Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಧ್ಯಯನ ವರದಿ: ವೇಗವಾಗಿ ನಡೆಯುವವರು ಹೆಚ್ಚು ಕಾಲ ಬದುಕುವರು!
ಭೂಮಿ ಮೇಲೆ ಜನಿಸಿದವರು ಒಂದಲ್ಲಾ ಒಂದು ದಿನ ಸಾಯಲೇಬೇಕು. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎನ್ನುವ ಮಾತಿದೆ. ಆದರೆ ಭೂಮಿಗೆ ಬಂದ ಮೇಲೆ ಪ್ರತಿಯೊಬ್ಬರಿಗೂ ತಾವು ಎಷ್ಟು ವರ್ಷಗಳ ಕಾಲ ಬದುಕುತ್ತೇವೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಹಲವಾರು ರೀತಿಯಿಂದ ನಿಮ್ಮ ಸಾವು ಯಾವಾಗ ಬರುತ್ತದೆ ಎಂದು ದಿನಕ್ಕೊಂದು ರೀತಿಯಲ್ಲಿ ಕಂಡುಹಿಡಿಯುವ ವಿಧಾನಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಇರುತ್ತದೆ. ಆದರೆ ಇದು ಎಷ್ಟು ನಿಖರ ಎನ್ನುವುದು ಮಾತ್ರ ತಿಳಿದಿಲ್ಲ. ಈ ಲೇಖನದಲ್ಲಿ ನೀವು ನಡೆಯುವ ವೇಗದಿಂದ ಎಷ್ಟು ವರ್ಷಗಳ ಕಾಲ ಬದುಕಲಿದ್ದೀರಿ ಎಂದು ತಿಳಿಯಬಹುದು. ಇತ್ತೀಚೆಗೆ ನಡೆಸಿರುವ ಅಧ್ಯಯನ ಒಂದರ ಪ್ರಕಾರ ನಡೆಯುವ ವೇಗದಿಂದ ನೀವು ಎಷ್ಟು ಸಮಯ ಬದುಕಲಿದ್ದೀರಿ ಎಂದು ಹೇಳಬಹುದಾಗಿದೆ.
ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ತುಂಬಾ ನಿಧಾನವಾಗಿ ನಡೆಯುವವರಿಗಿಂತ ವೇಗವಾಗಿ ನಡೆಯುವವರು ಹೆಚ್ಚು ಕಾಲ ಬಾಳುತ್ತಾರೆ. ಈ ಅಧ್ಯಯನ ವರದಿಯು ಜರ್ನಲ್ ಆಫ್ ಮಯೋ ಕ್ಲಿನಿಕ್ ಪ್ರೊಸೀಡಿಂಗ್ ನಲ್ಲಿ ಪ್ರಕಟವಾಗಿದೆ. ನೈಸರ್ಗಿಕವಾಗಿ ವೇಗವಾಗಿ ನಡೆಯುವವರ ಜೀವಿತಾವಧಿಯು ಹೆಚ್ಚಾಗಿರುವುದು ಎಂದು ಹೇಳಲಾಗಿದೆ.

