For Quick Alerts
ALLOW NOTIFICATIONS  
For Daily Alerts

ಬೆರಳಚ್ಚಿನಂತೆ ಏಕಮಾತ್ರ ಲಕ್ಷಣಗಳನ್ನು ಹೊಂದಿರುವ ದೇಹದ 9 ಅಂಗಗಳು ಯಾವುವು ಗೊತ್ತೆ?

|
fingerprint

ಈ ಜಗತ್ತಿನಲ್ಲಿ ಒಬ್ಬರು ಇನ್ನೊಬ್ಬರಂತಿರುವುದಿಲ್ಲ ಹಾಗೂ ಪ್ರತಿಯೊಬ್ಬರ ದೇಹರಚನೆ ಏಕರೂಪದಲ್ಲಿದ್ದರೂ ಇವುಗಳಲ್ಲಿ ಅಡಕಗೊಂಡಿರುವ ಸೂಕ್ಷ್ಮಲಕ್ಷಣಗಳು ಈ ಪ್ರತ್ಯೇಕತೆಯನ್ನು ತೋರ್ಪಡಿಸುತ್ತವೆ. ನಾವು ಇನ್ನೊಬ್ಬರನ್ನು ಮುಖಚಹರೆಯಿಂದ ಗುರುತಿಸುತ್ತೇವೆ ಆದರೆ ಈ ವಿಶ್ವದ ಸುಮಾರು ಏಳು ಬಿಲಿಯನ್ ನಷ್ಟಿರುವ ಜನರನ್ನು ಕೇವಲ ಮುಖಚಹರೆಯಿಂದ ಗುರುತುಹಚ್ಚಲು ಸಾಧ್ಯವಿಲ್ಲ. ಹಾಗಾಗಿ ಪ್ರತಿ ವ್ಯಕ್ತಿಗೂ ವಿಶಿಷ್ಟವಾಗಿರುವ ಬೆರಳ ಗುರುತನ್ನೇ ವಿಶ್ದದಲ್ಲಿ ಅತಿಹೆಚ್ಚಾಗಿ ವ್ಯಕ್ತಿಯ ಗುರುತಿಸುವಿಕೆಗಾಗಿ ಬಳಸಲಾಗುತ್ತದೆ. ಅಚ್ಚರಿ ಎಂದರೆ, ನಮ್ಮ ಬೆರಳ ಗುರುತು ಅಥವಾ ಬೆರಳಚ್ಚುಗಳಷ್ಟೇ ವಿಶಿಷ್ಟವಾದ ಲಕ್ಷಣಗಳನ್ನು ನಮ್ಮ ದೇಹದ ಇನ್ನೂ ಒಂಭತ್ತು ಅಂಗಗಳು ಹೊಂದಿವೆ ಹಾಗೂ ವ್ಯಕ್ತಿಯನ್ನು ಗುರುತಿಸಲು ಕೆಲವು ಬೆರಳಚ್ಚಿಗಿಂತಲೂ ಹೆಚ್ಚು ನಿಖರವಾಗಿವೆ. ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ.

1. ಕಣ್ಣಿನ ಪಾಪೆ (Iris)

1. ಕಣ್ಣಿನ ಪಾಪೆ (Iris)

