For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತೇ? ನೃತ್ಯ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆಯಂತೆ!

|

ಇಂದು ವಿಶ್ವ ನೃತ್ಯ ದಿನ (World Dance Day). ನೃತ್ಯ ಜಗತ್ತನ್ನು ಹೇಗೆ ಪ್ರಭಾವಿಸಿದೆ ಮತ್ತು ನೃತ್ಯಕ್ಕೆ ವಿಶ್ವದಲ್ಲಿ ನೀಡಿರುವ ಪ್ರಾಮುಖ್ಯತೆಯೇ ವಿಶ್ವ ನೃತ್ಯ ದಿನದ ಕೊಡುಗೆ. ಮಾರ್ಡ್ರನ್‌ ಬ್ಯಾಲೆಟ್‌ನ ಜನಕ ಜಿನ್‌ ಜಾರ್ಜಸ್‌ ನಾವ್ರೆ ಅವರ ಹುಟ್ಟುಹಬ್ಬದಂದು ಅಂದರೆ ಏಪ್ರಿಲ್‌ 29ರಂದು ನೃತ್ಯ ದಿನ ಆಚರಿಸಲಾಗುತ್ತದೆ. ಈ ದಿನದ ಪ್ರಯುಕ್ತ ನೃತ್ಯ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗಲಿದೆ ಎಂದು ಈ ಲೇಖನದ ಮೂಲಕ ತಿಳಿಯೋಣ.

ನರ್ತನ ಅಥವಾ ನೃತ್ಯ ಭಾವನೆಗಳನ್ನು ಪ್ರಕಟಿಸಿ ತನ್ಮಯತೆ ಅನುಭವಿಸುವ ಅನುಭೂತಿಯಾಗಿದೆ. ಆದರೆ ನೃತ್ಯ ಮನಸ್ಸು ಮತ್ತು ಶರೀರಗಳನ್ನು ಆರೋಗ್ಯಕರವಾಗಿರಿಸುವ ಅತ್ಯುತ್ತಮ ಚಟುವಟಿಕೆಯೂ ಆಗಿದೆ. ನರ್ತನದಿಂದ ದೊರಕುವ ಆರೋಗ್ಯಕರ ಪ್ರಯೋಜಗಳು ಬಹಳಷ್ಟಿವೆ ಹಾಗೂ ಇದಕ್ಕಾಗಿ ಹಲವಾರು ಪ್ರಾಕಾರದ ನೃತ್ಯಗಳನ್ನು ಆಯ್ದುಕೊಳ್ಳಬಹುದು. ನೃತ್ಯದ ಹಲವು ಪ್ರಕಾರಗಳು ಯಾವುವು? ಸುಲಭ ಮತ್ತು ಆರೋಗ್ಯಕರವಾದ ನೃತ್ಯಗಳನ್ನು ಈ ಕೆಳಗಿನವುಗಳಿಂದ ಆಯ್ದುಕೊಳ್ಳಬಹುದು.

ಜಾಜ಼್: (Jazz)

ಈ ನೃತ್ಯದಲ್ಲಿ ಸಂಗೀತದ ಲಯಕ್ಕನುಗುಣವಾಗಿ ದೇಹವನ್ನು ತಿರುಗಿಸುವುದು ಹಾಗೂ ದೊಡ್ಡ ಹೆಜ್ಜೆಯನ್ನು ಜಿಗಿಯುವುದು ಮುಖ್ಯವಾಗಿರುತ್ತವೆ. ಈ ನೃತ್ಯದಿಂದ ದೇಹ ಹೆಚ್ಚು ಸೆಳೆತ, ದೇಹದ ವಿವಿಧ ಭಾಗಗಳ ಸಮನ್ವಯತೆ, ಸಹಿಷ್ಣುತೆ ಹಾಗೂ ಶಕ್ತಿಯನ್ನು ಹೆಚ್ಚಿಸುತ್ತದೆ.

