For Quick Alerts
ALLOW NOTIFICATIONS  
For Daily Alerts

ನಿದ್ದೆ ಬೇಗನೆ ಬರಲು ಈ 8 ಆಹಾರ ತುಂಬಾನೇ ಸಹಕಾರಿ

|

ಆರೋಗ್ಯವೇ ಭಾಗ್ಯ. ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ದೆಯೂ ಅಗತ್ಯವಾಗಿದೆ. ನಿದ್ದೆಯ ಕೊರತೆಯಿಂದ ಕೆಲವಾರು ಅನಾರೋಗ್ಯಗಳು ಎದುರಾಗಬಹುದು.

Best Foods and Drinks to Have Before Bed

ಉತ್ತಮ ನಿದ್ದೆಯಿಂದ ಕೆಲವಾರು ದೀರ್ಘಕಾಲ ಬಾಧಿಸಬಹುದಾದ ಕಾಯಿಲೆಗಳು ಎದುರಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ, ನಿಮ್ಮ ಮೆದುಳನ್ನು ಆರೋಗ್ಯವಾಗಿರಿಸಿಕೊಳ್ಳಬಹುದು ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಪ್ರತಿ ರಾತ್ರಿಯೂ ನೀವು 7 ರಿಂದ 9 ಗಂಟೆಗಳ ಗಾಢ ನಿದ್ರೆಯನ್ನು ಪಡೆಯಬೇಕೆಂದು ಸಾಮಾನ್ಯವಾಗಿ ಶಿಫಾರಸು ಮಾಡಲಾಗಿದೆ, ಆದರೂ ಅನೇಕ ಜನರು ಸಾಕಷ್ಟು ನಿದ್ದೆಯನ್ನು ಪಡೆಯಲು ಹೆಣಗಾಡುತ್ತಾರೆ.

ಕೆಲವು ಆಹಾರಗಳು ಮತ್ತು ಪಾನೀಯಗಳಲ್ಲಿ ನಿದ್ರೆಯನ್ನು ಉತ್ತೇಜಿಸುವ ಗುಣಲಕ್ಷಣಗಳಿರುವ ಕಾರಣದಿಂದ ಈ ಆಹಾರಗಳನ್ನು ನಿಮ್ಮ ರಾತ್ರಿಯ ಆಹಾರದಲ್ಲಿ ಅಳವಡಿಸುವ ಮೂಲಕ ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವುದು ಸೇರಿದಂತೆ ಉತ್ತಮ ನಿದ್ರೆಯನ್ನು ಉತ್ತೇಜಿಸಲು ನೀವು ಕೆಲವು ವಿಧಾನಗಳನ್ನು ಅನುಸರಿಸಬಹುದು.

ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ನಿದ್ದೆಗೂ ಮೊದಲು ನೀವು ಸೇವಿಸಬಹುದಾದ 9 ಅತ್ಯುತ್ತಮ ಆಹಾರ ಮತ್ತು ಪಾನೀಯಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

1. ಬಾದಾಮಿ

1. ಬಾದಾಮಿ

ಬಾದಾಮಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಒಣಫಲವಾಗಿದೆ.

ಒಣ ಮತ್ತು ಹುರಿದ ಬೀಜಗಳಲ್ಲಿ 1 ಔನ್ಸ್ (28 ಗ್ರಾಂ) ರಂಜಕದ ಪ್ರಮಾಣವಿದೆ. ಇದು ವಯಸ್ಕರ ದೈನಂದಿನ ಅಗತ್ಯಗಳಲ್ಲಿ 18% ಮತ್ತು ರೈಬೋಫ್ಲಾವಿನ್‌ಗೆ 23% ನಷ್ಟನ್ನು ಒದಗಿಸುತ್ತದೆ. ಅಲ್ಲದೇ ಬಾದಾಮಿ ಅನೇಕ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ.

ಒಂದು ಔನ್ಸ್ ಒಣಫಲಗಳನ್ನು ಸೇವಿಸುವ ಪುರುಷರಿಗೆ ದೈನಂದಿನ ಮ್ಯಾಂಗನೀಸ್ ಅಗತ್ಯಗಳಲ್ಲಿ 25% ಮತ್ತು ಮಹಿಳೆಯರಿಗೆ ದೈನಂದಿನ ಮ್ಯಾಂಗನೀಸ್ ಅಗತ್ಯಗಳಲ್ಲಿ 31% ರಷ್ಟನ್ನು ಪಡೆಯಬಹುದು.

ನಿಯಮಿತವಾಗಿ ಬಾದಾಮಿಯನ್ನು ಸೇವಿಸುವ ಮೂಲಕ ಟೈಪ್ 2 ಮಧುಮೇಹ ಮತ್ತು ಹೃದ್ರೋಗದಂತಹ ಕೆಲವು ದೀರ್ಘಕಾಲದ ಕಾಯಿಲೆಗಳು ಎದುರಾಗುವ ಅಪಾಯಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದಕ್ಕೆ ಇದರಲ್ಲಿರುವ ಆರೋಗ್ಯಕರ ಏಕ ಅಸಂತೃತ್ಪ ಕೊಬ್ಬುಗಳು, ಕರಗುವ ನಾರು ಮತ್ತು ಉತ್ಕರ್ಷಣ ನಿರೋಧಕಗಳು ಕಾರಣವಾಗಿವೆ.

ಆಂಟಿ ಆಕ್ಸಿಡೆಂಟ್ ಗುಣ ಅಥವಾ ಉತ್ಕರ್ಷಣ ನಿರೋಧಕ ಗುಣಗಳು ನಿಮ್ಮ ಜೀವಕೋಶಗಳನ್ನು ಈ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುವ ಹಾನಿಕಾರಕ ಉರಿಯೂತದಿಂದ ರಕ್ಷಿಸಬಹುದು.

ನಿದ್ರೆಯ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲು ಬಾದಾಮಿ ನೆರವಾಗುತ್ತದೆ ಎಂದು ಹೇಳಲಾಗಿದೆ. ಏಕೆಂದರೆ ಇತರ ಒಣಫಲಗಳಂತೆಯೇ ಬಾದಾಮಿಯಲ್ಲಿಯೂ ಮೆಲಟೋನಿನ್ ಎಂಬ ರಸದೂತದ ಮೂಲವಾಗಿದೆ. ಮೆಲಟೋನಿನ್ ನಿಮ್ಮ ಆಂತರಿಕ ಗಡಿಯಾರವನ್ನು ನಿಯಂತ್ರಿಸುತ್ತದೆ ಮತ್ತು ನಿದ್ರೆಗೆ ತಯಾರಾಗಲು ನಿಮ್ಮ ದೇಹಕ್ಕೆ ಸಂಕೇತಗಳನ್ನು ರವಾನಿಸುತ್ತದೆ. .

ಬಾದಾಮಿ ಮೆಗ್ನೀಸಿಯಂ ಎಂಬ ಪೋಷಕಾಂಶದ ಅತ್ಯುತ್ತಮ ಮೂಲವಾಗಿದೆ, ಇದು ನಿಮ್ಮ ದೈನಂದಿನ ಅಗತ್ಯಗಳಲ್ಲಿ 19% ಅನ್ನು ಕೇವಲ ಒಂದೇ ಔನ್ಸ್ ಮೂಲಕ ಒದಗಿಸುತ್ತದೆ. ಮೆಗ್ನೀಸಿಯಮ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ, ವಿಶೇಷವಾಗಿ ನಿದ್ರಾಹೀನತೆ ಇರುವ ವ್ಯಕ್ತಿಗಳ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆದರೂ, ಇದರ ಹೊರತಾಗಿಯೂ, ಬಾದಾಮಿ ಮತ್ತು ನಿದ್ರೆಯ ಸಂಬಂಧದ ಬಗ್ಗೆ ಸಂಶೋಧನೆಗಳು ಸಾಕಷ್ಟಿಲ್ಲ.

