For Quick Alerts
ALLOW NOTIFICATIONS  
For Daily Alerts

ಎಚ್ಚರ: ಅಪ್ಪಿತಪ್ಪಿಯೂ ಇಂತಹ ಐದು ಮನೆ ಮದ್ದುಗಳನ್ನು ಬಳಸದಿರಿ!

|
ಮನೆಯಲ್ಲಿ ಅಪ್ಪಿ ತಪ್ಪಿ ಕೂಡ ಈ ಮದ್ದುಗಳನ್ನ ಬಳಸಬೇಡಿ | BoldSky Kannada

ಮನೆ ಮದ್ದು ಎನ್ನುವುದು ಒಂದು ಸುಲಭ ಆರೈಕೆ ವಿಧಾನ. ಸಾಮಾನ್ಯವಾಗಿ ಬಹುತೇಕ ಅನಾರೋಗ್ಯಗಳಿಗೆ ಮನೆಮದ್ದನ್ನು ಬಳಸುವ ಮೂಲಕವೇ ಆರೈಕೆಯನ್ನು ಮಾಡಲಾಗುತ್ತದೆ. ಈ ವಿಧಾನವು ಪುರಾತನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುಸರಿಸುತ್ತಿದದರು. ನಂತರ ಕಾಲ ಕಳೆದಂತೆ ಇಂಗ್ಲಿಷ್ ಔಷಧಿ ಅಥವಾ ಆಲೋಪತಿಯನ್ನು ಜನರು ಹೆಚ್ಚು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಪುನಃ ಮನೆಮದ್ದುಗಳ ಬಳಕೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಿರುವುದು ಗಮನಾರ್ಹವಾದ ಸಂಗತಿಯಾಗಿದೆ.

ಮನೆ ಮದ್ದು ಎಂದರೆ ಸಾಮಾನ್ಯವಾಗಿ ನಾವು ಮನೆಯಲ್ಲಿ ಬಳಸುವ ಆಹಾರದ ಉತ್ಪನ್ನಗಳು, ತರಕಾರಿಗಳು, ಗಿಡಮೂಲಿಕೆಗಳು, ಹಣ್ಣು-ಹಂಪಲು ಹೀಗೆ ವಿವಿಧ ಆರೋಗ್ಯಕರ ಉತ್ಪನ್ನಗಳನ್ನು ಬಳಸುವುದರ ಮೂಲಕ ವಿವಿಧ ಔಷಧಗಳನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ, ಕಷಾಯ, ಲೇಪನ, ಎಣ್ಣೆ, ಚೂರ್ಣ ಹೀಗೆ ವಿವಿಧ ರೀತಿಯಲ್ಲಿ ಔಷಧಗಳನ್ನು ತಯಾರಿಸಿ ಸೇವಿಸುವ ವಿಧಾನ. ಆದರೆ ಇತ್ತೀಚೆಗೆ ಕೆಲವರು ಮನೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ಹಾಗೂ ಔಷಧಿಯ ಉತ್ಪನ್ನಗಳನ್ನು ವಿವಿಧ ಉಪಯೋಗಕ್ಕೆ ಬಳಸುವುದರ ಮೂಲಕ ಮನೆ ಮದ್ದು ಎನ್ನುವ ಧೋರಣೆಯನ್ನು ಹೊಂದುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಸಿಗುವ ಔಷಧಿಯ ಉತ್ಪನ್ನ ಅಥವಾ ಇನ್ಯಾವುದೋ ಸೋಪ್, ಟೂತ್ ಪೇಸ್ಟ್ ಬಳಕೆ ಮಾಡುವುದರ ಮೂಲಕ ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಮುಂದಾಗುತ್ತಾರೆ. ವೈದ್ಯರ ಸಲಹೆ ಇಲ್ಲದೆ ಬಳಸುವ ಈ ರೀತಿಯ ಉತ್ಪನ್ನಗಳು ನಿಮ್ಮ ಅನಾರೋಗ್ಯ ಅಥವಾ ಸಮಸ್ಯೆಗೆ ಪರಿಹಾರ ನೀಡುವ ಬದಲು ಒಂದಿಷ್ಟು ಹಾನಿಕಾರಕ ಪರಿಣಾಮವನ್ನು ಉಂಟುಮಾಡುವುದು. ಹಾಗಾಗಿ ನೀವು ಆದಷ್ಟು ಉತ್ತಮ ರೀತಿಯ ಮನೆ ಮದ್ದನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅನುಚಿತವಾದ ಮನೆಮದ್ದುಗಳನ್ನು ಬಳಸುವುದರ ಮೂಲಕ ಆನಾರೋಗ್ಯ ಅಥವಾ ಗಂಭೀರ ಸಮಸ್ಯೆಗಳಿಗೆ ತುತ್ತಾಗಬಾರದು.

