Just In
Don't Miss
- Automobiles
ಸಿಎನ್ಜಿ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದ ಮಾರುತಿ ಸುಜುಕಿ
- News
ಉನ್ನಾವೋ ವೈದ್ಯಕೀಯ ಕಾಲೇಜಿಗೆ 5 ಕೋಟಿ ರೂ ದಂಡ ವಿಧಿಸಿದ ಸುಪ್ರೀಂಕೋರ್ಟ್
- Sports
ಐಎಸ್ಎಲ್: ಮುಂಬೈ ಗೋಲಿನ ಮಳೆಯಲ್ಲಿ ಮುಳುಗಿದ ಒಡಿಶಾ
- Education
University Of Mysore Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Movies
ಬಿಗ್ಬಾಸ್ ಗೆ ಇನ್ನು ನಾಲ್ಕೇ ದಿನ: ಮನೆ ಹೇಗಿದೆ ಗೊತ್ತಾ?
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 24ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಹಾರವನ್ನು ಬೇಗ-ಬೇಗ ನುಂಗಬಾರದು, ನಿಧಾನಕ್ಕೆ ಜಗಿದು ಸೇವಿಸಬೇಕು ಎನ್ನುವುದಕ್ಕೆ ಇದೇ ಕಾರಣಕ್ಕೆ
"ಆಹಾರವನ್ನ ನಿಧಾನವಾಗಿ, ಚೆನ್ನಾಗಿ ಜಗಿದು ಸೇವಿಸಬೇಕು" ಅಂತಾ ಆರೋಗ್ಯ ತಜ್ಞರು ಸಲಹೆ ಮಾಡೋದು ಮಾಮೂಲಿ. ಹಾಗೆ ನಿಧಾನವಾಗಿ ಆಹಾರವನ್ನ ಜಗಿದು ತಿನ್ನೋದರಿಂದ ಆಗುವ ಪ್ರಯೋಜನಗಳೇನೆಂದು ನಿಮಗೆ ತಿಳಿದಿಯೇ ? ಅದರ ಅತ್ಯಂತ ಪ್ರಮುಖ ಪ್ರಯೋಜನಗಳಲ್ಲೊಂದು ಯಾವುದೆಂದರೆ, ನಿಧಾನಗತಿಯಲ್ಲಿ ಆಹಾರವನ್ನ ಸೇವಿಸುವುದರಿಂದ ನಿಮ್ಮ ಹೊಟ್ಟೆಯು ತುಂಬಿರುವುದನ್ನು ಗುರುತಿಸಿಕೊಳ್ಳುವುದಕ್ಕೆ ನಿಮ್ಮ ಶರೀರಕ್ಕೆ ಕಾಲಾವಕಾಶವು ಲಭ್ಯವಾಗುತ್ತದೆ.
ನೀವು ಆಹಾರ ಸೇವನೆಯನ್ನು ಆರಂಭಿಸಿದ ಬಳಿಕ, "ನಿಮ್ಮ ಹೊಟ್ಟೆಯು ತುಂಬಿದೆ" ಎಂಬ ಸೂಚನೆಯನ್ನು ಮೆದುಳು ನಿಮಗೆ ಕಳುಹಿಸುವುದಕ್ಕೆ ಸುಮಾರು 20 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ, ಬಹಳಷ್ಟು ಮಂದಿಯ ಆಹಾರ ಸೇವನೆ 20 ನಿಮಿಷಗಳಿಗಿಂತ ಅದೆಷ್ಟೋ ಮೊದಲೇ ಮುಕ್ತಾಯಗೊಂಡಿರುತ್ತದೆ. ನಿಧಾನವಾಗಿ ಮಾಡುವ ಆಹಾರ ಸೇವನೆಯು ಅಧಿಕ ಸಂತೃಪ್ತ ಭಾವವನ್ನುಂಟು ಮಾಡುತ್ತದೆ. ಈ ಸಂತೃಪ್ತಭಾವವು ಕೇವಲ "ಹೊಟ್ಟೆ ತುಂಬಿತು" ಎಂಬ ಅನಿಸಿಕೆಗಿಂತ ವಿಭಿನ್ನವಾದದ್ದು.