ಒಂದು ಅಧ್ಯಯನದಲ್ಲಿ ಬಾದಾಮಿಯ ಸಾರವನ್ನು 400 ಮಿಲಿಗ್ರಾಂ (ಮಿಗ್ರಾಂ) ಇಲಿಗಳಿಗೆ ತಿನ್ನಿಸಿ ಪರಿಣಾಮಗಳನ್ನು ಪರೀಕ್ಷಿಸಿತು. ಬಾದಾಮಿ ಸಾರವನ್ನು ಸೇವಿಸದ ಇಲಿಗಳು ಇತರ ಇಲಿಗಳಿಗಿಂತಲೂ ಹೆಚ್ಚು ಸಮಯ ಮತ್ತು ಹೆಚ್ಚು ಗಾಢವಾಗಿ ಮಲಗಿದ್ದವು ಎಂದು ಅದು ಕಂಡುಕೊಂಡಿದೆ (16).

ಬಾದಾಮಿಗಳ ನಿದ್ರೆಗೆ ಸಂಬಂಧಿಸಿದ ಪರಿಣಾಮಗಳು ಆಶಾದಾಯಕವಾಗಿವೆ, ಆದರೆ ಹೆಚ್ಚು ವ್ಯಾಪಕವಾದ ಮಾನವ ಅಧ್ಯಯನಗಳು ಅಗತ್ಯವಿದೆ.

ನಿಮ್ಮ ನಿದ್ರೆಯ ಗುಣಮಟ್ಟವನ್ನು ಪರಿಣಾಮ ಬೀರುತ್ತದೆಯೇ ಎಂದು ನಿರ್ಧರಿಸಲು ನೀವು ಮಲಗುವ ಮುನ್ನ ಮೊದಲು ಬಾದಾಮಿ ತಿನ್ನಲು ಬಯಸಿದರೆ, 1-ಔನ್ಸ್ (28-ಗ್ರಾಂ), ಅಥವಾ ಒಂದು ಮುಷ್ತಿಯಷ್ಟಿರಬೇಕು.

2.ಟರ್ಕಿ ಕೋಳಿ:

2.ಟರ್ಕಿ ಕೋಳಿ:

ಟರ್ಕಿ ಕೋಳಿಯ ಮಾಂಸ ರುಚಿಕರ ಮತ್ತು ಪೌಷ್ಟಿಕವೂ ಆಗಿದೆ.

ಇದರಲ್ಲಿ ಅಧಿಕ ಪ್ರಮಾಣದ ಪ್ರೋಟೀನ್ ಇದೆ, ಹುರಿದ ಟರ್ಕಿಯ ಒಂದು ಔನ್ಸ್‌ (28 ಗ್ರಾಂ) ಮಾಂಸದಲ್ಲಿ ಸುಮಾರು 8 ಗ್ರಾಂ ಪ್ರೋಟೀನ್ ಇದೆ. ನಿಮ್ಮ ಸ್ನಾಯುಗಳನ್ನು ಹುರಿಗಟ್ಟಿಸಲು ಮತ್ತು ನಿಮ್ಮ ಹಸಿವನ್ನು ನಿಯಂತ್ರಿಸಲು ಇದರಲ್ಲಿರುವ ಪ್ರೋಟೀನ್ ನೆರವಾಗುತ್ತದೆ.

ಅಷ್ಟೇ ಅಲ್ಲ, ಟರ್ಕಿ ಕೋಳಿಯಲ್ಲಿ ರೈಬೋಫ್ಲಾವಿನ್ ಮತ್ತು ರಂಜಕದಂತಹ ಕೆಲವು ಜೀವಸತ್ವಗಳು ಮತ್ತು ಖನಿಜಗಳೂ ಉತ್ತಮ ಪ್ರಮಾಣದಲ್ಲಿವೆ. ಇದು ಸೆಲೆನಿಯಂನ ಅತ್ಯುತ್ತಮ ಮೂಲವಾಗಿದೆ, 3-ಔನ್ಸ್ ಸೇವೆಯೊಂದಿಗೆ ದೈನಂದಿನ ಅಗತ್ಯದ 56% ರಷ್ಟು ಮೌಲ್ಯವನ್ನು ಪಡೆಯಬಹುದು.

ಟರ್ಕಿ ಕೋಳಿಯಲ್ಲಿ ಕೆಲವು ಗುಣಗಳಿವೆ, ಅದನ್ನು ಸೇವಿಸಿದ ನಂತರ ಕೆಲವರು ಏಕೆ ಆಯಾಸದ ಅನುಭವ ಪಡೆಯುತ್ತಾರೆ ಅಥವಾ ಅದು ನಿದ್ರೆಯನ್ನು ಪ್ರೋತ್ಸಾಹಿಸುತ್ತದೆ ಎಂದು ವಿವರಿಸುತ್ತದೆ. ಮುಖ್ಯವಾಗಿ, ಇದು ಟ್ರಿಪ್ಟೊಫಾನ್ ಎಂಬ ಅಮೈನೊ ಆಮ್ಲವನ್ನು ಹೊಂದಿರುತ್ತದೆ, ಇದು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಟರ್ಕಿಯಲ್ಲಿನ ಪ್ರೋಟೀನ್ ದಣಿವನ್ನು ಉತ್ತೇಜಿಸುವ ಸಾಮರ್ಥ್ಯಕ್ಕೂ ಕಾರಣವಾಗಬಹುದು. ನಿದ್ರಿಸುವ ಮೊದಲು ಮಧ್ಯಮ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸುವುದರಿಂದ ಉತ್ತಮ ಗುಣಮಟ್ಟದ ನಿದ್ದೆ ಪಡೆಯಲು ಸಾಧ್ಯವಾಗುತ್ತದೆ ಎಂಬುದಕ್ಕೆ ಪುರಾವೆಗಳಿವೆ. ಅಲ್ಲದೇ ರಾತ್ರಿಯಿಡೀ ಎಚ್ಚರಗೊಳ್ಳುವುದೂ ಕಡಿಮೆಯಾಗುತ್ತದೆ.

ನಿದ್ರೆಯನ್ನು ಸುಧಾರಿಸುವಲ್ಲಿ ಟರ್ಕಿಯ ಸಂಭಾವ್ಯ ಪಾತ್ರವನ್ನು ದೃಢೀಕರಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿವೆ.

3. ಕ್ಯಾಮೊಮೈಲ್ ಟೀ

3. ಕ್ಯಾಮೊಮೈಲ್ ಟೀ

ಕ್ಯಾಮೊಮೈಲ್ ಟೀ ಜನಪ್ರಿಯ ಗಿಡಮೂಲಿಕೆಯ ಟೀ ಆಗಿದ್ದು ಅದು ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಇದರಲ್ಲಿ ಫ್ಲೇವೋನ್‌ಗಳು ಸಮೃದ್ಧವಾಗಿವೆ. ಫ್ಲೇವೋನ್‌ ಗಳು ಆಂಟಿಆಕ್ಸಿಡೆಂಟ್‌ಗಳ ಒಂದು ವರ್ಗವಾಗಿದ್ದು, ಇದು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ, ವಿಶೇಷವಾಗಿ ಕ್ಯಾನ್ಸರ್ ಮತ್ತು ಹೃದ್ರೋಗಗಳು.