ನಮ್ಮ ಕಣ್ಣುಗಳಿಗೆ ಬಣ್ಣ ನೀಡುವ ಭಾಗವಾದ ಕಣ್ಣಿನ ಪಾಪೆ ಅಥವಾ ಐರಿಸ್ ಬೆರಳಚ್ಚಿಗಿಂತಲೂ ಹೆಚ್ಚು ನಿಖರವಾಗಿರುವ ಹಲವಾರು ಲಕ್ಷಣಗಳನ್ನು ಹೊಂದಿರುವ ಕಾರಣ ಅತಿ ಗೋಪ್ಯ ಮತ್ತು ರಕ್ಷಣಾ ವಿಭಾಗಗಳಲ್ಲಿ ಕಣ್ಣಿನ ಪಾಪೆಯನ್ನೇ ಬಳಸಲಾಗುತ್ತದೆ. ವಾಸ್ತವದಲ್ಲಿ, ಈ ಪಾಪೆಗಳು ಬೆಳಕಿನ ತೀಕ್ಷಣೆಯನ್ನು ಅನುಸರಿಸಿ ಕಣ್ಣಿನೊಳಗೆ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ಹೆಚ್ಚಿಸುವ ಅಥವಾ ಕಡಿಮೆಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತವೆ. ಇದಕ್ಕಾಗಿ ಅತಿ ಸೂಕ್ಶ್ಮವಾದ ರಾಡ್ ಮತ್ತು ಕೋನ್ ಎಂಬ ರಚನೆಗಳಿರುತ್ತವೆ ಹಾಗೂ ಇವು ಕೇಂದ್ರದತ್ತ ಚಲಿಸುವ ಅಥವಾ ಕೇಂದ್ರದಿಂದ ದೂರ ಸರಿಯುವ ಮೂಲಕ ಪಾಪೆಯ ವ್ಯಾಸವನ್ನು ಹಿಗ್ಗಿಸುತ್ತವೆ ಅಥವಾ ಕುಗ್ಗಿಸುತ್ತವೆ. ಪ್ರತಿಯೊಬ್ಬರ ಜೀವಕೋಶದಲ್ಲಿ ಅಡಕವಾಗಿರುವ ಡಿ ಎನ್ ಎ ಗಳೇ ಇದರ ಬಣ್ಣ, ರಚನೆ, ದೊರಗುತನ ಮೊದಲಾದವೆಲ್ಲಾ ಭ್ರೂಣಾವಸ್ಥೆಯಲ್ಲಿಯೇ ಈ ಪಾಪೆಗಳು ಪಡೆಯುತ್ತವೆ. ಈ ರಚನೆ ಜೀವಮಾನಪರ್ಯಂತ ಬದಲಾಗುವುದಿಲ್ಲ ಹಾಗೂ ಇವುಗಳನ್ನು ಒಮ್ಮೆ ಗುರುತಿಸುವಿಕೆಯ ಯಂತ್ರದಲ್ಲಿ ದಾಖಲಿಸಿಬಿಟ್ಟರೆ ಕಣ್ಣಿನ ಪಾಪೆಯನ್ನು ಬದಲಿಸಲು ಸಾಧ್ಯವಿಲ್ಲದ ಕಾರಣ ವ್ಯಕ್ತಿಯನ್ನು ಬದಲಿಸಲೂ ಸಾಧ್ಯವಾಗುವುದಿಲ್ಲ.

2. ಕಿವಿ

2. ಕಿವಿ

ನಿಮ್ಮ ಕಿವಿಯ ಅಂಚನ್ನು ಗಮನಿಸಿ: ಆ ವಕ್ರಾಕೃತಿಗಳು ಮತ್ತು ರೇಖೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇದೇ ಲಕ್ಷಣಗಳನ್ನು ನಿಖರವಾಗಿ ಹೊಂದಿರುವ ವಿಶ್ವದ ಏಕೈಕ ವ್ಯಕ್ತಿ ನೀವು ಮಾತ್ರ. ಒಂದು ಬ್ರಿಟಿಷ್ ಅಧ್ಯಯನದಲ್ಲಿ, ಸಂಶೋಧಕರು 250 ಕ್ಕಿಂತ ಹೆಚ್ಚು ಇತರರಲ್ಲಿ 99.6 ಪ್ರತಿಶತದಷ್ಟು ನಿಖರತೆಯೊಂದಿಗೆ ಒಬ್ಬ ವ್ಯಕ್ತಿಯನ್ನು ಗುರುತಿಸಬಲ್ಲ ಕೃತಕ ಬುದ್ದಿಮತ್ತೆಯನ್ನು ಅನ್ನು ಅಭಿವೃದ್ಧಿಪಡಿಸಿದರು, ಕಿವಿಗಳ ವಕ್ರಾಕೃತಿಗಳಿಂದ ಬೆಳಕು ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ವಿಶ್ಲೇಷಿಸುವ ಮೂಲಕ ಕಿವಿಯನ್ನು ವ್ಯಕ್ತಿಯ ಗುರುತಿಸುವಿಕೆಗಾಗಿ ಬಳಸಿಕೊಂಡರು. ಕಿವಿ ಎಷ್ಟೊಂದು ಸೂಕ್ತ ಗುರುತಿಸುವಿಕೆಯಾಗಿದ್ದು, ಕಿವಿಯನ್ನು ಸ್ಕ್ಯಾನರ್‌ ಮೂಲಕ ಗುರುತಿಸಿ ಸ್ಮಾರ್ಟ್‌ಫೋನ್‌ಗಳನ್ನು ಅನ್ಲಾಕ್ ಮಾಡಲು ಯಾಹೂ ಸಂಸ್ಥೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಕರೆ ಸ್ವೀಕರಿಸಬೇಕಾದರೆ ಯಾರಾದರೂ ಫೋನ್ ಅನ್ನು ಕಿವಿಗೆ ಒತ್ತುಕೊಂಡರೆ ಮಾತ್ರವೇ ಆ ಫೋನ್ ತೆರೆಯಲ್ಪಡುತ್ತದೆ.