ಸರಿ ಹಾಗಾದರೆ.... ನಿಧಾನವಾಗಿ ಆಹಾರದ ರುಚಿಯನ್ನು ಸವಿಯುತ್ತಾ, ಜಗಿದು ಉಣ್ಣೋದರಿಂದ ಆಗೋ ಪ್ರಯೋಜನಗಳು ಏನೇನು ಅನ್ನೋದರ ಕುರಿತು ಈಗ ಗಮನ ಹರಿಸೋಣ:

ಜೀರ್ಣಕ್ರಿಯೆ ಸುಲಲಿತವಾಗುತ್ತದೆ
ನಿಧಾನಗತಿಯಲ್ಲಿ ಆಹಾರವನ್ನು ಸೇವಿಸುವುದರಿಂದ ಪಚನಕ್ರಿಯೆಯು ಚೆನ್ನಾಗಿ ನೆರವೇರುತ್ತದೆ. ನಿಜ ಹೇಳಬೇಕೆಂದರೆ, ಜೀರ್ಣಕ್ರಿಯೆಯು ಆರಂಭವಾಗೋದು ಬಾಯಿಯಿಂದಲೇ!! ಹಾಗಾಗಿ ಅವಸರವಸರವಾಗಿ ದೊಡ್ಡ ದೊಡ್ಡ ಆಹಾರದ ತುಣುಕುಗಳನ್ನ ಬಾಯಿಯೊಳಗೆ ತುರುಕಿಕೊಂಡು ಮುಕ್ಕಲು ಪ್ರಯತ್ನಿಸಿದಾಗ, ಆಹಾರವು ಸರಿಯಾಗಿ ಜಗಿಯಲ್ಪಡುವುದಿಲ್ಲ. ಹಾಗೆ ಸರಿಯಾಗಿ ಜಗಿಯಲ್ಪಡದೇ ಹೊಟ್ಟೆಯತ್ತ ದೂಡಲ್ಪಟ್ಟ ಆಹಾರವನ್ನ ಸಂಸ್ಕರಿಸಲು ಹೊಟ್ಟೆಗೂ ಕಷ್ಟವಾಗುತ್ತದೆ. ಸರಿಯಾಗಿ ಜಗಿಯಲ್ಪಡದೇ ಹೊಟ್ಟೆಗಿಳಿದ ಆಹಾರವು ಅಜೀರ್ಣಕ್ಕೆ ಕಾರಣವಾಗುವುದರೊಂದಿಗೆ ಇತರ ಗಂಭೀರ ಸ್ವರೂಪದ ಉದರ ಸಂಬಂಧೀ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ.
ಆಹಾರವನ್ನು ಸಣ್ಣ ಸಣ್ಣ ತುಣುಕುಗಳನ್ನಾಗಿಸಬೇಕೆಂದರೆ, ಆಹಾರವನ್ನು ನಿಧಾನವಾಗಿಯೇ ಸೇವಿಸಬೇಕು!
ಈ ಕುರಿತಾದ ಹೆಚ್ಚಿನ ಸಂಶೋಧನೆಗಳು ಸಾರುವುದೇನೆಂದರೆ, ಆಹಾರವನ್ನು ನಿಧಾನವಾಗಿ ಸೇವಿಸುವುದರಿಂದ ನೀವು ಒಳತೆಗೆದುಕೊಳ್ಳುವ ಆಹಾರದ ಪ್ರಮಾಣ ಕಡಿಮೆಯಾಗುತ್ತದೆ. ವಿಶೇಷವಾಗಿ ನೀವು ತೂಕನಷ್ಟವನ್ನು ಹೊಂದಲು ಪ್ರಯತ್ನಿಸುತ್ತಿದ್ದಲು ಇದು ಅತ್ಯಂತ ಪ್ರಯೋಜನಕಾರಿ.