ಕ್ಯಾಮೊಮೈಲ್ ಚಹಾವನ್ನು ಕುಡಿಯುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನೂ ಸುಧಾರಿಸುತ್ತದೆ ಎಂಬುದಕ್ಕೆ ಕೆಲವು ಪುರಾವೆಗಳಿವೆ. ಇದಲ್ಲದೆ, ಕ್ಯಾಮೊಮೈಲ್ ಚಹಾದಲ್ಲಿ ಕೆಲವು ವಿಶಿಷ್ಟ ಗುಣಗಳಿದ್ದು ಇವು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ

ನಿರ್ದಿಷ್ಟವಾಗಿ, ಕ್ಯಾಮೊಮೈಲ್ ಚಹಾದಲ್ಲಿ ಎಪಿಜೆನಿನ್ ಎಂಬ ಪೋಷಕಾಂಶವಿದೆ. ಈ ಉತ್ಕರ್ಷಣ ನಿರೋಧಕ ಗುಣವು ನಿಮ್ಮ ಮೆದುಳಿನಲ್ಲಿರುವ ಕೆಲವು ಗ್ರಾಹಕಗಳಿಗೆ ಬಂಧಿಸುತ್ತದೆ, ಅದು ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ (23Trusted Source, 26Trusted Source).

2011 ರಲ್ಲಿ 34 ವಯಸ್ಕರ ಮೇಲೆ ನಡೆಸಿದ ಅಧ್ಯಯನದಲ್ಲಿ 28 ದಿನಗಳವರೆಗೆ ಪ್ರತಿದಿನ ಎರಡು ಬಾರಿ 270 ಮಿಗ್ರಾಂ ಕ್ಯಾಮೊಮೈಲ್ ಸಾರವನ್ನು ಸೇವಿಸಿದವರು 15 ನಿಮಿಷಗಳಲ್ಲಿಯೇ ಶೀಘ್ರವಾಗಿ ನಿದ್ರೆಗೆ ಜಾರಿದ್ದಾರೆ ಮತ್ತು ಸಾರವನ್ನು ಸೇವಿಸದವರಿಗೆ ಹೋಲಿಸಿದರೆ ನಿದ್ದೆಯ ಬಳಿಕ ಎಚ್ಚರಾಗುವುದನ್ನೂ ಕಡಿಮೆ ಅನುಭವಿಸಿದ್ದಾರೆ.

ಮತ್ತೊಂದು ಅಧ್ಯಯನದ ಪ್ರಕಾರ 2 ವಾರಗಳ ಕಾಲ ಕ್ಯಾಮೊಮೈಲ್ ಚಹಾವನ್ನು ಸೇವಿಸಿದ ಮಹಿಳೆಯರು ಚಹಾ ಸೇವಿಸದ ಮಹಿಳೆಯರಿಗೆ ಹೋಲಿಸಿದರೆ ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆದಿದ್ದಾರೆ.

ಕ್ಯಾಮೊಮೈಲ್ ಚಹಾವನ್ನು ಸೇವಿಸಿದವರಿಗೆ ಖಿನ್ನತೆಯ ಲಕ್ಷಣಗಳು ಕಡಿಮೆ ಇದ್ದು, ಇದು ಸಾಮಾನ್ಯವಾಗಿ ನಿದ್ರೆಯ ಸಮಸ್ಯೆಗಳಿಗೆ ಸಂಬಂಧಿಸಿದೆ.

ನಿಮ್ಮ ನಿದ್ರೆಯ ಗುಣಮಟ್ಟವನ್ನು ಉತ್ತಮಗೊಳಿಸಲು ನೀವು ಮಲಗುವ ಮುನ್ನ ಕ್ಯಾಮೊಮೈಲ್ ಚಹಾವನ್ನು ಕುಡಿಯುವುದು ಖಂಡಿತವಾಗಿಯೂ ಯೋಗ್ಯವಾಗಿದೆ.

4. ಕಿವಿ ಹಣ್ಣು

4. ಕಿವಿ ಹಣ್ಣು

ಕಿವೀ ಹಣ್ಣುಗಳಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪೌಷ್ಠಿಕಾಂಶಗಳಿವೆ.

ಒಂದು ಹಣ್ಣಿನಲ್ಲಿ ಕೇವಲ 42 ಕ್ಯಾಲೋರಿಗಳು ಮತ್ತು ಗಮನಾರ್ಹ ಪ್ರಮಾಣದ ಪೋಷಕಾಂಶಗಳಿವೆ, ಇದರಲ್ಲಿ ವಿಟಮಿನ್ ಸಿ ಗಾಗಿ ದೈನಂದಿನ ಅಗತ್ಯದ 71% ರಷ್ಟು ಪ್ರಮಾಣವಿದೆ. ಇದು ಪುರುಷರು ಮತ್ತು ಮಹಿಳೆಯರಿಗೆ ಕ್ರಮವಾಗಿ ಪ್ರತಿದಿನ ಅಗತ್ಯವಿರುವ ವಿಟಮಿನ್ ಕೆ ದೈನಂದಿನ ಅಗತ್ಯದ 23% ಮತ್ತು 31% ಅನ್ನು ಒದಗಿಸುತ್ತದೆ.

ಇದು ಯೋಗ್ಯ ಪ್ರಮಾಣದ ಫೋಲೇಟ್ ಮತ್ತು ಪೊಟ್ಯಾಸಿಯಮ್ ಮತ್ತು ಹಲವಾರು ಖನಿಜಗಳ ಪ್ರಮಾಣವನ್ನು ಸಹಾ ಒಳಗೊಂಡಿದೆ.

ಇದಲ್ಲದೆ, ಕಿವಿ ಹಣ್ಣುಗಳನ್ನು ತಿನ್ನುವಮೂಲಕ ನಿಮ್ಮ ಜೀರ್ಣಾಂಗದ ಆರೋಗ್ಯವನ್ನು ವೃದ್ದಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಈ ಪರಿಣಾಮಗಳಿಗೆ ಅವು ಒದಗಿಸುವ ಹೆಚ್ಚಿನ ಪ್ರಮಾಣದ ಕರಗುವ ನಾರಿನಂಶ ಮತ್ತು ಕ್ಯಾರೊಟಿನಾಯ್ಡ್ ಆಂಟಿಆಕ್ಸಿಡೆಂಟ್‌ಗಳು ಕಾರಣವಾಗಿವೆ.

ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯದ ಕುರಿತಾದ ಅಧ್ಯಯನಗಳ ಪ್ರಕಾರ, ಮಲಗುವ ಮುನ್ನ ತಿನ್ನಲು ಕಿವಿ ಹಣ್ಣುಗಳು ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿರಬಹುದು.

4 ವಾರಗಳ ಅಧ್ಯಯನದಲ್ಲಿ, 24 ವಯಸ್ಕರಿಗೆ ಪ್ರತಿ ರಾತ್ರಿ ಮಲಗುವ ಒಂದು ಗಂಟೆಗೂ ಮುನ್ನ ಮೊದಲು ಎರಡು ಕಿವಿಹಣ್ಣುಗಳನ್ನು ಸೇವಿಸಲು ನೀಡಲಾಯಿತು. ಅಧ್ಯಯನದ ಕೊನೆಯಲ್ಲಿ, ಭಾಗವಹಿಸಿದ ವ್ಯಕ್ತಿಗಳು ಈ ಹಣ್ಣುಗಳನ್ನು ಸೇವಿಸದ ದಿನಗಳಿಗಿಂತಲೂ 42% ಶೇಖಡಾ ಬೇಗನೇ ನಿದ್ದೆಗೆ ಶರಣಾಗಿರುವುದನ್ನು ಕಂಡುಕೊಳ್ಳಲಾಗಿದೆ.