3. ತುಟಿಗಳ ಅಚ್ಚು

3. ತುಟಿಗಳ ಅಚ್ಚು

ಪತ್ತೇದಾರಿ ಕಾದಂಬರಿಗಳಲ್ಲಿ ಪತ್ತೇದಾರರು ತಾವು ಕಂಡುಹಿಡಿದ ಸಾಕ್ಷ್ಯವನ್ನು ಚುಂಬನದ ಮೂಲಕ ಲಕೋಟೆಯಲ್ಲಿ ರಕ್ಷಿಸಿಡುತ್ತಾರೆ. Journal of Forensic Dental Sciences ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ತುಟಿಗಳಲ್ಲಿರುವ ನೆರಿಗೆಗಳು ಮತ್ತು ನೆರಿಗೆಗಳ ಆಳ ಮೊದಲಾದ ಲಕ್ಷಣಗಳು ಬೆರಳಚ್ಚಿನಂತೆಯೇ ವ್ಯಕ್ತಿಯಿಂದ ವ್ಯಕ್ತಿಗೆ ಪ್ರತ್ಯೇಕವಾಗಿರುತ್ತವೆ. ಆದರೆ ಈ ಭಾಗವನ್ನು ಸಾಮಾನ್ಯವಾಗಿ ಗುರುತಿಸುವಿಕೆಗೆ ಬಳಸುವುದಿಲ್ಲ, ಏಕೆಂದರೆ ಅಪರಾಧಿಗಳು ಅಪರಾಧ ಮಾಡುವ ಸಮಯದಲ್ಲಿ ತಮ್ಮ ತುಟಿಯ ಅಚ್ಚುಗಳನ್ನು ಯಾವುದೇ ವಸ್ತುಗಳ ಮೇಲೆ ಬಿಡುವಷ್ಟು ವ್ಯವಧಾನವನ್ನು ತೋರುವುದಿಲ್ಲ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿಯೂ ವ್ಯಕ್ತಿಯ ಚಹರೆಯನ್ನು ಗುರುತಿಸಲು ತುಟಿಯ ಅಚ್ಚನ್ನು ನೀಡುವಂತೆ ಕೇಳಿಕೊಳ್ಳುವುದು ಬೆರಳಚ್ಚಿನ ಗುರುತನ್ನು ಪಡೆದಷ್ಟು ಸುಲಭವೂ ಅಲ್ಲ.