Dancing

ಬ್ಯಾಲೆ (Ballet)

ಈ ಬಗೆಯ ನೃತ್ಯದಿಂದ ದೇಹಕ್ಕೆ ಶಕ್ತಿ, ದೇಹದ ಬಾಗುವಿಕೆ ಹಾಗೂ ಕೌಶಲತೆ ಉತ್ತಮಗೊಳ್ಳುತ್ತದೆ.

ಸಾಲ್ಸಾ (Salsa)

ಇದೊಂದು ಹೃದಯಸ್ನೇಹಿ ಚಟುವಟಿಕೆಯ ವ್ಯಾಯಾಮರೂಪದ ನೃತ್ಯವಾಗಿದೆ. ಈ ನರ್ತನದ ಪ್ರಯೋಜನಗಳಲ್ಲಿ ತೂಕ ಇಳಿಕೆ, ಮನಸ್ಸಿನ ಒತ್ತಡ ನಿವಾರಣೆ ಮೊದಲಾದವು ಪ್ರಮುಖವಾಗಿವೆ.

ಪೋಲ್ ಡಾನ್ಸಿಂಗ್

ಹೆಸರೇ ಸೂಚಿಸುವಂತೆ ನೆಲದಲ್ಲಿ ನೆಟ್ಟಿರುವ ಕಂಭವೊಂದನ್ನು ಬಳಸಿ ದೇಹದ ಸಮತೋಲನವನ್ನು ಕಾಯ್ದುಕೊಳ್ಳುತ್ತಾ ಮಾಡುವ ನರ್ತನವಾಗಿದೆ. ಈ ನರ್ತನದಲ್ಲಿ ಸಮನ್ವಯತೆ, ಸ್ನಾಯುಗಳ ಸಹಿಷ್ಣುತೆ, ದೇಹದ ಮೇಲ್ಭಾಗ ಮತ್ತು ಕೆಳಭಾಗಗಳ ಶಕ್ತಿ ಉತ್ತಮಗೊಳ್ಳುವುದು ಮೊದಲಾದವುಗಳ ಅಗತ್ಯವಿದೆ.

ಬಾಲ್ ರೂಂ ನರ್ತನ: (Ballroom dancing)

ಇಬ್ಬರು ಅಥವಾ ಸಮೂಹವಾಗಿ ನರ್ತಿಸುವ ಈ ಬಗೆಯಲ್ಲಿ ವಾಲ್ಜ್, ಟ್ಯಾಂಗೋ ಮತ್ತು ರುಂಬಾ ಎಂಬ ಉಪವರ್ಗಗಳಿವೆ. ಈ ನರ್ತನದಿಂದ ಅಧಿಕ ರಕ್ತದೊತ್ತಡ ಕದಿಮೆಯಾಗುತ್ತದೆ ಹಾಗೂ ಮರೆಗುಳಿತನ ತಡವಾಗುತ್ತದೆ.

ಭರತನಾಟ್ಯಂ

ನಮ್ಮ ಭಾರತದ್ದೇ ಆದ ಪುರಾತನ ಸಾಂಸ್ಕೃತಿಕ ಕಲೆಯಾದ ಭರತನಾಟ್ಯಂ ಶಾಸ್ತ್ರೀಯ ಸಂಗೀತ, ಲಯ ಹಾಗೂ ಅದ್ಭುತವಾದ ಭಾವನೆಗಳನ್ನು ಪ್ರಕಟಿಸುವ ನೃತ್ಯವಾಗಿದೆ. ಈ ನರ್ತನದಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ, ತೂಕ ನಿಯಂತ್ರಣದಲ್ಲಿರುತ್ತದೆ, ದೇಹ ದಾರ್ಢ್ಯತೆ ಬಲಗೊಳ್ಳುತ್ತದೆ, ದೇಹದ ಬಾಗುವಿಕೆ ಉತ್ತಮಗೊಳ್ಳುತ್ತದೆ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳುವ ಕ್ಷಮತೆ ಹೆಚ್ಚುತ್ತದೆ.