ಹೆಚ್ಚುವರಿಯಾಗಿ, ರಾತ್ರಿಯಿಡೀ ಎಚ್ಚರಗೊಳ್ಳದೇ ಮಲಗುವ ಅವರ ಸಾಮರ್ಥ್ಯವು 5% ರಷ್ಟು ಉತ್ತಮಗೊಂಡಿದೆ, ಅವರ ಒಟ್ಟು ನಿದ್ರೆಯ ಸಮಯ 13% ರಷ್ಟು ಹೆಚ್ಚಾಗಿದ್ದುದು ಕಂಡುಬಂದಿದೆ.

ಕಿವಿ ಹಣ್ಣುಗಳು ನಿದ್ರೆಯನ್ನು ಉತ್ತೇಜಿಸುವ ಪರಿಣಾಮಗಳು ಕೆಲವೊಮ್ಮೆ ಸಿರೊಟೋನಿನ್‌ಗೆ ಕಾರಣವಾಗಿವೆ. ಸಿರೊಟೋನಿನ್ ಮೆದುಳಿನ ರಾಸಾಯನಿಕವಾಗಿದ್ದು ಅದು ನಿಮ್ಮ ನಿದ್ರೆಯ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಿವಿ ಹಣ್ಣುಗಳಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್‌ಗಳಂತಹ ಉರಿಯೂತ ಉತ್ಕರ್ಷಣ ನಿರೋಧಕಗಳು ಅವುಗಳ ನಿದ್ರೆಯನ್ನು ಉತ್ತೇಜಿಸುವ ಪರಿಣಾಮಗಳಿಗೆ ಭಾಗಶಃ ಕಾರಣವಾಗಬಹುದು ಎಂದು ಸಹಾ ಸೂಚಿಸಲಾಗಿದೆ.

ಕಿವಿ ಹಣ್ಣುಗಳ ಸೇವನೆಯಿಂದ ನಿದ್ರೆಯ ಗುಣಮಟ್ಟ ಉತ್ತಮಗೊಳ್ಳುವ ಪರಿಣಾಮಗಳನ್ನು ನಿರ್ಧರಿಸಲು ಹೆಚ್ಚಿನ ವೈಜ್ಞಾನಿಕ ಪುರಾವೆಗಳ ಅಗತ್ಯವಿದೆ. ಅದೇನೇ ಇದ್ದರೂ, ರಾತ್ರಿ ಮಲಗುವ ಮುನ್ನ 1-2 ಮಧ್ಯಮ ಗಾತ್ರದ ಕಿವಿ ಹಣ್ಣುಗಳನ್ನು ತಿನ್ನುವುದು ನಿಮಗೆ ವೇಗವಾಗಿ ನಿದ್ದೆ ಮಾಡಲು ಮತ್ತು ಹೆಚ್ಚಿನ ಸಮಯ ನಿದ್ದೆ ಮಾಡಲು ಸಹಾಯ ಮಾಡುತ್ತದೆ.

5. ಚೆರ್‍ರಿ ಹಣ್ಣುಗಳ ರಸ

5. ಚೆರ್‍ರಿ ಹಣ್ಣುಗಳ ರಸ

ಚೆರ್‍ರಿ ಹಣ್ಣುಗಳ ರಸವೂ ಕೆಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.

ಮೊದಲಿಗೆ, ಇದು ಮೆಗ್ನೀಸಿಯಮ್ ಮತ್ತು ರಂಜಕದಂತಹ ಕೆಲವು ಪ್ರಮುಖ ಪೋಷಕಾಂಶಗಳ ಸಾಧಾರಣ ಪ್ರಮಾಣವನ್ನು ಒದಗಿಸುತ್ತದೆ. ಇದು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ.

8-ಔನ್ಸ್ (240-ಮಿಲಿಲೀಟರ್)ನಷ್ಟು ರಸವನ್ನು ಸೇವಿಸಿದ ಮಹಿಳೆಯರಿಗೆ ಪ್ರತಿದಿನ ಅಗತ್ಯವಿರುವ 17% ಪೊಟ್ಯಾಸಿಯಮ್ ಮತ್ತು ಪುರುಷರಿಗೆ ಪ್ರತಿದಿನ ಅಗತ್ಯವಿರುವ 13% ರಷ್ಟು ಪೊಟ್ಯಾಸಿಯಮ್ ಲಭಿಸುತ್ತದೆ.

ಅಷ್ಟೇ ಅಲ್ಲ, ಇದರಲ್ಲಿ ಆಂಥೋಸಯಾನಿನ್‌ಗಳು ಮತ್ತು ಫ್ಲೇವೊನಾಲ್‌ಗಳನ್ನು ಒಳಗೊಂಡಂತೆ ಉತ್ಕರ್ಷಣ ನಿರೋಧಕಗಳೂ ಸಮೃದ್ಧವಾಗಿವೆ.

ಚೆರ್‍ರಿ ರಸ ನಿದ್ರೆಯನ್ನು ಉತ್ತೇಜಿಸಲು ಸಹ ಹೆಸರುವಾಸಿಯಾಗಿದೆ, ಮತ್ತು ನಿದ್ರಾಹೀನತೆಯನ್ನು ನಿವಾರಿಸುವಲ್ಲಿ ಅದರ ಪಾತ್ರಕ್ಕಾಗಿ ಇದನ್ನು ಅಧ್ಯಯನ ಮಾಡಲಾಗಿದೆ. ಈ ಕಾರಣಗಳಿಗಾಗಿ, ರಾತ್ರಿ ಮಲಗುವ ಮೊದಲು ಚೆರ್‍ರಿ ರಸವನ್ನು ಕುಡಿಯುವುದರಿಂದ ನಿಮ್ಮ ನಿದ್ರೆಯ ಗುಣಮಟ್ಟ ಸುಧಾರಿಸಬಹುದು.

ಚೆರ್‍ರಿ ಹಣ್ಣುಗಳ ರಸದ ನಿದ್ರೆಯನ್ನು ಉತ್ತೇಜಿಸುವ ಪರಿಣಾಮಗಳಿಗೆ ಇದರ ಹೆಚ್ಚಿನ ಪ್ರಮಾಣದ ಮೆಲಟೋನಿನ್ ಕಾರಣವಾಗಿದೆ.

ಚಿಕ್ಕ ಅಧ್ಯಯನವೊಂದರಲ್ಲಿ, ನಿದ್ರಾಹೀನತೆಯಿಂದ ಬಳಲುತ್ತಿರುವ ವಯಸ್ಕರು 8 ವಾರಗಳ (240 ಮಿಲಿಲೀಟರ್) ಚೆರ್‍ರಿ ಹಣ್ಣುಗಳ ರಸವನ್ನು ದಿನಕ್ಕೆ ಎರಡು ಬಾರಿ 2 ವಾರಗಳವರೆಗೆ ಸೇವಿಸಿದಾಗ. ಅವರು 84 ನಿಮಿಷ ಹೆಚ್ಚು ನಿದ್ರೆ ಮಾಡಿದರು ಮತ್ತು ಅವರು ರಸವನ್ನು ಕುಡಿಯದಿದ್ದಾಗಿನ ದಿನಗಳಿಗೆ ಹೋಲಿಸಿದರೆ ಉತ್ತಮ ನಿದ್ರೆಯ ಗುಣಮಟ್ಟವನ್ನು ಪಡೆದಿರುವುದನ್ನು ಗಮನಿಸಲಾಗಿದೆ.