4. ನಾಲಿಗೆ

4. ನಾಲಿಗೆ

ಬೆರಳಚ್ಚಿನಂತೆಯೇ ಪ್ರತಿ ವ್ಯಕ್ತಿಯ ನಾಲಿಗೆಯ ಅಚ್ಚು ಸಹಾ ಅನನ್ಯವೇ ಆಗಿರುತ್ತದೆ. ನಾಲಿಗೆ ಗಾತ್ರ, ದೊರಗುತನದ ವಿನ್ಯಾಸ, ಅಂಚುಗಳು ಎಲ್ಲವೂ ಪ್ರತಿ ವ್ಯಕ್ತಿಯಲ್ಲಿ ಭಿನ್ನವಾಗಿರುತ್ತವೆ. ಸಮಯ ಕಳೆದಂತೆ ಈ ಲಕ್ಷಣಗಳು ಬದಲಾಗುವುದು ಅತಿ ಕ್ಷೀಣವಾರುತ್ತದೆ. ಹಾಗಾಗಿ ವ್ಯಕ್ತಿಯನ್ನು ಗುರುತಿಸಲು ನಾಲಿಗೆಯ ಅಚ್ಚನ್ನು ಬಳಸಬಹುದಾದರೂ ಇದು ವಾಸ್ತವಿಕವಲ್ಲ! ಇತ್ತೀಚೆಗೆ ಸಂಶೋಧಕರು ನಾಲಿಗೆಯ ಮೂರನೆಯ ಆಯಾಮದ ಅಚ್ಚನ್ನು ಸಂಗ್ರಹಿಸುವತ್ತ ಹೆಚ್ಚಿನ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.

5. ಧ್ವನಿ

5. ಧ್ವನಿ

ವ್ಯಕ್ತಿಯೊಬ್ಬರನ್ನು ಗುರುತಿಸಲು ಬಳಸಲಾಗುತ್ತಿದ್ದ ಅತ್ಯಂತ ಪುರಾತನ ವಿಧಾನವಿದು. ಆಲಿ ಬಾಬಾ ಮತ್ತು ನಲವತ್ತು ಕಳ್ಳರು ಮೊದಲಾದ ಕಥೆಗಳಲ್ಲಿ ಗುಪ್ತಪದವಾಗಿ ವ್ಯಕ್ತಿಯ ಧ್ವನಿಯನ್ನು ಗುರುತಿಸಲಾಗುತ್ತಿತ್ತು. ಧ್ವನಿ ನಮ್ಮ ದೇಹದ ಅಂಗವಲ್ಲದಿದ್ದರೂ ಅಂಗವೊಂದು (ಧ್ವನಿಪೆಟ್ಟಿಗೆ) ಹೊರಡಿಸುವ ಸಂವೇದನೆಯೇ ಆಗಿದ್ದು ಪ್ರತಿ ವ್ಯಕ್ತಿಯ ಧ್ವನಿಯೂ ಪ್ರತ್ಯೇಕವೇ ಆಗಿರುತ್ತದೆ. ಧ್ವನಿ ತರಂಗಗಳ ಮೂಲಕ ಹರಡುವ ಮಾಧ್ಯಮವಾಗಿದ್ದು ಇದರ ಆವರ್ತನಗಳು ಎಷ್ಟು ಒತ್ತೊತ್ತಾಗಿವೆ ಎಂಬ ಅಂಶದ ಜೊತೆಗೇ ಈ ಧ್ವನಿ ಎಷ್ಟು ಗಾಢವಾಗಿದೆ ಹಾಗೂ ಅನುರಣನ ಮತ್ತು ನಾಸಿಕದ ಅದುರುವಿಕೆ ಮೊದಲಾದ ಹಲವಾರು ಅಂಶಗಳನ್ನು ಹೊಂದಿರುವ ಧ್ವನಿ ವ್ಯಕ್ತಿಯೊಬ್ಬರಿಗೆ ವಿಶಿಷ್ಟವಾಗಿರುತ್ತವೆ.

ಒಬ್ಬರ ಕತ್ತಿನ ಉದ್ದ ಮತ್ತು ಧ್ವನಿಪೆಟ್ಟಿಗೆಯ ಅಗಲವು ಒಂದು ಪಾತ್ರವನ್ನು ವಹಿಸುತ್ತದೆ, ಆದರೆ ತುಟಿಗಳ ಚಲನೆ ಮತ್ತು ಸ್ವರ ಉಚ್ಚಾರಣೆಯಂತಹ ಕಲಿತ ಗುಣಲಕ್ಷಣಗಳನ್ನು ಗುರುತಿಸಿ. ಈ ಸಂಯೋಜಿತ ಗುಣಲಕ್ಷಣಗಳನ್ನು ಆಧರಿಸಿ, ವಿಜ್ಞಾನಿಗಳು ವ್ಯಕ್ತಿಯ ಧ್ವನಿಯನ್ನು ಮಾಹಿತಿ ಭಂಡಾರದಲ್ಲಿ ಮೊದಲೇ ದಾಖಲಿಸಿದ್ದರೆ ಅದನ್ನು ಸ್ವಯಂಚಾಲಿತವಾಗಿ ಗುರುತಿಸಲು ವ್ಯವಸ್ಥೆಗಳನ್ನು ಈಗಾಗಲೇ ರಚಿಸಿದ್ದಾರೆ.