ಕಥಕ್

ಭಾರತದ್ದೇ ಆದ ಇನ್ನೊಂದು ಪುರಾತನ ನೃತ್ಯಪ್ರಾಕಾರ ಮುಖ್ಯವಾಗಿ ಕಥೆಯೊಂದನ್ನು ಹೇಳುವ ರೂಪಕವಾಗಿದ್ದು ಇದರಲ್ಲಿ ಕಥೆಯ ಚಿತ್ರಣವನ್ನು ವಿವರಿಸುವಂತಹ ದೇಹದ ಭಂಗಿ ಹಾಗೂ ತಂತ್ರಗಾರಿಕೆಗಳಿರುತ್ತವೆ. ಮನಸ್ಸಿನ ಒತ್ತಡವನ್ನು ನಿವಾರಿಸಲು ಈ ನೃತ್ಯ ಅತ್ಯುತ್ತಮವಾಗಿದೆ.

ಬೆಲ್ಲಿ ಡ್ಯಾನ್ಸ್

ಹೆಸರೇ ಸೂಚಿಸುವಂತೆ ಹೊಟ್ಟೆ ಯನ್ನು ಕುಲುಕಿಸಲು ಸೊಂಟವನ್ನು ಬಳುಕಿಸುವ ಈ ಬಗೆಯ ನೃತ್ಯ ಅತಿ ಸಂಕೀರ್ಣವಾಗಿದೆ.

ಟ್ಯಾಪ್ ಡ್ಯಾನ್ಸ್

ಈ ಬಗೆಯ ನರ್ತನದಲ್ಲಿ ಪ್ರಮುಖವಾಗಿ ಪಾದದ ಹಿಮ್ಮಡಿಯನ್ನು ಸಂಗೀತದ ಲಯಕ್ಕನುಗುಣವಾಗಿ ನೆಲಕ್ಕೆ ಅಪ್ಪಳಿಸುತ್ತಾ ಚಲಿಸುವುದು ಮುಖ್ಯವಾದ ಅಂಗವಾಗಿದೆ. ಈ ನರ್ತನದ ಮೂಲಕ ಕಾಲುಗಳು ಅತ್ಯಂತ ಬಲಯುತಗೊಳ್ಳುತ್ತವೆ ಹಾಗೂ ಪಾದ, ಮೊಣಕಾಲು, ಗುಲ್ಬ ಹಾಗೂ ಸೊಂಟದ ಭಾಗಗಳು ಹೆಚ್ಚು ಬಾಗುವ ಕ್ಷಮತೆ ಪಡೆದುಕೊಳ್ಳುತ್ತವೆ.

ಹಿಪ್ ಹಾಪ್

ಪಾಶ್ಚಾತ್ಯ ದೇಶಗಳ ನಗರಗಳಲ್ಲಿ ನಿರ್ವಹಿಸಲಾಗುವ ಈ ಬಗೆಯ್ ನೃತ್ಯದಲ್ಲಿ ಕುಪ್ಪಳಿಸುವಿಕೆ, ದೇಹವನ್ನು ಮುದುಡಿಸುವುದು ಹಾಗೂ ಸ್ವತಂತ್ರವಾಗಿ ಸೆಳೆಯುವುದು ಮೊದಲಾದವು ಒಳಗೊಂಡಿರುತ್ತವೆ. ಈ ಬಗೆಯ ನರ್ತನದಿಂದ ಕೈ ಮತ್ತು ಕಾಲುಗಳ ಸ್ನಾಯುಗಳು ಬಲಯುತಗೊಳ್ಳುತ್ತವೆ.

ಕ್ಯಾನ್ಕನ್ ಡ್ಯಾನ್ಸ್

ಈ ಬಗೆಯ ನರ್ತನದಲ್ಲಿ ದೇಹ ಅತಿ ಹೆಚ್ಚಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಹಾಗೂ ಹೆಚ್ಚು ದಣಿಸುವ ವ್ಯಾಯಾಮವಾಗಿದೆ.