ಈ ಫಲಿತಾಂಶಗಳು ಭರವಸೆ ನೀಡಿದರೂ, ನಿದ್ರೆಯನ್ನು ಸುಧಾರಿಸುವಲ್ಲಿ ಮತ್ತು ನಿದ್ರಾಹೀನತೆಯನ್ನು ತಡೆಗಟ್ಟುವಲ್ಲಿ ಚೆರ್‍ರಿ ಹಣ್ಣುಗಳ ರಸದ ಪಾತ್ರವನ್ನು ದೃಢೀಕರಿಸಲು ಇನ್ನೂ ಹೆಚ್ಚು ವ್ಯಾಪಕವಾದ ಸಂಶೋಧನೆ ಅಗತ್ಯವಾಗಿವೆ.

ಅದೇನೇ ಇದ್ದರೂ, ನಿಮಗೆ ನಿದ್ದೆ ಆವರಿಸುವುದು ಅಥವಾ ರಾತ್ರಿಯಲ್ಲಿ ನಿದ್ದೆ ಮಾಡಲು ಕಷ್ಟಪಡುತ್ತಿದ್ದರೆ ರಾತ್ರಿ ಮಲಗುವ ಮೊದಲು ಕೊಂಚ ಚೆರ್‍ರಿ ಹಣ್ಣುಗಳ ರಸವನ್ನು ಕುಡಿಯುವುದು ಪ್ರಯತ್ನಿಸಬೇಕಾದ ಸಂಗತಿಯಾಗಿದೆ.

6. ಮೀನು

6. ಮೀನು

ಕೊಬ್ಬುಯುಕ್ತ ಮೀನುಗಳಾದ ಸಾಲ್ಮನ್, ಟ್ಯೂನಾ, ಟ್ರೌಟ್ ಮತ್ತು ಬಂಗಡೆ ಮೊದಲಾದವು ನಂಬಲಾಗದಷ್ಟು ಆರೋಗ್ಯಕರವಾಗಿವೆ. ಅವುಗಳ ವಿಶಿಷ್ಟವಾದ ಅಂಶವೆಂದರೆ ಇವುಗಳಲ್ಲಿರುವ ಅಸಾಧಾರಣ ಪ್ರಮಾಣದ ವಿಟಮಿನ್ ಡಿ.

ಉದಾಹರಣೆಗೆ, 3 ಔನ್ಸ್ (85-ಗ್ರಾಂ) ಸಾಕ್ ಐ ಸಾಲ್ಮನ್‌ನಲ್ಲಿ 570 ಅಂತರರಾಷ್ಟ್ರೀಯ ಘಟಕಗಳು (ಐಯು) ವಿಟಮಿನ್ ಡಿ ಅನ್ನು ಹೊಂದಿರುತ್ತದೆ, ಅದು ನಿಮ್ಮ ದೈನಂದಿನ ಅಗತ್ಯದ 71%. ರಷ್ಟಿದೆ. ಸಾಕಿದ ರೇನ್ಬೋ ಟ್ರೌಟ್ ಮೀನಿನ ಇದೇ ಪ್ರಮಾಣದ ಸೇವನೆಯಿಂದ ದೈನಂದಿನ ಅಗತ್ಯತೆಯ 81% ಪ್ರಮಾಣವನ್ನು ನೀಡುತ್ತದೆ.

ಹೆಚ್ಚುವರಿಯಾಗಿ, ಕೊಬ್ಬಿನ ಮೀನುಗಳಲ್ಲಿ ಆರೋಗ್ಯಕರ ಒಮೆಗಾ -3 ಕೊಬ್ಬಿನಾಮ್ಲಗಳು ಅಧಿಕವಾಗಿರುತ್ತವೆ, ನಿರ್ದಿಷ್ಟವಾಗಿ ಹೇಳುವುದಾದರೆ ಇವುಗಳಲ್ಲಿ ಐಕೋಸಾಪೆಂಟಿನೋಯಿಕ್ ಆಮ್ಲ (ಇಪಿಎ) eicosapentaenoic acid (EPA) ಮತ್ತು ಡೊಕೊಸಾಹೆಕ್ಸೇನೊಯಿಕ್ ಆಮ್ಲ (docosahexaenoic acid (DHA) ಗಳಿವೆ.

ಇಪಿಎ ಮತ್ತು ಡಿಪಿಎ ಉರಿಯೂತವನ್ನು ಕಡಿಮೆ ಮಾಡಲು ಹೆಸರುವಾಸಿಯಾಗಿದೆ. ಇದಲ್ಲದೆ, ಒಮೆಗಾ -3 ಕೊಬ್ಬಿನಾಮ್ಲಗಳು ಹೃದ್ರೋಗದಿಂದ ರಕ್ಷಿಸುವ ಗುಣ ಹೊಂದಿವೆ ಮತ್ತು ಮೆದುಳಿನ ಆರೋಗ್ಯವನ್ನೂ ಹೆಚ್ಚಿಸಬಹುದು.

ಕೊಬ್ಬುಯುಕ್ತ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ಸಂಯೋಜನೆಯು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ, ಏಕೆಂದರೆ ಇವೆರಡೂ ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ತೋರಿಸಲಾಗಿದೆ.

ಒಂದು ಅಧ್ಯಯನದಲ್ಲಿ, ಅಟ್ಲಾಂಟಿಕ್ ಸಾಲ್ಮನ್‌ನ 10.5 ಔನ್ಸ್ (300 ಗ್ರಾಂ) ವಾರಕ್ಕೆ ಮೂರು ಬಾರಿ 6 ತಿಂಗಳ ಕಾಲ ಸೇವಿಸಿದ ಪುರುಷರು ಕೋಳಿ, ಗೋಮಾಂಸ ಅಥವಾ ಹಂದಿಮಾಂಸವನ್ನು ಸೇವಿಸಿದ ಪುರುಷರಿಗಿಂತ 10 ನಿಮಿಷಗಳ ಶೀಘ್ರವಾಗಿ ನಿದ್ರಿಸಿದ್ದಾರೆ.

ಈ ಪರಿಣಾಮ ವಿಟಮಿನ್ ಡಿ ಯ ಪರಿಣಾಮವೆಂದೇ ಭಾವಿಸಲಾಗಿತ್ತು. ಮೀನು ಸೇವಿಸುವ ಗುಂಪಿನಲ್ಲಿರುವವರು ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಯನ್ನು ಹೊಂದಿದ್ದರು, ಇದು ನಿದ್ರೆಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗೆ ಸಂಬಂಧಿಸಿದ .

ರಾತ್ರಿ ಮಲಗುವ ಮುನ್ನ ಕೆಲವು ಔನ್ಸ್ ಕೊಬ್ಬುಯುಕ್ತ ಮೀನುಗಳನ್ನು ತಿನ್ನುವುದು ನಿಮಗೆ ವೇಗವಾಗಿ ನಿದ್ರೆ ಮಾಡಲು ಮತ್ತು ಹೆಚ್ಚು ಗಾಢವಾಗಿ ಮಲಗಲು ಸಹಾಯ ಮಾಡುತ್ತದೆ. ನಿದ್ರೆಯನ್ನು ಸುಧಾರಿಸಲು ಕೊಬ್ಬಿನ ಮೀನುಗಳ ಸಾಮರ್ಥ್ಯದ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರಲು ಇನ್ನೂ ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ.

7. ಅಕ್ರೋಟುಗಳು

7. ಅಕ್ರೋಟುಗಳು

ಇದೂ ಒಣಫಲಗಳಲ್ಲಿ ಪ್ರಮುಖವಾದ ಒಂದಾಗಿದೆ.

1-ಔನ್ಸ್ (28-ಗ್ರಾಂ) ಸೇವೆಯಲ್ಲಿ 1.9 ಗ್ರಾಂ ಕರಗುವ ನಾರಿನ ಜೊತೆಗೆ 19 ಕ್ಕೂ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ಅಕ್ರೋಟಿನಲ್ಲಿ ವಿಶೇಷವಾಗಿ ಮೆಗ್ನೀಸಿಯಮ್, ರಂಜಕ, ಮ್ಯಾಂಗನೀಸ್ ಮತ್ತು ತಾಮ್ರದ ಅಂಶಗಳು ಸಮೃದ್ಧವಾಗಿದೆ.