ಶರೀರವನ್ನು ಜಲಪೂರಣವಾಗಿರಿಸಿಕೊಳ್ಳುವುದಕ್ಕೆ ನೆರವಾಗುತ್ತದೆ
ಶರೀರವು ಯೋಗ್ಯ ರೀತಿಯಲ್ಲಿ ಜಲಪೂರಣಗೊಂಡಿದ್ದಲ್ಲಿ, ಅದು ಶರೀರದ ದ್ರವಾಂಶವನ್ನ ಸಮತೋಲನದಲ್ಲಿರಿಸಿಕೊಳ್ಳುವುದಕ್ಕೆ ನೆರವಾಗುತ್ತದೆ, ಮಾಂಸಖಂಡಗಳಿಗೆ ಶಕ್ತಿ ತುಂಬುತ್ತದೆ, ನಮ್ಮ ಮೂತ್ರಪಿಂಡಗಳು ಹಾಗೂ ಕರುಳುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಪ್ರಚೋದಿಸುತ್ತದೆ, ಹಾಗೂ ನಮ್ಮ ತ್ವಚೆಯ ಸೌಂದರ್ಯವನ್ನು ಸುಧಾರಿಸುತ್ತದೆ. ಮಂದಗತಿಯಲ್ಲಿ ಆಹಾರ ಸೇವನೆಯ ಒಂದು ಪ್ರಯೋಜನವೇನೆಂದರೆ, ಅದು ಊಟ ಮಾಡುವಾಗ ನೀರನ್ನು ಹೆಚ್ಚು ಕುಡಿಯುವಂತೆ ಮಾಡುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ಆಹಾರವನ್ನು ಬೇಗ ಬೇಗನೇ ಮುಕ್ಕುವುದರಿಂದ ಮೊದಲು ತೊಂದರೆಗೀಡಾಗುವುದು ನಿಮ್ಮ ಜೀರ್ಣಾಂಗವ್ಯೂಹ. ಜೊತೆಗೆ, ಬೇಗ ಬೇಗನೇ ಊಟ ಮಾಡುವುದರಿಂದ, ಊಟವು ಬೇಗನೇ ಖಾಲಿಯಾಯಿತೆಂದು ಅನಿಸತೊಡಗುತ್ತದೆ ಹಾಗೂ ಈ ಅನಿಸಿಕೆಯೇ ನಿಮ್ಮನ್ನು ಇನ್ನಷ್ಟು, ಮತ್ತಷ್ಟು ಆಹಾರ ಸೇವಿಸುವುದಕ್ಕೆ ಪ್ರಚೋದಿಸುತ್ತದೆ. ಅಥವಾ "ಹೊಟ್ಟೆ ತುಂಬಿತು" ಅಂತಾ ಮೆದುಳು ಸೂಚನೆಯನ್ನು ಕೊಡುವುದಕ್ಕೆ ಮುಂಚೆಯೇ ನಿಮ್ಮ ಆಹಾರ ಸೇವನೆ ಮುಗಿದಿರುತ್ತದೆ ಹಾಗೂ ತುಸು ಹೊತ್ತಿನ ಬಳಿಕ ಒಮ್ಮಿಂದೊಮ್ಮೆಲೇ "ಊಟ ವಿಪರೀತವಾಯಿತೆಂಬ" ಭಾವವನ್ನು ಮೂಡಿಸಿ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ.

ಊಟವನ್ನು ಗಬಗಬನೇ ಮುಕ್ಕುವುದರಿಂದ ಆಗುವ ಅನಾನುಕೂಲಗಳೇನೇನು ?
