For Quick Alerts
ALLOW NOTIFICATIONS  
For Daily Alerts

ನೀವು ಅನುಸರಿಸಲೇಬೇಕಾದ ಆಯುರ್ವೇದದ ಕೆಲವು ಜೀವನ ಕ್ರಮಗಳು

|

ಆಯುರ್ವೇದ ಎನ್ನುವುದು ಜೀವನದ ವಿಜ್ಞಾನ ಮತ್ತು ಯಾವುದೇ ರೀತಿಯ ಕಾಯಿಲೆಗಳನ್ನು ನಿವಾರಣೆ ಮಾಡಲು ಇರುವಂತಹ ತುಂಬಾ ನೈಸರ್ಗಿಕ ವಿಧಾನವಾಗಿದೆ. ಇಂದಿನ ದಿನಗಳಲ್ಲಿ ಆಯುರ್ವೇದವನ್ನು ವಿಶ್ವದೆಲ್ಲೆಡೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಈ ವಿಜ್ಞಾನವು ಅದ್ಭುತವಾದ ಪರಿಣಾಮವನ್ನು ಕೂಡ ನೀಡುತ್ತಲಿದೆ. ಜನರು ಹಿಂದಿನಿಂದಲೂ ಗಿಡಮೂಲಿಕೆ ಹಾಗೂ ಬೇರುಗಳನ್ನು ಬಳಸಿಕೊಂಡು ಔಷಧಿ ತಯಾರಿ ಮಾಡಿಕೊಂಡು ಅದರಿಂದ ಆರೋಗ್ಯವಂತ ಜೀವನ ನಡೆಸುತ್ತಿದ್ದರು. ದೈನಂದಿನ ಜೀವನದಲ್ಲಿ ಆಯುರ್ವೇದವನ್ನು ಬಳಸಿಕೊಳ್ಳುವ ಬಗ್ಗೆ ತಜ್ಞರು ನಮಗೆ ಇಲ್ಲಿ ತುಂಬಾ ಮಾಹಿತಿ ನೀಡಿರುವರು.

ಸಮತೋಲಿತ ಜೀವನ ಸಾಗಿಸಲು ಮಾನಸಿಕ ಹಾಗೂ ದೈಹಿಕ ಆರೋಗ್ಯವೆನ್ನುವುದು ಅತೀ ಅಗತ್ಯ ವಾಗಿರುವುದು. ಇದರಲ್ಲಿ ಯಾವುದೇ ಒಂದರ ಮೇಲೆ ತೊಂದರೆಯಾದರೆ ಆಗ ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವ್ಯಸ್ತವಾಗಿರುವ ನಗರ ಜೀವನ ಮತ್ತು ಜಡ ಜೀವನದಿಂದಾಗಿ ಇಂದು ಜನರು ಕೃತಕ ಅಭ್ಯಾಸಗಳನ್ನು ರೂಢಿಸಿಕೊಂಡಿರುವರು. ಈ ಕಾರಣದಿಂದಾಗಿಯೇ ಆಯುರ್ವೇದವು ಹಿನ್ನಡೆಯನ್ನು ಅನುಭವಿಸಿದೆ.

Ayurveda

ಆಯುರ್ವೇದ ಎನ್ನುವುದು ತುಂಬಾ ಹಳೆಯ ಚಿಕಿತ್ಸಾ ಪದ್ಧತಿಯಾಗಿದೆ ಮತ್ತು ಇದು ನಂಬಿಕೊಂಡು ಜನರು ತುಂಬಾ ಆರೋಗ್ಯಕಾರಿ ಜೀವನ ನಡೆಸಬಹುದು. ಉತ್ತಮ ಆರೋಗ್ಯಕ್ಕಾಗಿ ಐದು ಸರಳ ವಿಧಾನಗಳನ್ನು ನಾವು ಇಲ್ಲಿ ನಿಮಗೆ ತಿಳಿಸಿಕೊಟ್ಟಿದ್ದೇವೆ. ಇದನ್ನು ನೀವು ತಿಳಿಯಿರಿ.

ಪ್ರಕೃತಿಯೊಂದಿಗೆ ಬೆರೆತು ಜೀವಿಸಿ
ದೊಡ್ಡ ದೊಡ್ಡ ಕಟ್ಟಡಗಳು, ಕಾರ್ಪೋರೇಟ್ ಪಾರ್ಕ್ ಗಳು ಮತ್ತು ಶಾಂಪಿಂಗ್ ಕಾಂಪ್ಲೆಕ್ಸ್ ಗಳು ಮಾನವ ಮತ್ತು ಪ್ರಕೃತಿ ನಡುವೆ ದೊಡ್ಡ ಅಂತರವನ್ನು ಉಂಟು ಮಾಡಿದೆ. ದೈನಂದಿನ ಜೀವನದ ಜಂಜಾಟಗಳ ನಡುವೆ ಕೂಡ ಜನರು ಇಂದಿನ ದಿನಗಳಲ್ಲಿ ಪ್ರಕೃತಿಯೊಂದಿಗೆ ಬೆರೆಯಲು ತುಂಬಾ ಪ್ರಯತ್ನ ಮಾಡುವರು. ಪಾರ್ಕ್ ನಲ್ಲಿ ಹೋಗಿ ಸ್ವಲ್ಪ ತಾಜಾ ಗಾಳಿ ಪಡೆಯಬಹುದು ಮತ್ತು ಹೊರಗಡೆ ಹೋಗಿ ವಾತಾವರಣದಲ್ಲಿ ಸ್ವಲ್ಪ ಉಲ್ಲಾಸಿತರಾಗಬಹುದು.

