಟಿದ ರಕ್ತ ನಿವಾರಣೆಯಾಗುತ್ತಾ ಹೋದಂತೆ ಈ ಕಲೆಗಳೂ ತನ್ನಿಂತಾನೇ ಇಲ್ಲವಾಗುತ್ತವೆ ಹಾಗೂ ಇದಕ್ಕಾಗಿ ಹೆಚ್ಚಿನ ವಿಶೇಷ ಆರೈಕೆಯೇನೂ ಬೇಕಾಗುವುದಿಲ್ಲ.

ಕಣ್ಣುಗಳ ಕಪ್ಪು ವರ್ತುಲಕ್ಕೆ ಕಾರಣವಾಗುವ ಇತರ ಸ್ಥಿತಿಗಳು

*ಡೆಂಗಿ ಜ್ವರ

*ಮೂಗಿನ ಮೂಳೆ ಮುರಿತ

*ಗಂಭೀರವಲ್ಲದ ಮೆದುಳಿನ ಪೆಟ್ಟು (Concussion)

*ತಲೆಗೆ ಬಿದ್ದ ಪೆಟ್ಟು

*ತಲೆಬುರುಡೆಯಲ್ಲಿ ಎದುರಾದ ಬಿರುಕು

*ಚರ್ಮದಡಿಯಲ್ಲಿ ರಕ್ತಸ್ರಾವ (A subdural hematoma)

*ಮಗುವನ್ನು ಅತಿಯಾಗಿ ಅದುರಿಸಿದಾಗ ಎದುರಾಗುವ ಮೆದುಳಿನ ಪೆಟ್ಟು (Shaken baby syndrome)

ಕಣ್ಣುಗಳಿಗೆ ಎದುರಾಗುವ ತುರ್ತು ಪರಿಸ್ಥಿತಿ

ತಂದೆ ತಾಯಿ ಇಬ್ಬರಿಂದಲೂ ಮಗುವಿಗೆ ಬರುವ ಊನ (Factor II deficiency)

ತೀರಾ ನಿಧಾನವಾಗಿ ರಕ್ತ ಹೆಪ್ಪುಗಟ್ಟುವುದು (Factor V deficiency)

ಪುರುಷರಲ್ಲಿ ಕಾಣಿಸಿಕೊಳ್ಳುವ ರಕ್ತ ಹೆಪ್ಪುಗಟ್ಟದೇ ಸತತ ಸುರಿಯುವ ಸ್ಥಿತಿ (Haemophilia A)

ಅನುವಂಶಿಕ ಕಾರಣದಿಂದ ಅತಿ ಸುಲಭವಾಗಿ ಗಾಯವಾಗುವ ಸ್ಥಿತಿ (Haemophilia B )

ರಕ್ತ ಹೆಪ್ಪುಗಟ್ಟಲು ಅತಿ ಹೆಚ್ಚು ಸಮಯ ತೆಗೆದುಕೊಳ್ಳುವುದು (Von Willebrand disease)

ವೈದ್ಯರನ್ನು ಯಾವಾಗ ಕಾಣಬೇಕು?

ಒಂದು ವೇಳೆ ಕಪ್ಪು ವರ್ತುಲ ಕಾಣತೊಡಗಿದ ಕೆಲವು ದಿನಗಳ ಒಳಗೆ ಕಡಿಮೆಯಾಗದೇ ಇದ್ದರೆ ಇದು ಚಿಂತೆಗೆ ಗ್ರಾಸವಾಗಿದೆ. ಒಂದು ವೇಳೆ ಈ ಕೆಳಗಿನ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಕಾಣುವುದು ಅಗತ್ಯ.