ತೂಕಗಳಿಕೆ: ಹೆಚ್ಚಿನ ಸಂಶೋಧನೆಗಳು ಒಮ್ಮತಕ್ಕೆ ಬರುವ ತೀರ್ಮಾನದ ಪ್ರಕಾರ, ಗಬಗನೇ ಆಹಾರವನ್ನು ಮುಕ್ಕುವ ಅಭ್ಯಾಸವುಳ್ಳವರು ಮೆಲ್ಲನೇ ಉಣ್ಣುವವರಿಗಿಂತ ಬೇಗನೇ ದೇಹ ತೂಕವನ್ನು ಗಳಿಸಿಕೊಳ್ಳುತ್ತಾರೆ. ತೂಕನಷ್ಟವನ್ನು ಹೊಂದುವುದು ಅಥವಾ ಆರೋಗ್ಯಕರವಾದ ತೂಕವನ್ನು ಕಾಪಿಟ್ಟುಕೊಳ್ಳುವ ಇರಾದೆ ನಿಮ್ಮದಾದಲ್ಲಿ ಊಟ ಮಾಡುವಾಗ ಗಡಿಬಿಡಿ ಬೇಡ.

ಅವ್ಯವಸ್ಥಿತ ರೀತಿಯ ಆಹಾರ ಸೇವನೆ ಹಾಗೂ ಗಡಿಬಿಡಿಯ ಆಹಾರ ಸೇವನೆ
ಅತೀ ಅವಸರವಸರವಾಗಿ ಉಣ್ಣುವುದೇ ಸಿಕ್ಕಾಪಟ್ಟೆ ಊಟವನ್ನು ಮಾಡುವುದಕ್ಕೆ ಕಾರಣವಾಗುತ್ತದೆ. ಹೀಗೆ ಒತ್ತಡಕ್ಕೊಳಗಾದವರಂತೆ ಉಣ್ಣುವ ಮಂದಿ ಸಾಮಾನ್ಯವಾಗಿ ತಾವು ಸೇವಿಸುವ ಆಹಾರದ ಪ್ರಮಾಣದ ಕುರಿತಂತೆ ತಮಗೆ ಯಾವುದೇ ನಿಯಂತ್ರಣವಿಲ್ಲವೆಂಬ ಭಾವವನ್ನು ಹೊಂದಿರುತ್ತಾರೆ. ನೋಡುಗರ ಕಣ್ಣಿಗೂ ರಾಚುವಂತೆ ನಿಮಗರಿವಿಲ್ಲದಂತೆಯೇ ನೀವು ಸಿಕ್ಕಾಪಟ್ಟೆ ಆಹಾರವನ್ನು ಸೇವಿಸುತ್ತಿದ್ದೀರಿ ಅಂತಾ ಅನಿಸೋಕೆ ಶುರುವಾದ ಕೂಡಲೇ ಆಹಾರವನ್ನ ಮುಕ್ಕುವ ವೇಗಕ್ಕೆ ಕಡಿವಾಣ ಹಾಕಿರಿ.

ಆಹಾರವನ್ನು ಪ್ರಜ್ಞಾಪೂರ್ವಕವಾಗಿ ಸೇವಿಸೋದಕ್ಕೆ ಇಲ್ಲಿವೆ ಕೆಲವು ಸಲಹೆಗಳು:
ಪ್ರಶಾಂತವಾದ, ಮನಸ್ಸನ್ನು ಕಡಿಮೆ ಪ್ರಮಾಣದಲ್ಲಿ ವಿಚಲಿತಗೊಳಿಸುವಂತಹ ಪರಿಸರದಲ್ಲಿ ಕುಳಿತು ಊಟ ಮಾಡಿರಿ. ವಾಹನವನ್ನು ಚಲಾಯಿಸುವಾಗ, ದೂರದರ್ಶನವನ್ನು ವೀಕ್ಷಿಸುತ್ತಾ, ಮೊಬೈಲ್ ನಲ್ಲಿಯೇ ದೃಷ್ಟಿಯನ್ನಿರಿಸಿಕೊಂಡು ಆಹಾರ ಸೇವಿಸಲು ಹೋಗಬೇಡಿ. ನಿಮ್ಮ ಗಮನ ನಿಮ್ಮ ಊಟದ ತಾಟಿನ ಮೇಲಿರಲಿ.