ಯೋಗ ಮಾಡಿ
ಸರಿಯಾದ ರೀತಿಯಲ್ಲಿ ಉಸಿರಾಟದ ಕೆಲವೊಂದು ಯೋಗಗಳನ್ನು ಅಭ್ಯಾಸ ಮಾಡುವ ಮೂಲಕವಾಗಿ ಮನಸ್ಸು ಮತ್ತು ದೇಹದ ಮಧ್ಯೆ ಸಮತೋಲನ ಕಾಪಾಡಿಕೊಳ್ಳಬಹುದು. ಯೋಗಾಸನಗಳು ಉಸಿರಾಟದ ವಿಧಾನವನ್ನು ಹೇಳಿಕೊಡುತ್ತದೆ ಮತ್ತು ಧ್ಯಾನವು ಆರಾಮ ಮಾಡಲು ಮತ್ತು ದೈಹಿಕ ಶಕ್ತಿ ಪಡೆದುಕೊಳ್ಳಲು ನಮಗೆ ನೆರವು ನೀಡುವುದು.

ಸರಿಯಾಗಿ ನಿದ್ರೆ ಮಾಡಿ
ಆಯುರ್ವೇದದಲ್ಲಿ ಸರಿಯಾಗಿ ನಿದ್ರೆ ಮಾಡುವುದು ಜೀವನದ ಅಡಿಕಲ್ಲು ಆಗಿದೆ. ನಿದ್ರಾ ಹೀನತೆಯಿಂದಾಗಿ ಹಲವಾರು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ತಲೆನೋವು, ಅಧಿಕ ರಕ್ತದೊತ್ತಡ ಇತ್ಯಾದಿಗಳು. ನಿದ್ರೆಯು ತುಂಬಾ ಮುಖ್ಯವಾಗಿರುವುದು. ಯಾಕೆಂದರೆ ಆಯುರ್ವೇದದಲ್ಲಿ ಮನಸ್ಸು ಮತ್ತು ದೇಹದ ನಡುವಿನ ಸಂಪರ್ಕವನ್ನು ನಿದ್ರೆಯು ಸಾಧಿಸಿ ಕೊಡುವುದು.

ಆಯುರ್ವೇದ ಮಸಾಜ್ ಮಾಡಿಕೊಳ್ಳಿ
ಆಯುರ್ವೇದ ಮಸಾಜ್ ಎನ್ನುವುದು ತುಂಬಾ ಆರಾಮ ಮಾಡಲು ನೆರವು ನೀಡುವುದು. ಇದರಿಂದ ಒತ್ತಡ, ಆತಂಕ ನಿವಾರಣೆ ಆಗುವುದು ಮತ್ತು ಭಾವನಾತ್ಮಕವಾದ ಅಡೆತಡೆಗಳು ನಿವಾರಣೆ ಆಗುವುದು. ಇದು ಬೇರೆಲ್ಲಾ ರೀತಿಯ ಮಸಾಜ್ ಗಳಿಗಿಂತ ತುಂಬಾ ಭಿನ್ನವಾಗಿ ಇರುತ್ತದೆ ಮತ್ತು ಇದು ದೇಹದ ಕೆಲವೊಂದು ಭಾಗಗಳ ಕಡೆ ವಿಶೇಷ ಗಮನಹರಿಸಿ ಶಕ್ತಿ ಬಿಡುಗಡೆ ಮಾಡಲು ಪ್ರಯತ್ನಿಸುವುದು. ಆಯುರ್ವೇದ ಮಸಾಜ್ ಭಾವನಾತ್ಮಕ ಹಾಗೂ ದೈಹಿಕ ಒತ್ತಡ ನಿವಾರಣೆ ಮಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ನಿರಂತರವಾಗಿ ನೀವು ಮಸಾಜ್ ಮಾಡಿಕೊಂಡರೆ ಅದರಿಂದ ದೇಹಕ್ಕೆ ಹೊಸ ಚೈತನ್ಯ ಸಿಗುವುದು ಮತ್ತು ನೀವು ಆರಾಮವಾಗಿ ಇರಬಹುದು.

English summary

Ayurveda for Good Health: These practices you must try

Ayurveda, the Science of Life is the oldest and the most natural method used to cure illness. This science is being used globally as it has shown tremendous results. Initially, people started this practice by using beneficial herbs and roots with the motive of a healthy lifestyle. However, experts revealed the infinite benefits of using Ayurveda in daily life.
X
Desktop Bottom Promotion