ಅಷ್ಟೇ ಅಲ್ಲ, ಅಕ್ರೋಟುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಲಿನೋಲಿಕ್ ಆಮ್ಲವನ್ನು ಒಳಗೊಂಡಂತೆ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಒಂದು ಔನ್ಸ್‌ ನಲ್ಲಿ 4.3 ಗ್ರಾಂ ಪ್ರೋಟೀನ್ ಸಹಾ ಇದರಲ್ಲಿದೆ. ಇದು ಹಸಿವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಬಹುದು

ಅಕ್ರೋಟುಗಳು ಹೃದಯದ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕಾಗಿ ಅವುಗಳನ್ನು ಅಧ್ಯಯನ ಮಾಡಲಾಗಿದೆ, ಇದು ಹೃದ್ರೋಗಕ್ಕೆ ಪ್ರಮುಖ ಅಪಾಯಕಾರಿಯಾದ ಅಂಶವಾಗಿದೆ.

ಅಷ್ಟೇ ಅಲ್ಲ, ಕೆಲವು ಸಂಶೋಧಕರು ಅಕ್ರೋಟು ತಿನ್ನುವುದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳುತ್ತಾರೆ ಏಕೆಂದರೆ ಇವು ಮೆಲಟೋನಿನ್ ನ ಅತ್ಯುತ್ತಮ ಆಹಾರ ಮೂಲಗಳಲ್ಲಿ ಒಂದಾಗಿದೆ.

ಅಕ್ರೋಟಿನಲ್ಲಿರುವ ಕೊಬ್ಬಿನಾಮ್ಲಗಳು ಉತ್ತಮ ನಿದ್ರೆಗೆ ಕಾರಣವಾಗಬಹುದು. ಅವರು ದೇಹದಲ್ಲಿ ಡಿಹೆಚ್‌ಎ ಆಗಿ ಪರಿವರ್ತನೆಗೊಳ್ಳುವ ಒಮೆಗಾ -3 ಕೊಬ್ಬಿನಾಮ್ಲ ಆಲ್ಫಾ-ಲಿನೋಲೆನಿಕ್ ಆಮ್ಲಗಳು (ಎಎಲ್‌ಎ) ಲಭಿಸುತ್ತವೆ. ಡಿಎಚ್‌ಎ ಸಿರೊಟೋನಿನ್ ಉತ್ಪಾದನೆಯನ್ನು ಸಹಾ ಹೆಚ್ಚಿಸಬಹುದು.

ಅಕ್ರೋಟುಗಳ ಸೇವನೆಯಿಂದ ನಿದ್ರೆಯ ಗುಣಮಟ್ಟ ಉತ್ತಮಗೊಳ್ಳುವ ಬಗ್ಗೆ ಸಮರ್ಥನೆಗಳನ್ನು ಬೆಂಬಲಿಸಲು ಹೆಚ್ಚಿನ ಪುರಾವೆಗಳಿಲ್ಲ. ವಾಸ್ತವವಾಗಿ, ನಿದ್ರೆಯನ್ನು ಉತ್ತೇಜಿಸುವಲ್ಲಿ ಅವರ ಪಾತ್ರವನ್ನು ನಿರ್ದಿಷ್ಟವಾಗಿ ಕೇಂದ್ರೀಕರಿಸುವ ಯಾವುದೇ ಅಧ್ಯಯನಗಳು ನಡೆದಿಲ್ಲ.

ಆದರೂ, ನೀವು ನಿದ್ರಾರಾಹಿತ್ಯದಿಂದ ಹೋರಾಡುತ್ತಿದ್ದರೆ, ರಾತ್ರಿ ಮಲಗುವ ಮುನ್ನ ಕೆಲವು ಅಕ್ರೋಟಗಳನ್ನು ತಿನ್ನುವುದು ಸಹಾಯ ಮಾಡುತ್ತದೆ. ಇದಕ್ಕಾಗಿ ಬೆರಳೆಣಿಕೆಯಷ್ಟು ಅಕ್ರೋಟುಗಳನ್ನು ಸೇವಿಸಿದರೆ ಸಾಕಾಗುತ್ತದೆ.

8. ಪ್ಯಾಶನ್ ಫ್ಲವರ್ ಚಹಾ

8. ಪ್ಯಾಶನ್ ಫ್ಲವರ್ ಚಹಾ

ಪ್ಯಾಶನ್ ಫ್ಲವರ್ ಚಹಾವು ಮತ್ತೊಂದು ಗಿಡಮೂಲಿಕೆಯ ಚಹಾವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ಹಲವಾರು ಆರೋಗ್ಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಇದರಲ್ಲಿ ಫ್ಲೇವನಾಯ್ಡುಗಳು ಉತ್ಕರ್ಷಣ ನಿರೋಧಕ ಗುಣಗಳು ಸಮೃದ್ಧವಾಗಿವೆ. ಫ್ಲೇವನಾಯ್ಡುಗಳು ಆಂಟಿಆಕ್ಸಿಡೆಂಟ್‌ಗಳು ಉರಿಯೂತವನ್ನು ಕಡಿಮೆ ಮಾಡುವಲ್ಲಿ, ರೋಗನಿರೋಧಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವಲ್ಲಿ ತಮ್ಮ ಪಾತ್ರಕ್ಕೆ ಹೆಸರುವಾಸಿಯಾಗಿದೆ.

ಹೆಚ್ಚುವರಿಯಾಗಿ, ಪ್ಯಾಶನ್ ಫ್ಲವರ್ ಚಹಾವನ್ನು ಉದ್ವೇಗವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕಾಗಿ ಅಧ್ಯಯನ ಮಾಡಲಾಗಿದೆ.

ಪ್ಯಾಶನ್ ಫ್ಲವರ್‌ನಲ್ಲಿರುವ ಎಪಿಜೆನಿನ್ ಎಂಬ ಆಂಟಿಆಕ್ಸಿಡೆಂಟ್ ಆತಂಕವನ್ನು ಕಡಿಮೆ ಮಾಡುವ ಪರಿಣಾಮಗಳಿಗೆ ಕಾರಣವಾಗಬಹುದು. ನಿಮ್ಮ ಮೆದುಳಿನಲ್ಲಿರುವ ಕೆಲವು ಗ್ರಾಹಕಗಳನ್ನು ಬಂಧಿಸುವ ಮೂಲಕ ಎಪಿಜೆನಿನ್ ಶಾಂತಗೊಳಿಸುವ ಪರಿಣಾಮವನ್ನು ಉಂಟುಮಾಡುತ್ತದೆ.

ಪ್ಯಾಶನ್ ಫ್ಲವರ್ ಮೆದುಳಿನ ರಾಸಾಯನಿಕವಾದ ಗಾಬಾ ( ಗಾಮಾ ಅಮೈನೊಬ್ಯುಟ್ರಿಕ್ ಆಮ್ಲದ (ಜಿಎಬಿಎ)-gamma aminobutyric acid (GABA)) ಎಂಬ ರಾಸಾಯನಿಕದ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಕೆಲವು ಪುರಾವೆಗಳಿವೆ. ಗ್ಲುಟಮೇಟ್ ನಂತಹ ಒತ್ತಡವನ್ನು ಉಂಟುಮಾಡುವ ಇತರ ಮೆದುಳಿನ ರಾಸಾಯನಿಕಗಳನ್ನು ತಡೆಯಲು GABA ಕಾರ್ಯನಿರ್ವಹಿಸುತ್ತದೆ.