ಸ್ಕ್ವೇರ್ ಡಾನ್ಸಿಂಗ್

ಇದೊಂದು ಬಗೆಯ ಜನಪದ ನೃತ್ಯವಾಗಿದ್ದು ಒಂದು ಚೌಕಾಕಾರದ ಅಂಗಣದಲ್ಲಿ ನಾಲ್ಕು ಜೋಡಿಗಳಿಗೆ ನರ್ತಿಸುವ ಅವಕಾಶವಿರುತ್ತದೆ. ಈ ಬಗೆಯ ನರ್ತನದಿಂದ ಹೃದಯ ಮತ್ತು ಮೂಳೆಗಳು ಉತ್ತಮ ಆರೋಗ್ಯವನ್ನು ಪಡೆಯುತ್ತವೆ.
ನೃತ್ಯದ ಮೂಲಕ ದೊರಕುವ ಆರೋಗ್ಯಕರ ಪ್ರಯೋಜನಗಳು:

*ಸ್ಮರಣಶಕ್ತಿ ಹೆಚ್ಚುಸುತ್ತದೆ

The New England Journal of Medicine ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ನೃತ್ಯದಿಂದ ಸ್ಮರಣಶಕ್ತಿ ಹೆಚ್ಚುತ್ತದೆ ಹಾಗೂ ವಯಸ್ಸಾದಂತೆ ಸ್ಮರಣಶಕ್ತಿ ಕುಂದುವುದನ್ನು ತಡೆಯುತ್ತದೆ. ವಿಜ್ಞಾನ ವಿವರಿಸುವ ಪ್ರಕಾರ, ದೇಹದ ಚಟುವಟಿಗಳನ್ನು ಹೆಚ್ಚಿಸುವ ನೃತ್ಯದಿಂದ ಮೆದುಳಿನ ಹಿಪ್ಪೋಕ್ಯಾಂಪಸ್ ಎಂಬ ಭಾಗದ ಪರಿಮಾಣ ಕುಗ್ಗುವ ಗತಿಯನ್ನು ಬದಲಿಸುತ್ತದೆ ಅಥವಾ ನಿಧಾನವಾಗಿಸುತ್ತದೆ. ಈ ಭಾಗ ನಮ್ಮ ಸ್ಮರಣಶಕ್ತಿಗೆ ನೇರವಾಗಿ ಸಂಬಂಧಿಸಿದೆ. ಸಾಮಾನ್ಯವಾಗಿ ವಯಸ್ಸಾದಂತೆ ಈ ಭಾಗ ನಿಧಾನವಾಗಿ ಚಿಕ್ಕದಾಗುತ್ತಾ ಹೋಗುವುದೇ ಸ್ಮರಣಶಕ್ತಿ ಕುಂದಲು ಮುಖ್ಯ ಕಾರಣವಾಗಿದೆ.

*ದೇಹದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ

ನೃತ್ಯದ ಅವಧಿಯಲ್ಲಿ ವಿವಿಧ ಭಂಗಿಗಳಲ್ಲಿ ದೇಹವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ ನೃತ್ಯದ ಸತತ ಅಭ್ಯಾಸದಿಂದ ದೇಹ ಬಲಯುತಗೊಳ್ಳುತ್ತದೆ ಮತ್ತು ವಿವಿಧ ಭಂಗಿಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಸ್ನಾಯುಗಳು ಮತ್ತು ಮೂಳೆಗಳು ಹೆಚ್ಚು ಶಕ್ತಿಹಾಲಿಯಾಗುತ್ತವೆ. ನೃತ್ಯದ ಪಟುತ್ವವನ್ನು ಗಳಿಸುತ್ತಾ ಸಾಗಿದಂತೆ ಈ ಸಮತೋಲನವನ್ನು ಕನಿಷ್ಟ ಶಕ್ತಿಯನ್ನು ವ್ಯಯಿಸಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನೊಂದು ಕಡೆಯಿಂದ ನೃತ್ಯದಲ್ಲಿ ಸಂಗೀತದ ಸಮನ್ವಯತೆಯೂ ಅಗತ್ಯವಾದುದರಿಂದ ದೇಹದ ಎರಡು ಅಥವಾ ಹೆಚ್ಚಿನ ಅಂಗಗಳನ್ನು ಏಕಕಾಲದಲ್ಲಿ ಯಾವುದೇ ತೊಡಕಿಲ್ಲದೇ ಚಲಿಸಲು ಸಾಧ್ಯವಾಗುತ್ತದೆ.