6. ಕಾಲುಬೆರಳಿನ ಅಚ್ಚು

6. ಕಾಲುಬೆರಳಿನ ಅಚ್ಚು

ನಮ್ಮ ಕೈಬೆರಳುಗಳ ಅಚ್ಚಿನಂತೆಯೇ ಕಾಲುಬೆರಳುಗಳ ಅಚ್ಚುಗಳೂ ಭ್ರೂಣಾವಸ್ಥೆಯಲ್ಲಿಯೇ ಮೂಡುತ್ತವೆ ಹಾಗೂ ಬೆರಳಚ್ಚುಗಳಷ್ಟೇ ವಿಶಿಷ್ಟವಾಗಿವೆ. ಆದರೆ ಇದನ್ನು ಎಲ್ಲಾ ಸಂದರ್ಭಗಳಲ್ಲಿ ಬಳಸಲು ಸಾಧ್ಯವಿಲ್ಲ. ಕೆಲವೇ ಸಂದರ್ಭಗಳಲ್ಲಿ ಈ ಬೆರಳಚ್ಚು ಸಮಯೋಚಿತವಾಗಿ ಬಳಕೆಯಾಗಿದೆಯೇ ಹೊರತು ಇದನ್ನೇ ಖಚಿತವಾದ ಗುರುತುಹಚ್ಚಬೇಕಾದ ಕ್ರಮ ಎಂದು ಬಳಸಲಾಗದು. ಆದರೆ ಅಪರಾಧಿಗಳು ತಮ್ಮ ಬೆರಳಚ್ಚುಗಳನ್ನು ಬಿಡದೇ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಈಗಾಗಲೇ ಎಫ್ ಬಿ ಐ ಸುಮಾರು ಅವರತ್ತಾರು ಮಿಲಿಯನ್ ವ್ಯಕ್ತಿಗಳ ಬೆರಳಚ್ಚುಗಳನ್ನು ಸಂಗ್ರಹಿಸಿಟ್ಟಿದೆ. ಆದರೆ ಒಂದು ಸ್ಕಾಟಿಶ್ ಬೇಕರಿಯಲ್ಲಿ ನಡೆದ ದರೋಡೆಯಲ್ಲಿ ನೆಲದ ಧೂಳಿನ ಮೇಲೆ ಬರಿಗಾಲಿನಲ್ಲಿ ನಡೆದಾಡಿದ್ದರಿಂದ ಮೂಡಿದ್ದ ಕಾಲುಬೆರಳಿನ ಅಚ್ಚನ್ನೇ ಶಂಕಿತ ವ್ಯಕ್ತಿಯೊಂದಿಗೆ ಹೋಲಿಸಿ ದಾಖಲೆಯನ್ನು ಸಾಕ್ಷದ ರೂಪದಲ್ಲಿ ನ್ಯಾಯಾಲಯಕ್ಕೆ ನೀಡಲಾಯಿತು. ಇದನ್ನು ಪರಿಗಣಿಸಿದ ನ್ಯಾಯಾಧೀಶರು ಹದಿನೈದೇ ನಿಮಿಷದೊಳಗೆ ಅಪರಾಧಿಗೆ ಶಿಕ್ಷೆ ವಿಧಿಸಿದ್ದರು.

