For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ದೇಹ ತಂಪಾಗಿಡಲು ಆರ್ಯುರ್ವೇದ ಟಿಪ್ಸ್

|

ಬೇಸಿಗೆಯ ದಗೆ ಹೆಚ್ಚುತ್ತಿದೆ... ಸೆಕೆ ಅಧಿಕವಾಗುತ್ತಿದ್ದಂತೆ ದೇಹದ ಉಷ್ಣತೆ ಕೂಡ ಹೆಚ್ಚಾಗುವುದು. ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಮೂತ್ರ ಉರಿ, ಮೈಯಲ್ಲಿ ಬೊಬ್ಬೆ ಮುಂತಾದ ಸಮಸ್ಯೆ ಕಂಡು ಬರುವುದು. ಆದ್ದರಿಂದ ಬೇಸಿಗೆಯಲ್ಲಿ ಮೈಯನ್ನು ತಂಪಾಗಿ ಇಡಬೇಕು.

Ayurvedic Tips To Keep Cool In Summer; Stay Healthy in Kannada

ಬೇಸಿಗೆ ಎಂದ ಪಿತ್ತದ ಕಾಲವಾಗಿದೆ. ದೇಹದಲ್ಲಿ ಉಷ್ಣತೆ ಕಾಪಾಡದಿದ್ದರೆ ಪಿತ್ತ ದೋಷ ಉಂಟಾಗುವುದು. ಈ ಉಷ್ಣತೆಯ ವಿರುದ್ಧ ನಿಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ ಆಹಾರ ಸಹಾಯ ಮಾಡುತ್ತೆ. ಈರುಳ್ಳಿ, ಸೊಪ್ಪು, ಹಣ್ಣುಗಳ ಸೇವನೆ, ಸಾಕಷ್ಟು ನೀರು ಕುಡಿಯುವುದು ಇವೆಲ್ಲಾ ಬೇಸಿಗೆ ಕಾಲದಲ್ಲಿ ನಿಮ್ಮ ದೇಹ ತಂಪಾಗಿಡಲು ಸಹಕಾರಿ.

ನಾವಿಲ್ಲ ಬೇಸಿಗೆ ಕಾಲದಲ್ಲಿ ನಿಮ್ಮ ದೇಹ ತಂಪಾಗಿಡಲು ಆಯುರ್ವೇದ ನೀಡಿರುವ ಟಿಪ್ಸ್ ನೀಡಿದ್ದೇವೆ ನೋಡಿ:

ಪಿತ್ತ ಕಡಿಮೆ ಮಾಡುವ ಆಹಾರ ಸೇವಿಸಿ

ಪಿತ್ತ ಕಡಿಮೆ ಮಾಡುವ ಆಹಾರ ಸೇವಿಸಿ

ನೀವು ದೇಹನ್ನು ತಂಪಾಗಿಸುವ, ಸೆಕೆಯಿಂದ ಸ್ವಲ್ಪ ರಿಲೀಫ್‌ ನೀಡುವ ಆಹಾರ ಸೇವಿಸಬೇಕು, ಕಲ್ಲಂಗಡಿ ಹಣ್ಣು, ಪಿಯರ್ಸ್, ಸೇಬು, ಪ್ಲಮ್, ಬೆರ್ರಿ ಹಣ್ಣುಗಳು, ಬ್ರೊಕೋಲಿ, ಸೊಪ್ಪು, ಮೊಳಕೆ ಬರಿಸಿದ ಹೆಸರು ಕಾಳು ಈ ರೀತಿಯ ಆಹಾರ ಸೇವಿಸಿ.

ಮೈ ಉಷ್ಣತೆ ಹೆಚ್ಚಿಸುವ ಆಹಾರ ಸೇವಿಸಬೇಡಿ

ಮೈ ಉಷ್ಣತೆ ಹೆಚ್ಚಿಸುವ ಆಹಾರ ಸೇವಿಸಬೇಡಿ

ನಿಮ್ಮ ದೇಹದ ಉಷ್ಣತೆ ಹೆಚ್ಚಿಸುವ ಆಹಾರ ಸೇವಿಸದಿರುವುದು ಒಳ್ಳೆಯದು. ಅದರಲ್ಲೂ ಹುಳಿ ಆಹಾರ ಪದಾರ್ಥಗಳನ್ನು ದೂರವಿಡಿ. ಉದಾಹರಣೆಗ ಸಿಟ್ರಸ್ ಇರುವ ಹಣ್ಣುಗಳು, ಹುಳಿಯಾದ ಟೊಮೆಟೊ, ಬೆಳ್ಳುಳ್ಳಿ, ಮೆಣಸು, ಟೊಮೆಟೊ, ಚೀಸ್‌ ಇವೆಲ್ಲಾ ಮೈ ಉಷ್ಣತೆ ಹೆಚ್ಚಿಸುತ್ತದೆ. ಈ ಸಮಯದಲ್ಲಿ ಸಲಾಡ್‌ ತಿನ್ನುವುದು ಒಳ್ಳೆಯದು. ಚಿಕನ್ ಸೇವನೆ ಕಮ್ಮಿ ಮಾಡಿ.