ಅಂತಹ ಕೆಲವು ಅನಾರೋಗ್ಯಕರವಾದ ಮನೆ ಮದ್ದು ಅಭ್ಯಾಸಗಳನ್ನು ಈ ಮುಂದೆ ವಿವರಿಸಲಾಗಿದೆ. ಅವುಗಳ ಬಳಕೆ ನಿಮಗೆ ಆರಂಭದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತವೆ ಎನ್ನುವ ಭಾವನೆಯನ್ನು ಮೂಡಿಸಬಹುದು. ಆದರೆ ಅವು ಸಾಕಷ್ಟು ದುಷ್ಪರಿಣಾಮಗಳನ್ನು ನಿಮ್ಮ ಮೇಲೆ ಉಂಟುಮಾಡುತ್ತವೆ ಎನ್ನುವುದನ್ನು ಮರೆಯಬಾರದು. ಹಾಗಾದರೆ ಆ ಅನುಚಿತವಾದ ಮನೆ ಮದ್ದುಗಳು ಯಾವವು? ಎನ್ನುವುದನ್ನು ಈ ಮುಂದೆ ವಿವರಿಸಲಾಗಿದೆ ಪರಿಶೀಲಿಸಿ.

Colgate paste

ಟೂತ್ ಪೇಸ್ಟ್
ಕೆಲವರು ಟೂತ್ ಪೇಸ್ಟ್ ಅನ್ನು ಕೇವಲ ಹಲ್ಲುಜ್ಜಲು ಮಾತ್ರ ಬಳಸುವುದಿಲ್ಲ. ಅದರಿಂದ ವಿವಿಧ ರೀತಿಯ ಇತರ ಬಳಕೆಯನ್ನು ಮಾಡುತ್ತಾರೆ. ಅವುಗಳಲ್ಲಿ ಮೊಡವೆ ನಿವಾರಣೆಗೆ ಬಳಸುವ ಒಂದು ಪರಿಯೂ ಹೌದು. ನಿಮಗೆ ಟೂತ್ ಪೇಸ್ಟ್ ಬಳಕೆಯಿಂದ ಮೊಡವೆ ನಿವಾರಣೆ ಆಗುತ್ತದೆ ಎನ್ನಿಸಬಹುದು. ಆದರೆ ಇದು ಸರಿಯಾದ ವಿಧಾನವಲ್ಲ. ಅಡುಗೆ ಸೋಡಾ ಇರುವುದರಿಂದ ಟೂತ್ಪೇಸ್ಟ್ ನಿಮ್ಮ ಗುಳ್ಳೆಯನ್ನು ಒಣಗಿಸಬಹುದು. ಆದಾಗ್ಯೂ ಟೂತ್ಪೇಸ್ಟ್ಗಳಲ್ಲಿ ನಿಮ್ಮ ಚರ್ಮವನ್ನು ಕೆರಳಿಸುವಂತಹ ಅನೇಕ ರಾಸಾಯನಿಕಗಳಾದ ಆಲ್ಕೋಹಾಲ್, ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಮೆಂಥಾಲ್ ಇರುತ್ತವೆ. ಹಾಗಾಗಿ ಇದನ್ನು ಬಳಸಿ ಅಡ್ಡ ಪರಿಣಾಮಕ್ಕೆ ಒಳಗಾಗುವ ಬದಲು ಇದರಿಂದ ದೂರ ಇರುವುದು ಉತ್ತಮ.

ನಟ್ ಸ್ಕ್ರಬ್
ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಚರ್ಮದ ಮೇಲೆ ಇರುವ ಶುಷ್ಕ ಚರ್ಮ ಅಥವಾ ಸತ್ತ ಜೀವ ಕೋಶಗಳ ನಿವಾರಣೆಗೆ ನಟ್ ಸ್ಕ್ರಬ್ಗಳನ್ನು ಬಳಸಲಾಗುತ್ತದೆ. ಆದರೆ ಇದು ಅಪಾಯಕಾರಿ ಎನ್ನುವುದನ್ನು ಸಹ ಅರಿಯಬೇಕಿದೆ. ನಟ್ ಅಥವಾ ಕೆಲವು ಬೀಜಗಳನ್ನು ನೀವು ಕುಟ್ಟಿ ಪುಡಿಮಾಡಿರುವುದು ಸಾಕಷ್ಟು ನಯವಾದ ಗುಣವನ್ನು ಪಡೆದುಕೊಳ್ಳದೆ ಇರಬಹುದು. ಆಗ ಅದನ್ನು ಮುಖಕ್ಕೆ ಅಥವಾ ತ್ವಚೆಗೆ ಅನ್ವಯಿಸಿ, ಮಸಾಜ್ ಮಾಡಿದರೆ ಸಾಕಷ್ಟು ನೋವು ಹಾಗೂ ಗಾಯಗಳು ಕಾಣಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.