ಜಗಿಯಲು ಹೆಚ್ಚು ಸಮಯವನ್ನು ಬೇಡುವಂತಹ ತಾಜಾ ಹಣ್ಣುಗಳು ಹಾಗೂ ತರಕಾರಿಗಳಂತಹ ಅಧಿಕ ನಾರಿನಂಶವಿರುವ ಆಹಾರ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಿರಿ.
ಆಹಾರದ ತುಣುಕುಗಳನ್ನು ಜಗಿಯುವಾಗ ನಡುನಡುವೆ ನಿಮ್ಮ ತಟ್ಟೆಯನ್ನು ಕೆಳಗಿರಿಸಿರಿ. ಒಂದು ಕ್ಷಣ ತಡೆಯಿರಿ, ಉಸಿರಾಟ ನಡೆಸಿರಿ. ಇತರರೊಂದಿಗೆ ನೀವು ಊಟ ಮಾಡುತ್ತಿದ್ದಲ್ಲಿ, ಕೆಲಕ್ಷಣಗಳ ಕಾಲ ಹರಟುತ್ತಾ ನಿಮ್ಮ ಊಟವನ್ನು ಆನಂದಿಸಿರಿ.
"ಪ್ರತೀ ತುತ್ತಿಗೂ ಕನಿಷ್ಟ ಇಂತಿಷ್ಟು ಬಾರಿ ಜಗಿಯುವೆ" ಎಂದು ನಿಮಗೆ ನೀವೇ ಗುರಿ ಹಾಕಿಕೊಳ್ಳಿರಿ. ಮೊದಮೊದಲು "ಇದೊಂಥರಾ ವಿಚಿತ್ರ" ಎಂದು ಅನಿಸಬಹುದು. ಆದರೆ, ಹಾಗೆ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಪಚನಕ್ರಿಯೆಯೆಲ್ಲಿ ಸುಧಾರಣೆಯಾಗುತ್ತದೆ ಹಾಗೂ ನಿಮ್ಮ ಮೆದುಳು ನಿಮಗೆ ಹೊಟ್ಟೆ ತುಂಬಿತೆನ್ನುವ ಸೂಚನೆಗಳನ್ನು ನೀಡಲಾರಂಭಿಸುತ್ತದೆ.
ನಿಧಾನ ಆಹಾರ ಸೇವಿಸುವ ಇನ್ಯಾರಾದರೂ ಒಬ್ಬರನ್ನು ಕಂಡುಕೊಳ್ಳಿ ಹಾಗೂ ನೀವು ಅವರ ವೇಗಕ್ಕೆ ಸರಿಸಮನಾಗಿ ಉಣ್ಣಲು ಪ್ರಯತ್ನಿಸಿರಿ.
ಆಹಾರ ಸೇವಿಸುವ ಸಮಯವನ್ನು ಒಂದು ಕಟ್ಟುಪಾಡಿಗೆ ಒಳಪಡಿಸಿ. ಸಣ್ಣ ಸಣ್ಣ ಊಟವಾದರೆ, ಎರಡು ಊಟಗಳ ನಡುವೆ ಕನಿಷ್ಟ 20 ರಿಂದ 30 ನಿಮಿಷಗಳವರೆಗೆ ಅಂತರವಿರಬೇಕು. ನಿಮ್ಮ ಊಟದ ಸಮಯಗಳನ್ನ ಸರಿಯಾಗಿ ಯೋಜಿಸಿಕೊಳ್ಳಿ ಹಾಗೂ ಊಟದ ಅವಧಿಯಲ್ಲಿ ಮನಸ್ಸನ್ನು ವಿಚಲಿತಗೊಳಿಸುವ ವಿಷಯಗಳಿಂದ ದೂರವಿರಿ.