*ಮಾನಸಿಕ ಒತ್ತಡ ಕಡಿಮೆಗೊಳಿಸುತ್ತದೆ

The Journal of Applied Gerontology ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಂಗೀತದ ಲಯಬದ್ದತೆಗೆ ಅನುಗುಣವಾಗಿ ಸಹವರ್ತಿಯೊಂದಿಗೆ ನರ್ತಿಸುವ ವ್ಯಕ್ತಿಯ ಮಾನಸಿಕ ಒತ್ತಡ ಬಿಡುಗಡೆಯಾಗುತ್ತದೆ. ಈ ಸಮಯದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಗಳು ಇದಕ್ಕೆ ಕಾರಣ ಎಂದು ವಿವರಿಸಲಾಗಿದೆ. ಅಡ್ರಿನಲಿನ್ ಮತ್ತು ಎಂಡಾರ್ಫಿನ್ ಇವೆರಡೂ ರಸದೂತಗಳು ಜಂಟಿಯಾಗಿ ಕಾರ್ಯನಿರ್ವಹಿಸಿದಾಗ 'ನರ್ತಕನ ಅತ್ಯುತ್ತಮ' ಅಥವಾ 'dancer's high'ಎಂಬ ಭಾವನೆಯನ್ನು ಮೂಡಿಸುತ್ತವೆ, ಇದು ಅಪಾರ ತೃಪ್ತಿ ಹಾಗೂ ಸಂತೋಷಕ್ಕೆ ಕಾರಣವಾಗಿದೆ. ಹಾಗಾಗಿ ಮುಂದಿನ ಬಾರಿ ಮಾನಸಿಕ ಒತ್ತಡಕ್ಕೆ ಒಳಗಾದರೆ, ನಿಮ್ಮ ನೆಚ್ಚಿನ ಸಂಗೀತವೊಂದನ್ನು ನಡೆಸಿ ಅದಕ್ಕೆ ಸರಿಯಾಗಿ ನರ್ತಿಸಿ.

*ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ

ಹೃದಯಸಂಬಂಧಿ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳಿಗೆ ನರ್ತನ ಬಹುತೇಕ ಸಂದರ್ಭಗಳಲ್ಲಿ ಆಪತ್ಭಾಂಧವನಾಗಿ ಬರುತ್ತದೆ. ಇಟಲಿಯಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಹೃದಯ ಸ್ತಂಭನದ ತೊಂದರೆ ಎದುರಿಸಿದ ವ್ಯಕ್ತಿಗಳು ಬಳಿಕ ವಾಲ್ಟ್ಜ್ ನೃತ್ಯದ ತರಗತಿಗಳಿಗೆ ಹಾಜರಾದ ಬಳಿಕ ಅವರ ಉಸಿರಾಟದ ಗತಿ, ಜೀವನ ಕ್ರಮ ಹಾಗೂ ಹೃದಯದ ಆರೋಗ್ಯದಲ್ಲಿ ವೃದ್ದಿಯಾಗಿರುವುದನ್ನು ಗಮನಿಸಲಾಗಿದೆ. ನರ್ತನದಿಂದ ಹೃದಯ, ಶ್ವಾಸಕೋಶ ಹಾಗೂ ರಕ್ತಪರಿಚಲನಾ ವ್ಯವಸ್ಥೆಗಳು ಉತ್ತಮಗೊಳ್ಳುವುದನ್ನೂ ಗಮನಿಸಲಾಗಿದೆ.

