For Quick Alerts
ALLOW NOTIFICATIONS  
For Daily Alerts

ಬೆಚ್ಚಗಿನ ಉಪ್ಪುನೀರಿಂದ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ಗೊತ್ತಾ?

|

ದೇಹದ ಆರೋಗ್ಯ ಸ್ವಾಸ್ಥವಾಗಿರಲು ನಿತ್ಯ ಕನಿಷ್ಠ ಐದು ಲೀಟರ್‌ ನೀರು ಕುಡಿಯಬೇಕು ಎಂಬುದು ತಿಳಿದಿರುವ ವಿಷಯ. ಆದರೆ ಈ ನೀರನ್ನು ಸ್ವಲ್ಪ ಕಾಯಿಸಿ ಅದಕ್ಕೆ ಕೊಂಚ ಉಪ್ಪು ಬೆರೆಸಿ ಕುಡಿಯುವುದು ಅತ್ಯುತ್ತಮ ಅಭ್ಯಾಸ. ಇದರ ಫಲಿತಾಂಶವನ್ನು ಕೇವಲ ಒಂದೇ ವಾರದಲ್ಲಿ ನೀವೆ ಸ್ವತಃ ಕಂಡುಕೊಳ್ಳಬಹುದು. ಅದರಲ್ಲೂ ನಿರ್ಜಲೀಕರಣ (ಡೀಹೈಡ್ರೇಷನ್)ದಂಥ ಸಮಸ್ಯೆಗಳಿಂದ ಬಳಲುವರಿಗೆ ಬೆಚ್ಚಗಿನ ಉಪ್ಪು ನೀರು ಸಂಜೀವಿಯಂತೆ.

Benefits Of Drinking Warm Water With Salt For Health

ನೂರಾರು ವರ್ಷಗಳ ಹಿಂದೆಯೇ ಉಪ್ಪುನೀರು ದೇಹಕ್ಕೆ ಸಾಕಷ್ಟು ಆರೋಗ್ಯ ಲಾಭಗಳನ್ನು ನೀಡುತ್ತದೆ ಎಂಬುದನ್ನು ತಿಳಿಯಲಾಗಿತ್ತು. ಆದರೂ, ಹಿಂದಿನ ಎಲ್ಲಾ ನಂಬಿಕೆಗಳನ್ನು ನಂಬದ ಕೆಲವರು ಇದೆಲ್ಲಾ ಮಿಥ್ಯೆಯಷ್ಟೇ ಎಂದು ಭಾವಿಸಿದ್ದರು. ಆದರೆ ಕೆಲವು ಸಂಶೋಧನೆಗಳು ಇಂಥಾ ನಮ್ಮ ಯೋಚನೆಗಳು ತಪ್ಪು ಎಂದು ಸಾಧಿಸಿ ತೋರಿಸಿದೆ. ನಮ್ಮ ದೇಹದ ಆರೋಗ್ಯಕ್ಕೆ ಬೆಚ್ಚಗಿನ ಉಪ್ಪುನೀರು ತುಂಬಾ ಒಳ್ಳೆಯದು ಎಂದು ಯಶಸ್ವಿಯಾಗಿ ಸಾಬೀತುಪಡಿಸಿದೆ.

ನಿತ್ಯ ಕನಿಷ್ಠ ಒಂದು ಲೋಟ ಬೆಚ್ಚಗಿನ ಉಪ್ಪು ನೀರು, ಅದರಲ್ಲೂ ರಾತ್ರಿ ಮಲಗುವ ಮುನ್ನ ಈ ನೀರನ್ನು ಸೇವಿಸುವುದು ಅತ್ಯುತ್ತಮ ಅಭ್ಯಾಸ. ಇದರಿಂದ ರಾತ್ರಿಯಿಡೀ ಅತ್ಯುತ್ತಮವಾಗಿ ದೇಹದ ಚಯಾಪಚಯ ಕ್ರಿಯೆ ನಡೆಸಲು ಇದು ಸಹಕಾರಿ.

ಹಾಗಿದ್ದರೆ ಯಾವೆಲ್ಲಾ ಸಮಸ್ಯೆಗಳಿಗೆ ಬೆಚ್ಚಗಿನ ಉಪ್ಪುನೀರು ಆರೋಗ್ಯ ಸಂಜೀವಿನಿ ಮುಂದೆ ತಿಳಿಯೋಣ:

1. ನಿರ್ಜಲೀಕರಣ ಇಲ್ಲವಾಗಿಸಲು

1. ನಿರ್ಜಲೀಕರಣ ಇಲ್ಲವಾಗಿಸಲು

ಈ ನೀರನ್ನು ಕುಡಿಯುವುದರಿಂದ ಮುಖ್ಯ ಪ್ರಯೋಜನವೆಂದರೆ ನೀರಿನ ಅಂಶವನ್ನು ದೇಹದ ಅಗತ್ಯ ಸರ್ವಾಂಗಕ್ಕೂ ಪೂರೈಸಲು ಸಹಾಯ ಮಾಡುತ್ತದೆ ಮತ್ತು ನಿರ್ಜಲೀಕರಣವನ್ನು ತಪ್ಪಿಸುತ್ತದೆ. ಮಾನವ ದೇಹವು ಹೆಚ್ಚಾಗಿ ನೀರಿನಿಂದ ಕೂಡಿರುತ್ತದೆ, ಆದ್ದರಿಂದ, ಹೆಚ್ಚಿನ ನೀರನ್ನು ಸೇವಿಸುವುದರಿಂದ ದೇಹವು ದಣಿಯುವುದಿಲ್ಲ ಮತ್ತು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುತ್ತದೆ. ಎಳನೀರಿನಲ್ಲಿರುವ ಬಹುತೇಕ ಪೋಷಕಾಂಶಗಳನ್ನು ಬೆಚ್ಚಗಿನ ಉಪ್ಪು ನೀರು ಹೊಂದಿದೆ ಎಂದರೆ ನೋವು ನಂಬಲೇಬೇಕು.

2. ಜೀವಸತ್ವಗಳು ಮತ್ತು ಖನಿಜ

2. ಜೀವಸತ್ವಗಳು ಮತ್ತು ಖನಿಜ

ಬೆಚ್ಚಗಿನ ಉಪ್ಪುನೀರು ದೇಹಕ್ಕೆ ಅಗತ್ಯವಿರುವ ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಸರಬರಾಜು ಮಾಡುತ್ತದೆ. ಆದ್ದರಿಂದ, ಇದು ದೇಹಕ್ಕೆ ಪೋಷಕಾಂಶಗಳನ್ನು ಪೂರೈಸುವ ಇನ್ನೊಂದು ಮಾರ್ಗವಾಗಿದೆ. ಇನ್ನು ಮುಖ್ಯವಾಗಿ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ ಮತ್ತು ಕಾಯಿಲೆ ಬರುವ ಯಾವುದೇ ಸಾಧ್ಯತೆಯನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

3. ಅಯಾನುಗಳ ಮೂಲ

3. ಅಯಾನುಗಳ ಮೂಲ

ಉಪ್ಪು ಕೂಡ ಸಾಕಷ್ಟು ಅಯಾನುಗಳನ್ನು ಹೊಂದಿರುತ್ತದೆ. ಇದು ದೇಹದ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದ್ದು ಈ ಅಂಶ ನಿಮ್ಮನ್ನು ದಣಿದಂತೆ ನೋಡಿಕೊಳ್ಳುತ್ತದೆ. ಒಂದು ವಾರದವರೆಗೆ ಉಪ್ಪುನೀರನ್ನು ಸೇವಿಸುವುದರಿಂದ ನಿಮ್ಮ ತ್ರಾಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಅನಾರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು.

 4. ಜೀರ್ಣಕ್ರಿಯೆಗೆ ಸಹಕಾರಿ

4. ಜೀರ್ಣಕ್ರಿಯೆಗೆ ಸಹಕಾರಿ

ಪ್ರತಿ ದಿನ ಒಂದು ವಾರ ಬೆಚ್ಚಗಿನ ಉಪ್ಪುನೀರನ್ನು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ಹೇಗೆ ಸುಧಾರಿಸುತ್ತದೆ ಎಂಬುದನ್ನು ನೀವೆ ಪರಿಶೀಲಿಸಿಕೊಳ್ಳಬಹುದು. ಇದು ಸ್ವಯಂಚಾಲಿತವಾಗಿ ಜೀರ್ಣಾಂಗ ವ್ಯವಸ್ಥೆಯ ಕ್ರಿಯೆಯನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯಂತಹ ಯಾವುದೇ ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸುತ್ತದೆ.

5. ಒತ್ತಡ ಕಡಿಮೆ ಮಾಡುತ್ತದೆ

5. ಒತ್ತಡ ಕಡಿಮೆ ಮಾಡುತ್ತದೆ

ಉಪ್ಪುನೀರು ಯಾವುದೇ ಒತ್ತಡಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಂಬಾ ಕೆಲಸದ ಒತ್ತಡ ಅಥವಾ ಕಠಿಣ ಕೆಲಸಗಳನ್ನು ನಿರ್ವಹಿಸಿದಾಗ ಒಂದು ಲೋಟ ಉಪ್ಪುನೀರು ಸೇವಿಸಿ ಸ್ವಲ್ಪ ವಿಶ್ರಾಂತಿ ಮಾಡಿ. ಇದರಿಂದ ಮನಸ್ಸಿಗೆ ನೆಮ್ಮದಿ ಮತ್ತು ದೈಹಿಕವಾಗಿ ತಾಜಾತನ ಅನುಭವಿಸಲು ಸಹಕಾರಿ.