ಸರಿಯಾದ ಸಮಯಕ್ಕೆ ಊಟ ಮಾಡಿ

ಸರಿಯಾದ ಸಮಯಕ್ಕೆ ಊಟ ಮಾಡಿ

ನಿಮಗೆ ತುಂಬಾ ಹಸಿದಾಗ ತಿನ್ನಬೇಕು, ಮಧ್ಯಾಹ್ನ ಸರಿಯಾದ ಹೊತ್ತಿನಲ್ಲಿ ಊಟ ಮಾಡಿ. ಇಲ್ಲದಿದ್ದರೆ ಪಿತ್ತದೋಷ ಉಂಟಾಗಿ ತೊಂದರೆ ಉಂಟಾಗುವುದು.

ತೆಂಗಿನೆಣ್ಣೆ ಮೈಗೆ ಹಚ್ಚಿ

ತೆಂಗಿನೆಣ್ಣೆ ಮೈಗೆ ಹಚ್ಚಿ

ಆಯುರ್ವೇದ ಪ್ರಕಾರ ನೀವು ಸ್ನಾನ ಮಾಡುವ ಮೊದಲು ತೆಂಗಿನೆಣ್ಣೆ ಮೈಗೆ ಹಚ್ಚಿದರೆ ಮೈ ತಂಪಾಗುವುದು. ಇದರಿಂದ ತ್ವಚೆಯೂ ಮೃದುವಾಗುವುದು.

ಬಿಸಿ ಪಾನೀಯ ಅಥವಾ ನೀರು ಕುಡಿಯುವುದು ಕಡಿಮೆ ಮಾಡಿ

ಬಿಸಿ ಪಾನೀಯ ಅಥವಾ ನೀರು ಕುಡಿಯುವುದು ಕಡಿಮೆ ಮಾಡಿ

ಬಿಸಿ ಬಿಸಿ ಕಾಫಿ, ನೀರು ಕುಡಿಯುವುದು ಕಡಿಮೆ ಮಾಡಿ. ಬದಲಿಗೆ ಕುದಿಸಿ ಆರಿಸಿದ ನೀರು ಕುಡಿಯಿರಿ. ಇನ್ನು ಮಜ್ಜಿಗೆ ಮಾಡಿ ಕುಡಿಯಿರಿ.

ಹಗಲು ಹೊತ್ತಿನಲ್ಲಿ ವ್ಯಾಯಾಮ ಬೇಡ

ಹಗಲು ಹೊತ್ತಿನಲ್ಲಿ ವ್ಯಾಯಾಮ ಬೇಡ

ವ್ಯಾಯಾಮವನ್ನು ಮುಂಜಾನೆ ಮಾಡುವುದು ಒಳ್ಳೆಯದು. ಈ ಸಮಯದಲ್ಲಿ ವಾತಾವರಣ ತಂಪಾಗಿ ಇರುತ್ತದೆ. ಇನ್ನು ಹಗಲು ಹೊತ್ತಿನಲ್ಲಿ ವ್ಯಾಯಾಮ ಮಾಡಲು ಹೋಗಬೇಡಿ. ಅಲ್ಲದೆ ಹೊರಗಡೆ ಉರಿ ಬಿಸಿಲಿನಲ್ಲಿ ಕೆಲಸ ಮಾಡುವ ಬದಲು ಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಮಾಡುವುದು ಒಳ್ಳೆಯದು.

ತುಂಬಾ ತಣ್ಣನೆಯ ನೀರು ಕುಡಿಯಬೇಡಿ

ತುಂಬಾ ತಣ್ಣನೆಯ ನೀರು ಕುಡಿಯಬೇಡಿ

ಬೇಸಿಗೆಯಲ್ಲಿ ತಣ್ಣನೆಯ ಪಾನೀಯ ಕುಡಿಯಬೇಕೆನಿಸುವುದು ಸಹಜ. ಆದರೆ ಐಸ್ ವಾಟರ್ ಅಥವಾ ಪಾನೀಯ ಕುಡಿಯುವುದು ಒಳ್ಳೆಯದಲ್ಲ. ಇದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು. ಅಲ್ಲದೆ ದೇಹದಲ್ಲಿ ಕಶ್ಮಲ ಉಂಟಾಗುತ್ತದೆ. ಆದ್ದರಿಂದ ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುವುದು, ಐಸ್‌ ಹಾಕಿದ ಜ್ಯೂಸ್‌ ಕುಡಿಯುವುದು ಜೀರ್ಣಕ್ರಿಯೆಯ ದೃಷ್ಟಿಯಿಂದ ಒಳ್ಳೆಯದಲ್ಲ.

English summary

Ayurvedic Tips To Keep Cool In Summer; Stay Healthy in Kannada

Ayurvedic Tips To Keep Cool In Summer, Have a look...
X
Desktop Bottom Promotion