*ದೇಹದ ಬಾಗುವಿಕೆ ಉತ್ತಮಗೊಳ್ಳುತ್ತದೆ

ನರ್ತನದ ಇನ್ನೊಂದು ಅತ್ಯುತ್ತಮ ಪ್ರಯೋಜನವೆಂದರೆ ಬಾಗುವಿಕೆಯನ್ನು ಉತ್ತಮಗೊಳಿಸುವುದು. ದೇಹ ಬಾಗುವಿಕೆಗೆ ಮಣಿದಷ್ಟೂ ವ್ಯಾಯಾಮದ ಬಳಿಕ ಎದುರಾಗುವ ಸುಸ್ತು ಹಾಗೂ ಮೂಳೆಗಳ ಸಂಧುಗಳಲ್ಲಿ ಎದುರಾಗುವ ನೋವು ಇಲ್ಲವಾಗುತ್ತದೆ. ಅಲ್ಲದೇ ಗಂಟುಗಳು ಸೆಡೆತಕ್ಕೆ ಒಳಗಾಗುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ.

*ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ

ಮಾನಸಿಕ ಆರೋಗ್ಯಕ್ಕೆ ನೃತ್ಯದ ಕೊಡುಗೆ ಎಂದರೆ ಖಿನ್ನತೆಯ ನಿವಾರಣೆ. ಒಂದು ಸಂಶೋಧನೆಯಲ್ಲಿ ಕಂದುಕೊಂಡ ಪ್ರಕಾರ ನರ್ತನ ಮಾನಸಿಕ ಭಾವನೆಗಳನ್ನು ಹಾಗೂ ಚೈತನ್ಯವನ್ನು ಉತ್ತಮಗೊಳಿಸುತ್ತದೆ ಹಾಗೂ ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ. ನರ್ತನದ ಸಮಯದಲ್ಲಿ ಮನಸ್ಸಿನ ಮುದವನ್ನು ಉತ್ತಮಗೊಳಿಸುವ ರಾಸಾಯನಿಕಗಳು ಬಿಡುಗಡೆಗೊಂಡು ಮಾನಸಿಕ ಸ್ಥಿತಿಯನ್ನು ಉಲ್ಲಸಿತಗೊಳಿಸುತ್ತವೆ.

*ತೂಕ ಇಳಿಕೆಗೆ ನೆರವಾಗುತ್ತದೆ

ನರ್ತನ ಹೇಗೆ ತೂಕ ಇಳಿಸಲು ನೆರವಾಗುತ್ತದೆ? ನರ್ತನದ ಮೂಲಕ ದೇಹದ ಬಹುತೇಕ ಎಲ್ಲಾ ಸ್ನಾಯುಗಳನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ. ತನ್ಮೂಲಕ ಹೆಚ್ಚಿನ ಕ್ಯಾಲೋರಿಗಳನ್ನು ಖರ್ಚುಮಾಡಬೇಕಾಗಿ ಬರುತ್ತದೆ. ನರ್ತನ ಇಡಿಯ ದೇಹದ ಎಲ್ಲಾ ಸ್ನಾಯುಗಳಿಗೆ ನೀಡುವ ವ್ಯಾಯಾಮವೂ ಆಗಿದೆ. ವಿಶೇಷವಾಗಿ ವ್ಯಾಯಾಮವನ್ನೇ ನರ್ತನರೂಪಕದಲ್ಲಿ ಪ್ರದರ್ಶಿಸುವ ಏರೋಬಿಕ್ ತರಬೇತಿಯಂತೂ ಗರಿಷ್ಟ ಪ್ರಮಾಣದಲ್ಲಿ ಸ್ನಾಯುಗಳನ್ನು ದಂಡಿಸುತ್ತದೆ ಹಾಗೂ ತೂಕ ಇಳಿಕೆಗೆ ನೆರವಾಗುತ್ತದೆ. ಇಷ್ಟೇ ಹೊತ್ತಿನ ಜಾಗಿಂದ್ ಅಥವಾ ಸೈಕಲ್ ತುಳಿಯುವುದಕ್ಕಿಂತಲೂ ಏರೋಬಿಕ್ ಹೆಚ್ಚು ಪ್ರತಿಫಲ ನೀಡುತ್ತದೆ. ಸುಮಾರು ಮೂವತ್ತು ನಿಮಿಷಗಳ ಏರೋಬಿಕ್ ನೃತ್ಯ 130 ರಿಂದ 250 ಕ್ಯಾಲೋರಿಗಳನ್ನು ದಹಿಸುತ್ತದೆ.

*ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ಶಕ್ತಿಯನ್ನು ಹೆಚ್ಚಿಸಿ ಬೇಗನೇ ಸುಸ್ತಾಗುವುದನ್ನು ತಡೆಯಲು ನರ್ತನ ಉತ್ತಮವಾದ ಮಾರ್ಗವಾಗಿದೆ. ಕಠಿಣವಾದ ನೃತ್ಯಾಭಾಸದ ಬಳಿಕ ದೇಹ ಹೆಚ್ಚು ಚೈತನ್ಯದಿಂದ ಕೂಡಿರಲು ಕಾರಣವೇನೆಂದರೆ ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದ ರಕ್ತ ಹೆಚ್ಚಿನ ಗತಿಯಲ್ಲಿ ದೇಹವಿಡೀ ಪ್ರವಹಿಸುತ್ತದೆ, ಇದೇ ಶಕ್ತಿ ಹೆಚ್ಚಲು ಕಾರಣವಾಗಿದೆ.

ನೃತ್ಯಾಭಾಸದಲ್ಲಿ ನಿರತರಾಗಲು ಪ್ರೇರಿತರಾದವರಿಗೆ ಕೆಲವು ಸಲಹೆಗಳು:

* ಒಂದು ವೇಳೆ ಸ್ಥೂಲಕಾಯ ಅಥವಾ ಇತರ ಆರೋಗ್ಯ ಸಂಬಂಧಿ ತೊಂದರೆಗಳಿದ್ದರ ನರ್ತನದ ತರಗತಿಗಳನ್ನು ಪಡೆಯಲು ದೈಹಿಕವಾಗಿ ನೀವು ಶಕ್ತರೇ ಎಂಬುದನ್ನು ನಿಮ್ಮ ವೈದ್ಯರ ಮೂಲಕ ತಪಸಣೆಗೊಂಡು ಖಾತ್ರಿಪಡಿಸಿಕೊಳ್ಳಿ.
* ನರ್ತನಕ್ಕೂ ಮುನ್ನ ಕೊಂಚ ಸುಲಭ, ದೇಹದ ಬಿಸಿಯನ್ನು ಹೆಚ್ಚಿಸುವ ಸರಳ ವ್ಯಾಯಾಮಗಳನ್ನು ನಿರ್ವಹಿಸಿ
* ಯಾವುದೇ ನರ್ತನವನ್ನು ಏಕಕಾಲಕ್ಕೆ ತೀವ್ರಗತಿಗೆ ಏರಿಸದಿರಿ, ನಿಧಾನವಾಗಿ ಮುಂದುವರೆಯಿರಿ
* ನರ್ತನದ ವಿವಿಧ ಹಂತಗಳಲ್ಲಿ ನಡುನಡುವೆ ನಿಶ್ರಮಿಸಿ. ನರ್ತನಕ್ಕೂ ಮುನ್ನ ಮತ್ತು ಬಳಿಕ ಹೆಚ್ಚು ನೀರನ್ನು ಕುಡಿಯಿರಿ.
* ನರ್ತನಕ್ಕೆ ಸೂಕ್ತವಾದ ಪಾದರಕ್ಷೆ ಧರಿಸಿ.
* ವಿಶೇಷವಾಗಿ ಕಾಲುಗಳನ್ನು ಅಗಲಿಸುವ ಮತ್ತು ಸೆಳೆಯುವ ವ್ಯಾಯಾಮಗಳನ್ನು ನಿತ್ಯವೂ ನಿರ್ವಹಿಸಿ.

English summary

Why Dancing Is Good For Your Health?

Dance is not only a way of expressing yourself with grace but also it's a great way to keep your body and mind healthy. The health benefits of dance are immense and there are different forms of dance that you can choose from.
X
Desktop Bottom Promotion