ಪ್ಯಾಶನ್ ಫ್ಲವರ್ ಚಹಾದ ಶಾಂತಗೊಳಿಸುವ ಗುಣಗಳು ನಿದ್ರೆಯನ್ನು ಉತ್ತೇಜಿಸಬಹುದು, ಆದ್ದರಿಂದ ಮಲಗುವ ಮುನ್ನ ಅದನ್ನು ಕುಡಿಯುವುದು ಪ್ರಯೋಜನಕಾರಿಯಾಗಿದೆ.

7 ದಿನಗಳ ಅಧ್ಯಯನದಲ್ಲಿ, 41 ವಯಸ್ಕರು ಮಲಗುವ ಮೊದಲು ಪ್ಯಾಶನ್ ಫ್ಲವರ್ ಚಹಾವನ್ನು ಸೇವಿಸಿದ್ದಾರೆ. ಅವರು ಚಹಾವನ್ನು ಕುಡಿಯದಿದ್ದಾಗಿನ ದಿನಗಳಿಗೆ ಹೋಲಿಸಿದರೆ ಅವರು ಚಹಾವನ್ನು ಸೇವಿಸಿದಾಗ ಅವರ ನಿದ್ರೆಯ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚು ಗಾಢವಾಗಿರುವುದನ್ನು ಗಮನಿಸಲಾಗಿದೆ.

ಪ್ಯಾಶನ್ ಫ್ಲವರ್ ನಿದ್ರೆಯನ್ನು ಉತ್ತೇಜಿಸುತ್ತದೆಯೆ ಎಂದು ನಿರ್ಧರಿಸಲು ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ.

9. ಬಿಳಿ ಅಕ್ಕಿಯ ಅನ್ನ

9. ಬಿಳಿ ಅಕ್ಕಿಯ ಅನ್ನ

ಬಿಳಿ ಅಕ್ಕಿ ಒಂದು ಧಾನ್ಯವಾಗಿದ್ದು, ಇದನ್ನು ಭಾರತ ಸಹಿತ ಅನೇಕ ದೇಶಗಳಲ್ಲಿ ಪ್ರಧಾನ ಆಹಾರವಾಗಿ ವ್ಯಾಪಕವಾಗಿ ಸೇವಿಸಲಾಗುತ್ತದೆ.

ಬಿಳಿ ಮತ್ತು ಕಂದು ಅಕ್ಕಿಯ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಬಿಳಿ ಅಕ್ಕಿ ಅದರ ಹೊಟ್ಟು ಮತ್ತು ಸೂಕ್ಷ್ಮಾಣುಜೀವಿಗಳನ್ನು ತೆಗೆದುಹಾಕಿದ ಧಾನ್ಯವಾಗಿದೆ. ಇದರಲ್ಲಿ ಕರಗುವ ನಾರು, ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳೂ ಕಡಿಮೆ ಇರುತ್ತವೆ.

ಅದೇನೇ ಇದ್ದರೂ, ಬಿಳಿ ಅಕ್ಕಿಯಲ್ಲಿ ಇನ್ನೂ ಕೆಲವು ಜೀವಸತ್ವಗಳು ಮತ್ತು ಖನಿಜಗಳು ಉತ್ತಮ ಪ್ರಮಾಣದಲ್ಲಿವೆ

4-ಔನ್ಸ್ (79-ಗ್ರಾಂ) ಬಿಳಿ ಅಕ್ಕಿಯಲ್ಲಿ ನಿಮ್ಮ ದೈನಂದಿನ ಅಗತ್ಯದ 19% ಫೋಲೇಟ್ ಲಭಿಸುತ್ತದೆ. ಇದೇ ಪ್ರಮಾಣದಲ್ಲಿ ಪುರುಷರಿಗೆ ದೈನಂದಿನ ಥಯಾಮಿನ್ ಅಗತ್ಯತೆಯ 21% ಮತ್ತು ಮಹಿಳೆಯರಿಗೆ ದೈನಂದಿನ ಥಯಾಮಿನ್ ಅಗತ್ಯತೆಯ 22% ರಷ್ಟನ್ನು ಒದಗಿಸುತ್ತದೆ.

4-ಔನ್ಸ್ (79-ಗ್ರಾಂ) ಉದ್ದನೆಯ ಧಾನ್ಯದ ಬಿಳಿ ಅಕ್ಕಿಯಲ್ಲಿ ನಿಮ್ಮ ದೈನಂದಿನ ಅಗತ್ಯತೆಯ 13% ಮ್ಯಾಂಗನೀಸ್ ಅನ್ನು ಹೊಂದಿರುತ್ತದೆ.

ಬಿಳಿ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟುಗಳು ಅಧಿಕ ಪ್ರಮಾಣದಲ್ಲಿವೆ, 4-ಔನ್ಸ್ (79-ಗ್ರಾಂ) ಪ್ರಮಾಣದಲ್ಲಿ 22 ಗ್ರಾಂ ನಷ್ಟಿದೆ. ಇದರ ಕಾರ್ಬೋಹೈಡ್ರೇಟುಗಳ ಅಂಶ ಮತ್ತು ನಾರಿನಂಶದ ಕೊರತೆಯು ಅದರ ಅಧಿಕ ಗ್ಲೈಸೆಮಿಕ್ ಸೂಚ್ಯಂಕಕ್ಕೆ (ಜಿಐ) ಕೊಡುಗೆ ನೀಡುತ್ತದೆ. ಗ್ಲೈಸೆಮಿಕ್ ಸೂಚ್ಯಂಕ ಆಹಾರ ಜೀರ್ಣಗೊಂಡ ಬಳಿಕ ಎಷ್ಜು ಕ್ಷಿಪ್ರವಾಗಿ ರಕ್ತದಲ್ಲಿ ಸಕ್ಕರೆ ಬೆರೆತುಕೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ.

ಮಲಗುವುದಕ್ಕೂ ಕನಿಷ್ಠ 1 ಗಂಟೆಗೂ ಮೊದಲು ಬಿಳಿ ಅಕ್ಕಿಯಂತಹ ಹೆಚ್ಚಿನ ಜಿಐ ಹೊಂದಿರುವ ಆಹಾರವನ್ನು ತಿನ್ನುವುದು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸಲಾಗಿದೆ.

ಒಂದು ಅಧ್ಯಯನದಲ್ಲಿ ಅಕ್ಕಿ, ಬ್ರೆಡ್ ಅಥವಾ ನೂಡಲ್ಸ್ ಸೇವನೆಯ ಆಧಾರದ ಮೇಲೆ 1,848 ಜನರ ನಿದ್ರೆಯ ಅಭ್ಯಾಸವನ್ನು ಹೋಲಿಸಿಲಾಗಿತ್ತು. ಹೆಚ್ಚಿನ ಅಕ್ಕಿ ಸೇವನೆಯು ಬ್ರೆಡ್ ಅಥವಾ ನೂಡಲ್ಸ್ ಗಿಂತ ಉತ್ತಮ ನಿದ್ರೆಯೊಂದಿಗೆ ಸಂಬಂಧಿಸಿದೆ, ಇದರಲ್ಲಿ ಹೆಚ್ಚಿನ ನಿದ್ರೆಯ ಅವಧಿಯೂ ಸೇರಿದೆ.