7. ಹಲ್ಲುಗಳು

7. ಹಲ್ಲುಗಳು

ದೇಹ ಬಹುತೇಕ ನಷ್ಟವಾದರೂ ಕಡೆಗೆ ಉಳಿದುಕೊಳ್ಳುವ ಮೂಳೆ ಮತ್ತು ಹಲ್ಲುಗಳಿಂದ ವ್ಯಕ್ತಿಯ ಡಿ ಎನ್ ಎ ಮಾಹಿತಿಯನ್ನು ಪಡೆಯಬಹುದು. ಹಾಗಾಗಿ ಈ ಕ್ರಮವನ್ನು ಗುರುತುಹಿಡಿಯಲಾಗದ ಶವಗಳನ್ನು ಗುರುತಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಹಲ್ಲುಗಳು ಆ ವ್ಯಕ್ತಿಯ ವೈಯಕ್ತಿಯ ಅಭ್ಯಾಸಗಳನ್ನು ಅನುಸರಿಸಿ ಸವೆದಿರುತ್ತವೆ. ಹಲ್ಲು ಕಚ್ಚುವುದು, ತಂಬಾಕು ಜಗಿಯುವುದು, ಕಾರಿನ ಕೀ ಅಥವ ಇನ್ನೇನೋ ಒಂದನ್ನು ಹಲ್ಲಿನಲ್ಲಿ ಕಚ್ಚುತ್ತಿರುವುದು ಮೊದಲಾದ ಅಭ್ಯಾಸಗಳಿಂದ ಪ್ರತಿ ವ್ಯಕ್ತಿಗಳ ಹಲ್ಲುಗಳು ಭಿನ್ನವಾಗಿರುತ್ತವೆ. ತದ್ರೂಪಿ ಅವಳಿಗಳ ಹಲ್ಲುಗಳೂ ಸಹ ಭಿನ್ನವಾಗಿರುತ್ತವೆ.

8. ಕಣ್ಣಿನ ಅಕ್ಷಿಪಟ (Retina)

8. ಕಣ್ಣಿನ ಅಕ್ಷಿಪಟ (Retina)

ನಮ್ಮ ಕಣ್ಣುಗುಡ್ಡೆಯ ಒಳಭಾಗದ ಹಿಂಬದಿಯನ್ನು ಅಕ್ಷಿಪಟಲವೆನ್ನುತ್ತೇವೆ. ಏಕೆಂದರೆ ಈ ಭಾಗದಲ್ಲಿ ನಮ್ಮ ಕಣ್ಣಿನ ಪಾಪೆಯಿಂದ ಒಳಬಂದ ದೃಶ್ಯ ತಲೆಕೆಳಗಾಗಿ ಈ ಭಾಗದಲ್ಲಿ ಮೂಡುತ್ತದೆ ಹಾಗೂ ಇಲ್ಲಿರುವ ಅತ್ಯಂತ ಸೂಕ್ಷ್ಮವಾದ ನರವ್ಯವಸ್ಥೆಗಳು ಬೆಳಕಿನ ಸಂಕೇತಗಳನ್ನು ಮೆದುಳಿಗೆ ರವಾನಿಸುತ್ತವೆ. ಈ ನರಗಳು ಎಷ್ಟು ಸೂಕ್ಷ್ಮವೆಂದರೆ ನಮ್ಮ ದೇಹಕ್ಕೆ ಆವರಿಸುವ ಕೆಲವು ಕಾಯಿಲೆಗಳ ಅತಿ ಸೂಕ್ಷ್ಮವಾದ ಮುನ್ಸೂಚನೆಯನ್ನು ಈ ನರಗಳಲ್ಲಿ ಕಾಣಬಹುದು. ಇದೇ ಕಾರಣಕ್ಕೆ ನೇತ್ರವೈದ್ಯರು ಈ ಭಾಗದ ಪರೀಕ್ಷೆಯ ಮೂಲಕ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೆದುಳಿನ ಆರೋಗ್ಯ ಕುಸಿಯುತ್ತಿರುವ ಕಾಯಿಲೆಯ ಮುನ್ಸೂಚನೆಯನ್ನು ಗಮನಿಸುತ್ತಾರೆ. ಈ ಪಟಲದ ರಚನೆಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದರೂ ಈ ಲಕ್ಷಣವನ್ನು ವ್ಯಕ್ತಿಗಳನ್ನು ಗುರುತಿಸಲು ಬಳಸುವ ಸಾಧ್ಯತೆ ಇಲ್ಲವೇ ಇಲ್ಲವೆನ್ನಬಹುದು. ಆದರೆ ಪ್ರಾಣಿಗಳಲ್ಲಿ, ವಿಶೇಷವಾಗಿ ವಿಶೇಷ ತಳಿಗಳ ಕುದುರೆಗಳಿಗೆ ಎದುರಾಗಲಿರುವ ಕಾಯಿಲೆಗಳನ್ನು ಕಂಡುಕೊಳ್ಳಲು ಬಳಸಲಾಗುತ್ತದೆ.