* ಮೂಗು ಅಥವಾ ಕಿವಿಯಿಂದ ರಕ್ತ ಸೋರುವುದು

* ಕಣ್ಣುಗಳ ಸುತ್ತಲ ಭಾಗದಲ್ಲಿ ರಕ್ತ ಕಾಣಿಸಿಕೊಳ್ಳುವುದು

* ಎರಡೂ ಕಣ್ಣುಗಳ ಕೆಳಗೆ ವರ್ತುಲ ಕಾಣಿಸಿಕೊಳ್ಳುವುದು

* ಸೆಡೆತ ಅಥವಾ ವಾಂತಿ ಕಾಣಿಸಿಕೊಳ್ಳುವುದು

* ಪ್ರಜ್ಞೆ ಕಳೆದುಕೊಳ್ಳುವಂತಾಗುವುದು

*ಕಣ್ಣುಗಳ ಗುಡ್ಡೆಗಳನ್ನು ಚಲಿಸಲು ಕಷ್ಟಕರವಾಗುವುದು

* ಎರಡು ದಿನಗಳಿಗೂ ಮೀರಿದ ಅವಧಿಯ ತಲೆನೋವು

* ದೃಶ್ಯ ಎರಡೆರಡಾಗಿ ಕಾಣಿಸುವುದು

ಕಪ್ಪು ವರ್ತುಲದ ಪತ್ತೆ ಹಚ್ಚುವಿಕೆ:

ಈ ಭಾಗವನ್ನು ವೈದ್ಯರು ಸೂಕ್ಷ್ಮವಾಗಿ ಗಮನಿಸಿ ಹೊರವಿವರಗಳನ್ನು ಪಡೆದುಕೊಳ್ಳುತ್ತಾರೆ ಹಾಗೂ ಈ ಪೆಟ್ಟು ಬಿದ್ದ ಬಗೆಯನ್ನು ವಿಚಾರಿಸಿ ಕಣ್ಣುಗಳ ದೃಷ್ಟಿಯನ್ನು ಪರೀಕ್ಷಿಸುತ್ತಾರೆ. American Academy of Ophthalmology ಪ್ರಕಾರ ಒಂದು ವೇಳೆ ವೈದ್ಯರಿಗೆ ತಲೆಬುರುಡೆಯಲ್ಲಿ ಏನಾದರೂ ಬಿರುಕು ಬಂದಿರಬಹುದೇ ಎಂಬ ಅನುಮಾನ ಮೂಡಿದರೆ ರೋಗಿಯ ತಲೆ ಮತ್ತು ಮುಖಭಾಗದ ಸಿಟಿ ಸ್ಕ್ಯಾನ್ ಮತ್ತು ಎಕ್ಸ್ ರೇ ಪರೀಕ್ಷೆಗಳನ್ನು ಮಾಡಲು ತಿಳಿಸಬಹುದು.

ಕಪ್ಪು ವರ್ತುಲದ ಚಿಕಿತ್ಸೆ:

ಈ ಸೂಚನೆ ಕಂಡ ಮೊದಲಿಗೆ ಸಾಕಷ್ಟು ಮಂಜುಗಡ್ಡೆಯನ್ನು ಇರಿಸಿ ಹೆಚ್ಚು ಹೊತ್ತು ವಿಶ್ರಾಂತಿ ಪಡೆಯಬೇಕು. ನೋವನ್ನು ಕಡಿಮೆಮಾಡಲು ಇಬುಪ್ರೊಫೆನ್ ಅಥವಾ ಅಸೆಟಾಮಿನೋಫೆನ್ ಮಾತ್ರೆಗಳನ್ನು ಸೇವಿಸಬಹುದು. ಒಂದು ವೇಳೆ ಬಾವು ಇದ್ದರೆ 'ಅರ್ನಿಕಾ' ಎಂಬ ಗಿಡಮೂಲಿಕೆಗಳ ಔಷಧಿ ಉತ್ತಮ ಆಯ್ಕೆಯಾಗಿದೆ. ಈ ಭಾಗಕ್ಕೆ ತಣ್ಣನೆಯ ಅಥವಾ ಬೆಚ್ಚಗಿನ ಒತ್ತಡವನ್ನು ನೀಡುವ ಮೂಲಕವೂ ಚಿಕಿತ್ಸೆಯನ್ನು ನೀಡಬಹುದು. American Academy of Ophthalmology ಪ್ರಕಾರ ಪ್ರತಿ ಘಂಟೆಗೆ ಹದಿನೈದು ನಿಮಿಷಗಳ ಕಾಲ, ಮೊದಲ ದಿನ ಐದು ಬಾರಿ ಮಂಜುಗಡ್ಡೆಯನ್ನು ಇರಿಸಿಕೊಂಡು ಒತ್ತಿಕೊಳ್ಳುವ ಮೂಲಕ ನೋವು ಮತ್ತು ಬಾವು ಕಡಿಮೆಯಾಗಿಸಬಹುದು. ಬಾವು ಕಡಿಮೆಯಾಗಲು ತೊಡಗಿದ ಬಳಿಕ ಈ ಭಾಗಕ್ಕೆ ಬೆಚ್ಚಗಿನ ಒತ್ತಡವನ್ನು ಇರಿಸಬಹುದು. ಈ ಮೂಲಕ ರಕ್ತನಾಳಗಳಲ್ಲಿ ಮತ್ತೊಮ್ಮೆ ರಕ್ತಪರಿಚಲನೆಯಾಗುವಂತೆ ಮಾಡಬಹುದು. ಇನ್ನೊಂದು ವಿಧಾನದಲ್ಲಿ ಕರಗಿಸಿದ ಐದು ದೊಡ್ಡ ಚಮಚ ವ್ಯಾಸೆಲಿನ್ ದ್ರವ ಮತ್ತು ಕೆಂಪು ದೊಡ್ದಮೆಣಸಿನ ಪುಡಿ (cayenne pepper)ಮಿಶ್ರಣ ಮಾಡಿ ಮುಲಾಮಿನ ರೂಪದಲ್ಲಿ ಹಚ್ಚಿಕೊಳ್ಳಬಹುದು.

ಚೇತರಿಸಿಕೊಳ್ಳುತ್ತಿರುವಾಗ ಕೈಗೊಳ್ಳಬೇಕಾದ ಎಚ್ಚರಿಕೆಗಳು

ಈ ಭಾಗವನ್ನು ಇನ್ನಷ್ಟು ತೊಂದರೆಗೆ ಒಳಗಾಗಿಸಬಹುದಾದ ಯಾವುದೇ ಚಟುವಟಿಕೆಯಿಂದ ದೂರವಿರಿ

ಮಲಗುವ ಸಮಯದಲ್ಲಿ ತಲೆಯನ್ನು ದೇಹದ ಮಟ್ಟಕ್ಕಿಂತ ಕೊಂಚ ಮೇಲೆಯೇ ಇರುವಂತಿರಿಸಿ.

ಕಪ್ಪು ವರ್ತುಲ ಬರದಂತೆ ತಡೆಗಟ್ಟಲು ಕ್ರಮಗಳು:

ಜಾರಿ ಬೀಳಬಹುದಾದ ಸ್ಥಳಗಳಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿ

ಕಣ್ಣುಗಳಿಗೆ ಅಪಾಯವಾಗಬಹುದಾದ ಚಟುವಟಿಕೆಗಳಾದ ತೋಟಗಾರಿಕೆ, ಕೆಲವು ಆಟಗಳು, ಸೈಕಲ್ ಸವಾರಿ ಅಥವಾ ಬೈಕ್ ಸವಾರಿ ಮೊದಲಾದ ಸಂದರ್ಭಗಳಲ್ಲಿ ಸುರಕ್ಷಾ ಕನ್ನಡಕ ಧರಿಸಿ.

English summary

Black Eye: Causes, Symptoms, Diagnosis & Treatment

Black eye happens as a result of blunt trauma caused either by a ball, a fist, a door, or another item. This leads to bleeding of the blood vessels below the thin eyelid skin. A black eye can also occur due to some dental or cosmetic surgery or fracture deep inside the skull.A black eye is also called a 'shiner' and the medical name is 'periorbital hematoma.
X