ಬಿಳಿ ಅಕ್ಕಿ ತಿನ್ನುವುದು ನಿದ್ರೆಯನ್ನು ಉತ್ತೇಜಿಸುವಲ್ಲಿ ಹೊಂದಿರಬಹುದಾದ ಸಂಭಾವ್ಯ ಪಾತ್ರದ ಹೊರತಾಗಿಯೂ, ಅದರಲ್ಲಿರುವ ಗಮನಾರ್ಹವಾಗಿ ಕಡಿಮೆ ಪ್ರಮಾಣದ ನಾರಿನಂಶ ಹಾಗೂ ಪೋಷಕಾಂಶಗಳಿಂದಾಗಿ ಇದನ್ನು ಮಿತವಾಗಿ ಸೇವಿಸಬೇಕು.

ನಿದ್ರೆಯನ್ನು ಉತ್ತೇಜಿಸುವ ಇತರ ಆಹಾರಗಳು ಮತ್ತು ಪಾನೀಯಗಳು

ಹಲವಾರು ಇತರ ಆಹಾರಗಳು ಮತ್ತು ಪಾನೀಯಗಳೂ ನಿದ್ರೆಯನ್ನು ಉತ್ತೇಜಿಸುವ ಗುಣಗಳನ್ನು ಹೊಂದಿವೆ. ಉದಾಹರಣೆಗೆ, ಅವುಗಳಲ್ಲಿ ಟ್ರಿಪ್ಟೊಫಾನ್ ನಂತಹ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇರಬಹುದು.

ಇತರ ಆಹಾರಗಳು

ಇತರ ಆಹಾರಗಳು

ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ನಿದ್ರೆಯ ಮೇಲೆ ಅವುಗಳ ನಿರ್ದಿಷ್ಟ ಪರಿಣಾಮಗಳ ಕುರಿತು ಸಂಶೋಧನೆಗಳು ಇನ್ನೂ ನಡೆಯಬೇಕಿವೆ.

ಡೈರಿ ಉತ್ಪನ್ನಗಳು: ಡೈರಿ ಉತ್ಪನ್ನಗಳಾದ ಒಂದು ಲೋಟ ಹಾಲು, ಕಾಟೇಜ್ ಚೀಸ್ ಮತ್ತು ಸಾದಾ ಮೊಸರು ಟ್ರಿಪ್ಟೊಫಾನ್‌ನ ಮೂಲಗಳಾಗಿವೆ. ವೃದ್ದರು, ನಿಯಮಿತ ವ್ಯಾಯಾಮವನ್ನು ಅನುಸುವವರಾಗಿದ್ದು ರಾತ್ರಿ ಮಲಗುವಾಗ ಹಾಲು ಸೇವಿಸಿದರೆ ಉತ್ತಮ ನಿದ್ರೆಯನ್ನು ಪಡೆಯುತ್ತಾರೆ ಎಂಬುದನ್ನು ಪ್ರಮಾಣಿಸಲಾಗಿದೆ.

ಬಾಳೆಹಣ್ಣು: ಬಾಳೆಹಣ್ಣಿನ ಸಿಪ್ಪೆಯಲ್ಲಿ ಟ್ರಿಪ್ಟೊಫಾನ್ ಉತ್ತಮ ಪ್ರಮಾಣದಲ್ಲಿದೆ. ಮತ್ತು ಹಣ್ಣು ಸ್ವತಃ ಮೆಗ್ನೀಸಿಯಮ್ ಪೋಷಕಾಂಶದ ಸಾಧಾರಣ ಮೂಲವಾಗಿದೆ. ಈ ಎರಡೂ ಗುಣಲಕ್ಷಣಗಳು ನಿಮಗೆ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಓಟ್ಸ್ ರವೆ: ಅಕ್ಕಿಯಂತೆಯೇ ಓಟ್ಸ್ ರವೆ ಸಹಾ ಸ್ವಲ್ಪ ಹೆಚ್ಚು ನಾರಿನಂಶ ಹೊಂದಿರುವ ಆಹಾರವಾಗಿದ್ದು ಹೆಚ್ಚಿನ ಕಾರ್ಬೋಹೈಡ್ರೇಟುಗಳನ್ನೂ ಹೊಂದಿದೆ ಮತ್ತು ರಾತ್ರಿ ಮಲಗುವ ಮೊದಲು ಸೇವಿಸಿದಾಗ ಅರೆನಿದ್ರಾವಸ್ಥೆಯನ್ನು ಉಂಟುಮಾಡುತ್ತದೆ ಎಂದು ವರದಿಯಾಗಿದೆ. ಹೆಚ್ಚುವರಿಯಾಗಿ, ಓಟ್ಸ್ ರವೆಯಲ್ಲಿ ಮೆಲಟೋನಿನ್ ರಸದೂತ ಸಮೃದ್ಧವಾಗಿವೆ.

ಅಂತಿಮವಾಗಿ:

ನಿಮ್ಮ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಪಡೆಯುವುದು ಬಹಳ ಮುಖ್ಯ.

ಹಲವಾರು ಆಹಾರಗಳು ಮತ್ತು ಪಾನೀಯಗಳು ನಿದ್ದೆ ಪಡೆಯಲು ಸಹಾಯ ಮಾಡಬಹುದು. ಏಕೆಂದರೆ ಅವು ನಿದ್ರೆಯನ್ನು ನಿಯಂತ್ರಿಸುವ ರಸದೂತಗಳು ಮತ್ತು ಮೆದುಳಿನ ರಾಸಾಯನಿಕಗಳಾದ ಮೆಲಟೋನಿನ್ ಮತ್ತು ಸಿರೊಟೋನಿನ್ ಅನ್ನು ಒಳಗೊಂಡಿರುತ್ತವೆ.

ಕೆಲವು ಆಹಾರಗಳು ಮತ್ತು ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದ ನಿರ್ದಿಷ್ಟ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳಾದ ಮೆಗ್ನೀಸಿಯಮ್ ಮತ್ತು ಮೆಲಟೋನಿನ್ ಇರುತ್ತವೆ, ಅವು ನಿದ್ರೆಯನ್ನು ಹೆಚ್ಚಿಸಲು ನಿದ್ರೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ನಿದ್ರೆಯನ್ನು ಹೆಚ್ಚಿಸುವ ಆಹಾರ ಮತ್ತು ಪಾನೀಯಗಳ ಲಾಭವನ್ನು ಪಡೆಯಲು, ರಾತ್ರಿ ಮಲಗುವ 2-3 ಗಂಟೆಗಳ ಮೊದಲೇ ಅವುಗಳನ್ನು ಸೇವಿಸುವುದು ಉತ್ತಮ. ನಿದ್ರೆಗೆ ಹೋಗುವ ಮೊದಲು ತಕ್ಷಣ ತಿನ್ನುವುದು ಜೀರ್ಣಕಾರಿ ಸಮಸ್ಯೆಗಳಾದ ಆಮ್ಲೀಯ ಹಿಮ್ಮೆಟ್ಟುವಿಕೆಗೆ (acid reflux) ಕಾರಣವಾಗಬಹುದು.

ಒಟ್ಟಾರೆಯಾಗಿ, ನಿದ್ರೆಯನ್ನು ಉತ್ತೇಜಿಸುವಲ್ಲಿ ಆಹಾರಗಳು ಮತ್ತು ಪಾನೀಯಗಳು ಹೊಂದಿರುವ ನಿರ್ದಿಷ್ಟ ಪಾತ್ರವನ್ನು ತೀರ್ಮಾನಿಸಲು ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ, ಆದರೆ ಅವುಗಳ ಬಗ್ಗೆ ಈಗಾಗಲೇ ತಿಳಿದಿರುವ ಪರಿಣಾಮಗಳು ಮಾತ್ರ ಬಹಳ ಭರವಸೆ ನೀಡಿವೆ.

English summary

Best Foods and Drinks to Have Before Bed

Are you not getting sleep properly, Here are list of best foods an drinks to have before bed, read on,
X
Desktop Bottom Promotion