ಮೊಟ್ಟೆಯ ಬಿಳಿ ಭಾಗ
ಸಾಮಾನ್ಯವಾಗಿ ಮೊಟ್ಟೆಯ ಬಿಳಿಭಾಗವು ಸಾಕಷ್ಟು ಮನೆ ಮದ್ದುಗಳ ಬಳಕೆಗೆ ಬಳಸಲಾಗುತ್ತದೆ. ಇದು ಕೇಶರಾಶಿಗೆ ಹಾಗೂ ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ ಸಾತ್ ನೀಡುವುದು ಎನ್ನುವ ನಂಬಿಕೆ ಪುರಾತನ ಕಾಲದಿಂದಲೂ ಇದೆ. ಆದರೆ ಇದಕ್ಕೆ ವಿರುದ್ಧವಾಗಿ ಹೇಳುವುದೇನೆಂದರೆ ಇದು ಚರ್ಮದ ಆರೋಗ್ಯ ಸುಧಾರಣೆಗೆ ಸಹಾಯ ಮಾಡದು ಎಂದು. ವಾಸ್ತವವಾಗಿ ಮೊಟ್ಟೆಯ ಬಿಳಿ ಭಾಗವು ಸಾಲ್ಮೊನೆಲ್ಲಾ ಸೋಂಕಿನ ಅಪಾಯವನ್ನು ತರಬಹುದು. ಇದು ಅತಿಸಾರ, ಜ್ವರ ಮತ್ತು ಹೊಟ್ಟೆಯ ಸೆಳೆತಕ್ಕೆ ಕಾರಣವಾಗಬಹುದು.

ಸುಟ್ಟ ಗಾಯಕ್ಕೆ ಬೆಣ್ಣೆ ಬೇಡ
ಬೆಣ್ಣೆ ನಯವಾದ ಹಾಗೂ ತಂಪಾದ ಗುಣಕ್ಕೆ ಪ್ರತೀಕ. ಹಾಗಾಗಿ ಅದನ್ನು ಸಾಕಷ್ಟು ಶಮನಕಾರಿ ಚಿಕಿತ್ಸೆಗೆ ಅಥವಾ ಆರೈಕೆಗೆ ಬಳಸಲಾಗುತ್ತದೆ. ಸುಟ್ಟ ಗಾಯಕ್ಕೆ ಕೆಲವರು ಬೆಣ್ಣೆಯನ್ನು ಹಚ್ಚುವ ಸಾಧ್ಯತೆಗಳಿವೆ. ಸುಟ್ಟ ಗಾಯಕ್ಕೆ ಅಥವಾ ಸುಡುವಿಕೆಗೆ ಬೆಣ್ಣೆಯನ್ನು ಎಂದಿಗೂ ಬಳಸಬಾರದು. ಬೆಣ್ಣೆಯಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಗುಣ ಅಧಿಕವಾಗಿರುತ್ತದೆ. ಅದನ್ನು ಸುಟ್ಟಗಾಯಕ್ಕೆ ಅಥವಾ ಗಾಯಕ್ಕೆ ಹಚ್ಚಿದರೆ ಸೋಂಕು ಅಧಿಕವಾಗುವ ಸಾಧ್ಯತೆಗಳಿರುತ್ತವೆ. ಸುಟ್ಟಗಾಯಕ್ಕೆ ಮೊದಲು ತಣ್ಣೀರನ್ನು ಹಾಕಿ. ನಂತರ ಪ್ರತಿಜೀವಕ ಔಷಧವನ್ನು ಅನ್ವಯಿಸಿಕೊಳ್ಳುವುದು ಉತ್ತಮ.

ಒಡಕು ಚರ್ಮಕ್ಕೆ ಮೊಸರು ಬೇಡ
ಸಾಮಾನ್ಯವಾಗಿ ಶುಷ್ಕ ಹಾಗೂ ಒಡಕು ಚರ್ಮದವರು ಮೊಸರು ಮಿಶ್ರಿತ ಲೇಪನದ ಮೊರೆ ಹೋಗುವುದು ಸಾಮಾನ್ಯ. ಆದರೆ ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ. ಮೊಸರಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಅತಿ ವೇಗವಾಗಿ ಹರಡುತ್ತವೆ. ಕೆಲವರು ಇದು ಕೆಟ್ಟ ಬ್ಯಾಕ್ಟೀರಿಯಾವನ್ನು ತೊಡೆದುಹಾಕುವುದು ಎನ್ನುವ ಭಾವನೆಯನ್ನು ಹೊಂದಿದ್ದಾರೆ. ಆದರೆ ಇದು ತಪ್ಪು ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲದೆ ಇರುವುದು ದುರಾದೃಷ್ಟ. ಗಾಯವಾದ ಅಥವಾ ಉರಿಯೂತದಂತಹ ಚರ್ಮಗಳಿಗೆ ಇದನ್ನು ಅನ್ವಯಿಸುವುದರಿಂದ ಇನ್ನಷ್ಟು ಸೋಂಕು ಹೆಚ್ಚುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುವುದು.

English summary

Beware:These home remedies you should never Try

Knowing home remedies can get you out of discomfort. However, trying certain home remedies that you shouldn't can be fatal to your system.
Story first published: Monday, August 12, 2019, 17:08 [IST]
X
Desktop Bottom Promotion