6. ಉತ್ತಮ ನಿದ್ರೆಗೆ

6. ಉತ್ತಮ ನಿದ್ರೆಗೆ

ರಾತ್ರಿ ಮಲಗುವ ಮುನ್ನ ಈ ನೀರನ್ನು ಸೇವಿಸುವುದರಿಂದ ನಿಮ್ಮ ನಿದ್ರಾಭಂಗ, ತಡವಾಗಿ ನಿದ್ರೆ ಬರುವುದು ಇಂಥಾ ಸಮಸ್ಯೆಗಳು ಇಲ್ಲವಾಗುತ್ತದೆ. ಸುಖವಾಗಿ ನಿದ್ರೆ ಮಾಡಲು ಸಹಕಾರಿಯಾಗುತ್ತದೆ.

7. ಉರಿಯೂತ ವಿರೋಧಿ

7. ಉರಿಯೂತ ವಿರೋಧಿ

ಉಪ್ಪಿನಲ್ಲಿ ಖನಿಜಗಳಿದ್ದು ಉರಿಯೂತವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಉಪ್ಪುನೀರು ಉರಿಯೂತ ನಿವಾರಕವಾಗಿ ಸಹ ಕೆಲಸ ಮಾಡುತ್ತದೆ ಮತ್ತು ಸಂಬಂಧಿತ ತೊಂದರೆಗಳು, ನೋವನ್ನು ನಿವಾರಿಸುತ್ತದೆ.

8. ಸಂಧಿವಾತವನ್ನು ತಪ್ಪಿಸಿ

8. ಸಂಧಿವಾತವನ್ನು ತಪ್ಪಿಸಿ

ಸಾಕಷ್ಟು ಜನರು ಸಂಧಿವಾತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದು ವಯಸ್ಸಾದವರಿಗೆ ಮಾತ್ರ ಸೀಮಿತವಾಗದೇ ಇತ್ತೀಚೆಗೆ ಕಿರಿಯರಿಗೂ ಕಾಡುವ ಸಮಸ್ಯೆಯಾಗಿದೆ. ಸಂಧಿವಾತವನ್ನು ಅನುಭವಿಸುವ ಯಾವುದೇ ಸಾಧ್ಯತೆಯನ್ನು ತಪ್ಪಿಸಲು ಬೆಚ್ಚಗಿನ ಉಪ್ಪುನೀರು ಪ್ರಯೋಜನಕಾರಿಯಾಗಿದೆ. ಇದು ನೋವನ್ನು ನಿವಾರಿಸುತ್ತದೆ ಮತ್ತು ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ.

9. ನಿರ್ವಿಶೀಕರಣ

9. ನಿರ್ವಿಶೀಕರಣ

ದೇಹದ ನೈಸರ್ಗಿಕ ನಿರ್ವಿಶೀಕರಣವನ್ನು ನಿರ್ವಹಿಸಲು ಉಪ್ಪುನೀರು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಇದು ದೇಹದೊಳಗಿನ ಎಲ್ಲಾ ಅನಗತ್ಯ ಜೀವಾಣುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಶುದ್ಧಗೊಳಿಸುತ್ತದೆ.

10. ಆರೋಗ್ಯಕರ ಚರ್ಮ

10. ಆರೋಗ್ಯಕರ ಚರ್ಮ

ರೇಷ್ಮೆಯಂತಹ ನಯವಾದ ಚರ್ಮವನ್ನು ಹೊಂದಲು ನಿತ್ಯ ನೀವು ತಪ್ಪದೇ ಬೆಚ್ಚಗಿನ ಉಪ್ಪುನೀರು ಸೇವಿಸಲೇಬೇಕು. ಏಕೆಂದರೆ ಬಹಳಷ್ಟು ನೀರು ಸೇವಿಸುವುದರಿಂದ ಚರ್ಮವನ್ನು ನೈಸರ್ಗಿಕವಾಗಿಯೇ ಮಾಯಿಶ್ಚರೈಸ್‌ ಮಾಡುತ್ತದೆ. ಆದ್ದರಿಂದ ಚರ್ಮ ಸಹಜವಾಗಿಯೇ ಆರೋಗ್ಯಕರವಾಗಿ ಹಾಗೂ ಹೊಳಪನ್ನು ಹೊಂದುವಂತೆ ಮಾಡುತ್ತದೆ.

English summary

Health Benefits Of Drinking Warm Water With Salt in Kannada

Here we are discussing about Benefits Of Drinking Warm Water With Salt For Health. some research break this thought and successfully prove that warm salt water is good to manage the body health.Read more.
X
Desktop Bottom Promotion