ಕಡಿಮೆ ತೂಕ ಹೊಂದಿರುವ ಮತ್ತು ತುಂಬಾ ನಿಧನವಾಗಿ ನಡೆಯುವಂತಹ ಪುರುಷರು 64.8 ವರ್ಷಗಳ ಕಾಲ, ಅದೇ ಮಹಿಳೆಯುರು 72.4 ವರ್ಷಗಳ ಕಾಲ ಬದುಕುವರು ಎಂದು ಕಂಡುಕೊಳ್ಳಲಾಗಿದೆ. ದೇಹದ ತೂಕಕ್ಕೆ ಹೋಲಿಸಿದರೆ ದೈಹಿಕ ಸಾಮರ್ಥ್ಯದ ಪ್ರಾಮುಖ್ಯತೆಯು ವ್ಯಕ್ತಿಗಳ ಜೀವಿತಾವಧಿಯಲ್ಲಿ ಮುಖ್ಯವೆಂದು ಸ್ಪಷ್ಟಪಡಿಸಲು ನಮ್ಮ ಅಧ್ಯಯನವು ನೆರವಾಗಿದೆ. ಮತ್ತೊಂದು ರೀತಿಯಲ್ಲಿ ಹೇಳಬೇಕಾದರೆ ದೈಹಿಕ ಫಿಟ್ನೆಸ್ ಎನ್ನುವುದು ಬಾಡಿ ಮಾಸ್ ಇಂಡೆಕ್ಸ್(ಬಿಎಂಐ)ಗಿಂತ ತುಂಬಾ ಒಳ್ಳೆಯದು ಮತ್ತು ಇದರಿಂದ ಜನರು ತುಂಬಾ ವೇಗವಾಗಿ ನಡೆಯಲು ಮತ್ತು ತಮ್ಮ ಜೀವಿತಾವಧಿಗೆ ಮತ್ತಷ್ಟು ವರ್ಷಗಳನ್ನು ಸೇರಿಸಿಕೊಳ್ಳಲು ನೆರವಾಗುವುದು ಎಂದು ಅಧ್ಯಯನದ ಲೇಖಕ ಪ್ರೊಫೆಸರ್ ಟಾಮ್ ಯಾಟ್ಸ್ ತಿಳಿಸಿದ್ದಾರೆ.
ಇದುವರೆಗೆ ಪ್ರಕಟಗೊಂಡಿರುವಂತಹ ಅಧ್ಯಯನಗಳು ಹೇಳುವ ಪ್ರಕಾರ ದೇಹದ ತೂಕ ಮತ್ತು ದೈಹಿಕ ಫಿಟ್ನೆಸ್ ನಿಂದಾಗಿ ಜೀವಿತಾವಧಿ ಮೇಲೆ ಪರಿಣಾಮ ಬೀರುವುದು.
ದೇಹದ ತೂಕಕ್ಕೆ ಐದು ಕಿ.ಲೋ ಹೆಚ್ಚಾದರೆ ಆಗ ಸಾಯುವ ಪ್ರಮಾಣವು ಶೇ.20ರಷ್ಟು ಹೆಚ್ಚಾಗುವುದು. ಬಿಎಂಐ ಮೌಲ್ಯದ ಪ್ರಕಾರ ಮೀಟರ್ ಗೆ 25 ಕಿ.ಲೋ.(ಬಿಎಂಐ ಪ್ರಕಾರ ಸಾಮಾನ್ಯ ತೂಕ ಅಥವಾ ಅಧಿಕ ತೂಕ ಇರುವುದು) ಎಂದು ಅಧ್ಯಯನದ ಸಹ ಲೇಖಕ ಡಾ. ಫ್ರಾನ್ಸೆಸ್ಕೊ ಜಕ್ಕಾರ್ಡಿ ತಿಳಿಸಿರುವರು. ಪ್ರೊಪೆಸರ್ ಯೇಟ್ಸ್ ಮತ್ತು ಅವರ ಸಹೋದ್ಯೋಗಿಗಳು ನಡೆಸಿರುವಂತಹ ಮತ್ತೊಂದು ಅಧ್ಯಯನದ ಪ್ರಕಾರ, ತುಂಬಾ ನಿಧಾನವಾಗಿ ನಡೆಯುವಂತಹ ಮಧ್ಯ ವಯಸ್ಸಿನ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ತುಂಬಾ ಅಧಿಕವಾಗಿರುವುದು ಎಂದು ಕಂಡುಕೊಳ್ಳಲಾಗಿದೆ. ಸಂಪೂರ್ಣ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಈ ಅಪಾಯವು ಅಧಿಕ ಆಗಿದೆ. ಇನ್ನೇಕೆ ನೀವು ತಡ ಮಾಡುವುದು ನಿಮ್ಮ ಜೀವಿತಾವಧಿ ಹೆಚ್ಚಿಸಲು ವೇಗವಾಗಿ ನಡೆಯಲು ಆರಂಭಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

