For Quick Alerts
ALLOW NOTIFICATIONS  
For Daily Alerts

2019 ವಿಶ್ವ ಜನಸಂಖ್ಯಾ ದಿನ: ಇದರ ಧ್ಯೇಯ, ಹಾಗೂ ಮಹತ್ವ

|

ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಜನಸಂಖ್ಯೆಯ ಮಹತ್ವ ಮತ್ತು ಜರೂರತ್ತಿನ ಬಗ್ಗೆ ಗಮನಹರಿಸಲಾಗುತ್ತದೆ. ವಿಶ್ವ ಜನಸಂಖ್ಯಾ ದಿನವನ್ನು 1989ರಲ್ಲಿ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ರೂಪಿಸಲಾಯಿತು. ಜನಸಂಖ್ಯಾ ದಿನದ ಬಗ್ಗೆ ನೀವು ಇದುವರೆಗೆ ಹೆಚ್ಚಾಗಿ ಕೇಳದೆ ಇರಬಹುದು.

ಆದರೆ ಕಳೆದ ಮೂರು ದಶಕಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. 1987ರ ಜುಲೈ 11ರಂದು ಐದು ಬಿಲಿಯನ್ ಡೇ' ಯಿಂದ ಇದಕ್ಕೆ ಸ್ಪೂರ್ತಿಯನ್ನು ಪಡೆಯಲಾಗುತ್ತಿದೆ. ಈ ದಿನದಂದು ವಿಶ್ವದ ಜನಸಂಖ್ಯೆಯು ಐದು ಬಿಲಿಯನ್ ಗೆ ತಲುಪಿತ್ತು.

World Population Day

ವಿಶ್ವ ಜನಸಂಖ್ಯಾ ದಿನದ ಥೀಮ್ ಮತ್ತು ಮಹತ್ವ

ಹೆಚ್ಚುತ್ತಿರುವಂತಹ ಜನಸಂಖ್ಯೆಯಿಂದಾಗಿ ಆಗುತ್ತಿರುವಂತಹ ಸಮಸ್ಯೆಗಳು ಮತ್ತು ಅದರಿಂದ ಅಭಿವೃದ್ಧಿ ಮತ್ತು ಕಾರ್ಯಕ್ರಮಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಗಮನಹರಿಸುವುದು ವಿಶ್ವ ಜನಸಂಖ್ಯಾ ದಿನದ ಪ್ರಮುಖ ಉದ್ದೇಶವಾಗಿದೆ.

ಬೆಳೆಯುತ್ತಿರುವಂತಹ ಜನಸಂಖ್ಯೆಯಿಂದ ಮುಖ್ಯವಾಗಿ ಆಗುವಂತಹ ಪರಿಣಾಮವೆಂದರೆ ನೈಸರ್ಗಿಕ ಸಂಪನ್ಮೂಲಗಳು ಕುಗ್ಗುವುದು ಮತ್ತು ಇದು ಅದರ ಮೇಲೆ ನಿರಂತರವಾಗಿ ಭೀತಿಯನ್ನು ಉಂಟು ಮಾಡುವುದು. ಅದಾಗ್ಯೂ, ಇದರ ಹೊರತಾಗಿ ವಿಶ್ವ ಜನಂಖ್ಯಾ ದಿನವನ್ನು ಭ್ರಾತೃತ್ವದ ದಿನವನ್ನಾಗಿಯೂ ಆಚರಣೆ ಮಾಡಲಾಗುತ್ತದೆ. ಈ ದಿನದಂದು ನೀವು ಪರಸ್ಪರ ಬಗ್ಗೆ ಇರುವಂತಹ ಜವಾಬ್ದಾರಿಯನ್ನು ಕೂಡ ತಿಳಿದುಕೊಳ್ಳಬಹುದು.

ಜನಸಂಖ್ಯೆಗೆ ಸರಿಯಾದ ಕಾರ್ಯಕ್ರಮವನ್ನು ರೂಪಿಸಲು ವಿಶ್ವಸಂಸ್ಥೆಯು ಕೆಲವೊಂದು ಏಜೆನ್ಸಿ, ಕಾರ್ಯಕ್ರಮ, ಅನುದಾನ ಮತ್ತು ಸಮಿತಿಗಳ ಮೂಲಕ ಕೆಲಸ ಮಾಡುತ್ತಲಿದೆ. ಬೇರೆ ಬೇರೆ ದೇಶಗಳಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ವಿವಿಧ ರೀತಿಯಿಂದ ಆಚರಿಸಿಕೊಳ್ಳಲಾಗುತ್ತದೆ. ವಿಶ್ವ ಸಂಸ್ಥೆಯು ಹೆಚ್ಚಿನ ರಾಷ್ಟ್ರಗಳಿಗೆ ವಿಶ್ವ ಜನಸಂಖ್ಯಾ ದಿನದ ಬಗ್ಗೆ ಪೋಸ್ಟರ್, ಪ್ರಬಂಧ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅನುದಾನ ನೀಡುತ್ತದೆ. 2011ರಲ್ಲಿ ವಿಶ್ವದ ಜನಸಂಖ್ಯೆಯು 7 ಬಿಲಿಯನ್ ಗಡಿ ದಾಟಿದೆ. ಈ ಸಂದರ್ಭದಲ್ಲಿ ಯುಎನ್ ಎಫ್ ಪಿಎ ಮತ್ತು ಇದರ ಸಹಸಂಸ್ಥೆಗಳು ಏಳು ಬಿಲಿಯನ್ ಕ್ರಮಗಳನ್ನು ಗುರಿಯಾಗಿರಿಸಿಕೊಂಡು, ಇದರಲ್ಲಿ ಜನರು, ಸಮಿತಿಗಳು ಮತ್ತು ಕ್ರಮಗಳನ್ನು ಅಳವಡಿಸಿಕೊಂಡಿದೆ.

ವಿಶ್ವದ ಬೆಳೆಯುತ್ತಿರುವ ದೇಶಗಳಲ್ಲಿ ಫಲವತ್ತತೆ ಸಮಸ್ಯೆಯು ಗಣನೀಯ ಪ್ರಮಾಣದಲ್ಲಿ ಕುಸಿತವಾಗುತ್ತಿರುವ ಬಗ್ಗೆ ಕೂಡ ವಿಶ್ವ ಜನಸಂಖ್ಯಾ ದಿನದಂದು ಗಮನಹರಿಸಲಾಗುತ್ತಿದೆ. ಈ ದಿನವು 1800ರಿಂದ 2005ರ ತನಕ ಜೀವಿತಾವಧಿಯು 30 ವರ್ಷದಿಂದ 67 ವರ್ಷಕ್ಕೆ ಹೆಚ್ಚಿಸಿರುವುದನ್ನು ದೊಡ್ಡ ಸಾಧನೆಯಾಗಿ ಪರಿಗಣಿಸಿದೆ. 2010ರಲ್ಲಿ ವಿಶ್ವದ ಜನಸಂಖ್ಯೆಯು 1 ಬಿಲಿಯನ್ ನಿಂದ ಏಳು ಬಿಲಿಯನ್ ಗೆ ತಲುಪಿದೆ.

English summary

World Population Day 2019 Theme, Significance

World Population Day 2019 is observed on July 11. The day is meant to focus attention on the urgency and importance of population issues. World Population Day was established by United Nations Development Programme in 1989. While you may not have heard much about population day, it has been celebrated for nearly three decades now.
X
Desktop Bottom Promotion