9. ನಡಿಗೆಯ ಶೈಲಿ

9. ನಡಿಗೆಯ ಶೈಲಿ

ಪ್ರತಿ ವ್ಯಕ್ತಿಯ ನಡಿಗೆಯಲ್ಲಿಯೂ ಭಿನ್ನತೆ ಇರುತ್ತದೆ ಹಾಗೂ ಪಾದಗಳನ್ನು ಹೇಗೆ ಇಡುತ್ತೀರಿ, ಎತ್ತುತ್ತೀರಿ ಮತ್ತು ಹೆಜ್ಜೆಗಳ ನಡುವಣ ಅಂತರ, ವೇಗ, ಪಾದಗಳ ಕೋನ ಇತ್ಯಾದಿ ಮಾಹಿತಿಗಳೆಲ್ಲವೂ ವ್ಯಕ್ತಿಯನ್ನು ಗುರುತಿಸಲು ನೆರವಾಗುತ್ತದೆ ಹಾಗೂ ಇದನ್ನು ಸೂಕ್ಷ್ಮವಾಗಿ ಗಮನಿಸಿದರೂ ಸಾಮಾನ್ಯರಿಂದ ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಮಾಹಿತಿಗಳನ್ನು ಆಧುನಿಕ ವ್ಯವಸ್ಥೆಗಳು ಗುರುತಿಸಬಲ್ಲವು. ಜೈವಿಕ ಎಂಜಿನಿಯರ್‌ಗಳ ಅಂತರರಾಷ್ಟ್ರೀಯ ತಂಡವೊಂದು ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ 100 ಕ್ಕೂ ವ್ಯಕ್ತಿಗಳ ಪಾದದ ಒತ್ತಡದ ಮಾದರಿಗಳನ್ನು ವಿಶ್ಲೇಷಿಸಿದಾಗ, 99.6 ಶೇಕಡಾ ನಿಖರತೆಯ ಪ್ರಮಾಣದೊಂದಿಗೆ ವಿಶಿಷ್ಟ ವ್ಯಕ್ತಿಯನ್ನು ಗುರುತಿಸಿದ್ದಾರೆ. ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ನಡಿಗೆಯನ್ನು ಗುರುತಿಸುವಿಕೆಯು ಅಂತಿಮವಾಗಿ ದೂರದಿಂದ ವ್ಯಕ್ತಿಗಳನ್ನು ಗುರುತಿಸುವ ಒಂದು ಮಾರ್ಗವಾಗಿದೆ-ಉದಾಹರಣೆಗೆ ಕ್ಯಾಮೆರಾದಲ್ಲಿ ದಾಖಲಿಸಲ್ಪಟ್ಟ ದರೋಡೆಕೋರರು ಬ್ಯಾಂಕಿನಿಂದ ಹೊರನಡೆದಾಗ ಇವರು ಯಾರೆಂದು ಪತ್ತೆ ಹಚ್ಚುವಲ್ಲಿ ಈ ಮಾಹಿತಿ ನೆರವಾಗುತ್ತದೆ.

English summary

9 Body Parts as Unique as Your Fingerprint

You’re one in a million (or, uh, 7 billion), and these special characteristics prove it. Fingerprints are considered as a mark of identity as they are person specific. But a few of us know that not only are the finger prints but there are also other parts which are person specific. Here are some of these.
X
Desktop Bottom Promotion